/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12:00 ರಿಂದ 1:30 ರವರೆಗೆ ಇರಲಿದೆ.
ಮೇಷ ರಾಶಿ
- ಅನಾರೋಗ್ಯ ಪೀಡಿತರು ಈ ದಿನ ಗುಣಮುಖರಾಗುವ ಸೂಚನೆ ಇದೆ
- ರಹಸ್ಯವಾಗಿಟ್ಟ ವಿಷಯಗಳಿಂದ ನಷ್ಟವಾಗಲಿದೆ
- ಪ್ರೇಮಿಗಳಿಗೆ ಅನುಕೂಲಕರವಾದ ದಿನ
- ತುಂಬಾ ಜವಾಬ್ದಾರಿಯುತ ಕೆಲಸಗಳು ಹೆಚ್ಚಾಗಿರುತ್ತದೆ
- ಷೇರು ಮಾರುಕಟ್ಟೆಯ ವ್ಯವಹಾರದಲ್ಲಿ ಗಣನೀಯ ನಷ್ಟ ಆಗಲಿದೆ
- ಕುಬೇರನನ್ನು ಬಿಳಿ ಹೂವಗಳಿಂದ ಅರ್ಚನೆ ಮಾಡಿ
ವೃಷಭ
- ಸಂತೋಷದಿಂದ ಪ್ರಯಾಣವನ್ನು ಮಾಡುವ ದಿನ
- ಆರ್ಥಿಕ ಅನುಕೂಲವಿರುವ ದಿನ
- ಸಾಲ ಕೊಟ್ಟಿದ್ದರೆ ಅದರ ಬಾಕಿ ಈ ದಿನ ಹಿಂದಿರುಗಿ ಬರಲಿದೆ
- ಆಧ್ಯಾತ್ಮಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಒಲವು ಮೂಡುವ ದಿನ
- ಜನರ ಅಭಿಪ್ರಾಯದಲ್ಲಿ ನೀವು ಪೂಜ್ಯರಾಗಿ ಕಾಣುತ್ತೀರಿ
- ನಿಮ್ಮನ್ನು ನೀವು ಸರಿಯಾಗಿ ತಿದ್ದಿಕೊಳ್ಳಬೇಕು ತಿಳಿದುಕೊಳ್ಳಬೇಕು
- ಇಷ್ಟ ದೇವತೆಯನ್ನು ಪೂಜೆ ಮಾಡಿ
ಮಿಥುನ
- ಲಾಭದ ದಿನ ಆದರೆ ಚಟುವಟಿಕೆಯಿಂದ ಇರಬೇಕು
- ವಿದ್ಯಾರ್ಥಿಗಳಿಗೆ ಸ್ವಲ್ಪ ಅನಾಸಕ್ತಿ ಅದಕ್ಕೆ ಪ್ರತಿಬಂಧಕ ದೋಷ ಕಾಣಲಿದೆ
- ನಿಮ್ಮ ಕಲ್ಪನೆಗಳು ವಿಫಲವಾಗಬಹುದು
- ಒಳ್ಳೆಯ ಸಮಯ ಹುಡುಕುತ್ತಿದ್ದವರಿಗೆ ಇಂದು ನಿರಾಶೆ ಆಗಲಿದೆ
- ಸಾಯಂಕಾಲಕ್ಕೆ ಸ್ವಲ್ಪ ಬೇಸರದ ಸಂಗತಿ ಎದುರಾಗುವುದರಿಂದ ಮನಸ್ಸಿಗೆ ನೋವಾಗಬಹುದು
- ಪಾರಿಜಾತ ಸರಸ್ವತಿಯನ್ನು ಆರಾಧನೆ ಮಾಡಿ
ಕಟಕ
- ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಆರೋಗ್ಯವನ್ನು ಕಾಪಾಡಿಕೊಳ್ಳಿ
- ಒಂಟಿಯಾಗಿರುವವರಿಗೆ ಜನ, ಬಲ, ಧನ ಬಲ, ಎಲ್ಲವೂ ದೊರೆಯುವ ಯೋಗವಿದೆ
- ಈ ದಿನ ಯಾವುದೇ ಒಪ್ಪಂದಗಳು ಬೇಡ
- ವೈವಾಹಿಕ ಜೀವನದಲ್ಲಿ ಸಣ್ಣ ಪುಟ್ಟ ಸಮಸ್ಯೆ ಕಾಡಬಹುದು
- ಮನಸ್ಸು ಪ್ರಶಾಂತವಾಗಿರುವ ಸಮಯ ಶುಭಸುದ್ದಿ ಸಿಗಲಿದೆ
- ಹತ್ತಿ ಮರಕ್ಕೆ 21 ಪ್ರದಕ್ಷಿಣೆ ಮಾಡಿ
ಸಿಂಹ
- ಕ್ರೀಡಾ ಪಟುಗಳಿಗೆ ಸಿಹಿ ಸುದ್ದಿ ಸಿಗಲಿದೆ
- ಬೇರೆಯವರಿಗೆ ಸಹಾಯ ಮಾಡಲು ಹೋಗಿ ನೀವು ತೊಂದರೆಗೆ ಸಿಲುಕುತ್ತೀರಿ ಎಚ್ಚರಿಕೆವಹಿಸಿ
- ನೈಜವಾಗಿ ವರ್ತಿಸಿ ನಾಟಕೀಯ ವಾತಾವರಣ ಬೇಡ
- ಅಗತ್ಯಕ್ಕಿಂತ ಹೆಚ್ಚಾಗಿ ಏನನ್ನೂ ನಿರೀಕ್ಷಿಸಬೇಡಿ
- ಆಧ್ಯಾತ್ಮಿಕ ನಾಯಕರ ಮಾರ್ಗದರ್ಶನ ದೊರೆಯುವುದು
- ಮಾತಿನಿಂದ ಮನನೊಂದ ನೀವು ಕೋಪ ಮಾಡಿಕೊಳ್ಳುವ ಸಾಧ್ಯತೆ ಇದೆ
- ದಕ್ಷಿಣಾ ಮೂರ್ತಿಯನ್ನು ಸ್ಮರಿಸಿ
ಕನ್ಯಾ
- ನಿಮ್ಮ ಒರಟುತನ ದಾಂಪತ್ಯದಲ್ಲಿ ವಿರಸ ತರಬಹುದು
- ಮನಸ್ಥಿತಿ ಬದಲಾಯಿಸಲು ದೂರ ಪ್ರಯಾಣ ಮಾಡಿ
- ತಂದೆಯವರಿಂದ ಸಹಾಯ ಆಗುವ ಯೋಗವಿದೆ
- ನಿಮ್ಮ ಸಾಮರ್ಥ್ಯದ ಬಗ್ಗೆ ಸರಿಯಾದ ತಿಳುವಳಿಕೆ ಇರಲಿ
- ಪ್ರೇಮ ವಿವಾಹವಾದವರಿಗೆ ಸ್ವಲ್ಪ ತೊಂದರೆಯಾಗಲಿದೆ ಎಚ್ಚರಿಕೆವಹಿಸಿ
- ಜನರಿಂದ ನಿಮಗೆ ಅವಮಾನವಾಗುವ ಸಾಧ್ಯತೆ ಇದೆ
- ನಾಗದೇವರಿಗೆ ಅರಿಶಿಣದ ನೀರಿನಿಂದ ಅಭಿಷೇಕ ಮಾಡಿಸಿ
ತುಲಾ
- ಇಂದು ಕೋಪ ಹೆಚ್ಚಾಗಿರುವುದರಿಂದ ಎಲ್ಲಾ ಕೆಲಸಗಳಿಗೂ ತೊಂದರೆಯಾಗಲಿದೆ
- ಅಂದುಕೊಂಡ ಕೆಲಸ ನೆರವೇರುತ್ತದೆ
- ಮಕ್ಕಳ ಆರೋಗ್ಯದ ಬಗ್ಗೆ ವ್ಯತ್ಯಾಸ ಆಗಬಹುದು ಎಚ್ಚರಿಕೆವಹಿಸಿ
- ವೃತ್ತಿಯ ಲಾಭ ಗಣನೀಯವಾಗಿ ಹೆಚ್ಚುವಂತಹದ್ದು
- ಸ್ನೇಹಿತರ ಬೆಂಬಲ ನಿಮಗೆ ಅನುಕೂಲವನ್ನು ಮಾಡುತ್ತದೆ
- ಮಹಾಕಾಳಿಯನ್ನು ಆರಾಧಿಸಿ
ವೃಶ್ಚಿಕ
- ಪ್ರಭಾವಿ ವ್ಯಕ್ತಿಗಳಿಂದ ನಿಮ್ಮ ನೈಜ ಸಂಪತ್ತು ವೃದ್ಧಿಯಾಗುತ್ತದೆ
- ಹಿಂದಿನ ಸಾಲ ಈ ದಿನ ತೀರಬಹುದು
- ಮನೆಯ ಮಾರಾಟ ಅಥವಾ ಖರೀದಿಗೆ ಸೂಕ್ತ ಸಮಯವಲ್ಲ
- ಅಹಂಭಾವ ದೂರ ಮಾಡಿ ನಿಮಗೆ ಸುಖವಿದೆ
- ತೊಂದರೆಗೆ ಪರಿಹಾರ ಹುಡುಕುವ ಧೈರ್ಯ ಮೆಚ್ಚಲೇಬೇಕು
- ಇಂದು ಕೆಲಸದಲ್ಲಿ ಅಥವಾ ವೃತಿಯಲ್ಲಿ ಯಶಸ್ಸಿದೆ
- ಆಹಾರದಲ್ಲಿ ವ್ಯತ್ಯಯಗಳಾಗದಂತೆ ಗಮನಿಸಿ
- ಆಂಜನೇಯ ಸ್ವಾಮಿಯ ಆರಾಧನೆ ಮಾಡಿ
ಧನುಸ್ಸು
- ಆಹಾರದಲ್ಲಿ ವ್ಯತ್ಯಯಗಳಾಗದಂತೆ ಗಮನಿಸಿ
- ಭೂ ಸಂಬಂಧವಾದ ವಿಚಾರಗಳು ಚರ್ಚೆಯಾಗಬಹುದು ಇದರಿಂದ ಅನುಕೂಲತೆಗಳಿವೆ
- ಮನೆಯ ಕೆಲಸಗಳನ್ನು ಸಂಪೂರ್ಣ ಮಾಡಲು ಒಳ್ಳೆಯ ಅವಕಾಶ
- ನಿಮ್ಮ ಮಾನಸಿಕ ಸ್ಥಿತಿ ಬದಲಾದರೆ ಒಳ್ಳೆಯದು
- ಪ್ರಯತ್ನ ಪೂರ್ವಕವಾಗಿ ಮಾಡಿದ ಕೆಲಸ ಮಾತ್ರ ಫಲ ಕೊಡುತ್ತದೆ
- ಭೂವರಹಾಸ್ವಾಮಿಯನ್ನು ಆರಾಧನೆ ಮಾಡಿ
ಮಕರ
- ಈ ದಿನ ದೂರದ ಪ್ರಯಾಣ ಪ್ರಶಸ್ತವಲ್ಲ
- ಸಾಮಾಜಿಕ ಚಟುವಟಿಕೆಗಳು ಚೆನ್ನಾಗಿದ್ದರೂ ಮಾನಸಿಕ ಭಯ ಕಾಡಲಿದೆ
- ಆತ್ಮೀಯರ ಭೇಟಿಯಿಂದ ಸಂತೋಷವಾಗಿರುತ್ತೀರಿ
- ಹಲವಾರು ಮಹತ್ವದ ತೀರ್ಮಾನ ಕೈಗೊಳ್ಳಲು ಯೋಗ್ಯವಾದ ದಿನ
- ಮನೆಯಲ್ಲಿ ಭಿನ್ನಾಭಿಪ್ರಾಯದ ಮಾತಿನಿಂದ ಬೇಸರ ಆಗಲಿದೆ
- ಹಳೆಯ ಆಸ್ತಿಯಿಂದ ಲಾಭ ಆಗುವ ದಿನ
- ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ
ಕುಂಭ
- ಹಳೆಯ ಆಸ್ತಿಯಿಂದ ಲಾಭ ಸಿಗುವ ದಿನ
- ಯಾವ ತೊಂದರೆಯೂ ಇಲ್ಲದ ನೀವು ಕೆಲವು ವಿಚಾರವನ್ನು ಮೈ ಮೇಲೆ ಹಾಕಿಕೊಳ್ಳುತ್ತೀರಿ
- ನಿಮ್ಮ ವಿಶ್ವಾಸಾರ್ಹ ಸಲಹೆಗಳಿಂದ ಪ್ರಯೋಜನ ಇದೆ
- ಹೆಂಗಸರಿಂದ ಮೋಸವಾಗುವ ಸಾಧ್ಯತೆ ಇದೆ
- ಆರ್ಥಿಕ ಸ್ಥಿತಿಯ ಬಗ್ಗೆ ಲೆಕ್ಕಾಚಾರ ಮಾಡುವ ದಿನ
- ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ ಕೇಳುತ್ತೀರಿ
- ನರಸಿಂಹ ಸ್ವಾಮಿಯನ್ನು ಪೂಜಿಸಿ
ಮೀನ
- ನಿಮ್ಮ ಮನಸ್ಥಿತಿ ಪ್ರತಿಕ್ಷಣ ಬದಲಾವಣೆ ಆಗುತ್ತಿರುತ್ತದೆ
- ಸಣ್ಣ ಪುಟ್ಟ ಉದ್ಯೋಗಸ್ಥರಿಗೆ ಲಾಭವಿದೆ
- ಆರ್ಥಿಕ ಸುಧಾರಣೆಯ ಬಗ್ಗೆ ಸ್ವಲ್ಪ ಚಿಂತೆ ನಡೆಯುತ್ತೆ
- ನಿಮ್ಮ ಬಂಧು ಮಿತ್ರರು ಸಹಾಯ ಮಾಡಬಹುದು
- ಸರ್ಕಾರಿ ನೌಕರರಿಗೆ ಬಡ್ತಿಯ ಸಿಹಿ ಸುದ್ದಿ ಸಿಗಲಿದೆ
- ತಾಯಿಯವರ ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡಿ
- ಹಳದಿ ವಸ್ತ್ರ ಧರಿಸಿ ಕುಲದೇವತಾ ಪೂಜೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ