/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಅನೂರಾಧ ನಕ್ಷತ್ರ ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ
- ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುವ ಯೋಗವಿದೆ
- ಇಂದು ವಿಶ್ರಾಂತಿ ಅವಶ್ಯಕತೆಯಿದೆ
- ಕುಟುಂಬ ಸದಸ್ಯರ ಜೊತೆ ಸಮಯ ಕಳೆಯಿರಿ
- ಸಹೋದ್ಯೋಗಿಗಳಿಂದ ಕಿರಿಕಿರಿ ಉಂಟಾಗಬಹುದು
- ಪೊಲೀಸ್ ಇಲಾಖೆಯವರಿಗೆ ಸಿಹಿಸುದ್ದಿ
- ಕೈಗಾರಿಕೋದ್ಯಮಿಗಳಿಗೆ ಸಂತಸದ ಸುದ್ದಿ ಜೊತೆಗೆ ಲಾಭವಿದೆ
- ಮಹಾ ಗಣಪತಿಯನ್ನು ಪ್ರಾರ್ಥನೆ ಮಾಡಿ
ವೃಷಭ
- ಸಹೋದರರಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು
- ಈ ದಿನ ಸೇಡು, ದ್ವೇಷಗಳು ಬೇಡ ತೊಂದರೆಯಾಗಬಹುದು
- ವ್ಯವಹಾರದಲ್ಲಿ ಮೋಸದ ಸಾಧ್ಯತೆಯಿದೆ
- ನಿಮ್ಮ ಆತ್ಮವಿಶ್ವಾಸವನ್ನು ಬಲಪಡಿಸಿಕೊಳ್ಳಿ
- ಇಂದು ಹೂಡಿಕೆಯಲ್ಲಿ ಯಶಸ್ಸಿದೆ
- ನಿಮ್ಮ ಜಾಗ್ರತೆ ನಿಮ್ಮ ಕೈಯಲ್ಲಿರಲಿ
- ಕುಲದೇವತಾರಾಧನೆ ಮಾಡಿ
ಮಿಥುನ
- ಬಾಡಿಗೆದಾರರು ಸಂತಸ ಪಡುವ ದಿನ
- ಸಾಧಕರಿಗೆ ಅನುಕೂಲವಾಗುವ ದಿನ
- ಹಿರಿಯರ ಸಾಲವನ್ನು ತೀರಿಸಬೇಕಾಗಬಹುದು
- ಸಂಧಾನ ರಾಜಿಗಳು ಇಂದು ಕೆಲಸಕ್ಕೆ ಬರುವುದಿಲ್ಲ
- ಕ್ರೀಡಾಪಟುಗಳಿಗೆ ಶುಭವಿದೆ
- ಸಾಯಂಕಾಲ ಕಾಲಿಗೆ ಪೆಟ್ಟು ಬೀಳುವ ಸಾಧ್ಯತೆಯಿದೆ ಎಚ್ಚರಿಕೆಯಿರಲಿ
- ದುರ್ಗಾ ಆರಾಧನೆ ಮಾಡಿ
ಕಟಕ
- ದಾಂಪತ್ಯ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ
- ಸಾಮರಸ್ಯ, ನೆಮ್ಮದಿಯ ಕಡೆ ಮುಖ ಮಾಡಿ
- ಅಮೂಲ್ಯ ವಸ್ತುಗಳ ಖರೀದಿ ಮಾಡಬಹುದು
- ಹೊಸ ಹೊಸ ಆಲೋಚನೆಗಳಿಗೆ ಅವಕಾಶವಿದೆ
- ವೃತ್ತಿಯಲ್ಲಿ ಉನ್ನತಿ ಇದ್ದರೂ ಭಯ ಇರುತ್ತದೆ
- ಹಣ ಹೂಡಿಕೆಯು ಭೀತಿಯುಂಟು ಮಾಡಬಹುದು
- ಈಶ್ವರನಿಗೆ ಕಬ್ಬಿನ ಹಾಲಿನಿಂದ ಅಭಿಷೇಕ ಮಾಡಿಸಿ
ಸಿಂಹ
- ಕೈಗಾರಿಕೆ ಅಥವಾ ವ್ಯವಹಾರದಲ್ಲಿ ಉತ್ತಮ ಬೆಳವಣಿಗೆಯಿದೆ
- ನಿಮ್ಮ ಆರೋಗ್ಯದ ಕಡೆ ಗಮನ ಹರಿಸಿ
- ಬಟ್ಟೆ ವ್ಯಾಪಾರಿಗಳಿಗೆ ಲಾಭದ ದಿನ
- ದಾಂಪತ್ಯದಲ್ಲಿ ಅಸಮಾಧಾನ, ಕಲಹವಿದೆ
- ಮನೆಯಲ್ಲಿ ಭಯದ ವಾತಾವರಣ ಇರುತ್ತದೆ
- ಖರೀದಿಯಿಂದ ಅಧಿಕ ಖರ್ಚು, ಬೇಸರವಾಗಬಹುದು
- ಸುದರ್ಶನ ಹೋಮವನ್ನು ಮಾಡಿಸಿಕೊಳ್ಳಿ
ಕನ್ಯಾ
- ಕೆಲಸದ ಒತ್ತಡದಿಂದ ಬೇಸರವಾಗಬಹುದು
- ಹಿಂದೆ ಮಾಡಿದ ಸಾಲದಿಂದ ಮುಕ್ತಿ ಸಿಗಬಹುದು
- ಜವಾಬ್ದಾರಿಗಳು ಹೆಚ್ಚಾಗಬಹುದು
- ಮದುವೆಯ ವಿಚಾರಕ್ಕೆ ಇಲ್ಲಸಲ್ಲದ ಮಾತು ಬರಬಹುದು
- ನನ್ನದೇ ಮಾತು ನಡೆಯಬೇಕೆಂಬ ವಿಚಾರದಲ್ಲಿ ಹಿನ್ನಡೆಯಾಗಬಹುದು
- ಆಂತರಿಕ ಸಮಸ್ಯೆಗೆ ಪರಿಹಾರ ಅಗತ್ಯ
- ಆಂಜನೇಯ ಸ್ವಾಮಿಯನ್ನು ಸ್ಮರಣೆ ಮಾಡಿ
ತುಲಾ
- ಇಂದು ಮಹಿಳಾ ಉದ್ಯೋಗಿಗಳಿಗೆ ಒತ್ತಡ ಹೆಚ್ಚು
- ರಾಜಕೀಯ ವರ್ಗದವರಿಗೆ ಶತ್ರುಕಾಟ
- ಪ್ರಯಾಣದಿಂದ ಧನ ಲಾಭವಿದೆ, ಆದರೆ ಹಾನಿ ಕೂಡ ಉಂಟಾಗಬಹುದು
- ಕಮೀಷನ್ ಏಜೆಂಟ್ಸ್ಗಳಿಗೆ ಲಾಭವಿದೆ
- ಇಂದು ವಿದ್ಯಾರ್ಥಿಗಳಿಗೆ ಅಧಿಕ ಒತ್ತಡ ಇರುತ್ತದೆ
- ಜೀವನ ಶೈಲಿಯಲ್ಲಿ ಬದಲಾವಣೆಯ ಪರ್ವ
- ನಿಮ್ಮ ಗುರುಗಳ ಆಶೀರ್ವಾದ ಪಡೆಯಿರಿ
ವೃಶ್ಚಿಕ
- ಚಿತ್ರರಂಗದಲ್ಲಿರುವವರಿಗೆ ಲಾಭ ಆದರೆ ಆಘಾತವಿದೆ
- ಸ್ನೇಹ ಸಂಬಂಧಗಳು ವೃದ್ಧಿಯಾಗಲಿವೆ
- ಮನೆಯ ಪರಿಸ್ಥಿತಿ ಸುಧಾರಿಸುತ್ತದೆ
- ದೊಡ್ಡವರ ಹಿತವಚನ ಅನುಕೂಲವಾಗುತ್ತದೆ
- ಅಪರಿಚಿತರಿಂದ ಮೋಸ ಸಾಧ್ಯತೆಯಿದೆ
- ಹಣದ ವಿಚಾರದಲ್ಲಿ ಸರಿಯಾದ ಚಿಂತನೆಯಿರಲಿ
- ರಾಜರಾಜೇಶ್ವರಿಯನ್ನು ಪ್ರಾರ್ಥನೆ ಮಾಡಿ
ಧನುಸ್ಸು
- ಇಂದು ಯಾವುದೇ ವಿಚಾರದಲ್ಲಿ ಅತಿಯಾದ ನಂಬಿಕೆ ಬೇಡ
- ಪರಿಶ್ರಮಕ್ಕೆ ತಕ್ಕ ಪ್ರತಿಫಲವಿದೆ
- ಉತ್ಸಾಹವನ್ನು ನಿಯಂತ್ರದಲ್ಲಿರಿಸಿಕೊಳ್ಳಿ
- ಸರ್ಕಾರಿ ಕೆಲಸಗಾರರಿಗೆ ಬಡ್ತಿಯ ಯೋಗವಿದೆ
- ಕೃಷಿಕರಿಗೆ ಲಾಭವಾಗುವ ದಿನ
- ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಕಾಡಬಹುದು
ಮಕರ
- ದೃಢ ನಿರ್ಧಾರಗಳಿಂದ ಶುಭವಿದೆ
- ನಂಬಿದವರಿಂದ ಮೋಸ ಹೋಗಬಹುದು
- ಯಂತ್ರೋಪಕರಣ ವ್ಯಾಪಾರಸ್ಥರಿಗೆ ಲಾಭವಿದೆ
- ಇಂದು ರಾಜಕೀಯ ಭವಿಷ್ಯಕ್ಕೆ ಅಡ್ಡಿಗಳು ಹೆಚ್ಚು
- ಸ್ನೇಹಿತರ ಸಹಾಯ ವಿಫಲವಾಗಬಹುದು
- ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ
ಕುಂಭ
- ಪರಿಶ್ರಮಕ್ಕೆ ತಕ್ಕ ಆದಾಯವಿಲ್ಲದೇ ಬೇಸರವಾಗಬಹುದು
- ಋಣಾತ್ಮಕವಾದ ಯೋಚನೆ ಬರಬಹುದು
- ನಿಮ್ಮ ಸಾಮರ್ಥ್ಯವನ್ನು ಮೀರಿ ಯಾವುದಕ್ಕೂ ಪ್ರಯತ್ನಿಸಬೇಡಿ
- ವ್ಯಾಪಾರ, ವ್ಯವಹಾರದಿಂದ ನಷ್ಟದ ಸಾಧ್ಯತೆಯಿದೆ
- ವಿದ್ಯಾರ್ಥಿಗಳಿಗೆ ಹಿನ್ನಡೆ ಉಂಟಾಗಬಹುದು
- ಮಾನಸಿಕ ಕಿರಿಕಿರಿ ಆದರೆ ಸಾಯಂಕಾಲ ಸ್ವಲ್ಪ ಸಮಾಧಾನ ಸಿಗಬಹುದು
- ನರಸಿಂಹ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಮೀನ
- ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ಮುಂದುವರಿಯುತ್ತದೆ
- ಅನಿವಾರ್ಯವಾದ ಪ್ರಯಾಣ ಮಾಡಬಹುದು
- ವೃತ್ತಿಯಲ್ಲಿ ಬದಲಾವಣೆ ಆಲೋಚನೆ ಬರಬಹುದು ಆದರೆ ಕಾಯ್ದರೆ ಒಳ್ಳೆಯದು
- ಸ್ಥಿರಾಸ್ತಿ ವಿಚಾರದಲ್ಲಿ ಪ್ರಗತಿಯಿದೆ
- ನೆರೆ ಹೊರೆಯವರ ಸಹಾಯ ಸಿಗಬಹುದು
- ಹೊಸ ವಿಚಾರಗಳಿಂದ ಲಾಭ ಹಾಗೂ ಅನುಕೂಲವಿದೆ
- ನಾರಾಯಣನನ್ನು ಸ್ಮರಣೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ