/newsfirstlive-kannada/media/post_attachments/wp-content/uploads/2025/03/RICE.jpg)
ಭಾರತೀಯ ಆಹಾರ ಪದ್ಧತಿಯಲ್ಲಿ ಅಕ್ಕಿಗೆ (Rice) ಪ್ರಮುಖ ಸ್ಥಾನ ಇದೆ. ಅನ್ನ ಬ್ರಹ್ಮನ ರೂಪ ಎಂದು ಕರೆಯಲಾಗುತ್ತದೆ. ನಮ್ಮ ಆಹಾರ ಪದ್ಧತಿಯಲ್ಲಿ ಅನ್ನ ಬಹಳ ಮುಖ್ಯವಾಗಿದೆ. ಹವಾಮಾನದ ಪರಿಸ್ಥಿತಿಗಳು ಮತ್ತು ಬೇಸಾಯಕ್ಕೆ ಸೂಕ್ತವಾದ ಮಣ್ಣಿನಿಂದಾಗಿ ಹೆಚ್ಚು ಭತ್ತ ಬೆಳೆಯಲು ಸಹಾಯ ಆಗುತ್ತಿದೆ. ಹಿಂದಿನ ಪರಿಸ್ಥಿತಿ ಏನೇ ಇರಲಿ, ಈಗ ಮೂರು ಹೊತ್ತು ಅನ್ನವನ್ನೇ ತಿಂದರೆ ಆರೋಗ್ಯ ಸಮಸ್ಯೆ ಗ್ಯಾರಂಟಿ!
ವೈದ್ಯರು ಏನ್ ಹೇಳ್ತಾರೆ..?
ಮಧುಮೇಹ ಕಾಯಿಲೆ ಇರುವ ರೋಗಿಗಳಿಗೆ ಅನ್ನ ಸೇವನೆ ಕಡಿಮೆ ಮಾಡಿ. ಬದಲಾಗಿ ಇತರ ಆಹಾರಗಳನ್ನು ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಕಾರಣ, ಅಕ್ಕಿಯಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿಸುವ ಗುಣಗಳು ಅಧಿಕವಾಗಿರುತ್ತದೆ. ಅಷ್ಟೇ ಅಲ್ಲದೇ, ದಿನಕ್ಕೆ ಮೂರು ಹೊತ್ತು ಅನ್ನವನ್ನೇ ತಿನ್ನೋರಿಗೆ ಕಾಯಿಲೆಗಳ ಅಪಾಯ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಕಲ್ಲಂಗಡಿ ಹಣ್ಣು, ಕರ್ಬೂಜ.. ಸಕ್ಕರೆ ಕಾಯಿಲೆಗೆ ಎರಡರಲ್ಲಿ ಯಾವ ಹಣ್ಣು ಉತ್ತಮ? ತಜ್ಞರು ಏನು ಹೇಳುತ್ತಾರೆ?
ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್
ದೀರ್ಘಕಾಲ ಬರೀ ಅನ್ನ ತಿಂದರೆ ಬೇರೆ ಬೇರೆ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಅಕ್ಕಿಯಲ್ಲಿ ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ (glycemic index) ಇರುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಏರಿಸಿ ಮಧುಮೇಹಕ್ಕೆ ಕಾರಣವಾಗುತ್ತದೆ. ಈಗಾಗಲೇ ಮಧುಮೇಹ ಇರೋರು ಅನ್ನ ಸೇವನೆ ಕಡಿಮೆ ಮಾಡಬೇಕು.
ತೂಕ ಹೆಚ್ಚಳ
ನಿಮ್ಮ ತೂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯಾ? ತೂಕ ಇಳಿಸಿಕೊಳ್ಳಲು ನೀವು ಪ್ರಯತ್ನಿಸುತ್ತಿದ್ದೀರಾ? ಅದರರ್ಥ ನಿಮ್ಮ ದೈಹಿಕ ಚಟುವಟಿಕೆ ಕಡಿಮೆ ಆಗಿದೆ ಎಂದು. ಆಹಾರದಲ್ಲಿ ಅನ್ನದ ಪ್ರಮಾಣ ಹೆಚ್ಚಾಗಿದೆ ಎಂದರ್ಥ. ಮಹಿಳೆಯರಲ್ಲಿ, ಥೈರಾಯ್ಡ್ ಮತ್ತು ಪಿಸಿಒಡಿಯಂತಹ ಸಮಸ್ಯೆ ಶುರುವಾಗುತ್ತವೆ. ಇಂಥ ಸಮಸ್ಯೆ ಈ ಮೊದಲು ಇಲ್ಲದವರು ಹೆಚ್ಚು ತರಕಾರಿಗಳನ್ನು ತಿನ್ನುವುದರಿಂದ ಮತ್ತು ಅನ್ನದ ಬದಲು ಹೆಚ್ಚಿನ ಫೈಬರ್ ಚಪಾತಿ ಮತ್ತು ಬೇಳೆ, ರೊಟ್ಟಿಗಳನ್ನು ತಿನ್ನುವುದರಿಂದ ತೂಕ ಇಳಿಸಿಕೊಳ್ಳಬಹುದು.
ಹೃದಯ ಸಮಸ್ಯೆಗಳು..
ಬಿಳಿ ಅಕ್ಕಿಯಲ್ಲಿ ಪೋಷಕಾಂಶಗಳು ಕಡಿಮೆ ಮತ್ತು ಕಾರ್ಬೋಹೈಡ್ರೇಟ್‌ಗಳು ಅಧಿಕ. ಇವು ಹೃದಯದ ಆರೋಗ್ಯವನ್ನು ನಿಧಾನವಾಗಿ ಹಾನಿಗೊಳಿಸಬಹುದು. ಪ್ರತಿದಿನ ಅನ್ನ ಮಾತ್ರ ತಿನ್ನುವ ಜನರಲ್ಲಿ ಟ್ರೈಗ್ಲಿಸರೈಡ್ ಮಟ್ಟ ಮತ್ತು ಕೆಟ್ಟ ಕೊಲೆಸ್ಟ್ರಾಲ್ ತ್ವರಿತಗತಿಯಲ್ಲಿ ಏರಿಕೆ ಆಗುತ್ತದೆ. ಇವೆಲ್ಲವೂ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ಅನ್ನ ಪ್ರಿಯರು ಬಿಳಿ ಅನ್ನದ ಬದಲು ಕಂದು ಅನ್ನ ಸೇವಿಸಿದರೆ ಒಳ್ಳೆಯದು.
ಇದನ್ನೂ ಓದಿ: ಆರೋಗ್ಯ ಇಲಾಖೆಯಿಂದ ಎಮರ್ಜನ್ಸಿ ಗೈಡ್ಲೈನ್ಸ್; ಬೆಂಗಳೂರು ಜನರೇ ಇಂದೇ ಅಲರ್ಟ್ ಆಗಿ..!
ಚಯಾಪಚಯ ಕ್ರಿಯೆಗೆ ತೊಂದರೆ..
ಪ್ರತಿದಿನ ಅನ್ನ ಮಾತ್ರ ತಿನ್ನುವುದರಿಂದ ಮೆಟಬಾಲಿಕ್ ಸಿಂಡ್ರೋಮ್ ಅಪಾಯ ಕ್ರಮೇಣ ಹೆಚ್ಚಾಗುತ್ತದೆ. ಅಂದರೆ ಅದು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ತೂಕ ಹೆಚ್ಚಾಗಲು ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ..
ಅನ್ನದಿಂದ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಆದರೆ ಇದನ್ನು ವೈಜ್ಞಾನಿಕವಾಗಿ ಇನ್ನೂ ದೃಢೀಕರಿಸಿಲ್ಲ. ಆದರೆ ದೇಹದಲ್ಲಿ ಅನೇಕ ಬದಲಾವಣೆಗಳು ಸಂಭವಿಸುತ್ತವೆ. ಕೆಟ್ಟ ಕೊಲೆಸ್ಟ್ರಾಲ್‌ಗೆ ಅಕ್ಕಿ ಕೂಡ ಕಾರಣ. ಹಾಗಾಗಿ ನಿಮ್ಮ ಆಹಾರ ಸಮತೋಲಿತವಾಗಿರಬೇಕು.
ಇದನ್ನೂ ಓದಿ: ಮಾರ್ಚ್ 22ಕ್ಕೆ ಕರ್ನಾಟಕ ಬಂದ್ ನಡೆಯೋದು ಫಿಕ್ಸಾ? ಮತ್ತೊಮ್ಮೆ ವಾಟಾಳ್ ನಾಗರಾಜ್ ಎಚ್ಚರಿಕೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ