/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಅನೂರಾಧ ನಕ್ಷತ್ರ ರಾಹುಕಾಲ ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ
- ಇಂದು ವಿದ್ಯಾರ್ಥಿಗಳಿಗೆ ಜಯವಿದೆ
- ವಿದೇಶ ಪ್ರವಾಸ ಆಕಾಂಕ್ಷಿಗಳಿಗೆ ಪ್ರವಾಸ ಯೋಗ
- ಉತ್ತಮ ಸಮಾಚಾರ ಕೇಳುತ್ತೀರಿ
- ಯಾವುದೇ ಪ್ರಚೋದನೆಗಳಿಗೆ ಒಳಗಾಗಬೇಡಿ
- ನಿಮ್ಮ ಶಕ್ತಿ ಸಾಮರ್ಥ್ಯ ಸಾರ್ಥಕವಾಗಬಹುದು
- ಅನಾರೋಗ್ಯ ಪೀಡಿತರಿಗೆ ತುಂಬಾ ಉತ್ತಮ ಬಲವಾಣೆ ದಿನ
- ಧನ್ವಂತರಿ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ
ವೃಷಭ
- ಕಾನೂನು ವಿದ್ಯಾರ್ಥಿಗಳಿಗೆ ಶುಭವಿದೆ
- ಜನರ ಒತ್ತಡ ತುಂಬಾ ಇರಬಹುದು
- ಅಧಿಕಾರಿಗಳಿಗೆ ಸಹಕಾರ ಸಿಗುವುದಿಲ್ಲ
- ಅನಗತ್ಯ ಖರ್ಚು ನಿಯಂತ್ರಣದಲ್ಲಿರಲಿ
- ಧಾರ್ಮಿಕ ಚಿಂತನೆ ನಡೆಸಿ, ಸಮಾಧಾನ ಸಿಗಬಹುದು
- ಮಾನಸಿಕ ಸಂತೋಷ ಕಂಡುಕೊಳ್ಳಿ
- ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ
ಮಿಥುನ
- ಇಂದು ನಿಮ್ಮ ಗಮನ ವೃತ್ತಿಯ ಮುನ್ನೆಡೆ ಬಗ್ಗೆ ಇರಬಹುದು
- ಇಂದು ಶಿಸ್ತನ ದಿನಚರಿ ಒಳಿತು
- ವಿನಾಕಾರಣ ಬೇರೆಯವರಿಂದ ಬೇಸರದ ಮಾತು ಕೇಳಬಹುದು
- ನಿಮ್ಮ ಕಾರ್ಯವೈಖರಿ ಸುಧಾರಿಸಲು ಪ್ರಯತ್ನಿಸಿ
- ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ
- ಮಕ್ಕಳಿಂದ ಶುಭವಾರ್ತೆ ಕೇಳಬಹುದು
- ಸರಸ್ವತಿಯನ್ನು ಪ್ರಾರ್ಥನೆ ಮಾಡಿ
ಕಟಕ
- ಇಂದು ಯಾವುದೇ ಹೊಸ ಹೂಡಿಕೆ ಬೇಡ
- ಮಾನಸಿಕ ಉದ್ವೇಗದ ದಿನ
- ಪ್ರೇಮಿಗಳಿಗೆ ತೊಂದರೆ, ಅಪಾಯದ ದಿನ ಎಚ್ಚರ
- ಅನಗತ್ಯ ಪ್ರಯಾಣ ಬೇಡ
- ನಿಮ್ಮ ಕಾರ್ಯದಲ್ಲಿ ನಿರ್ಲಕ್ಷ ಬೇಡ
- ಮನಸ್ಸಿನ ಎಲ್ಲಾ ಯೋಜನೆಗಳು ಒಂದೇ ಸಾರಿ ಈಡೇರುವುದಿಲ್ಲ
- ಕುಲದೇವತ ಆರಾಧನೆ ಮಾಡಿ
ಸಿಂಹ
- ಉತ್ತಮ ಸುದ್ದಿಗಳಿಂದ ಸಂತೋಷ
- ವಿಶೇಷದ ಬಗ್ಗೆ ಹೆಚ್ಚು ಚಿಂತನೆ ನಡೆಸಬಹುದು
- ಹಳೆಯ ಅನುಭವ ಅನುಕೂಲಕ್ಕೆ ಬರುತ್ತದೆ
- ಸಾಹಿತಿಗಳು, ಬರಹಗಾರರು ಗೌರವಕ್ಕೆ ಭಾಜನರಾಗುತ್ತಾರೆ
- ನಿಮ್ಮ ಕಾರ್ಯಕ್ಷೇತ್ರ ಬಹಳ ಆಹ್ಲಾದವಾಗಿರುತ್ತದೆ
- ಮಾನಸಿಕ ನೆಮ್ಮದಿಯ ದಿನ
- ಇಷ್ಟದೇವತಾ ಪ್ರಾರ್ಥನೆ ಮಾಡಿ
ಕನ್ಯಾ
- ಸಾಮಾಜಿಕ ಕ್ಷೇತ್ರಗಳಲ್ಲಿ ಹಿನ್ನಡೆ
- ಹಣಕಾಸು ಚಟುವಟಿಕೆಯಿಂದ ಸಮಾಧಾನ ಸಿಗಬಹುದು
- ಆತ್ಮಸಾಕ್ಷಿಯನ್ನ ಅನುಸರಿಸಿ
- ವ್ಯಾಪಾರ, ವ್ಯವಹಾರ ಬಿಟ್ಟು ಬೇರೆಡೆಗೆ ಹೋದರೆ ನಷ್ಟವಾಗಬಹುದು
- ತಂದೆಯ ಸಲಹೆ ಲಾಭದಾಯಕ
- ಜನರಿಗೆ ಪ್ರಿಯವಾದ ಕೆಲಸ ಮಾಡಿ
- ಅಯ್ಯಪ್ಪ ಸ್ವಾಮಿಯನ್ನ ಪ್ರಾರ್ಥನೆ ಮಾಡಿ
ತುಲಾ
- ನಿಮ್ಮ ಸಹೋದ್ಯೋಗಿಗಳನ್ನ ಸಂತೋಷಪಡಿಸಿ
- ನಕಾರಾತ್ಮಕ ಜನರ ಸಂಪರ್ಕ ಬೇಡ
- ಚಿಂತನಶೀಲವಾದ ಕೆಲಸಕ್ಕೆ ಆದ್ಯತೆ ಕೊಡಿ
- ಮನೆಯಲ್ಲಿ, ಸ್ನೇಹಿತರ ಮದ್ಯೆ ಭಿನ್ನಾಭಿಪ್ರಾಯ ಬೇಡ
- ನಿಮ್ಮದೇ ಆದ ವಾದ ಬೇಡ
- ನಿಮ್ಮ ಹಕ್ಕುಗಳು, ಅವಕಾಶಗಳು ಹೆಚ್ಚಾಗಬಹುದು
- ಗಣಪತಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
- ಆರೋಗ್ಯದ ದೃಷ್ಟಿಯಿಂದ ಖರ್ಚು ಹೆಚ್ಚಾಗಬಹುದು
- ನಿಮ್ಮ ಆಲೋಚನೆಗೆ ವಿರುದ್ಧವಾದ ಫಲ
- ಜೊತೆಯಲ್ಲಿ ಇರುವವರಿಗೆ ಅಹಂಕಾರದ ಸಮಸ್ಯೆ
- ಹಣ ಹೂಡಿಕೆಯಲ್ಲಿ ಚಿಂತಿಸಿ ತೀರ್ಮಾನಿಸಿ
- ಬೇರೆಯವರನ್ನು ನಿಯಂತ್ರಿಸಲು ಹೋಗಿ ಅವಮಾನವಾಗಬಹುದು
- ಮಕ್ಕಳ ಬಗ್ಗೆ ಎಚ್ಚರ ಇರಲಿ
- ಮೃತ್ಯುಂಜಯನನ್ನ ಪ್ರಾರ್ಥನೆ ಮಾಡಿ
ಧನುಸ್ಸು
- ಯೋಜನೆಯಂತೆ ಕೆಲಸಗಳು ಪೂರ್ವವಾಗಬಹುದು
- ಮಂಗಳ ಕಾರ್ಯದ ಚರ್ಚೆಗೆ ಅವಕಾಶವಿದೆ
- ಬೇರೆ ಕೆಲಸಗಾರರು ನಿಮ್ಮನ್ನ ಅವಲಂಬಿಸುತ್ತಾರೆ
- ವ್ಯಾಪಾರ ಅನುಕೂಲವಿದೆ
- ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಅನುಕೂಲವಿದೆ
- ಇಂದು ಮಾನಸಿಕ ಸ್ಥಿರತೆ ಇರಲಿ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮಕರ
- ನಿಮ್ಮ ದಾರಿಗೆ ಜನರನ್ನ ಆಕರ್ಷಿಸಲು ಪ್ರಯತ್ನಿಸಿರಿ ವಿಫಲರಾಗುತ್ತೀರಿ
- ಆತುರದಲ್ಲಿ ಯಾವ ಕೆಲಸವೂ ಬೇಡ
- ಮಾಡಿದ ಕೆಲಸವೇ ಮತ್ತೆ ಮಾಡಬೇಕಾಗುತ್ತದೆ
- ಕಾರ್ಯದ ಒತ್ತಡದಿಂದ ಆಯಾಸಕ್ಕೆ ಅವಕಾಶವಿದೆ
- ರೋಗಿಗಳ ಸೇವೆಗೆ ಹಣ ಖರ್ಚಾಗಬಹುದು
- ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
- ಮನೆಯಲ್ಲಿ ವಾಸ್ತುದೋಷ ಪರೀಕ್ಷಿಸಿಕೊಳ್ಳಿ
ಕುಂಭ
- ಇಂದು ನಿರೀಕ್ಷೆಗಿಂತ ಹೆಚ್ಚಿನ ಲಾಭ
- ಯಾರನ್ನು ಸುಲಭವಾಗಿ ನಂಬದ ನೀವು ಮೋಸ ಹೋಗಬಹುದು
- ಜನಸಂದಣಿಯಿಂದ ದೂರವಿರಿ
- ಸರ್ಕಾರಿ ಕೆಲಸ, ಸೇವ ವಿಳಂಬವಾಗಿ ಬೇಸರವಾಗಬಹುದು
- ಜವಾಬ್ದಾರಿ ಪ್ರಜ್ಞೆ ಹೆಚ್ಚಾಗುತ್ತದೆ
- ಅನುಭವಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಿ
- ಆಂಜನೇಯನನ್ನ ಪ್ರಾರ್ಥನೆ ಮಾಡಿ
ಮೀನ
- ನಿಮ್ಮವರಲ್ಲಿ ನಿಮಗೆ ವಿಶ್ವಾಸವಿರಲಿ
- ಅವಮಾನಕ್ಕೆ ಆಸ್ಪದ ಬೇಡ
- ಆರೋಗ್ಯದ ಬಗ್ಗೆ ಎಚ್ಚರವಿರಲಿ
- ಆತಂಕದ ವಾತಾವರಣದಿಂದ ದೂರವಿರಿ
- ನಿಮ್ಮ ಮಾತು, ನಡವಳಿಕೆಯಲ್ಲಿ ಸಮತೋಲನವಿರಲಿ
- ಮಕ್ಕಳಿಂದ ಹೆಚ್ಚಿನ ಆತಂಕವಾಗಬಹುದು
- ಧನ್ವಂತರಿ ಮಹಾವಿಷ್ಣು ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ