newsfirstkannada.com

ಮಾನಸಿಕ ಒತ್ತಡ, ಅಪಶಕುನದಿಂದ ತೊಂದರೆ ಸಾಧ್ಯತೆ; ಏನ್​ ಹೇಳ್ತಿದೆ ಇಂದಿನ ಭವಿಷ್ಯ!

Share :

Published June 3, 2024 at 5:59am

Update June 2, 2024 at 10:46pm

  ಅದೃಷ್ಟ ಚೆನ್ನಾಗಿರುವಾಗ ಕೆಲವು ಕ್ಷೇತ್ರಗಳಲ್ಲಿ ಪ್ರಭುತ್ವವನ್ನು ಸಾಧಿಸುತ್ತೀರಿ

  ತೀರ್ಮಾನ ಮಾಡಿದ ಕೆಲಸಗಳು ದಿಢೀರಂತೆ ಬದಲಾವಣೆ ಆಗಬಹುದು

  ಮುನಿಸು, ಕೋಪವನ್ನು ಮಾಡಿಕೊಳ್ಳುವ ಪರಿಸ್ಥಿತಿ ಒದಗಿ ಬರಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಅಶ್ವನಿ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

 • ಮಾನಸಿಕ ಒತ್ತಡದಿಂದ, ಬೇಸರದಿಂದ ಕೆಲಸಗಳು ಹಾಳಾಗಬಹುದು
 • ಪ್ರೇಮಿಗಳಲ್ಲಿ ಪರಸ್ಪರ ಕಾದಾಟವಾಗಲಿದೆ
 • ಪ್ರಯಾಣ ಬೇಡ, ಕೆಲಸದಲ್ಲಿ ಯಾವುದೇ ಜವಾಬ್ದಾರಿ ಬೇಡ
 • ಆಹಾರದ ಬಗ್ಗೆ ಎಚ್ಚರಿಕೆವಹಿಸಿ
 • ಅಪಶಕುನದಿಂದ ತೊಂದರೆಯಾಗಬಹುದು
 • ಕುಲದೇವರಿಗೆ ತುಪ್ಪದ ದೀಪ ಹಚ್ಚಿ ಪ್ರಾರ್ಥನೆ ಮಾಡಿ

ವೃಷಭ

 • ಕೆಂಪು ವಸ್ತ್ರಧಾರಣೆ ಈ ದಿನ ಒಳ್ಳೆಯದಲ್ಲ
 • ಆದಾಯ, ಲಾಭದ ಹಿಂದೆ ಹೋಗಿ ಮರ್ಯಾದೆಯನ್ನು ಕಳೆದುಕೊಳ್ಳಬಹುದು
 • ದೈಹಿಕ ಮತ್ತು ಮಾನಸಿಕ ಒತ್ತಡಗಳು ಕೆಲಸಗಳಿಗೆ ತೊಂದರೆಯನ್ನು ಮಾಡಬಹುದು
 • ಹೊಸ ಸಾಧನೆ ಮಾಡಲು ಪ್ರಯತ್ನಿಸುತ್ತೀರಿ ಆದರೆ ಕೈಗೂಡುವುದಿಲ್ಲ
 • ಮಕ್ಕಳ ಯಶಸ್ಸಿನ ಬಗ್ಗೆ ಯೋಚನೆ ಮಾಡಿ
 • ಮೃತ್ಯುಂಜಯನನ್ನು ಬಿಲ್ಪಪತ್ರೆ, ತುಂಬೆ ಹೂವಿನಿಂದ ಅರ್ಚನೆ ಮಾಡಿ

ಮಿಥುನ

 • ತಂದೆ ಮಕ್ಕಳ ಸಂಬಂಧ ಚೆನ್ನಾಗಿರುವ ಹಾಗೆ ಪ್ರಯತ್ನಿಸಿ
 • ಮನೆಯಲ್ಲಿ ಆಕಸ್ಮಿಕವಾಗಿ ಅವಘಡ ಸಂಭವಿಸುವ ಸೂಚನೆ ಇದೆ
 • ಮನೆಯ ಹಿರಿಯರ ಸಲಹೆ ಮಕ್ಕಳಿಗೆ ಅನ್ವಯವಾಗಲಿದೆ
 • ವಿದ್ಯೆ ವಿವಾಹಕ್ಕಿರುವ ಸಮಸ್ಯೆ ದೂರವಾಗಲಿದೆ
 • ಹೊಸ ವ್ಯವಹಾರವನ್ನು ಕುರಿತು ಚರ್ಚೆ ಮಾಡುತ್ತೀರಿ ಆದರೆ ನಿಮ್ಮ ಸಹಕಾರ ಇರುವುದಿಲ್ಲ
 • ಮನಸ್ಸನ್ನು ಶುದ್ಧ ಮಾಡಿಕೊಳ್ಳಬೇಕು ಗೊಂದಲದಿಂದ ಹೊರ ಬರಬೇಕು

ಕಟಕ

 • ಔಷಧ ವ್ಯಾಪಾರ ಮಾಡುವವರು ಸಮಸ್ಯೆಗೆ ಸಿಲುಕಿಕೊಳ್ಳಬೇಕಾಗಬಹುದು
 • ನಿಮ್ಮ ತಪ್ಪು ಮಾಹಿತಿ ಅನರ್ಥವಾಗಿ ತೊಂದರೆಗೆ ಕಾರಣವಾಗಲಿದೆ
 • ನಿಮ್ಮ ಮೇಲಿನವರ ಸಹಕಾರವಿದ್ದರೂ ನಿಮಗೆ ತೊಂದರೆಯಾಗಬಹುದು
 • ಪ್ರೇಮಿಗಳಿಗೆ ಶುಭ ದಿನ
 • ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಿನ್ನಡೆಯಾಗಬಹುದು
 • ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನು ಮನೆಯಲ್ಲಿ ಹೇಳಿಕೊಳ್ಳಬೇಕು
 • ಅಶ್ವಿನಿ ದೇವತೆಯನ್ನು ಪ್ರಾರ್ಥನೆ ಮಾಡಿ

ಸಿಂಹ

 • ಈ ದಿನ ಋಣಾತ್ಮಕವಾದ ಚಿಂತೆಗಳೇ ನಿಮ್ಮನ್ನು ಕಾಡಲಿದೆ
 • ಹಿಂದೆ ಮಾಡಿದ ತಪ್ಪಿಗೆ ಇವತ್ತು ವಿಷಾದ ವ್ಯಕ್ತ ಪಡಿಸುತ್ತೀರಿ
 • ಇಂದು ಆರೋಗ್ಯದಲ್ಲಿ ಏರು-ಪೇರಾಗಬಹುದು
 • ಮಧ್ಯಾಹ್ನದ ಹೊತ್ತಿಗೆ ಪ್ರಯಾಣ ಮಾಡಬಹುದು ಎಚ್ಚರಿಕೆವಹಿಸಿ
 • ಅನಗತ್ಯ ವಿಚಾರದಲ್ಲಿ ಚರ್ಚೆ ಮಾಡುತ್ತೀರಿ ಆದರೆ ಪ್ರಯೋಜನವಿಲ್ಲ
 • ವೈದ್ಯಕೀಯ ಕ್ಷೇತ್ರದಲ್ಲಿ ಸವಾಲುಗಳು, ಗೊಂದಲಗಳು, ಹೆಚ್ಚು ಕಾಡಬಹುದು
 • ಪಶ್ಚಾತ್ತಾಪವೆ ಪರಿಹಾರ ಎಂಬ ಭಾವನೆ ಇದ್ದರೆ ಆಗಿರುವ ಸಮಸ್ಯೆಯಿಂದ ಹೊರ ಬರುತ್ತೀರಿ

ಕನ್ಯಾ

 • ನಿಮ್ಮ ಆಲೋಚನೆ, ಒಳ್ಳೆಯ ವಾತಾವರಣ ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚು ಮಾಡಲಿದೆ
 • ಪ್ರಜ್ಞಾವಂತರು ನಿಮ್ಮ ಸುತ್ತ ಮುತ್ತ ಇದ್ದರೂ ನೀವು ಅವರನ್ನು ಉಪಯೋಗಿಸಿ ಕೊಳ್ಳುವುದಿಲ್ಲ
 • ಅವಿವಾಹಿತರ ಕಷ್ಟವನ್ನು ಕೇಳಲು ಯಾರಿಲ್ಲ ಅನ್ನುವವರು ನಿರ್ಧಾರವನ್ನು ಬದಲಾಯಿಸುತ್ತಾರೆ
 • ನೀವು ಸಮಯಕ್ಕೆ ಮಹತ್ವ ನೀಡಿ
 • ನಿಮ್ಮ ದೃಢವಾದ ನಿರ್ಧಾರವು ಸಡಿಲವಾಗಬೇಕು
 • ಆರ್ಥಿಕವಾದ ಲಾಭವಿದ್ದರೂ ಲೆಕ್ಕ ಸಿಗದೆ ಇರಲಿದೆ
 • ಗುರು ಪ್ರಾರ್ಥನೆ ಮಾಡಿ

ತುಲಾ

 • ಬೇರೆಯವರ ಜೊತೆ ಸೇರಿ ಲಾಭವನ್ನು ಪಡೆಯುತ್ತೀರಿ
 • ಸ್ನೇಹಿತರ ನಿಧನದ ವಾರ್ತೆ ಮನಸ್ಸಿಗೆ ಪರಿಣಾಮ ಬೀರಲಿದೆ
 • ನಿಮ್ಮ ನಿರೀಕ್ಷೆಗಳು ತುಂಬಾ ಇರುತ್ತದೆ ಆದರೆ ಎಲ್ಲವೂ ಈಡೇರುವುದಿಲ್ಲ
 • ರಿಯಲ್ ಎಸ್ಟೇಟ್ ಮಾಡುವವರ ಸ್ಥಿತಿ ಗಂಭೀರವಾಗಿರುತ್ತದೆ
 • ಅನೇಕರು ತಮ್ಮ ನೌಕರಿಯನ್ನು ಧೂಷಣೆ ಮಾಡುತ್ತಾ ರಾಜೀನಾಮೆ ಮಾಡಲು ನೋಡುತ್ತಾರೆ
 • ಮಹಾ ವಿಷ್ಣುವನ್ನು ಸ್ಮರಣೆ ಮಾಡಿ

ವೃಶ್ಚಿಕ

 • ತಂದೆ-ಮಕ್ಕಳಿಗೆ, ಗುರು-ಶಿಷ್ಯರಿಗೆ ಮಾತುಕತೆ ಬರಲಿದೆ
 • ಮುನಿಸು, ಕೋಪವನ್ನು ಮಾಡಿಕೊಳ್ಳುವ ಪರಿಸ್ಥಿತಿ ಒದಗಿ ಬರಬಹುದು
 • ಮಕ್ಕಳು ಅನಗತ್ಯವಾಗಿ ಶಿಕ್ಷಕರ ಆದೇಶವನ್ನು ಪಾಲಿಸದೆ ತೊಂದರೆಯಾಗಬಹುದು
 • ಸುಳ್ಳು ಹೇಳುವವರಿಗೆ ಹಿನ್ನಡೆಯಾಗಲಿದೆ
 • ಬುದ್ಧಿವಂತಿಕೆಯಿರಲಿ ಆದರೆ ಅತಿಯಾದ ಬುದ್ಧಿವಂತಿಕೆ ಬೇಡ
 • ಬಟ್ಟೆ ವ್ಯಾಪಾರಿಗಳಿಗೆ ಬೆಂಕಿ ಅವಘಡಗಳಾಗಬಹುದು
 • ವಿಷ್ಣು ಸಹಸ್ರನಾಮವನ್ನು ಶ್ರವಣ ಮಾಡಿ

ಧನುಸ್ಸು

 • ತೀರ್ಮಾನ ಮಾಡಿದ ಕೆಲಸಗಳು ದಿಢೀರಂತೆ ಬದಲಾವಣೆಯಾಗಬಹುದು
 • ನಿಮಗಿಂತ ಶಕ್ತಿಶಾಲಿಗಳಾಗಿರುವವರ ಜೊತೆಯಲ್ಲಿ ಸ್ಪರ್ಧೆ ಮಾಡಲು ಹೋಗಬೇಡಿ
 • ನಿಮ್ಮ ಸಮಸ್ಯೆ, ನಿಮ್ಮ ದೌರ್ಬಲ್ಯದ ಅರಿವು ನಿಮಗಿರಬೇಕು
 • ಆತುರವಾದ ನಿರ್ಧಾರಗಳು ಒಳ್ಳೆಯದಲ್ಲ
 • ಮನೆಯಲ್ಲಿ ಚಿನ್ನಾಭರಣಗಳ ಬಗ್ಗೆ ಎಚ್ಚರಿಕೆವಹಿಸಿ
 • ದೂರದ ಸಂಬಂಧಿಕರ ಜೊತೆಯಲ್ಲಿ ಜಗಳ ಮಾಡಿಕೊಳ್ಳುತ್ತೀರಿ
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ಮಕರ

 • ಅದೃಷ್ಟ ಚೆನ್ನಾಗಿರುವಾಗ ಕೆಲವು ಕ್ಷೇತ್ರಗಳಲ್ಲಿ ಪ್ರಭುತ್ವವನ್ನು ಸಾಧಿಸುತ್ತೀರಿ
 • ಬೇರೆಯವರ ಸಲಹೆ, ಸೂಚನೆ ಕೊಡುವ ಕಾಲವಾಗಿರುತ್ತದೆ
 • ಸಂಗೀತ, ಮನೋರಂಜನೆಯಲ್ಲಿ ಕಾಲ ಕಳೆಯುವ ಅವಕಾಶವಿದೆ
 • ಉತ್ತಮವಾದ ಭೋಜನ, ಲೌಕಿಕವಾದ ಸಂತೋಷವನ್ನು ಪಡೆಯುತ್ತೀರಿ
 • ನೀವು ನಿರೀಕ್ಷೆ ಮಾಡಿದ ಲಾಭವು, ಹಣವು ನಿಮ್ಮ ಕೈ ಸೇರುವುದಿಲ್ಲ
 • ಅನುಭವಿಸಿದ ಸಂತೋಷವೇ ಭಾಗ್ಯ ಅಂತ ತಿಳಿಯಬೇಕಾಗುತ್ತದೆ

ಕುಂಭ

 • ನಿಮಗೆ ವ್ಯಾವಹಾರಿಕವಾದ ಜ್ಞಾನ, ಆಲೋಚನೆ ಬಹಳ ವಿಶೇಷವಾಗಿ ಕೆಲಸ ಮಾಡಲಿದೆ
 • ಲೇಖಕರಿಗೆ, ಸಂಶೋಧಕರಿಗೆ ಹಿನ್ನಡೆಯಾಗುವ ದಿನ
 • ಹೆಂಗಸರ ದ್ರವ್ಯ, ಆಭರಣ, ಹಣಕ್ಕೆ ಕುತ್ತು ಬರಬಹುದು
 • ಮಕ್ಕಳಲ್ಲಿ ಸಿಟ್ಟು, ವೈರತ್ವ, ಪ್ರಾರಂಭವಾಗಿ ಕಂಟಕಕ್ಕೆ ಕಾರಣವಾಗಬಹುದು
 • ಮಕ್ಕಳನ್ನು ಸ್ವತಂತ್ರವಾಗಿರಲು ಬಿಡಿ
 • ಸತ್ಯಸಂಶೋಧನೆ ಮಾಡಿ ಸತ್ಯಶೋಧನೆ ಮಾಡಿ

ಮೀನ

 • ಉತ್ತಮ ಕುಟುಂಬದ ಸದಸ್ಯರು ನಿಮಗೆ ಮಾರ್ಗದರ್ಶಕರಾಗುತ್ತಾರೆ
 • ನಿಮ್ಮ ಮನಸ್ಸಿಗೆ ಬರುವ ಸ್ಥಿರವಾದ ನಿರ್ಧಾರಗಳನ್ನು ಬದಲಾವಣೆ ಮಾಡಿ ರಾಜಿಯನ್ನು ಮಾಡಿಕೊಳ್ಳಿ
 • ಮೊಂಡುತನ, ಹಟ ಇವೆಲ್ಲಾ ನಿಮಗೆ ಹಿನ್ನಡೆಯನ್ನುಂಟು ಮಾಡಲಿದೆ
 • ವೈಯಕ್ತಿಕವಾದ ಪ್ರತಿಷ್ಠೆಯಿಂದ ಹಣ, ದ್ರವ್ಯ, ಸ್ಥಾನಮಾನ, ಸ್ನೇಹ, ಬಂಧುತ್ವವನ್ನು ಕಳೆದುಕೊಳ್ಳಬಹುದು
 • ಇಂಜಿನಿಯರ್ಸ್ ಅಥವಾ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಅವಶ್ಯಕತೆ ಇರಲಿದೆ
 • ಬೇರೆಯವರ ಮಾತನ್ನು ಗೌರವಿಸಿ ಸ್ವಂತ ಬುದ್ಧಿಯಿಂದ ಆಲೋಚಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾನಸಿಕ ಒತ್ತಡ, ಅಪಶಕುನದಿಂದ ತೊಂದರೆ ಸಾಧ್ಯತೆ; ಏನ್​ ಹೇಳ್ತಿದೆ ಇಂದಿನ ಭವಿಷ್ಯ!

https://newsfirstlive.com/wp-content/uploads/2023/08/rashi-bhavishya-25.jpg

Load More