/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.
ಮೇಷ ರಾಶಿ
- ದೇಹಕ್ಕೆ ಒಪ್ಪುವಂತಹ ಕೆಲಸವನ್ನು ಮಾಡಿ
- ವಸ್ತು ಮಾರಾಟಕ್ಕೆ ಉತ್ತಮವಾದ ದಿನ
- ಸ್ನೇಹಿತರಿಂದ ಉತ್ತಮ ಸಲಹೆ ಸಹಕಾರ ಸಿಗಲಿದೆ
- ಕೆಲಸದ ಶೈಲಿಯಲ್ಲಿ ಬದಲಾವಣೆಯಾಗಬಹುದು
- ಮಕ್ಕಳಿಗಾಗಿ ಸಮಯ ನೀಡಬಹುದು
- ದಂಪತಿಗಳಲ್ಲಿ ವಾದ-ವಿವಾದ ಬೇಡ
- ಲಕ್ಷ್ಮಿ ನಾರಾಯಣರನ್ನು ಪ್ರಾರ್ಥನೆ ಮಾಡಿ
ವೃಷಭ
- ದಾಂಪತ್ಯದಲ್ಲಿ ಅನ್ಯೋನ್ಯತೆ ಇರಬೇಕು
- ಆರ್ಥಿಕ ಸಂಕಷ್ಟ ಎದುರಾಗಬಹುದು
- ಹಠದಿಂದ ಕಾರ್ಯ ಸಾಧನೆ ಮಾಡುತ್ತೀರಿ
- ಅಶಾಂತಿ ಅಸಂತೋಷವಿರುವ ದಿನ
- ಪ್ರೇಮಿಗಳಿಗೆ ಅಶುಭ ಅನಾರೋಗ್ಯ ಕಾಡಲಿದೆ
- ಮಕ್ಕಳಿಗೆ ಶುಭ ಸಮಯ
- ಕುಲದೇವತಾರಾಧನೆಯನ್ನು ಮಾಡಿ
ಮಿಥುನ
- ಭಯ-ಕೋಪಗಳಿಂದ ಕಾರ್ಯ ವಿಘ್ನವಾಗಬಹುದು
- ವಿರುದ್ಧ ವಿಷಯಗಳಲ್ಲಿ ಆಸಕ್ತಿ ಇದೆ
- ಹಳೆಯ ಸ್ನೇಹಿತರ ಭೇಟಿ ಅನುಕೂಲವಿದೆ
- ಮನೆಯಲ್ಲಿ ಮಂಗಳ ಕಾರ್ಯದ ಚರ್ಚೆಯಾಗಬಹುದು
- ಪ್ರತಿಭೆಗೆ ತಕ್ಕ ಪ್ರತಿಫಲ ಸಿಗಲಿದೆ
- ವಿನಾಕಾರಣ ಜಗಳ ಮಾಡಬಹುದು
- ಆಂಜನೇಯ ಸ್ವಾಮಿಯನ್ನು ಸ್ಮರಿಸಿ
ಕಟಕ
- ಶಾರೀರಿಕ ತೊಂದರೆಯಿಂದ ಆಲಸ್ಯವಾಗಬಹುದು
- ಸಾಮಾಜಿಕ ಕೆಲಸಕ್ಕೆ ಸಾಮರ್ಥ್ಯದ ಕೊರತೆ
- ಹಣ ವ್ಯವಹಾರದಲ್ಲಿ ಹಿನ್ನಡೆಯಾಗಬಹುದು
- ತಾಯಿಯವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಬಹುದು ಎಚ್ಚರಿಕೆವಹಿಸಿ
- ದೈವ ಸಂಬಂಧಿ ಕಾರ್ಯಗಳಿಗೆ ಯೋಜನೆ
- ಇಂದು ಮಾನಸಿಕ ಸಮಾಧಾನವಿರುವುದಿಲ್ಲ
- ಮೃತ್ಯುಂಜಯ ಮಂತ್ರವನ್ನು 11 ಬಾರಿ ಜಪ ಮಾಡಿ
ಸಿಂಹ
- ಹಳೆಯ ರೋಗಿಗಳಿಗೆ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
- ವಿಶ್ರಾಂತಿಯ ಕೊರತೆಯಿಂದ ಅನಾರೋಗ್ಯ ಕಾಡಬಹುದು
- ಪ್ರವಾಸ ರದ್ದು ಆಗಬಹುದು
- ಅನಗತ್ಯ ಪ್ರಲಾಪ ಮಕ್ಕಳಿಂದ ನಿಂದನೆಯಾಗಬಹುದು
- ನಮ್ಮವರು ಎಂದವರು ಕೈಕೊಡಬಹುದು
- ಸೂರ್ಯ ನಮಸ್ಕಾರವನ್ನು ಮಾಡಿ
ಕನ್ಯಾ
- ಎಲ್ಲಾ ಮರೆತು ಸುಮ್ಮನಿರುವ ದಿನ
- ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆಯಾಗಬಹುದು
- ವಿದ್ಯಾರ್ಥಿಗಳಿಗೆ ವಿಶ್ರಾಂತಿ ಸಿಗಲಿದೆ
- ಪ್ರೇಮಿಗಳು ತುಂಬಾ ಉತ್ಸುಕರಾಗಿರುವ ದಿನ
- ಬೆಲೆಬಾಳುವ ವಸ್ತುವಿನ ನಷ್ಟ ಉಂಟಾಗಲಿದೆ
- ದಿನವಿಡೀ ಬೇರೆ ಬೇರೆ ಮಾತಿನಿಂದ ಸಮಯ ವ್ಯರ್ಥವಾಗಬಹುದು
- ಕುಲದೇವತಾ ಆರಾಧನೆಯನ್ನು ಮಾಡಿ
ತುಲಾ
- ಇಂದು ನಿಮ್ಮ ಆರೋಗ್ಯವನ್ನು ಗಮನಿಸಿ
- ಹಣದ ಸಮಸ್ಯೆ ಇರುವುದಿಲ್ಲ
- ಏಕಮುಖವಾದ ಪ್ರೀತಿ, ವಿಶ್ವಾಸ, ಅಭಿಮಾನ ವ್ಯರ್ಥವಾಗಬಹುದು
- ಇಂದು ಮಾನಸಿಕ ಶಾಂತಿ ಇರುವುದಿಲ್ಲ
- ಬೇಸರ ತರುವ ಸಮಯದಿಂದ ದೂರ ಉಳಿಯಿರಿ
- ಗಣಪತಿಯನ್ನು ಪೂಜಿಸಿ
ವೃಶ್ಚಿಕ
- ನಿಮ್ಮಂತೆ ಬೇರೆಯವರು ಇರಬೇಕೆಂಬ ಒತ್ತಡಬೇಡ
- ಆತುರದಲ್ಲಿ ಹೂಡಿಕೆ ಬೇಡ ಆರ್ಥಿಕ ನಷ್ಟ ಉಂಟಾಗಬಹುದು
- ನಿಮ್ಮ ಮಕ್ಕಳನ್ನ ಬೆಂಬಲಿಸಿ
- ಪ್ರಗತಿಯಿದ್ದರೂ ಸಮಾಧಾನವಿರುವುದಿಲ್ಲ
- ಹೆಚ್ಚು ಜನರ ಭೇಟಿಯಿಂದ ಗೊಂದಲ ಹೆಚ್ಚಾಗಲಿದೆ
- ಉತ್ತಮವಾದ ದಿನ ಸರಿಯಾಗಿ ವಿನಯೋಗಿಸಿಕೊಳ್ಳಬೇಕು
- ಕುಬೇರ ಲಕ್ಷ್ಮಿಯನ್ನು ಅರ್ಚಿಸಿ
ಧನುಸ್ಸು
- ಜಗಳ ಶತ್ರು ಕಾಟದಿಂದ ಕಣ್ಣೀರು ಹಾಕುತ್ತೀರಿ
- ಪಶ್ಚಾತ್ತಾಪ ಪಡುವಿಕೆ ಪ್ರಯೋಜನವಿಲ್ಲ
- ಹಣವಿದೆ ಆದರೆ ನೆಮ್ಮದಿ ಇರುವುದಿಲ್ಲ
- ಆಸಕ್ತಿ ಕಡಿಮೆ ಸ್ನೇಹಿತರ ಜೊತೆ ಮಾತುಕತೆ ಸಮಾಧಾನ ಇರುವುದಿಲ್ಲ
- ಮನೆಯಲ್ಲಿ ಅಭಿವೃದ್ಧಿಯ ಮಾತು ಸಂತೋಷವಾಗಲಿದೆ
- ಲಲಿತ ಪರಮೇಶ್ವರಿಯನ್ನು ಕುಂಕುಮದಿಂದ ಅರ್ಚಿಸಿ
ಮಕರ
- ಆಹಾರದ ವ್ಯತ್ಯಾಸದಿಂದ ತೊಂದರೆಯಿದೆ
- ಹೊಸ ಆದಾಯದ ಮೂಲಗಳಿಂದ ನೆಮ್ಮದಿ ಸಿಗಲಿದೆ
- ಕುಟುಂಬದಲ್ಲಿ ಅಥವಾ ಸೋದರ ಮಾವನ ಜೊತೆ ಕಲಹಕ್ಕೆ ಅವಕಾಶ
- ಕುಟುಂಬದ ಸದಸ್ಯರಿಗೆ ಸಮಯ ಕೊಡಿ
- ತಪ್ಪು ತಿಳುವಳಿಕೆಯಿಂದ ಬೇಸರವಾಗಬಹುದು
- ಜನರಿಂದ ಮೋಸ ಅವಮಾನವಾಗಲಿದೆ
- ಮಾರುತಿಯನ್ನು ಪೂಜಿಸಿ, ಬಾಳೆಹಣ್ಣು ಅಥವಾ ಜೇನುತುಪ್ಪ ನೈವೇದ್ಯ ಸೇವಿಸಿ
ಕುಂಭ
- ಜನರ ಬೆಂಬಲದಿಂದಲೇ ನಿಮ್ಮ ಜೀವನ ಸಾಗಲಿದೆ
- ಸ್ವಂತ ಬುದ್ಧಿವಂತಿಕೆ ಕೆಲಸಕ್ಕೆ ಬರುವುದಿಲ್ಲ
- ಆಲಸ್ಯದಿಂದ ಕೆಲಸ ಮುಂದೂಡಲ್ಪಡಲಿದೆ
- ಮನಸ್ಸಿಗೆ ಸಮಾಧಾನವಿರುವುದಿಲ್ಲ ಹಿರಿಯರ ಆಗಮನವಾಗಲಿದೆ
- ಉತ್ತಮ ಆಲೋಚನೆಗಳು ಬರುತ್ತದೆ ಆದರೆ ಕಾರ್ಯರೂಪಕ್ಕೆ ಕಷ್ಟ
- ಪ್ರಯತ್ನ ಪೂರ್ವಕವಾದ ಸಂತೋಷ ಕಾಣುತ್ತೀರಿ
- ಶಿವನನ್ನು ಪೂಜಿಸಿ
ಮೀನ
- ಉತ್ಸಾಹ ಸಂತೋಷಗಳಿರುವ ದಿನ
- ನರ ಅಥವಾ ಮೂಳೆಗೆ ಸಂಬಂಧಿಸಿದ ತೊಂದರೆಯಾಗಬಹುದು
- ಸಹೋದರರಿಗೆ ಅನಾರೋಗ್ಯ ತುಂಬಾ ಆತಂಕ ಉಂಟಾಗಲಿದೆ
- ತಕ್ಷಣ ಪ್ರಯಾಣದ ಸಂದರ್ಭವಿದೆ
- ಆಲೋಚಿಸಿದ ಕೆಲಸಕ್ಕೆ ವಿರುದ್ಧವಾದ ವಾತಾವರಣ
- ಮನೆಯಲ್ಲಿ ಹಿಂಸೆ ಜಗಳ ಅಶಾಂತಿ ಉಂಟಾಗಬಹುದು
- ನವಗ್ರಹರನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ