newsfirstkannada.com

ಗಂಡ, ಹೆಂಡತಿ ಮಧ್ಯೆ ಜಗಳ; ಯಾರನ್ನೂ ನಂಬಲೇಬೇಡಿ; ಇಲ್ಲಿದೆ ಇಂದಿನ ಭವಿಷ್ಯ

Share :

Published May 16, 2024 at 6:02am

  ಸಾಮರ್ಥ್ಯ ಬಹಳ ಇದ್ದರೂ ಕೂಡ ಕಡಿಮೆಯಾಗ್ತಿದೆ ಎಂಬ ಅನುಭವ ಆಗಬಹುದು

  ಹಳೆ ಸ್ನೇಹಿತರ, ಬಂಧುಗಳ ಭೇಟಿಗಾಗಿ ಕಾಯುತ್ತೀರಿ, ಆದರೆ ಅವಕಾಶ ಸಿಗುವುದಿಲ್ಲ

  ಕುಟುಂಬದ ಸಾಮರಸ್ಯ ಚೆನ್ನಾಗಿ ಇರುತ್ತದೆ, ಪ್ರಯತ್ನದಿಂದ ಹಾಗೇ ಉಳಿಯಬೇಕು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ಅಷ್ಟಮಿ ನಂತರ ನವಮಿ ತಿಥಿ, ಮಖಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

 • ಆಧ್ಯಾತ್ಮಿಕ, ಧಾರ್ಮಿಕವಾಗಿ ಆಸಕ್ತಿ ಇದ್ರೂ ಕೂಡ ಅದನ್ನ ರೂಢಿಯಲ್ಲಿ ಇಟ್ಟುಕೊಳ್ಳಬೇಕು
 • ಇಂದು ಹಣ ಹೆಚ್ಚು ಖರ್ಚಾದರೂ ಕೂಡ ಮತ್ತೆ ಸಂಗ್ರಹ ಆಗಬಹುದು
 • ಇಂದು ಮಕ್ಕಳಿಂದ ಬೇಸರವಾಗಬಹುದು
 • ಮಕ್ಕಳನ್ನು ಪ್ರೀತಿಯಿಂದ ಗೆಲ್ಲಬೇಕೆಂಬ ಅಸ್ತ್ರ ನಿಮಗೆ ಗೊತ್ತಿರಬೇಕು
 • ಈ ದಿನ ಉತ್ತಮವಾಗಿದೆ ಆದರೆ ನಿಮಗೆ ತೃಪ್ತಿ ಇರುವುದಿಲ್ಲ
 • ಇಂದು ಮನೋರಂಜನೆಗಾಗಿ ಸಂಪೂರ್ಣ ಸಮಯ ಹೋಗಿಬಿಡುತ್ತದೆ
 • ಮನೆಯಲ್ಲಿ ಆಶ್ಚರ್ಯಕರ ರೀತಿಯಲ್ಲಿ ಒಂದು ಘಟನೆ ನಡೆಯಬಹುದು ಗಮನಿಸಿ
 • ಕುಲದೇವತಾ ಆರಾಧನೆ ಮಾಡಿ

ವೃಷಭ

 • ಇಂದು ಯೋಗ, ಧ್ಯಾನ ಮನಸ್ಸನ್ನು ಕೇಂದ್ರೀಕರಿಸುವ ಸಾಧನಗಳ ಮೊರೆ ಹೋಗಿ
 • ನಿಮ್ಮ ಶರೀರದ ಶಕ್ತಿಯನ್ನು ಜಾಸ್ತಿ ಮಾಡಿಕೊಳ್ಳಿ ಜೊತೆಗೆ ಆರೋಗ್ಯವಂತರಾಗಿರಿ
 • ಇಂದು ಹಣದ ವೃದ್ಧಿ ಇದೆ ಆದರೆ ಆಲಸ್ಯ ತುಂಬಾ ಜಾಸ್ತಿಯಾಗಬಹುದು
 • ಇಂದು ಶರೀರದಲ್ಲೂ ಕೂಡ ಅಂತ ಸುಖ ಇರುವುದಿಲ್ಲ
 • ಆಲಸ್ಯ ಮತ್ತು ಸೋಮಾರಿತನದಿಂದ ಹಲವಾರು ಅವಕಾಶಗಳನ್ನು ಕಳೆದುಕೊಳ್ಳಬಹುದು
 • ಏಕಾಂಗಿತನ ಅಥವಾ ಒಂಟಿತನ ನಿಮ್ಮನ್ನು ಕಾಡಬಹುದು
 • ನಿಮ್ಮ ಪ್ರತಿಭೆಗೆ ಗೌರವ ಸಿಗಬೇಕಾದ್ರೆ ಚಟುಚಟಿಕೆಯಿಂದ ಇರಬೇಕು
 • ದಕ್ಷಿಣಾಮೂರ್ತಿಯನ್ನು ಪ್ರಾರ್ಥನೆ ಮಾಡಿ

ಮಿಥುನ

 • ಸಂತಾನಾಪೇಕ್ಷಿಗಳಿಗೆ ಉತ್ತಮವಾದ ಫಲ ಸಿಗುವ ದಿನ
 • ಹಳೆಯ ನೋವು, ಅನಾರೋಗ್ಯ ಎಲ್ಲವೂ ಮರುಕಳಿಸಬಹುದು ಎಚ್ಚರಿಕೆ ವಹಿಸಿ
 • ಇಂದು ಆಸ್ಪತ್ರೆಗೋಸ್ಕರ ಹಣ ಖರ್ಚಾಗಿ ಬೇಸರವಾಗಬಹುದು
 • ಪ್ರೀತಿಪಾತ್ರರ ಅನಗತ್ಯವಾದ ಬೇಡಿಕೆಗಳನ್ನು ಒಪ್ಪಿಕೊಳ್ಳಬೇಡಿ
 • ಇಂದು ಸಂತೋಷದ ವಾತಾವರಣವಿದೆ ಆದರೆ ಆರೋಗ್ಯ ಸರಿಯಿಲ್ಲದೇ ಹಾಳಾಗಬಹುದು
 • ಇಂದು ಕುಟುಂಬದ ಸಹಕಾರ ಸಿಗುತ್ತದೆ ಧೈರ್ಯವಾಗಿರಿ
 • ಗೋಪಾಲಕೃಷ್ಣನ್ನು ಪ್ರಾರ್ಥನೆ ಮಾಡಿ

ಕಟಕ

 • ಜೀವನದ ಉಜ್ವಲ ಭವಿಷ್ಯ, ಮುಂದಿನ ಒಳಿತು ಇಂದು ಕಾಣಬಹುದು
 • ನಿಮ್ಮ ಆತ್ಮವಿಶ್ವಾಸ, ಭರವಸೆ ನಿಮ್ಮ ಕೆಲಸಕ್ಕೆ ಸ್ಫೂರ್ತಿದಾಯಕವಾಗಬಹುದು
 • ಇಂದು ಹೆಚ್ಚು ಬೆಲೆಬಾಳುವ ವಸ್ತುವಿನ ಖರೀದಿ ಮಾಡಬಹುದು
 • ತಂದೆಗೆ ಅನಾರೋಗ್ಯ, ಶಸ್ತ್ರ ಚಿಕಿತ್ಸೆಯಾಗುವ ಸಾಧ್ಯತೆಯಿದೆ
 • ಅಕ್ಕಪಕ್ಕದವರ ಜೊತೆ ಜಗಳವಾಗಬಹುದು ಆದರೆ ಜಗಳ ಬೇಡ
 • ಸೂರ್ಯನಾರಾಯಣನ್ನು ಆರಾಧನೆ ಮಾಡಿ

ಸಿಂಹ

 • ಮನೆಯಲ್ಲಿ, ವ್ಯವಹಾರದಲ್ಲಿ ಶಾಂತವಾಗಿ ವರ್ತಿಸುವುದನ್ನು ಪಾಲನೆ ಮಾಡಿ
 • ಬೇರೆಯವರನ್ನ ಅಗೌರವದಿಂದ ಕಂಡರೆ ನಿಮ್ಮ ಮಾನಹಾನಿ ಆಗಬಹುದು
 • ನಿಮ್ಮ ಬುದ್ಧಿವಂತಿಕೆ ಇಂದು ಕೆಲಸಕ್ಕೆ ಬರುತ್ತದೆ
 • ಹೊರಗಡೆ ತಿರುಗಾಡುವುದಕ್ಕೆ ಅವಕಾಶವಿದೆ ಆದರೆ ಮನಸ್ಸಿರುವುದಿಲ್ಲ
 • ಇಂದು ವಿದ್ಯಾರ್ಥಿಗಳಿಗೆ ಓದುವುದಕ್ಕೆ ನಿರಾಸಕ್ತಿ
 • ಹೊಸ ಆಲೋಚನೆಗಳು ನಿಮಗೆ ಅಧೈರ್ಯ ಉಂಟುಮಾಡಬಹುದು
 • ಶಾಂತಿದುರ್ಗೆಯನ್ನ ಪ್ರಾರ್ಥನೆ ಮಾಡಿ

ಕನ್ಯಾ

 • ಇಂದು ಲಾಭದಾಯಕ ದಿನ, ಲಾಭ ಬರುವುದಕ್ಕೆ ಒಳ್ಳೆ ಸಮಯ
 • ಮಧ್ಯಾಹ್ನದ ನಂತರ ಉಸಿರಾಟದಲ್ಲಿ ಸ್ವಲ್ಪ ಸಮಸ್ಯೆ ಉಂಟಾಗಬಹುದು ಗಮನಿಸಿ
 • ಇಂದು ದಾಂಪತ್ಯದಲ್ಲಿ ಕಲಹ ಉಂಟಾಗಬಹುದು
 • ಬಟ್ಟೆ ವ್ಯಾಪಾರಿಗಳಿಗೆ ನಷ್ಟವಾಗುವ ದಿನ
 • ನಿಮ್ಮ ಸ್ವಂತಕ್ಕೆ ಸ್ವಲ್ಪ ಸಮಯ ಮಾಡಿಕೊಳ್ಳಿ
 • ಮನೆ, ಮಕ್ಕಳು, ಸಂಸಾರಾ ಎಲ್ಲವೂ ಚೆನ್ನಾಗಿದ್ದರೆ ಮಾತ್ರ ಒಳ್ಳೆಯದಾಗುತ್ತದೆ
 • ಶನೈಶ್ಚರನನ್ನು ಪ್ರಾರ್ಥನೆ ಮಾಡಿ

ತುಲಾ

 • ತುಲಾ ರಾಶಿ
 • ಬೇರೆಯವರನ್ನ ಹೊಗಳಿ ನೀವು ಒಳ್ಳೆಯವರೆನಿಸಿಕೊಳ್ಳಬಹುದು
 • ಇಂದು ತಪ್ಪು ಸಂದೇಶದಿಂದ ನಿಮಗೆ ಹಿನ್ನಡೆಯಾಗಬಹುದು
 • ಸಹೋದ್ಯೋಗಿಗಳ ಅಥವಾ ಸ್ನೇಹಿತರ ಸಹಾಯ ಸಕಾಲದಲ್ಲಿ ದೊರೆಯುವುದಿಲ್ಲ
 • ಇಂದು ಶಾರೀರಿಕವಾಗಿ ತೊಂದರೆ ಕಾಣಬಹುದು
 • ಪತಿ-ಪತ್ನಿ ಮಧ್ಯ ಸಾತ್ವಿಕವಾದ ಜಗಳ ಉಂಟಾಗಬಹುದು
 • ಚೆನ್ನಾಗಿರುವ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು
 • ಐಕ್ಯಮತ್ಯ ಮಂತ್ರವನ್ನು ಶ್ರವಣ ಮಾಡಿ

ವೃಶ್ಚಿಕ

 • ಅನಾವಶ್ಯಕವಾಗಿ ಒತ್ತಡಗಳಿಗೆ ಒಳಗಾಗಬಹುದು
 • ಕಾಲು, ಸ್ನಾಯುಗಳಲ್ಲಿ ನೋವು ಕಾಣಬಹುದು ವಿಶ್ರಾಂತಿ ಬಹಳ ಮುಖ್ಯ
 • ಹಣ ಹೂಡಿಕೆಯ ಆಸೆ ಹುಟ್ಟಬಹುದು ಆದರೆ ಬೇಡ
 • ಯಾವುದೇ ವಿಚಾರದಲ್ಲಿ ನಿಮ್ಮ ಅಭಿಪ್ರಾಯ, ನಿರ್ಧಾರ ಎಲ್ಲವೂ ಸ್ಪಷ್ಟವಾಗಿ ಇರಬೇಕು
 • ಮನೆಯವರ ಜೊತೆ ಸ್ಪಂದಿಸಲು ಇಷ್ಟ ಇರುವುದಿಲ್ಲ ಆದರೆ ಮಾತನಾಡಿ ಪರಿಹಾರ ಕಂಡುಕೊಳ್ಳಿ
 • ಸಂಬಂಧಿಕರು ಅಥವಾ ಸ್ನೇಹಿತರ ಆಗಮನದಿಂದ ಮನೆಯ ವಾತಾವರಣ ಬದಲಾಗುತ್ತದೆ
 • ಆಂಜನೇಯನ ದೇವಸ್ಥಾನಕ್ಕೆ ಎಳ್ಳೆಣ್ಣೆಯನ್ನು ಅರ್ಪಣೆ ಮಾಡಿ

ಧನುಸ್ಸು

 • ಬೆಳಗ್ಗೆಯಿಂದ ಏನೋ ಒಂದು ರೀತಿ ಕಿರಿಕಿರಿ ಉಂಟಾಗಬಹುದು ಆದರೆ ತಾಳ್ಮೆಯಿರಲಿ
 • ಮನೋರಂಜನೆಗಾಗಿ ಹಣ ಖರ್ಚು ಮಾಡಬಹುದು
 • ಯಾವುದೇ ಕೆಲಸವನ್ನು ತುಂಬಾ ಚಿಂತನೆ ಮಾಡುವ ಮೂಲಕ ಮಾಡಿ ಯಶಸ್ಸಿದೆ
 • ಉತ್ತಮರ, ಹಿರಿಯರ ಭೇಟಿ ಮಾಡಿ ಅವರ ಮಾತುಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳಿ
 • ಇಂದು ನಿಮ್ಮ ಒತ್ತಡಗಳನ್ನು ಯಾರ ಮೇಲೂ ಹೆರಬೇಡಿ
 • ಪ್ರೇಮಿಗಳು ಮನೆಯವರ ವಿರುದ್ಧ ತೀರ್ಮಾನ ತೆಗೆದುಕೊಳ್ಳಬಹುದು
 • ಹಸುವಿಗೆ ಅನ್ನ ಮತ್ತು ಬೆಲ್ಲ ಕೊಡಿ, ಗೋ ಸೇವೆ ಮಾಡಿ

ಮಕರ

 • ತುಂಬಾ ಆತಂಕ, ಚಿಂತೆಗೆ ಒಳಗಾಗುವ ದಿನ
 • ಇಂದು ತಾತ್ಕಾಲಿಕವಾದ ಸಾಲಕ್ಕಾಗಿ ಯಾರದರು ನಿಮ್ಮ ಬಳಿ ಬಂದರೆ ಕೊಡಬೇಡಿ
 • ವೈಯಕ್ತಿಕವಾಗಿ, ವೃತ್ತಿಯಲ್ಲಿ ಅಮೋಘವಾದ ಬೆಳವಣಿಗೆಗೆ ಅವಕಾಶವಿದೆ
 • ಸ್ವಾಭಿಮಾನಕ್ಕೆ ಧಕ್ಕೆ ಬರುವ ಅವಕಾಶವಿದೆ ಆದರೆ ಅದಕ್ಕೆ ಅವಕಾಶ ಕೊಡಬೇಡಿ
 • ನಿಮ್ಮ ಖ್ಯಾತಿ, ಹೆಸರಿಗೆ ಅಪಕೀರ್ತಿ ಬರುವ ಸಾಧ್ಯತೆಯಿದೆ
 • ಕುಟುಂಬದ ಸಾಮರಸ್ಯ ಚೆನ್ನಾಗಿರುತ್ತದೆ, ನಿಮ್ಮ ಪ್ರಯತ್ನದಿಂದ ಹಾಗೇ ಉಳಿಯಬೇಕು
 • ಶೂಲಿನಿ ದುರ್ಗಿಯನ್ನ ಪ್ರಾರ್ಥನೆ ಮಾಡಿ

ಕುಂಭ

 • ವಿಶ್ರಾಂತಿಯ ಜೀವನ ನಡೆಸುವವರಿಗೆ ಲಾಭದ ದಿನ
 • ಇಂದು ಹಣದ ಹಿಡಿತ ಕೆಲವು ಸಂದರ್ಭದಲ್ಲಿ ಅವಮಾನ ಮಾಡಬಹುದು
 • ಲಾಭದಾಯಕ ದಿನ ಆದರೂ ಕೂಡ ನಿರಾಸೆ ಇರುತ್ತದೆ
 • ಇಂದು ಒಂಟಿತನ ಹೆಚ್ಚಾಗಿ ಕಾಡಬಹುದು
 • ಹಳೆಯ ಸ್ನೇಹಿತರ, ಬಂಧುಗಳ ಭೇಟಿಗಾಗಿ ಕಾಯುತ್ತೀರಿ ಆದರೆ ಅವಕಾಶ ಸಿಗುವುದಿಲ್ಲ
 • ಜೀವನಕ್ಕೆ ತೊಂದರೆಯಿಲ್ಲ ಆದರೆ ಜೀವಕ್ಕೆ ಅಭದ್ರತೆ ಕಾಡಬಹುದು
 • ಪ್ರತ್ಯಂಗಿರಾ ದೇವಿಯನ್ನು ಆರಾಧನೆ ಮಾಡಿ

ಮೀನ

 • ಶಾರೀರಿಕ, ಮಾನಸಿಕ ಅಶಕ್ತತೆ ಕಾಡುವ ಅನುಭವ ಆಗಬಹುದು
 • ನಿಮ್ಮ ಸಾಮರ್ಥ್ಯ ಬಹಳ ಇದ್ದರೂ ಕೂಡ ಕಡಿಮೆಯಾಗ್ತಿದೆ ಎಂಬ ಅನುಭವ ಆಗಬಹುದು
 • ಇಂದು ನಿಮ್ಮನ್ನ ನೀವು ಪರೀಕ್ಷೆ ಮಾಡಿಕೊಳ್ಳುವುದು ಉತ್ತಮ
 • ಇಂದು ಚಟುವಟಿಕೆಯನ್ನು ತೋರಿಸಬೇಕು ಆದರೆ ತುಂಬಾ ದೇಹಕ್ಕೆ ಶ್ರಮ ಬೇಡ
 • ಜೀವನಕ್ಕೆ ಆಧ್ಯಾತ್ಮಿಕ ಮತ್ತು ವ್ಯಾಪಾರ, ವ್ಯವಹಾರ ಎರಡು ಕ್ಷೇತ್ರ ಬೇಕು ಎಂಬುದನ್ನು ತಿಳಿಯಬೇಕು
 • ಆಂಜನೇಯ ಸ್ವಾಮಿ ಸೇವೆಯನ್ನು ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಂಡ, ಹೆಂಡತಿ ಮಧ್ಯೆ ಜಗಳ; ಯಾರನ್ನೂ ನಂಬಲೇಬೇಡಿ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

Load More