newsfirstkannada.com

ಅನಗತ್ಯ ಖರ್ಚಿಗೆ ಕಡಿವಾಣ ಹಾಕಿ.. ವ್ಯಾವಹಾರಿಕ ದೃಷ್ಟಿಯಿಂದ ಇಂದು ಉತ್ತಮವಾದ ದಿನ; ಇಲ್ಲಿದೆ ನಿಮ್ಮ ಭವಿಷ್ಯ!

Share :

Published June 9, 2024 at 5:59am

  ಮನೆಯಲ್ಲಿ ಒಂದಷ್ಟು ವಿಚಾರಕ್ಕೆ ಪರಸ್ಪರ ವಿವಾದಗಳು ಆಗಬಹುದು

  ಹಣಕಾಸಿನ ವಿಚಾರವಾಗಿ ಕೆಲವು ಕೆಲಸಗಳು ಸ್ಥಗಿತವಾಗಬಹುದು

  ವಿದೇಶಕ್ಕೆ ಹೋಗುವ ವಿಚಾರ ಮನಸ್ಸಿನಲ್ಲಿದ್ದರೆ ಧನಾತ್ಮಕ ಸೂಚನೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 4.30 ರಿಂದ 6.00 ರವರೆಗೆ ಇರಲಿದೆ.

ಮೇಷ ರಾಶಿ

 • ಈ ದಿನ ವಿಶೇಷ ಕೆಲಸ ಮಾಡಬೇಕೆಂದರೆ ಹಿರಿಯರ ಆಶೀರ್ವಾದ ಪಡೆದರೆ ಶುಭದಿನ
 • ಮನಸ್ಸಿನಲ್ಲಿ ಹೊಸ ಆಲೋಚನೆಗಳು, ಹೊಸದನ್ನು ಮಾಡುವ ಉತ್ಸಾಹ ಹೆಚ್ಚಾಗುವ ದಿನ
 • ನಿಮ್ಮ ಖರ್ಚನ್ನು ಸರಿಯಾಗಿ ಗಮನಿಸಿ
 • ಅನಗತ್ಯವಾದ ಖರ್ಚಿಗೆ ಕಡಿವಾಣ ಹಾಕಿ
 • ಮನೆಯಲ್ಲಿ ಒಂದಷ್ಟು ವಿಚಾರಕ್ಕೆ ಪರಸ್ಪರ ವಿವಾದಗಳಾಗಬಹುದು
 • ಮನೆಯವರ ಸಲಹೆ, ಸೂಚನೆಗಳನ್ನು ಗಣನೆಗೆ ತೆಗೆದುಕೊಳ್ಳಿ
 • ಯಾವುದೇ ಕಾರಣಕ್ಕೂ ಸಾಲವನ್ನು ಮಾಡಬೇಡಿ
 • ಕೆಂಪು ವಸ್ತ್ರವನ್ನು ಧಾರಣೆ ಮಾಡಿ
 • ಕುಲದೇವತಾ ಆರಾಧನೆ ಮಾಡಿ

ವೃಷಭ

 • ವ್ಯಾವಹಾರಿಕ ದೃಷ್ಟಿಯಿಂದ ಉತ್ತಮವಾದ ದಿನ
 • ಅಲ್ಪ ಶ್ರಮದಿಂದ ಹೆಚ್ಚು ಗಳಿಕೆ ಮಾಡುತ್ತೀರಿ
 • ನಿಮ್ಮ ಸಾಮರ್ಥ್ಯವನ್ನು ಗಮನಿಸಿ ಮನೆಯಲ್ಲಿ, ಉದ್ಯೋಗದಲ್ಲಿ, ವ್ಯಾವಹಾರಿಕವಾಗಿ ಜವಾಬ್ದಾರಿ ಹೆಚ್ಚಾಗಲಿದೆ
 • ಕಾರ್ಯನಿಮಿತ್ತವಾಗಿ ಪ್ರಯಾಣ ಮಾಡುತ್ತೀರಿ
 • ವಿದ್ಯಾರ್ಥಿಗಳಿಗೆ ಗಂಭೀರವಾದ ವಿಚಾರಗಳನ್ನು ಅಧ್ಯಯನ ಮಾಡುವ ಆಸಕ್ತಿ ಬರಲಿದೆ
 • ದಾಂಪತ್ಯ ಜೀವನ ಸುಖಮಯವಾಗಿರುತ್ತದೆ
 • ವಿನಾಕಾರಣ ಮಾತನಾಡಿ ನಿಷ್ಠೂರ ಆಗುವುದರಿಂದ ಬೇಸರವನ್ನು ವ್ಯಕ್ತಪಡಿಸುತ್ತೀರಿ
 • ಮನೆಯಲ್ಲಿ ಕೆಲಸಗಾರರು, ಸೇವಕರಿದ್ದರೆ ಎಚ್ಚರಿಕೆಯಿಂದಿರಿ
 • ಶಿಂಶುಮಾರ ಮಂತ್ರವನ್ನು ಶ್ರವಣ ಮಾಡಿ

ಮಿಥುನ

 • ಹಣಕಾಸಿನ ವಿಚಾರವಾಗಿ ಕೆಲವು ಕೆಲಸಗಳು ಸ್ಥಗಿತವಾಗಬಹುದು
 • ಕಾರ್ಯಕ್ಷೇತ್ರದಲ್ಲಿ ಕೆಲವೇ ವಿಚಾರಗಳಲ್ಲಿ ನಿಮ್ಮ ಅರಿವಿಲ್ಲದೆ ಸಮಸ್ಯೆ ಉಂಟಾಗಬಹುದು
 • ಕುಟುಂಬದ ಸದಸ್ಯರ ಸ್ವಭಾವ ನಿಮಗೆ ಬೇಸರ ತರಬಹುದು
 • ಪೂರ್ವಿಕರ ಆಸ್ತಿಯ ವಿಚಾರದಲ್ಲಿ ತಿರುವು ಬರಬಹುದು
 • ಸಮಾಜದಲ್ಲಿ ನಿಮ್ಮನ್ನ ಗುರುತಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಬೇಕಾಗುತ್ತದೆ
 • ವೈದಕೀಯ ವಿದ್ಯಾರ್ಥಿಗಳಿಗೆ ಹಾಗೂ ವೈದ್ಯರಿಗೆ ಶುಭಫಲವಿದೆ
 • ಕಾಮಧೇನುವನ್ನು ಸ್ಮರಣೆ ಮಾಡಿ

ಕಟಕ

 • ವಿದ್ಯಾಭ್ಯಾಸದ ದೃಷ್ಟಿಯಿಂದ ಅಥವಾ ಮನೋರಂಜನೆಗಾಗಿ, ಬಂಧುಗಳಿಗಾಗಿ, ವಿದೇಶಗಳಿಗೆ ಹೋಗಬೇಕೆನ್ನುವ ಯೋಚನೆ ಇದ್ದರೆ ಪೂರ್ಣವಾಗಲಿದೆ
 • ವಿದೇಶಕ್ಕೆ ಹೋಗುವ ವಿಚಾರ ಮನಸ್ಸಿನಲ್ಲಿದ್ದರೆ ಧನಾತ್ಮಕ ಸೂಚನೆ ಇದೆ
 • ಸಂಬಂಧಿಕರಲ್ಲಿ ಬಹು ಜನಪ್ರಿಯರಾಗುತ್ತೀರಿ
 • ಸಾರ್ವಜನಿಕ ಕ್ಷೇತ್ರದಲ್ಲಿ ದುಡಿಯುವ ಮನಸ್ಸು ಹೆಚ್ಚಾಗಬಹುದು
 • ಕೈ ಹಾಕಿದ ಎಲ್ಲಾ ಕೆಲಸಗಳು ಪೂರ್ಣವಾಗುವ ಸೂಚನೆ ಇದೆ
 • ಇಂದು ಚಿಕ್ಕ ಮಕ್ಕಳ ಬಗ್ಗೆ ಸ್ವಲ್ಪ ಗಮನ ಹರಿಸಿ
 • ಅಶ್ವಥ ವೃಕ್ಷಕ್ಕೆ 12 ಪ್ರದಕ್ಷಣೆ ಹಾಕಿ

ಸಿಂಹ

 • ಅಪರಿಚಿತ ವ್ಯಕ್ತಿಯಿಂದ ಭಯ ಕಾಡಬಹುದು
 • ಮಾಟ-ಮಂತ್ರ ಇತ್ಯಾದಿ ಸಮಸ್ಯೆಗಳಿವೆ ಎಂಬ ಆಲೋಚನೆ ಬರಬಹುದು
 • ಹಣ ಅಥವಾ ದ್ರವ್ಯ ಕಳೆದುಕೊಳ್ಳುವ ಸೂಚನೆ ಇದೆ
 • ವಿನಾಕಾರಣ ವಾದ-ವಿವಾದಗಳು ಇಂದು ಬೇಡ
 • ನಿಮ್ಮ ಧೈರ್ಯ ಮತ್ತು ನಿಮ್ಮ ಸಾಧನೆಯ ಅಹಂಭಾವಕ್ಕೆ ಭಂಗವಾಗಬಹುದು
 • ಪ್ರತ್ಯಂಗಿರಾ ದೇವಿಯ ಪ್ರಾರ್ಥನೆ ಮಾಡಿ

ಕನ್ಯಾ

 • ಸಾಂಸಾರಿಕವಾಗಿ ಮಕ್ಕಳ ಬಗ್ಗೆ ಇರುವ ಚಿಂತೆ ದೂರವಾಗುತ್ತದೆ
 • ನಿಮ್ಮ ಕೌಶಲ್ಯ ನಿಮಗೆ ಸಹಕಾರ ನೀಡಬಹುದು
 • ಸ್ನೇಹಿತರ ಜೊತೆ ಸೇರಿಕೊಂಡು ಹೊಸ ಯೋಜನೆಗಳನ್ನು ಮಾಡಲು ಯೋಚನೆ ಆರಂಭಿಸಬಹುದು
 • ಬದಲಾವಣೆಯ ಪರ್ವ ಯಶಸ್ಸಿನ ಗುಟ್ಟು ಅನುಭವಕ್ಕೆ ತೆಗೆದುಕೊಳ್ಳುವ ದಿನ
 • ಕುಲದೇವತಾರಾಧನೆ ಮಾಡಿ

ತುಲಾ

 • ಸಮಾಜದಲ್ಲಿ ಒಂದಷ್ಟು ಜನ ಸಾತ್ವಿಕವಾಗಿರುವವರಿಗೆ ತೊಂದರೆ ಮಾಡಬೇಕೆಂದು ಕಾಯುತ್ತಿರುತ್ತಾರೆ
 • ಈ ದಿನ ನಯವಂಚಕರಿಂದ ದೂರವಿರಿ
 • ಮೇಲಾಧಿಕಾರಿಗಳ ಜೊತೆ ಅಥವಾ ಕುಟುಂಬದ ಹಿರಿಯರ ಜೊತೆ ವಾದ-ವಿವಾದ ಮಾಡಬೇಡಿ
 • ಈ ದಿನ ನಿಮ್ಮ ಕೋಪವನ್ನು ಕಡಿಮೆ ಮಾಡಿಕೊಳ್ಳಿ
 • ದುರ್ಗಾದೇವಿಯ ಆರಾಧನೆ ಮಾಡಿ

ವೃಶ್ಚಿಕ

 • ಹವಾಮಾನ ವೈಪರೀತ್ಯದಿಂದ ಆರೋಗ್ಯ ಸಮಸ್ಯೆ ಕಾಡಬಹುದು
 • ಇಂದು ನಯವಂಚಕರಿಂದ ದೂರವಿರಿ
 • ವಿವಾಹಿತರಿಗೆ ಸಿಹಿಸುದ್ದಿ, ಮದುವೆ ವಿಚಾರ ಪ್ರಸ್ತಾಪವಾಗಬಹುದು
 • ನಿಮ್ಮ ಅಸ್ತಿತ್ವವನ್ನು ಗಟ್ಟಿ ಮಾಡಿಕೊಳ್ಳಿ
 • ದೇವರ ಬಗ್ಗೆ ಹಿರಿಯರ ಬಗ್ಗೆ ನಿಮ್ಮ ಕೆಲಸದ ಬಗ್ಗೆ ಪರಿಪೂರ್ಣ ಗೌರವ ಇರಲಿ
 • ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಧನುಸ್ಸು

 • ನಿಮ್ಮ ಸ್ವಭಾವ ನೋಡಿದ ತಕ್ಷಣ ಕೆಲವು ಜನರು ನಿಮ್ಮಿಂದ ಏನಾದರೂ ಪಡೆದುಕೊಳ್ಳಬೇಕೆಂಬ ಭಾವನೆ ಬರಬಹುದು
 • ಪುಸ್ತಕ ಪ್ರೇಮಿಗಳಿಗೆ, ವ್ಯಾಪಾರಿಗಳಿಗೆ ಲಾಭದ ದಿನ
 • ಸಹೋದರರ ವೈಮನಸ್ಯ ನಿಮಗೆ ತೊಂದರೆ ಉಂಟು ಮಾಡಬಹುದು
 • ಆದಾಯದ ಮೂಲವನ್ನು ಗಮನಿಸಿಕೊಂಡು ಹಣದ ವಿಚಾರಕ್ಕೆ ತೊಂದರೆಯಾಗಬಹುದು
 • ದುಬಾರಿ ವಸ್ತುಗಳನ್ನು ಖರೀದಿ ಮಾಡಬಹುದು ಆದರೆ ಅದು ಬೇಡ
 • ಕುಬೇರ ಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಮಕರ

 • ಕುಟುಂಬದ ವಾತಾವರಣ, ವ್ಯಾಪಾರ, ವ್ಯವಹಾರ, ಉದ್ಯೋಗ ಎಲ್ಲವೂ ಈ ದಿನ ಚೆನ್ನಾಗಿರುತ್ತದೆ
 • ವಿರೋಧಿಗಳು ನಿಮ್ಮ ಸಂತೋಷವನ್ನು ಭಂಗ ಮಾಡಬಹುದು
 • ಧಾರ್ಮಿಕ ಮುಖಂಡರಿಗೆ ಅವಮಾನ, ಹಿನ್ನಡೆಯಾಗುವ ಸಾಧ್ಯತೆ ಇದೆ
 • ಹಿತ ಶತ್ರುಗಳ ಕಾಟ ನಿಮ್ಮ ಗೌರವಕ್ಕೆ ಧಕ್ಕೆ ತರಬಹುದು
 • ವ್ಯಾಪಾರವನ್ನು ವಿಸ್ತಾರ ಮಾಡಲು ಹೋಗಿ ನಷ್ಟ ಉಂಟಾಗಬಹುದು
 • ಪ್ರೇಮಿಗಳಿಗೆ ಅಶುಭವಾದ ದಿನ
 • ಸುದರ್ಶನ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕುಂಭ

 • ಸರಕಾರಿ ನೌಕರರು ಹಾಗೂ ವಿದ್ಯಾರ್ಥಿಗಳು ನಿಮ್ಮ ತಾಳ್ಮೆಯನ್ನು ಪರೀಕ್ಷಿಸಿಕೊಳ್ಳುವ ದಿನ
 • ನಿಮ್ಮ ಕೈಕೆಳಗೆ ಕೆಲಸ ಮಾಡುವವರು ನಿಮ್ಮನ್ನು ಪ್ರಶಂಸೆ ಮಾಡುತ್ತಾರೆ
 • ಬೇರೆಯವರ ನಿರ್ಲಕ್ಷ್ಯ ನಿಮ್ಮ ಕೆಲಸಕ್ಕೆ ಅಡ್ಡಿ ಉಂಟು ಮಾಡಬಹುದು
 • ನಿಮ್ಮ ಜವಾಬ್ದಾರಿಯ ಬಗ್ಗೆ ಅಗತ್ಯವಾಗಿ ಗಮನಹರಿಸಿ
 • ಅತಿ ಮುಖ್ಯವಾದ ವಿಚಾರಗಳಲ್ಲಿ ಗೊಂದಲ ಉಂಟಾಗಬಹುದು
 • ಇಂದು ಆರ್ಥಿಕ ಸಮಸ್ಯೆ ನಿಮ್ಮನ್ನು ಕಾಡಬಹುದು
 • ಸಾಯಂಕಾಲ ಸ್ವಲ್ಪ ಮಾನಸಿಕ ಒತ್ತಡ ಕಡಿಮೆಯಾಗಬಹುದು
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಮೀನ

 • ನಿರುದ್ಯೋಗಿಗಳಿಗೆ ತುಂಬಾ ಬೇಸರವಾಗುವ ದಿನ
 • ಇಂದು ನಿಮ್ಮ ಆರೋಗ್ಯ ಕೂಡ ಕೈಕೊಡುವ ಸಾಧ್ಯತೆಯಿದೆ
 • ಅತಿಯಾದ ಆತ್ಮವಿಶ್ವಾಸ ನಿಮಗೆ ತೊಂದರೆ ಮಾಡಬಹುದು
 • ಉನ್ನತ ಹುದ್ದೆಯಲ್ಲಿದ್ದರೂ ಕೂಡ ನಿರಾಸೆ ಹೊಂದಬಹುದು
 • ಪ್ರೇಮಿಗಳಿಗೆ ಹಿನ್ನಡೆ, ಉದ್ವಿಗ್ನತೆ ಕಾಡಬಹುದು
 • ಕುಟುಂಬದ ಹಿರಿಯರ ಪ್ರೀತಿ, ವಿಶ್ವಾಸದ ಜೊತೆ ಅವರ ಮನಸ್ಸನ್ನು ಗೆಲ್ಲಬೇಕು
 • ಇಷ್ಟದೇವತಾ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅನಗತ್ಯ ಖರ್ಚಿಗೆ ಕಡಿವಾಣ ಹಾಕಿ.. ವ್ಯಾವಹಾರಿಕ ದೃಷ್ಟಿಯಿಂದ ಇಂದು ಉತ್ತಮವಾದ ದಿನ; ಇಲ್ಲಿದೆ ನಿಮ್ಮ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

Load More