ದೇಹದಲ್ಲಿರುವ ವಿಷಕಾರಿ ತ್ಯಾಜ್ಯವನ್ನು ತೆಗೆದು ಹಾಕುವುದು ಹೇಗೆ
ಡಿಟಾಕ್ಸ್ ಮಾಡದೇ ಇದ್ದಲ್ಲಿ ನಮ್ಮ ಕಿಡ್ನಿಗೆ ಇವೆ ನೂರಾರು ಆಪತ್ತುಗಳು
ನೈಸರ್ಗಿಕವಾಗಿಯೇ ನಾವು ಏಳು ವಿಧದಲ್ಲಿ ಡಿಟಾಕ್ಸ್ ಮಾಡಬಹುದು
ದೇಹದಲ್ಲಿ ಸಂಗ್ರಹವಾಗುವ ವಿಷಕಾರಿ ಅಂಶಗಳನ್ನು ತೊಡೆದು ಹಾಕುವ ಕ್ರಿಯೆಗೆ ಡಿಟಾಕ್ಸ್ ಎನ್ನಲಾಗುತ್ತದೆ. ಒಂದು ವೇಳೆ ದೇಹದಲ್ಲಿ ಈ ರೀತಿಯ ವಿಷಯಕಾರಿ ಅಂಶಗಳು ಸೇರಿಕೊಂಡರೆ ನಮ್ಮ ಕಿಡ್ನಿ ಅಂದ್ರೆ ಮೂತ್ರಪಿಂಡಕ್ಕೆ ಹಲವು ಅಪಾಯಗಳು ಕಾದಿವೆ. ಹೀಗಾಗಿ ಕೆಲವು ರೂಢಿಗಳನ್ನು ರೂಢಿಸಿಕೊಳ್ಳುವ ಮೂಲಕ ನಮ್ಮ ಕಿಡ್ನಿಯನ್ನು ನಾವು ನೈಸರ್ಗಿಕವಾಗಿ ಆರೋಗ್ಯಕರವಾಗಿ ಇಟ್ಟುಕೊಳ್ಳಬಹುದು.
ಭಾರತದಲ್ಲಿ ಕಂಡು ಬರುವ ರೋಗಗಳಲ್ಲಿ ಕಿಡ್ನಿಗೆ ಸಂಬಂಧಿಸಿದ ರೋಗಗಳು ಕೂಡ ಹೆಚ್ಚು. ಹೀಗಾಗಿ ನಾವು ಹೆಚ್ಚು ಹೆಚ್ಚು ನಮ್ಮ ಹೃದಯ, ಲಿವರ್ ಹಾಗೂ ಕಿಡ್ನಿಗಳ ಆರೋಗ್ಯದ ವಿಚಾರದಲ್ಲಿ ಗಮನಕೊಡಬೇಕು. ಇತ್ತೀಚೆಗೆ ಸಕ್ಕೆರೆ ಕಾಯಿಲೆ ಅನ್ನೋದು ಸರ್ವೇ ಸಾಮಾನ್ಯವಾಗಿದೆ. ಈ ಒಂದು ಕಾಯಿಲೆಯನ್ನು ನಾವು ನಿಯಂತ್ರಣದಲ್ಲಿ ಇಡದೇ ಹೋದಲ್ಲಿ ಕಿಡ್ನಿಗೆ ಸಂಬಂಧಿಸಿದ ಕಾಯಿಲೆಗಳನ್ನು ವೃದ್ಧಿಸುತ್ತವೆ. ನಾವು ಕಿಡ್ನಿಯನ್ನು ಆರೋಗ್ಯವಾಗಿಟ್ಟುಕೊಳ್ಳಲು ಈ 8 ರೂಢಿಗಳು ನಿಮ್ಮ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಸರಳವಾಗಿ ಆಚೆ ಹಾಕಿ ಡಿಟಾಕ್ಸ್ ಮಾಡುತ್ತವೆ.
1. ಬಹಳಷ್ಟು ನೀರು ಕುಡಿಯಿರಿ: ಹೆಚ್ಚು ಹೆಚ್ಚು ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳುವುದು ತುಂಬಾ ಒಳ್ಳೆಯದು. ಇದು ಕಿಡ್ನಿ ಸರಳವಾಗಿ ಟಾಕ್ಸಿನ್ ಅಂಶಗಳನ್ನು ಆಚೆ ಹಾಕಲು ಅನುಕೂಲವಾಗುತ್ತದೆ. ಕಿಡ್ನಿ ಆರೋಗ್ಯವನ್ನು ಪರೀಕ್ಷೆಯೇ ಮಾಡಸಬೇಕಾಗಿಲ್ಲ ಎನ್ನುವುದಾದ್ರೆ ಹೆಚ್ಚು ಹೆಚ್ಚು ನೀರು ಕುಡಿಯಿರಿ. ಇದು ನಿಮ್ಮ ಕಿಡ್ನಿಯನ್ನು ಮಾತ್ರವಲ್ಲ ಇಡೀ ದೇಹದ ಆರೋಗ್ಯವನ್ನೇ ಅತ್ಯಂತ ಸದೃಢವಾಗಿಡುತ್ತದೆ.
2. ಉಪ್ಪಿನ ಬಳಕೆ ಕಡಿಮೆಯಿರಲಿ: ನಿಮ್ಮ ಆಹಾರದಲ್ಲಿ ಉಪ್ಪಿನ ಬಳಕೆ ಕಡಿಮೆ ಇರಲಿ. ಹೆಚ್ಚು ಉಪ್ಪು ಸೇವಿಸುವುದರಿಂದ ರಕ್ತದೊತ್ತಡದಂತಹ ಕಾಯಿಲೆಗಳು ಬರುವ ಸಂಭವ ಇರುತ್ತದೆ. ಇದು ಕೂಡ ನಿಮ್ಮ ಕಿಡ್ನಿ ಮೇಲೆ ಹೆಚ್ಚು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನಿಮ್ಮ ಆಹಾರದಲ್ಲಿ ಉಪ್ಪನ್ನು ಕಡಿಮೆ ಮಾಡುವುದರಿಂದ ಇಡೀ ಆಹಾರವೇ ನಿಮ್ಮ ಕಿಡ್ನಿಯನ್ನು ಹಾಗೂ ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
3. ಸದಾ ಚಟುವಟಿಕೆಯಿಂದ ಇರಿ; ನಾವು ಸದಾ ಚಟುವಟಿಕೆಯಿಂದ ಇರುವುದು ಹಾಗೂ ನಿಯಮಿತ ವ್ಯಾಯಾಮ ಮಾಡುವುದರಿಂದ ನಮ್ಮ ದೇಹಕ್ಕೆ ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡದಂತಹ ಸಮಸ್ಯೆಗಳು ಬರುವುದಿಲ್ಲ ಇದರಿಂದ ನಾವು ನಮ್ಮ ಮೂತ್ರಪಿಂಡದ ಆರೋಗ್ಯವನ್ನು ಸದೃಢವಾಗಿ ಇಡಬಹುದು. ಅತಿಯಾದ ಆಲಸಿತನದ ಜೀನವ ಕ್ರಮ ನಮ್ಮಲ್ಲಿ ಬೊಜ್ಜು ಹೆಚ್ಚಿಸಿ ಕಿಡ್ನಿಗೆ ಸಂಬಂಧಿಸಿದ ರೋಗಗಳನ್ನು ವೃದ್ಧಿ ಮಾಡುತ್ತವೆ. ಹೀಗಾಗಿ ಸದಾ ಚಟುವಟಿಕೆಯಿಂದ ಇರುವುದು. ಯಾವುದಾದರೂ ಕೆಲಸದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು. ಒಂದು ನಿಯಮಿತ ವ್ಯಾಯಾಮ ನಮ್ಮನ್ನು ಹಾಗೂ ನಮ್ಮ ಕಿಡ್ನಿಯನ್ನು ಆರೋಗ್ಯವಾಗಿಡುತ್ತವೆ.
4 .ಮದ್ಯಪಾನ ಮತ್ತು ಧೂಮಪಾನದಿಂದ ದೂರ ಇರಿ: ಮದ್ಯಪಾನ ಹಾಗೂ ಧೂಮಪಾನಗಳು ನಮ್ಮ ದೇಹದಲ್ಲಿ ಅನೇಕ ರೋಗಗಳಿಗೆ ಮುಕ್ತ ದ್ವಾರವನ್ನು ತೆರೆಯುತ್ತವೆ. ಧೂಮಪಾನ ಕೇವಲ ನಮ್ಮ ರಕ್ತದೊತ್ತಡವನ್ನು ಹೆಚ್ಚಿಸುವುದು ಮಾತ್ರವಲ್ಲ ಒಟ್ಟಾರೆಯಾಗಿ ಕಿಡ್ನಿಯ ಕಾರ್ಯವ್ಯವಸ್ಥೆಯ ಮೇಲೆಯೇ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅದು ಮಾತ್ರವಲ್ಲ ಕಿಡ್ನಿ ಕ್ಯಾನ್ಸರ್ನಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಮದ್ಯಪಾನ ಹಾಗೂ ಧೂಮಪಾನ ಇವೆರಡು ಕಿಡ್ನಿ ಆರೋಗ್ಯಕ್ಕೆ ವಿಷವಾಗಿ ಪರಿಣಮಿಸುತ್ತವೆ. ಯಾರು ನಿತ್ಯ ಮದ್ಯಪಾನ ಹಾಗೂ ಧೂಮಪಾನ ಮಾಡುತ್ತಾರೋ ಅವರಲ್ಲಿ ಸಾಮಾನ್ಯ ಜನರಿಗಿಂತ ಐದು ಪಟ್ಟು ಹೆಚ್ಚು ಕಿಡ್ನಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುತ್ತದೆ.
5. ಸಣ್ಣ ಪುಟ್ಟ ಸಮಸ್ಯೆಗಳಿಗೆ ಔಷಧಿ: ತಲೆ ನೋವು ಬಂತು ಅಂತ. ಮೈಕೈ ನೋವು ಬಂತು ಅಂತ ಮೆಡಿಕಲ್ ಶಾಪ್ಗೆ ಹೋಗಿ ಅವರು ಕೊಡುವ ಔಷಧಿಯನ್ನು ತೆಗೆದುಕೊಳ್ಳುವ ಪರಿಪಾಠ ನಮ್ಮಲ್ಲಿ ಇದೆ. ಅತಿಹೆಚ್ಚು ಪೇನ್ ಕಿಲ್ಲರ್ ಔಷಧಿಗಳ ಸೇವನೆ ಹಾಗೂ ಇತರೇ ಸಮಸ್ಯೆಗಳಿಗೆ ತೆಗೆದಕೊಳ್ಳುವ ಔಷಧಿಗಳು ಕಿಡ್ನಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ. ಅನಾವಶ್ಯಕವಾದ ಮಾತ್ರೆಗಳನ್ನು ತೆಗೆದುಕೊಳ್ಳಲು ಹೋಗಬೇಡಿ.ಪ್ರಮುಖವಾಗಿ ಪೇನ್ ಕಿಲ್ಲರ್ ಔಷಧಿಗಳು ಕಿಡ್ನಿಯ ಆರೋಗ್ಯಕ್ಕೆ ಬಹಳಷ್ಟು ಅಪಾಯಕಾರಿ ಎಂದು ವೈದ್ಯರು ಹೇಳುತ್ತಾರೆ.
6. ಸರಿಯಾದ ಡಯಟ್ ನಿರ್ವಹಣೆ ಮಾಡಿ: ಈಗಾಗಲೇ ಹೇಳಿದಂತೆ ಅತಿಹೆಚ್ಚು ಉಪ್ಪು ತಿನ್ನುವುದು. ಸಕ್ಕರೆ ತಿನ್ನುವುದು ಕಿಡ್ನಿ ಆರೋಗ್ಯಕ್ಕೆ ತುಂಬಾ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹೆಚ್ಚು ಪ್ರೊಟೀನ್ ತಂದುಕೊಡುವ ಆಹಾರ, ಜ್ಯೂಸ್, ಹಣ್ಣು, ತರಕಾರಿ ಹೆಚ್ಚು ಹೆಚ್ಚು ತಿನ್ನುವುದರಿಂದ ನಿಮ್ಮ ಆರೋಗ್ಯ ಸದೃಢವಾಗಿರುತ್ತದೆ. ಕಾಳುಗಳು ಬೆರಿಽಗಳು, ಹೀಗೆ ಹಸಿರು ತರಕಾರಿ ಹೆಚ್ಚು ತಿನ್ನುವುದರಿಂದ ನಿಮ್ಮ ಕಿಡ್ನಿ ಆರೋಗ್ಯ ಕೆಡದಿರುವಂತೆ ಅವು ಕಾಯುತ್ತವೆ.
7 ಆಲಸಿತನದ ಜೀವನಕ್ಕೆ ಬೈ ಹೇಳಿ: ಒಂದೇ ಕಡೆ ಕುಳಿತಲ್ಲಿಯೇ ಕುಳಿತುಕೊಳ್ಳುವುದು. ಚಟುವಟಿಕೆಯಿಂದ ಇರದೇ ಇರುವುದು ಇವೆಲ್ಲವೂ ಕೂಡ ಕೇವಲ ಕಿಡ್ನಿಯಲ್ಲ ಇಡೀ ನಿಮ್ಮ ಜೀವನ ಶೈಲಿಯನ್ನೇ ಹಾಳು ಮಾಡಿ ಹಾಕುತ್ತವೆ, ಅದಕ್ಕೆ ಆದಷ್ಟು ಚಟುವಟಿಕೆಯಿಂದ ಇರಿ. ಇಲ್ಲವಾದಲ್ಲಿ ನಿಮ್ಮ ಮೈಯಲ್ಲಿ ಹೆಚ್ಚು ಬೊಜ್ಜು ಉಂಟಾಗಿ ಕಿಡ್ನಿ ಹಾಗೂ ಲೀವರ್ ಎರಡರ ಮೇಲೂ ಋಣಾತ್ಮಕ ಪರಿಣಾಮ ಬೀರುತ್ತದೆ. ಡಬ್ಲ್ಯೂಹೆಚ್ಓ ಹೇಳುವ ಪ್ರಕಾರ ಸುಮ್ಮನೆ ಕುಳಿತುಕೊಳ್ಳುವುದು ಕೂಡ ಒಂದು ರೀತಿಯ ಸ್ಮೋಕಿಂಗ್ಗೆ ಸರಿಯಾದದ್ದು ಅಂತೆ, ಹೀಗಾಗಿ ಹೆಚ್ಚು ಹೆಚ್ಚು ಚಟುವಟಿಕೆಯಿಂದ ಇರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ