newsfirstkannada.com

Today Horoscope: ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಲಾಭ.. ಅವಿವಾಹಿತರಿಗೆ ಶುಭ ದಿನ; ಇಲ್ಲಿದೆ ಇಂದಿನ ಭವಿಷ್ಯ

Share :

Published May 13, 2024 at 6:00am

Update May 12, 2024 at 10:50pm

  ಇಂಜಿನಿಯರ್ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದಿನ

  ವಿದೇಶಕ್ಕೆ ಪ್ರಯಾಣ ಮಾಡುವವವರ ಆಸೆಗೆ ಶುಭ ಸೂಚನೆ

  ರಾಜಕೀಯ ಭವಿಷ್ಯ ಕಟ್ಟಿಕೊಳ್ಳುವವರು ಮಾರ್ಗದರ್ಶನ ಪಡೆಯಿರಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

 • ಸಮಾಜದಲ್ಲಿ ನಿಮ್ಮ ಪ್ರಭಾವ ಅಥವಾ ನಿಮ್ಮ ಪರವಾದ ಅಲೆಗಳು ಹೆಚ್ಚಾಗುವ ದಿನ
 • ಸಮಾಜದಲ್ಲಿ ಉತ್ತಮವಾದ ಸ್ಥಾನಮಾನ ಇರುತ್ತದೆ
 • ಇಂದು ನಿಮ್ಮ ಎಲ್ಲಾ ಚಟುವಟಿಕೆಗಳು ವೇಗವನ್ನು ಪಡೆದುಕೊಳ್ಳುತ್ತವೆ
 • ನಿಮ್ಮ ಕೆಲಸದ ಗುಣಮಟ್ಟ ಬಹಳ ಪ್ರಶಂಸೆಗೆ ಪಾತ್ರವಾಗುತ್ತದೆ
 • ದಾಂಪತ್ಯದಲ್ಲಿ ಒಂದಷ್ಟು ಕೊರತೆಗಳು ಬೇಸರವನ್ನು ತರಬಹುದು
 • ಹಣದ ವಿಚಾರವಾಗಿ ನೆಮ್ಮದಿ ಇರುವ ದಿನ
 • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

 • ಯಾವುದೇ ಕಾರಣಕ್ಕೂ ಈ ದಿನ ಹೊಸ ಕೆಲಸ, ಯೋಜನೆಗಳು ಬೇಡ
 • ಮನೆಯವರ ಬಗ್ಗೆ ಸ್ವಲ್ಪ ಚಿಂತನೆ ಮಾಡಬೇಕಾದ ದಿನ
 • ಇಂದು ಪರಿಶ್ರಮಕ್ಕೆ ತಕ್ಕ ಪ್ರತಿಫಲ ಇರುವುದಿಲ್ಲ
 • ಕಾರ್ಯಕ್ಷೇತ್ರದಲ್ಲಿ ಅಪಹಾಸ್ಯಕ್ಕೆ ಗುರಿಯಾಗಬಹುದು
 • ನಿಮ್ಮ ಗುರಿಯ ಬಗ್ಗೆ ಮಾತ್ರ ಸರಿಯಾದ ಗಮನ ಇಟ್ಟುಕೊಳ್ಳಬೇಕು
 • ಕುಲದೇವತಾ ಪ್ರಾರ್ಥನೆ ಮಾಡಿ

ಮಿಥುನ

 • ನಿಮ್ಮ ಹೊಸ ಯೋಜನೆಯ ಬಗ್ಗೆ ಕುಟುಂಬದಲ್ಲಿ ಚರ್ಚೆ ಮಾಡಬಹುದು
 • ಅವಿವಾಹಿತರಿಗೆ ವಿವಾಹ ವಿಚಾರ ಸಿಹಿಸುದ್ದಿ ತರಬಹುದು
 • ಇಂದು ವಿದ್ಯಾರ್ಥಿಗಳಿಗೆ ಏಕಾಗ್ರತೆಯೇ ವರದಾನವಾಗುತ್ತದೆ
 • ಉನ್ನತ ಹುದ್ದೆಯಲ್ಲಿ ಇರುವವರಿಗೆ ಶುಭಸುದ್ದಿ, ಶುಭಕರವಾದ ದಿನ
 • ವ್ಯಾಪಾರ, ವ್ಯವಹಾರದಲ್ಲಿ ಅನುಕೂಲಕರ ದಿನ
 • ಅನಿವಾರ್ಯ ಪ್ರಯಾಣವನ್ನು ಈ ದಿನ ಕೈಗೊಳ್ಳಬಹುದು ಅದರಿಂದ ಲಾಭವು ಕೂಡ ಇದೆ
 • ವಿಷ್ಣು ಸಹಸ್ರನಾಮವನ್ನು ಪಠಣೆ ಮಾಡಿ

ಕಟಕ

 • ಸಹೋದ್ಯೋಗಿಗಳಿಂದ ಉತ್ತಮ ಸಲಹೆಗಳನ್ನು ಪಡೆದುಕೊಳ್ಳುತ್ತೀರಿ
 • ದೂರ ಪ್ರಯಾಣದ ಚಿಂತನೆ ಮನಸ್ಸಿಗೆ ಬರಬಹುದು
 • ಮನಸ್ಸಿನಲ್ಲಿ ಏನೋ ಒಂದು ರೀತಿಯ ಅಹಿತವಾದ ವಾತಾವರಣ ಇರುತ್ತದೆ
 • ಆರೋಗ್ಯದ ಬಗ್ಗೆ ಸ್ವಲ್ಪ ಚಿಂತನೆ ನಡೆಸಿ, ಹೃದಯ ಸಂಬಂಧಿ ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆಯಿದೆ
 • ಇಂದು ಶೀತ ಮತ್ತು ಹೊಟ್ಟೆ ನೋವು ತೊಂದರೆ ಮಾಡಬಹುದು
 • ತಾಯಿಯ ಆಶೀರ್ವಾದ ಪಡೆದುಕೊಳ್ಳಿ, ತಾಯಿ ಮನಸ್ಸನ್ನು ಗೆಲ್ಲಲು ಪ್ರಯತ್ನ ಮಾಡಿ
 • ಅನ್ನಪೂರ್ಣೇಶ್ವರಿ ಆರಾಧನೆ ಮಾಡಿ

ಸಿಂಹ

 • ಆತ್ಮತೃಪ್ತಿಯ ಕೆಲಸವನ್ನು ಮಾಡುತ್ತೀರಿ ಸಮಾಧಾನ ಸಿಗುತ್ತದೆ
 • ಇಂದು ಬೇರೆಯವರಿಗೆ ಸಹಾಯ ಮಾಡಬೇಕು ಎಂಬ ತವಕದಲ್ಲಿ ಇರುತ್ತೀರಿ
 • ನಿಮ್ಮ ಸಾಮರ್ಥ್ಯ ಮೀರಿ ಯಾವುದೇ ಕೆಲಸ ಮಾಡಲು ಮುಂದಾಗಬೇಡಿ
 • ತೊಂದರೆಗಳು ಎದುರಾಗಬಹುದು ಆದರೆ ಅದನ್ನು ಎದುರಿಸುವ ಸಾಮರ್ಥ್ಯ ನಿಮಗಿರುತ್ತದೆ
 • ಇಂದು ನಿಮ್ಮ ಕೆಲಸಕ್ಕಾಗಿ ಯಾರನ್ನು ಅವಲಂಬಿಸಬೇಡಿ
 • ಇಂದು ಆರ್ಥಿಕವಾಗಿ ಯಾವುದೇ ಸಮಸ್ಯೆ, ಅಡ್ಡಿ ಇರುವುದಿಲ್ಲ
 • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

 • ನಿಮ್ಮ ಪಾಲಿಗೆ ವಿಚಿತ್ರವಾದ ದಿನ, ಇಂದು ಆಗುವುದಿಲ್ಲ ಅಂದುಕೊಂಡ ಕೆಲಸಗಳು ಆಗುತ್ತವೆ
 • ಇಂದು ಸ್ವಂತದವರಿಂದಲೇ ನಿಮಗೆ ದ್ರೋಹ ಆಗಬಹುದು
 • ರಾಜಕೀಯ ದೂಷಣೆ ಕೂಡ ನಡೆಯುವ ದಿನ
 • ಶಾರೀರಿಕವಾದ ಸಮಸ್ಯೆ, ನರನಾಡಿಗಳಲ್ಲಿ ನೋವು ಕಾಡಬಹುದು
 • ಇಂದು ವಾಹನ ಚಾಲನೆಯಲ್ಲಿ ತುಂಬಾ ಎಚ್ಚರಿಕೆ ವಹಿಸಿ ತೊಂದರೆಯಿದೆ
 • ದುರ್ಗಾದೇವಿ ಆರಾಧನೆ ಮಾಡಿ

ತುಲಾ

 • ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ
 • ಇಂದು ಹಿರಿಯರು, ಅಧಿಕಾರಿಗಳು ನಿಮ್ಮ ಮಾತಿನಿಂದ ಪ್ರಭಾವಿತರಾಗುತ್ತಾರೆ
 • ಇಂದು ನಕಾರಾತ್ಮಕವಾದ ಚಿಂತನೆಗಳಿಂದ ದೂರ ಇರಬೇಕು
 • ಪ್ರೇಮಿಗಳಿಗೆ ಬಹಳ ಉತ್ತಮವಾದ ದಿನ
 • ಅನುಭವಿಗಳ ಮಾರ್ಗದರ್ಶನದಿಂದ ನಿಮಗೆ ಯಶಸ್ಸಿದೆ
 • ಧಾರ್ಮಿಕ ಅಥವಾ ಆಧ್ಯಾತ್ಮಿಕ ಮುಖಂಡರ ಭೇಟಿಯಾಗಬಹುದು ಅವರ ಮಾತು ಪ್ರಭಾವ ಬೀರಬಹುದು
 • ಈಶ್ವರನ ಆರಾಧನೆ ಮಾಡಿ

ವೃಶ್ಚಿಕ

 • ಇಂದು ದಾಂಪತ್ಯದಲ್ಲಿ ಅನ್ಯೋನ್ಯತೆಯನ್ನ ಕಾಪಾಡಿಕೊಳ್ಳಬೇಕು
 • ಮನೆಯಲ್ಲಿ ಏನೋ ಒಂದು ರೀತಿಯ ಹಬ್ಬದ ವಾತಾವರಣ ಇರುತ್ತದೆ
 • ಜನರಿಂದ ಗೌರವ, ಆಕರ್ಷಣೆ, ಆದರ ಸಿಗುವ ದಿನ
 • ಹಣ ಹೂಡಿಕೆ, ಬಡ್ಡಿ ವ್ಯವಹಾರ ಇತ್ಯಾದಿಗಳಲ್ಲಿ ಉತ್ತಮ ಯಶಸ್ಸು ಕಾಣುತ್ತೀರಿ
 • ಪಾರದರ್ಶಕವಾಗಿ ವ್ಯವಹಾರ ಮುಂದುವರಿಸಿದರೆ ಬೇರೆಯವರಿಗೆ ಮಾದರಿ
 • ಇಂದು ಗುಪ್ತವಾಗಿ ಜನ ನಿಮ್ಮನ್ನ ಕಾಯ್ತಾ ಇರ್ತಾರೆ
 • ರುದ್ರಾರಾಧನೆಯನ್ನು ಮಾಡಿ

ಧನುಸ್ಸು

 • ರಾಜಕೀಯಕ್ಕೆ ಸಂಬಂಧಪಟ್ಟ ಮಾತುಕತೆಗಳು ನಡೆಯುತ್ತವೆ
 • ವ್ಯಾಪಾರ, ವ್ಯವಹಾರಗಳಲ್ಲಿ ಅನುಕೂಲತೆಗಳಿವೆ
 • ರಾಜಕೀಯ ಪ್ರಭಾವ, ರಾಜಕೀಯ ಒತ್ತಡ ಇಂದು ಕೆಲಸ ಮಾಡುತ್ತದೆ
 • ಆದಾಯದ ಮೂಲ ಗಟ್ಟಿಯಾಗುತ್ತದೆ
 • ಧಾರ್ಮಿಕ ಕಾರ್ಯಗಳ ಬಗ್ಗೆ ಸ್ವಲ್ಪ ಚಿಂತನೆ ಮಾಡಿ ಒಳ್ಳೆಯದಾಗುತ್ತದೆ
 • ಇಂದು ಲೇಖಕರಿಗೆ ಅನುಕೂಲಕರ ದಿನ
 • ಇಂದು ಗೌರವ, ಆದರ, ಆತಿಥ್ಯಗಳು ಸಿಗುವ ದಿನ
 • ಗುರು ದತ್ತಾತ್ರೇಯರನ್ನು ಪ್ರಾರ್ಥನೆ ಮಾಡಿ

ಮಕರ

 • ಇಂದು ಮಹಿಳೆಯರು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನವನ್ನು ಕೊಡಿ
 • ಖರೀದಿಯಿಂದ ಮೋಸ ಹೋಗಬಹುದು ಅದಕ್ಕೆ ಅವಕಾಶವನ್ನು ಕೊಡಬೇಡಿ
 • ನಿಮ್ಮ ಶಕ್ತಿ ಮತ್ತು ಸಾಮರ್ಥ್ಯದ ಬಗ್ಗೆ ನಿಮಗೆ ಧೈರ್ಯ ಇರಲಿ
 • ಕಾರ್ಯಕ್ಷೇತ್ರದಲ್ಲಿ ಸಣ್ಣಪುಟ್ಟ ಮಾತಿನ ವಿಚಾರಕ್ಕೆ ಅವಮಾನವಾಗಬಹುದು
 • ನಿಮ್ಮ ಆಲೋಚನೆಗಳನ್ನು ಎಲ್ಲರ ಜೊತೆ ಹಂಚಿಕೊಳ್ಳಿ
 • ಇಂದು ಹಳೆಯ ನೆನಪುಗಳಿಂದ ಬೇಸರ, ನೋವಾಗಬಹುದು
 • ಗಣಪತಿಯನ್ನು ಪ್ರಾರ್ಥನೆ ಮಾಡಿ

ಕುಂಭ

 • ಇಂದು ನಿಮ್ಮೆಲ್ಲಾ ಕಾರ್ಯಗಳು ಬಹಳ ಸುಗಮವಾಗಿ, ಸರಳವಾಗಿ ನಡೆಯುತ್ತವೆ
 • ಹಿರಿಯರ ಮತ್ತು ಸಹೋದರರ ಉತ್ತಮ ಸಲಹೆ ನಿಮಗೆ ಅನುಕೂಲವಾಗುತ್ತದೆ
 • ಇಂದು ಮಕ್ಕಳಿಂದ ಸಂತೋಷ ಸಿಗುತ್ತದೆ
 • ನಿಮ್ಮ ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚಾಗಬಹುದು
 • ಸಂಗೀತಾಸಕ್ತರಿಗೆ ಉತ್ತಮವಾದ ದಿನ
 • ಆಧ್ಯಾತ್ಮಿಕ ಚಿಂತನೆಯ ಪ್ರಭಾವ ಮನಸ್ಸಿಗೆ ಧೈರ್ಯವನ್ನು ಕೊಡುತ್ತದೆ
 • ಶರಭೇಶ್ವರನನ್ನು ಪ್ರಾರ್ಥನೆ ಮಾಡಿ

ಮೀನ

 • ಇಂದು ನಿಮ್ಮ ವ್ಯಾಪಾರದಲ್ಲಿ ಹೆಚ್ಚು ಖರ್ಚಾಗಬಹುದು
 • ಕೈ ಕೆಳಗಿನ ಉದ್ಯೋಗಿಗಳಿಗೆ ಸಹಾಯ ಮಾಡಬಹುದು
 • ಇಂದು ಪ್ರೇಮಿಗಳಿಗೆ ಶುಭ ದಿನ
 • ಇಂದು ಸರ್ಕಾರಿ ನೌಕರರಿಗೆ ಲಾಭದ ದಿನ
 • ಅನುಭವಿಗಳ ಮಾತು ನಿಮ್ಮ ಕಾರ್ಯಕ್ಕೆ ಸ್ಪೂರ್ತಿ ನೀಡುತ್ತದೆ
 • ಹೊಸ ಯೊಜನೆಗಳಿಂದ ಬೇರೆಯವರಿಗೂ ಕೂಡ ಅನುಕೂಲ ಮಾಡಿಕೊಡುತ್ತೀರಿ
 • ಅಶ್ವತ್ಥ ಪ್ರದಕ್ಷಿಣೆಯನ್ನು ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Today Horoscope: ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಲಾಭ.. ಅವಿವಾಹಿತರಿಗೆ ಶುಭ ದಿನ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More