newsfirstkannada.com

ಆಸ್ತಿ ವಿಚಾರಕ್ಕೆ ಮನಸ್ತಾಪ; ಈ ವ್ಯಕ್ತಿಗಳಿಗೆ ಭಾರೀ ತೊಂದರೆ; ಇಲ್ಲಿದೆ ಇಂದಿನ ಭವಿಷ್ಯ

Share :

Published May 30, 2024 at 6:10am

  ಹೊಸದಾದ ಯಾವುದೇ ಕೆಲಸಗಳನ್ನು ಆರಂಭಿಸಲು ಶುಭವಲ್ಲ

  ನೌಕರಿ ದೃಷ್ಟಿಯಿಂದ ದೂರ ಪ್ರಯಾಣ ಮಾಡುವ ಸೂಚನೆಗಳಿವೆ

  ಪಶ್ಚಾತ್ತಾಪ ಪಡುವಂತಹ ಯಾವ ಕೆಲಸಗಳನ್ನು ಮಾಡಬೇಡಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

 • ಪ್ರೇಮಿಗಳಿಗೆ ಮನಸ್ಸು ತುಂಬಾ ಚಂಚಲವಾಗುತ್ತದೆ, ಸ್ಥಿರ ನಿರ್ಧಾರ ಬೇಕು
 • ಶರೀರದಲ್ಲಿ ಪೌಷ್ಟಿಕಾಂಶದ ಕೊರತೆಯಿಂದಾಗಿ ಸುಸ್ತು ಕಾಣಬಹುದು
 • ನಿಮ್ಮ ಮಹತ್ತರವಾದ ಆಲೋಚನೆಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬೇಡಿ
 • ಜನರು ನಿಮ್ಮ ವ್ಯವಹಾರಗಳನ್ನು ಗೇಲಿ ಮಾಡಬಹುದು
 • ಪಶ್ಚಾತ್ತಾಪ ಪಡುವಂತಹ ಯಾವ ಕೆಲಸಗಳನ್ನು ಮಾಡಬೇಡಿ
 • ಮುತ್ತುರಾಯಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವೃಷಭ

 • ನೌಕರಿಯ ದೃಷ್ಟಿಯಿಂದ ದೂರ ಪ್ರಯಾಣ ಮಾಡುವ ಸೂಚನೆಗಳಿವೆ
 • ವ್ಯಾಪಾರ, ವ್ಯವಹಾರವನ್ನು ವಿಸ್ತರಿಸಲು ಸಾಲದ ಅವಶ್ಯಕತೆ ಬೀಳಬಹುದು
 • ಇಂದು ಉನ್ನತ ಅಧಿಕಾರಿಗಳೊಂದಿಗೆ ಸಂಬಂಧವು ಉತ್ತಮವಾಗಿರುತ್ತದೆ
 • ಇಂದು ಒತ್ತಡ ಹಾಗೂ ಮಾನಸಿಕ ಕಿರಿಕಿರಿ ಉಂಟಾಗಬಹುದು
 • ಮನಸ್ಸು ತುಂಬಾ ಘಾಸಿಗೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿ ಕಾಣುತ್ತದೆ
 • ತುಂಬಾ ಆಲೋಚನೆಗಳನ್ನು ಮಾಡುವ ದಿನ
 • ಸಾಲಿಗ್ರಾಮ ಮಹಾವಿಷ್ಣುವನ್ನು ಧ್ಯಾನಿಸಿ

ಮಿಥುನ

 • ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ
 • ನಿಮ್ಮ ಬಗ್ಗೆ ಅಪಪ್ರಚಾರ ನಡೆಯಬಹುದು
 • ಮನೆಯ ಹೊರಗೆ ಅಥವಾ ನೌಕರಿಯ ಸ್ಥಳದಲ್ಲಿ ಊಹಾಪೋಹಗಳಿರಬಹುದು
 • ಮನೆಯಲ್ಲಿ ಎಲ್ಲರ ನಂಬಿಕೆ ವಿಶ್ವಾಸಗಳಿಗೆ ಪಾತ್ರರಾಗುತ್ತೀರಿ
 • ಕೆಲವೇ ಕೆಲವರು ನಿಮ್ಮಿಂದ ಸ್ಫೂರ್ತಿ ಪಡೆಯಬಹುದು
 • ವಿದ್ಯಾರ್ಥಿಗಳು ದುಂದುವೆಚ್ಚ ಮಾಡಬಹುದು ಕಾಲಾಹರಣವೂ ಆಗುತ್ತದೆ
 • ಕುಲದೇವರನ್ನು ಪ್ರಾರ್ಥನೆ ಮಾಡಿ

ಕಟಕ

 • ಹೊಸದಾದ ಯಾವುದೇ ಕೆಲಸಗಳನ್ನು ಆರಂಭಿಸಲು ಶುಭವಲ್ಲ
 • ವ್ಯಾಪಾರ, ವ್ಯವಹಾರದಲ್ಲಿ ಸ್ವಲ್ಪ ನಷ್ಟದ ಸಾಧ್ಯತೆಗಳಿವೆ
 • ನಿಮ್ಮ ವ್ಯವಹಾರಾದಿಗಳಲ್ಲಿ, ವೃತ್ತಿಯಲ್ಲಿ ಸಭ್ಯರಾಗಿರಿ
 • ಹಣದ ಚಿಂತೆ ಕಾಡಬಹುದು ಅದರೆ ತೊಂದರೆಯಾಗದೆ ಹಣ ಸಿಗುತ್ತದೆ
 • ಹಳೆಯ ಕಹಿ ನೆನಪುಗಳು, ತಾವು ಜೀವನದಲ್ಲಿ ನಡೆದು ಬಂದ ದಾರಿ ನೆನಪಿಗೆ ಬರಬಹುದು
 • ಇಷ್ಟ ದೇವತಾ ಧ್ಯಾನ ಮಾಡಿ

ಸಿಂಹ

 • ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಹೊಂದಬಹುದು
 • ಕಾನೂನು ವಿದ್ಯಾರ್ಥಿಗಳು ತಮ್ಮ ಅಭ್ಯಾಸ ಅನುಕೂಲಕ್ಕೆ ಹಿರಿಯ ವಿದ್ಯಾರ್ಥಿಗಳೊಂದಿಗೆ ಚರ್ಚಿಸಲು ಅವಕಾಶವಿದೆ
 • ನ್ಯಾಯವಾದಿಗಳು, ವಕೀಲರಿಗೆ ಶುಭ ಹಾಗೂ ಲಾಭದ ದಿನ
 • ಕಬ್ಬಿಣ ಮಾರಾಟ ಮಾಡುವವರಿಗೆ ಲಾಭವಿದ್ದರೂ ದಂಡ ಕಟ್ಟ ಬೇಕಾಗಬಹುದು
 • ಹಣ ಹೂಡಿಕೆಯ ಮತ್ತು ಹೆಚ್ಚು ಹಣ ಖರ್ಚಾಗುವ ಯಾವುದೇ ಕೆಲಸವನ್ನು ಆರಂಭಿಸುವುದಕ್ಕೆ ಶುಭವಲ್ಲ
 • ಶನೈಶ್ಚರನನ್ನು ಪ್ರಾರ್ಥನೆ ಮಾಡಿ, ಎಳ್ಳೆಣ್ಣೆ ಅರ್ಪಿಸಿ

ಕನ್ಯಾ

 • ಕಲಾ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಉನ್ನತ ಸ್ಥಾನಮಾನಗಳು ದೊರೆಯಲಿದೆ
 • ಹಿಂದೆ ಹೂಡಿಕೆ ಮಾಡಿದ್ದ ಹಣದಿಂದ ಲಾಭ ನೋಡುವ ದಿನವಾಗಿದೆ
 • ವಾಹನ ಖರೀದಿಯ ಆಲೋಚನೆ ಬರಬಹುದು
 • ಸಣ್ಣ ಆಸ್ತಿಯ ವಿಚಾರಕ್ಕೆ ಮನಸ್ತಾಪ ಏರ್ಪಡುತ್ತದೆ
 • ಮನೆಯಲ್ಲಿದ್ದ ಶಾಂತಿಯ ವಾತಾವರಣ ಕದಡಿ ಬೇಸರವಾಗಬಹುದು
 • ಸುಖವಿದ್ದರೂ ಅನುಭವಿಸಲು ಯೋಗವಿಲ್ಲ ಎಂದು ಹೇಳಬೇಕಾದ ದಿನ
 • ಅಶಕ್ತರಿಗೆ, ರೋಗಿಗಳಿಗೆ ಹಣ್ಣುಗಳನ್ನು ಕೊಡಿ

ತುಲಾ

 • ಭಾವನಾತ್ಮಕ ಸಂಬಂಧ ಹೊಂದಿರುವವರಿಗೆ ಆಘಾತವಾಗಬಹುದು
 • ಪ್ರಯಾಣವು ತುಂಬಾ ಆಯಾಸ ಉಂಟು ಮಾಡುತ್ತದೆ
 • ಶತ್ರುಗಳ ಆಕ್ರಮಣದ ಸೂಚನೆ ಇದೆ ತಾಳ್ಮೆಯಿರಲಿ
 • ಮಾತು ನಿಮಗೆ ತೊಂದರೆಯನ್ನು ಮಾಡಬಹುದು
 • ಹಿರಿಯರ, ಸಂಗಾತಿಯ ಮಾತಿಗೆ ಬೆಲೆ ಕೊಡಿ ಪರಿಹಾರ ಮಾರ್ಗ ದೊರೆಯಬಹುದು
 • ದೂರದಿಂದ ಬರುವ ಅಶುಭವಾರ್ತೆ ಮನಸ್ಸಿಗೆ ನೋವು ಉಂಟು ಮಾಡಬಹುದು
 • ದೇವರನ್ನು ದೂಷಿಸುವ ಸ್ಥಿತಿಗೆ ನಿಮ್ಮ ನೋವು ಕಾಡಬಹುದು

ವೃಶ್ಚಿಕ

 • ಕುಟುಂಬದಲ್ಲಿ ಹಲವು ದಿನಗಳಿಂದ ನೆರವೇರದ ಕೆಲಸ ಇಂದು ಪೂರ್ಣವಾಗಬಹುದು
 • ಪ್ರೇಮಿಗಳಿಗೆ ಸುದಿನ ದುರುಪಯೋಗ ಮಾಡಿಕೊಳ್ಳಬಾರದು
 • ಹಣ, ವಸ್ತ್ರಗಳು ಮನಸ್ಸಿಗೆ ಸಂತೋಷ ಕೊಡಬಹುದು
 • ಸ್ನೇಹಿತರ ಕೆಲಸವನ್ನು ನೀವು ಮಾಡಿಕೊಡದೆ ಅವರಿಗೆ ಬೇಸರ ಉಂಟಾಗಬಹುದು
 • ನಿಮ್ಮ ಒತ್ತಡಗಳಿದ್ದರು ಮುಖ್ಯವಾಗಿ ಆಗಬೇಕಾದ ಕೆಲಸಕ್ಕೆ ಗಮನಹರಿಸಬೇಕಾಗುತ್ತದೆ
 • ಅಮೂಲ್ಯವಾದ ಗ್ರಂಥ ಸಂಪಾದನೆಗೆ, ಓದಿನ ಕಡೆಗೆ ನೀವು ಆಕರ್ಷಿತರಾಗಬಹುದು
 • ಸಮುದ್ರ ತೀರದಲ್ಲಿರುವ ಈಶ್ವರನ ಆರಾಧನೆ ಮಾಡಿ

ಧನುಸ್ಸು

 • ಫಲ ನೀಡದ ಕೆಲಸಗಳನ್ನ ಸದ್ಯಕ್ಕೆ ಮುಂದೂಡುವುದು ಒಳ್ಳೆಯದು
 • ವೈಯಕ್ತಿಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ದೊರಕಬಹುದು
 • ಮಧುಮೇಹಿಗಳು ಸ್ವಲ್ಪ ಎಚ್ಚರಿಕೆವಹಿಸಿ ರೋಗ ಉಲ್ಬಣವಾಗಬಹುದು
 • ರಾಜಕೀಯ ವ್ಯಕ್ತಿಗಳು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭ
 • ಕೃಷಿಕರಿಗೆ, ಕಾರ್ಮಿಕರಿಗೆ ಆದಾಯ ಹೆಚ್ಚಳವಾಗಬಹುದು
 • ಇಂದು ಯಾವುದೇ ಹೊಸ ಯೋಜನೆಗಳು ಬೇಡ
 • ಶ್ರೀನಿವಾಸನನ್ನು ಪ್ರಾರ್ಥನೆ ಮಾಡಿ

ಮಕರ

 • ದಿನದ ಎಲ್ಲಾ ಕೆಲಸಗಳು ನೆರವೇರುವ ವಿಶ್ವಾಸ ನಿಮ್ಮದಾಗಿರುತ್ತದೆ
 • ಪ್ರೇಮಿಗಳು ಸುಳ್ಳು ಹೇಳಬಾರದು
 • ತಪ್ಪುಗಳನ್ನು ಮುಚ್ಚಿಡಬೇಡಿ ಬೇರೆಯವರಿಂದ ತಿಳಿದಾಗ ನಂಬಿಕೆ ಇರುವುದಿಲ್ಲ
 • ಆತ್ಮ ಪ್ರಶಂಸೆಯಿಂದ ಹಲವರಿಗೆ ಆಶ್ಚರ್ಯವಾಗಬಹುದು
 • ವೃತ್ತಿ ಜೀವನದ ಬಗ್ಗೆ ಸಮಾಧಾನ ಇರುತ್ತದೆ
 • ಮಕ್ಕಳ ಆರೋಗ್ಯ ವಿದ್ಯಾಭ್ಯಾಸ ಮನಸ್ಸಿಗೆ ಬೇಸರವಾಗಬಹುದು
 • ಇಷ್ಟ ದೇವತಾ ಪ್ರಾರ್ಥನೆ ಮಾಡಿ

ಕುಂಭ

 • ಅಪಘಾತ ಸಂಭವಿಸುವ ಸೂಚನೆ ಇದೆ ಎಚ್ಚರಿಕೆಯಿರಲಿ
 • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಹಿನ್ನಡೆಯಾಗಬಹುದು
 • ಅಪರಾಧ ಭಾವ ಕಾಡಬಹುದು, ಅಧಿಕಾರಿಗಳ ವಿಚಾರಣೆಗೆ ಒಳಪಡಬಹುದು
 • ಇಂದು ಧನಬಲ ಕೆಲಸ ಮಾಡುವುದಿಲ್ಲ
 • ಹಳೆಯ ವಿಚಾರಗಳು ಪ್ರಸ್ತಾಪವಾಗಿ ತೊಂದರೆ ಅನುಭವಿಸ ಬೇಕಾಗಬಹುದು
 • ತಾಳ್ಮೆಯಿರಲಿ, ನಾಟಕಿಯ ಜೀವನ ಬೇಡ
 • ದುರ್ಗಾದೇವಿಯನ್ನು ಆರಾಧಿಸಿ, ದುರ್ಗಾ ಹೋಮ ಮಾಡಿಸಿ

ಮೀನ

 • ಮಾನಸಿಕ ಸ್ಥಿರತೆಯಿಂದ ನಿಮ್ಮ ಉದ್ಯೋಗ ವೃತ್ತಿಯಲ್ಲಿ ಸಾಧನೆ ಮಾಡುತ್ತೀರಿ
 • ನಿಮ್ಮ ವಿನಮ್ರ ಭಾವನೆ ನಿಮಗೆ ಯಶಸ್ಸು ಕೊಡುತ್ತದೆ
 • ಸ್ನೇಹಿತರು ಬಂಧುಗಳು ನಿಮಗೆ ಸಹಾಯ ಮಾಡಬಹುದು
 • ದುಡ್ಡಿನ ಬಗ್ಗೆ ಹೆಚ್ಚು ಆಸಕ್ತಿಯಿರುವುದಿಲ್ಲ, ಇಷ್ಟವಾದ ಮಿತ್ರರ ಮಾತು ಹಿತವೆನಿಸುತ್ತದೆ
 • ವಿದ್ಯಾರ್ಥಿಗಳಿಗೆ ಮೆಚ್ಚುಗೆ ವ್ಯಕ್ತವಾಗಿ ಸಂತೋಷವಾಗುತ್ತದೆ
 • ಈ ರಾಶಿಯ ಸ್ತ್ರೀಯರು ಸ್ವಉದ್ಯೋಗ ಪ್ರಾರಂಭಿಸಲು ಚಿಂತಿಸಬಹುದು
 • ಲಲಿತಾ ಸಹಸ್ರನಾಮ ಶ್ರವಣ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಸ್ತಿ ವಿಚಾರಕ್ಕೆ ಮನಸ್ತಾಪ; ಈ ವ್ಯಕ್ತಿಗಳಿಗೆ ಭಾರೀ ತೊಂದರೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More