newsfirstkannada.com

ಬೇರೆಯವ್ರ ತಪ್ಪು ಬಗ್ಗೆ ಮಾತಾಡಬೇಡಿ; ಶತ್ರುಗಳ ಬಲ ತಿಳಿದು ವ್ಯವಹರಿಸಿ; ಇಲ್ಲಿದೆ ಇಂದಿನ ಭವಿಷ್ಯ

Share :

Published January 30, 2024 at 6:00am

  ಬೇರೆಯವರಿಗೆ ಸಹಾಯ ಮಾಡಿದ ದಿನಗಳನ್ನು ಜ್ಞಾಪಿಸಿಕೊಳ್ಳಬಹುದು

  ಆರೋಗ್ಯದ ಬಗ್ಗೆ ಅಥವಾ ಹಳೆಯ ನೋವಿನ ಬಗ್ಗೆ ಹೆಚ್ಚು ಗಮನವಿರಲಿ

  ವೃತ್ತಿ ಜೀವನದಲ್ಲಿ ಉತ್ಸುಕರಾಗಿರುವ ನಿಮಗೆ ಹಿನ್ನಡೆಯ ಭಯ ಸಾಧ್ಯತೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಹಿಮವಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಉತ್ತರಾ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

 • ಶಾಂತ ಮನಸ್ಥಿತಿಯಲ್ಲಿರಬೇಕೆಂದು ಯೋಚಿಸಿದರು ಆಗುವುದಿಲ್ಲ
 • ವ್ಯಾಪಾರ ವ್ಯವಹಾರದಲ್ಲಿ ಲಾಭವಿದೆ
 • ದಾಂಪತ್ಯ ಜೀವನದಲ್ಲಿ ಕೋಪ ಬೇಡ
 • ಮನೆಯವರ ಸಲಹೆ ಉಪಯುಕ್ತ ಎಂಬುದನ್ನು ಅರಿಯಬೇಕಾಗುತ್ತದೆ
 • ವ್ಯವಹಾರದಲ್ಲಿ ಪಾರದರ್ಶಕತೆಯಿರಲಿ
 • ನಿಮ್ಮ ಕಿರಿಯರು ಭಯದಿಂದ ನಿಮ್ಮನ್ನು ಗೌರವಿಸಬಹುದು
 • ಇಂದು ಜ್ಞಾನದ ಮೊರೆ ಹೋಗಿ

ವೃಷಭ

 • ಆರೋಗ್ಯದ ಬಗ್ಗೆ ಗಮನಹರಿಸಿ
 • ಹಳೆಯ ಕಾಲು ನೋವು ಇಂದು ತೊಂದರೆಯಾಗಬಹುದು
 • ಹೊಸ ವಾಹನ ಖರೀದಿ ಮಾಡಬಹುದು
 • ಸಣ್ಣ ಪುಟ್ಟ ವಿಚಾರಗಳಿಗೆ ಮನೆಯಲ್ಲಿ ಕಲಹ ಉಂಟಾಗಬಹುದು
 • ಆತುರದ ಕೆಲಸದಿಂದ ವಸ್ತು ನಷ್ಟವಾಗಲಿದೆ
 • ನಿಮ್ಮ ಕೋಪ ಮಕ್ಕಳ ಮೇಲೆ ಬೇಡ ತೊಂದರೆಯಾಗಬಹುದು
 • ಇಂದ್ರಾಕ್ಷಿ ಸ್ತೋತ್ರ ಪಠಿಸಿ

ಮಿಥುನ

 • ಬೇರೆಯವರ ಬೇಡದ ವಿಚಾರದಿಂದ ನಿಮಗೆ ಸಂತೋಷ
 • ಮಕ್ಕಳೊಂದಿಗೆ ಕುಟುಂಬದ ಸದಸ್ಯರೊಂದಿಗೆ ಅನಗತ್ಯ ವಿಚಾರ ಚರ್ಚೆಯಾಗಬಹುದು
 • ಮನೆಯಲ್ಲಿಯ ವಾತಾವರಣ ಹಾಸ್ಯಾಸ್ಪದವಾಗಬಹುದು
 • ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಶುಭವಿದೆ
 • ಆಧ್ಯಾತ್ಮಿಕ ಅಥವಾ ಧಾರ್ಮಿಕ ವಿಚಾರಗಳು ಬಂದಾಗ ತಾತ್ಸಾರವಾಗಿ ನೋಡಬಹುದು
 • ನಿಮ್ಮ ಆಲೋಚನೆ ಬೇರೆಯಾಗಿರುವುದರಿಂದ ಬೇಸರವಾಗಬಹುದು
 • ಪುಣ್ಯಕ್ಷೇತ್ರಗಳ ದರ್ಶನ ಮಾಡಿ

ಕಟಕ

 • ಭಾವನಾತ್ಮಕ ವಿಷಯ ಅಥವಾ ವಾತಾವರಣ ಬೇಡ
 • ಸಹೋದ್ಯೋಗಿಗಳನ್ನು ಪೂರ್ಣವಾಗಿ ಅವಲಂಬಿಸಬೇಡಿ
 • ಬೇರೆ ದಿನದಕ್ಕಿಂತ ನಿಮ್ಮ ವೃತ್ತಿಯಲ್ಲಿ ಪ್ರಗತಿ ಹೊಂದುತ್ತೀರಿ
 • ನಿಮ್ಮ ಆಸಕ್ತಿ ಹೆಚ್ಚಾದಷ್ಟು ಕೆಲಸದಿಂದ ಆದಾಯವಿದೆ
 • ಮನೆಯವರ ಪ್ರೀತಿ ಸ್ವಾಭಿಮಾನಕ್ಕೆ ಪ್ರಯತ್ನಿಸಿ ವಿಫಲರಾಗುತ್ತೀರಿ
 • ಮಾರುತಿಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ಧಾರ್ಮಿಕ ಕ್ಷೇತ್ರಗಳಿಗೆ ಹೋಗಲು ಮನಸ್ಸಿರುವುದಿಲ್ಲ ಅನಿವಾರ್ಯವಾಗಿರುತ್ತದೆ
 • ಪ್ರಯಾಣದಲ್ಲಿ ವ್ಯತ್ಯಯ ಆಗಬಹುದು
 • ಪರೀಕ್ಷಾ ದೃಷ್ಟಿಯಿಂದ ಅಧ್ಯಯನ ಮಾಡಿದವರಿಗೆ ಹಿನ್ನಡೆಯಾಗಬಹುದು
 • ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಬೆಲೆ ಎಂಬುದನ್ನು ಅರಿಯಬೇಕು
 • ಬೇರೆ ಮಾರ್ಗದಲ್ಲಿ ಆಲೋಚಿಸುವವರಿಗೆ ತುಂಬಾ ಹಿನ್ನಡೆ ಕಾಣಬಹುದು
 • ಪಾರಿಜಾತ ಸರಸ್ವತಿಯನ್ನು ಆರಾಧನೆ ಮಾಡಿ

ಕನ್ಯಾ

 • ಅಹಂಕಾರದ ಭಾವನೆ ತ್ಯಜಿಸಿ
 • ಕುಟುಂಬ ಕಲಹ ಮಿತಿಮೀರಬಹುದು
 • ಯಾವುದೇ ವಿಚಾರದಲ್ಲಿ ಅನುಮಾನ ಬೇಡ ಪರಾಮರ್ಶಿಸಿ
 • ನಿಮ್ಮ ತಪ್ಪು ಗ್ರಹಿಕೆಯಿಂದ ಜನರ ಕೋಪಕ್ಕೆ ಗುರಿಯಾಗುತ್ತೀರಿ
 • ನಿಮ್ಮ ಮಾತು ಕೆಟ್ಟ ಪರಿಣಾಮ ಬೀರಬಹುದು
 • ಅಗತ್ಯವಾಗಿ ಜಾತಕ ಪರೀಕ್ಷಿಸಿಕೊಳ್ಳುವುದು ಉತ್ತಮ

ತುಲಾ

 • ಮನೆಯ ಹೊಸ ವಸ್ತು ತಂದು ನಷ್ಟವಾಗಬಹುದು
 • ಬೇರೆ ಉಪಯುಕ್ತ ಯೋಜನೆಗಳ ಬಗ್ಗೆ ಚಿಂತೆ
 • ಮಾನಸಿಕ ಸಮಾಧಾನವಿಲ್ಲದಿರುವುದು
 • ಏನು ಮಾಡಿದರು, ಎಷ್ಟು ಗಳಿಸಿದರು ತೃಪ್ತಿಯಿರದ ದಿನ
 • ಮನೆಗೆ ಬಂಧುಗಳ ಆಗಮನ ಆಗಬಹುದು
 • ಪ್ರೇಮ ವಿವಾಹದ ವಿಚಾರದಿಂದ ಮನೆಯಲ್ಲಿ ಅಲ್ಲೋಲ ಕಲ್ಲೋಲ ಜಗಳವಾಗಬಹುದು
 • ಶ್ರೀ ಸೂಕ್ತದ 16 ಮಂತ್ರಗಳನ್ನು ಶ್ರವಣ ಅಥವಾ ಪಠಣೆ ಮಾಡಿ

ವೃಶ್ಚಿಕ

 • ಆನೇಕ ಕೆಲಸಗಳಲ್ಲಿ ತುಂಬಾ ಗಮನ ಕೊಟ್ಟು ವ್ಯವಹರಿಸಬೇಕು
 • ಎದುರಾಳಿಗಳ ಅಥವಾ ಶತ್ರುಗಳ ಬಲ ತಿಳಿದು ವ್ಯವಹರಿಸಿ
 • ಬೇರೆಯವರ ತಪ್ಪನ್ನು ಹೇಳಬೇಡಿ
 • ನಾಟಕೀಯ ಬುದ್ಧಿಯಿಂದ ನಿಮಗೆ ಹಿನ್ನಡೆಯಾಗಬಹುದು
 • ವೈಯಕ್ತಿಕ ವಿಚಾರದಲ್ಲಿ ಕೆಲವು ಸುಧಾರಣೆಯ ಅಗತ್ಯ ಕಾಣಬಹುದು
 • ಮನಸ್ಸಿನ ಗೊಂದಲ ಗೊಂದಲಗಳು ದೂರವಾದರೆ ನಿಂತ ಕೆಲಸ ಚಾಲನೆ ಪಡೆಯುತ್ತವೆ
 • ನವಗ್ರಹರನ್ನು ವಿಶೇಷವಾಗಿ ಚಂದ್ರಗ್ರಹನನ್ನು ಪ್ರಾರ್ಥಿಸಿ

ಧನುಸ್ಸು

 • ಅನಗತ್ಯ ಸಲಹೆ ಮಾತಿನಿಂದ ಅವಮಾನಿತರಾಗಬಹುದು
 • ಸಂಬಂಧಿಕರ ಮನೆಯ ಮದುವೆ ವಿಚಾರಕ್ಕೆ ಮಾತಾಡಬಾರದು
 • ಉನ್ನತ ಶಿಕ್ಷಣ ಪಡೆಯಬೇಕಾದವರಿಗೆ ಮಾಹಿತಿಯ ಕೊರತೆ ಇರಬಹುದು
 • ಕುಟುಂಬದ ಜವಾಬ್ದಾರಿಯನ್ನು ನಿಷ್ಠೆಯಿಂದ ಪೂರೈಸಬೇಕು
 • ಋಣಾತ್ಮಕ ವಿಷಯಗಳಿಂದ ದುಃಖ ಬರಬಹುದು
 • ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮಕರ

 • ನಿಮ್ಮ ತಪ್ಪುಗಳು ನಿಮಗೆ ಶತ್ರುಗಳಾಗಬಹುದು
 • ಸ್ವಂತಿಕೆಯಿಂದ ಯೋಚಿಸಿ ನಿರ್ಧಾರ ಮಾಡಿ ಯಶಸ್ವಿದೆ
 • ಬೇರೆಯವರನ್ನು ಅನುಸರಿಸಿ ಅನುಕರಿಸಬೇಡಿ
 • ನಿಮ್ಮ ಪ್ರಾಮಾಣಿಕತೆ ದಕ್ಷತೆ ಗಟ್ಟಿಯಾಗಬೇಕು
 • ವೃತ್ತಿ ಜೀವನದಲ್ಲಿ ತುಂಬಾ ಉತ್ಸುಕರಾಗಿರುವ ನಿಮಗೆ ಹಿನ್ನಡೆಯ ಭಯವಿರಬಹುದು
 • ಕೆಲವು ವಿಚಾರಗಳಲ್ಲಿ ಹಿಂಜರಿಕೆಯ ಭಾವನೆ ಕಾಡಬಹುದು
 • ತಾಪಸ ಮನ್ಯುವನ್ನು ಉಪಾಸನೆ ಮಾಡಿ

ಕುಂಭ

 • ಹೊಸ ಆಲೋಚನೆಗಳಲ್ಲಿ ಯಶಸ್ವಿದೆ
 • ವ್ಯಾವಹಾರಿಕ ಫಲಿತಾಂಶ ಉತ್ತಮವಾಗಿರುತ್ತದೆ
 • ದೂರದ ಪ್ರಯಾಣಕ್ಕೆ ತೊಂದರೆಯಾಗಬಹುದು
 • ಆರೋಗ್ಯದ ಬಗ್ಗೆ ಅಥವಾ ಹಳೆಯ ನೋವಿನ ಬಗ್ಗೆ ಹೆಚ್ಚು ಗಮನಿಸಿ
 • ನಿಮ್ಮ ಬಂಧುಗಳಲ್ಲಿ ಆತ್ಮೀಯತೆ ಬೆಳೆಸಿಕೊಳ್ಳಬೇಕು
 • ಆತ್ಮವಿಶ್ವಾಸ ಶಕ್ತಿಯಿಂದ ನಿಮ್ಮ ಇರುವಿಕೆ ಎಂದೇ ಹೇಳಬೇಕು
 • ಆಂಜನೇಯ ಸ್ವಾಮಿಯನ್ನು ಪೂಜಿಸಿ

ಮೀನ

 • ಬೇರೆಯವರ ವಿಚಾರಕ್ಕೆ ಹೋಗಬಾರದು
 • ನಿಮ್ಮ ದಿನಚರಿಯಲ್ಲಿ ಬದಲಾವಣೆ ಬೇಸರ ತರಬಹುದು
 • ಬೇರೆಯವರಿಗೆ ಸಹಾಯ ಮಾಡಿದ ದಿನಗಳನ್ನು ಜ್ಞಾಪಿಸಿಕೊಳ್ಳಬಹುದು
 • ಯಾವುದೇ ಒತ್ತಡಗಳಿಲ್ಲದ ಮನಸ್ಸು ನಿಮಗೆ ಶಾಂತತೆ ನೀಡಲಿ
 • ಮಹಿಳೆಯರಿಗೆ ಆರೋಗ್ಯದ ಸಮಸ್ಯೆ ಕಾಡಬಹುದು ಎಚ್ಚರಿಕೆಯಿರಲಿ
 • ವೈವಾಹಿಕ ವಿಚಾರದಲ್ಲಿ ಗೊಂದಲ ಇರುವವರಿಗೆ ಸಮಸ್ಯೆ ತಿಳಿಯಾಗುವ ದಿನ
 • ಇಂದು ದಂಪತಿಗಳಲ್ಲಿ ಜಗಳ ಬೇಡ
 • ಸ್ವಯಂವರ ಪಾರ್ವತಿಯನ್ನು ಜಪ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೇರೆಯವ್ರ ತಪ್ಪು ಬಗ್ಗೆ ಮಾತಾಡಬೇಡಿ; ಶತ್ರುಗಳ ಬಲ ತಿಳಿದು ವ್ಯವಹರಿಸಿ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More