ಇನ್​​ಸ್ಟಾಗ್ರಾಮ್​ ನಂಬಿ ಲಿವರ್ ಕಳೆದುಕೊಂಡ ಮಹಿಳೆ.. ಅಂಥದ್ದೇನಾಯ್ತು..?

author-image
Bheemappa
Updated On
ಇನ್​​ಸ್ಟಾಗ್ರಾಮ್​ ನಂಬಿ ಲಿವರ್ ಕಳೆದುಕೊಂಡ ಮಹಿಳೆ.. ಅಂಥದ್ದೇನಾಯ್ತು..?
Advertisment
  • ಸೋಷಿಯಲ್ ಮೀಡಿಯಾದ ವಿಡಿಯೋಗಳ ಬಗ್ಗೆ ಇರಲಿ ಎಚ್ಚರಿಕೆ
  • ಇನ್‌ಸ್ಟಾಗ್ರಾಮ್​​ನಲ್ಲಿ Health Tips ಹೆಸರಲ್ಲಿ ಫೇಕ್​ ನ್ಯೂಸ್
  • ಆರೋಗ್ಯದ ಬಗ್ಗೆ ಯಾವುದೇ ಸೂಚನೆಗಳನ್ನ ವೈದ್ಯರಿಂದ ಪಡೆಯಿರಿ

ಸೋಷಿಯಲ್​​ ಮೀಡಿಯಾದಲ್ಲಿ ಹರಡುತ್ತಿರೋ ಸುಳ್ಳುಸುದ್ದಿಗಳನ್ನು ತಡೆಯಲು ವಿವಿಧ ಕ್ರಮ ಕೈಗೊಳ್ಳುತ್ತಿದ್ರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ನಿತ್ಯ ನೂರಾರು ಸುಳ್ಳುಸುದ್ದಿಗಳು ಸಾಮಾಜಿಕ ತಾಣಗಳ ವಿವಿಧ ಫ್ಲ್ಯಾಟ್‌ಫಾರ್ಮ್‌ಗಳಲ್ಲಿ ಹರಿದಾಡುತ್ತಿದ್ದು, ಎಷ್ಟೋ ಜನ ಬಲಿ ಆಗುತ್ತಿದ್ದಾರೆ. ಅದ್ರಲ್ಲೂ ಇನ್‌ಸ್ಟಾಗ್ರಾಮ್​​ನಲ್ಲಿ Health Tips ಹೆಸರಲ್ಲಿ ಫೇಕ್​ ನ್ಯೂಸ್​​ ಹೆಚ್ಚಾಗುತ್ತಿದ್ದು, ಆತಂಕಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ.

ಉರಿಯೂತ ಮತ್ತು ಕೀಲು ನೋವು ನಿವಾರಣೆಗೆ ಅರಿಶಿನದ ಪ್ರಯೋಜನಗಳ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ವೈದ್ಯರ ಹೆಸ್ರಲ್ಲಿ ಯಾರೋ ಪ್ರಚಾರ ಮಾಡಿದ್ದರು. ಈ ಸುದ್ದಿಯನ್ನು ನಂಬಿದ ಅಮೆರಿಕದ ಕೇಟೀ ಮೋಹನ್ ಎನ್ನುವ ಮಹಿಳೆ ತನ್ನ ಲಿವರ್​ ಅನ್ನೇ ಡ್ಯಾಮೇಜ್​ ಮಾಡಿಕೊಂಡಿದ್ದಾರೆ. ಪ್ರಚಾರದ ವಿಡಿಯೋದಲ್ಲಿ ಉರಿಯೂತ ಮತ್ತು ಕೀಲು ನೋವು ನಿವಾರಣೆಗೆ ಅರಿಶಿನ ಒಳ್ಳೆಯದು ಎಂದು ಹೇಳಲಾಗಿತ್ತು. ಇದನ್ನೇ ನಂಬಿದ್ದ ಮಹಿಳೆ ನಿತ್ಯ ಅರಿಶಿನ ಮಾತ್ರೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ಇದೇ ಕಾರಣಕ್ಕೆ ಆಕೆಗೆ ಈಗ ಲಿವರ್​ಗೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ.

publive-image

ಅರಿಶಿನ ಮಾತ್ರೆಗಳು ತೆಗೆದುಕೊಂಡಿದ್ದೇ ಲಿವರ್​ ಹಾನಿಗೆ ಕಾರಣನಾ..!

ಅರಿಶಿನದಲ್ಲಿ ಆಂಟಿ ಇನ್ಫಾಮೇಟರಿ ಗುಣ ಲಕ್ಷಣಗಳು ಇರೋದು ನಿಜ. ಇದರ ಸೇವನೆ ದೇಹದೊಳಗಿನ ಊತ ಅಥವಾ ಉರಿಯೂತವನ್ನು ಕಡಿಮೆ ಮಾಡಲಿದೆ. ಜೊತೆಗೆ ದೇಹದಿಂದ ವಿಷಕಾರಿ ಅಂಶಗಳನ್ನು ಹೊರ ಹಾಕುವ ಎಲ್ಲಾ ಬಗೆಯ ಆರೋಗ್ಯಕಾರಿ ಗುಣ ಲಕ್ಷಣವನ್ನು ಹೊಂದಿದೆ ಎನ್ನುವ ಮಾತುಗಳನ್ನು ಕೇಳಿದ್ದೇವೆ. ಆದ್ರೆ, ಇತ್ತೀಚೆಗೆ ಅಮೆರಿಕದಿಂದ ಒಂದು ಆಘಾತಕಾರಿ ಸುದ್ದಿ ಹೊರಬಂದಿದೆ. ಅದರಲ್ಲಿ 57 ವರ್ಷದ ಮಹಿಳೆ ಅರಿಶಿನ ಮಾತ್ರೆಗಳನ್ನು ತೆಗೆದುಕೊಂಡು ಲಿವರ್​ ಡ್ಯಾಮೇಜ್​ ಮಾಡಿಕೊಂಡಿದ್ದಾರೆ ಎನ್ನುವ ಶಾಕಿಂಗ್​ ಮಾಹಿತಿ ಹೊರಬಿದ್ದಿದೆ.

ದೇಹದ ಊತ ಅಥವಾ ಉರಿಯೂತವನ್ನು ಕಡಿಮೆ ಮಾಡಲು ಮಹಿಳೆ ಪ್ರತಿದಿನ ಅರಿಶಿನ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಳು. ಇದಾದ ಕೆಲವು ವಾರಗಳಲ್ಲಿ ಅವರ ಆರೋಗ್ಯ ಹದಗೆಡಲು ಪ್ರಾರಂಭಿಸಿತು. ಅವರ ಮುಖವು ಬಿಳಿಚಿಕೊಂಡಿತು, ಮೂತ್ರದ ಬಣ್ಣವು ಕಪ್ಪಾಯಿತು. ಇದ್ದಕ್ಕಿದಂತೆ ಆಯಾಸ ಸುಸ್ತು ಕಾಣಿಸಿಕೊಂಡಿದೆ. ಕೂಡಲೇ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಾಗ ಇದಕ್ಕೆ ಅರಿಶಿನ ಮಾತ್ರೆಗಳೇ ಕಾರಣ ಎಂದು ತಿಳಿದು ಬಂದಿದೆ. ಇದರಿಂದ ಲಿವರ್​ ಡ್ಯಾಮೇಜ್​ ಆಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಭಾರತದಲ್ಲೇ ಮೊಟ್ಟ ಮೊದಲ ಕೇಸ್​; ಮಹಿಳೆಯ ಗರ್ಭಕೋಶದ ಬದಲಿಗೆ ಲಿವರ್​ನಲ್ಲಿ ಬೆಳೆಯುತ್ತಿರೋ ಭ್ರೂಣ!

publive-image

ಈ ಬಗ್ಗೆ ವೈದ್ಯರು ಹೇಳಿದ್ದೇನು..?

ಮಹಿಳೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅರಿಶಿನ ಸೇವಿಸಿದ್ದಾರೆ. ಇದು ಆಕೆಯ ಯಕೃತ್ತಿನ ಮೇಲೆ ಪರಿಣಾಮ ಬೀರಿದೆ. ಚಿಕಿತ್ಸೆ ನಂತರ ಮಹಿಳೆಯ ಸ್ಥಿತಿ ಸುಧಾರಿಸಿದೆ. ಆದರೆ ಈ ಘಟನೆಯು ನೈಸರ್ಗಿಕ ವಸ್ತುಗಳು ಸಹ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಹಾನಿಕಾರಕವಾಗಬಹುದು ಎಂಬುದರ ಎಚ್ಚರಿಕೆ ನೀಡಿದೆ ಎಂದರು ವೈದ್ಯರು.

ಮಹಿಳೆ ದಿನಕ್ಕೆ ಎಷ್ಟು ಮಿಲಿಗ್ರಾಂ ಅರಿಶಿನ ಸೇವಿಸುತ್ತಿದ್ದರು?

ಇನ್ನೂ ಮಹಿಳೆ ದಿನಕ್ಕೆ ಸುಮಾರು 2,250 ಮಿಲಿಗ್ರಾಂ ಅರಿಶಿನ ತೆಗೆದುಕೊಳ್ಳುತ್ತಿದ್ದರು. ಇದು ಸುರಕ್ಷಿತ ಪ್ರಮಾಣಕ್ಕಿಂತ ಎರಡು ಪಟ್ಟು ಹೆಚ್ಚು. ಇದು ಅವರ ಯಕೃತ್ತಿನ ಕಿಣ್ವಗಳನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಸಾಮಾನ್ಯವಾಗಿ ಆಹಾರದಲ್ಲಿ ಅರಿಶಿನದ ಪ್ರಮಾಣ ಕಡಿಮೆ ಇರುತ್ತದೆ. ಆದ್ದರಿಂದ ನೀವು ಹೆಚ್ಚು ಅರಿಶಿನ ಸೇವಿಸಿದ್ರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ವೈದ್ಯರ ಸಲಹೆಯಿಲ್ಲದೆ ಯಾವುದೇ ಕಾರಣಕ್ಕೂ ಅರಿಶಿನ ಸೇವಿಸಬಾರದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment