ಮಹಾಕುಂಭಮೇಳದ ಸಂಗಮದಲ್ಲಿ ಮಿಂದೆದ್ದ ಕೋಲ್ಡ್​ಪ್ಲೇ ಕಲಾವಿದರು; ವಿಡಿಯೋ ಫುಲ್ ವೈರಲ್!

author-image
Gopal Kulkarni
Updated On
ಮಹಾಕುಂಭಮೇಳದ ಸಂಗಮದಲ್ಲಿ ಮಿಂದೆದ್ದ ಕೋಲ್ಡ್​ಪ್ಲೇ ಕಲಾವಿದರು; ವಿಡಿಯೋ ಫುಲ್ ವೈರಲ್!
Advertisment
  • ಮಹಾಕುಂಭಮೇಳದಲ್ಲಿ ಗಂಗಾ ಸ್ನಾನ ಮಾಡಿದ ಕೋಲ್ಡ್ ಪ್ಲೇ ಕಲಾವಿದರು
  • ಗೆಳತಿ ಡಕೋಟಾ ಜಾನ್ಸನ್​ ಜೊತೆ ಪವಿತ್ರ ಸ್ನಾನ ಮಾಡಿದ ಕ್ರಿಸ್ ಮಾರ್ಟಿನ್​
  • ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಕಲಾವಿದರ ವಿಡಿಯೋಗಳು

ಮಹಾಕುಂಭಮೇಳ ದಿನದಿಂದ ದಿನಕ್ಕೆ ಪ್ರಸಿದ್ಧಿಯನ್ನು ಪಡೆಯುತ್ತಿದೆ. ಕೇವಲ ದೇಶವಲ್ಲ ವಿದೇಶಗಳಿಂದಲೂ ಬಂದು ಇಲ್ಲಿಯ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಪಾವನರಾಗುತ್ತಿದ್ದಾರೆ. ಅವರ ಸಾಲಿನಲ್ಲಿ ಈಗ ಕೋಲ್ಡ್​ ಪ್ಲೇ ಕಲಾವಿದರು ಕೂಡ ಸೇರಿದ್ದಾರೆ. ಕೋಲ್ಡ್ ಪ್ಲೇ ಆರ್ಟಿಸ್ಟ್​ಗಳಾದ ಕ್ರಿಸ್ ಮಾರ್ಟಿನ್ ತಮ್ಮ ಪ್ರೆಯಸಿ ಡಕೊಟಾ ಜಾನ್ಸನ್ ಜೊತೆ ಪ್ರಯಾಗರಾಜ್​ಗೆ ಬಂದು ಗಂಗೆಯಲ್ಲಿ ಮಿಂದೆದ್ದಿದ್ದಾರೆ.

ಆಕಸ್ಮಾತಾಗಿ ವಿಡಿಯೋವೊಂದರಲ್ಲಿ ಕಾಣಿಸಿಕೊಂಡ ಕ್ರಿಸ್ ಮಾರ್ಟಿನ್ ಹಾಗೂ ಜೋಡಿ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಭರತ್ ಚೌದರಿ ಎಂಬುವವರು ಈ ಒಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಯಾವಾಗ ನೀವು ಸಂಗೀತ ಕಚೇರಿಗೆ ಹೋಗಲು ಆಗುವುದಿಲ್ಲವೋ ಆಗ ಕಲಾವಿದ ಕುಂಭಮೇಳಕ್ಕೆ ಬಂದು ಸಂಗಮ ಸ್ನಾನವನ್ನು ಮಾಡುತ್ತಾನೆ ಎಂದು ಹೇಳಿದ್ದಾರೆ. ಕ್ರಿಸ್ ಮಾರ್ಟಿನ್ ಮತ್ತು ಡಕೋಟಾ ಇಲ್ಲಿಗೆ ಬಂದು ಎಲ್ಲ ರೀತಿಯ ಸಂಪ್ರದಾಯಗಳನ್ನು ಪಾಲಿಸಿದರು. ಈ ಪದ್ಧತಿಯನ್ನು ಗೌರವಿಸಿದರು. ಮ್ಯೂಸಿಕ್ ಎಲ್ಲರನ್ನೂ ಕೂಡಿಸುತ್ತದೆ ಆದ್ರೆ ನಂಬಿಕೆ ಅದೆಲ್ಲವನ್ನೂ ಮೀರುಸುತ್ತದೆ ಹರ.. ಹರ.. ಮಹಾದೇವ್ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮಹಾಕುಂಭಮೇಳದಿಂದ ಮತ್ತೊಂದು ಶಾಕಿಂಗ್ ಸುದ್ದಿ: ಕರ್ನಾಟಕ ಮೂಲದ ನಾಗಾಸಾಧು ದುರಂತ ಅಂತ್ಯ

ವೈರಲ್ ಆಗಿರುವ ವಿಡಿಯೋದಲ್ಲಿ ಕ್ರಿಸ್ ಮಾರ್ಟಿನ್ ಹಾಗೂ ಅವರ ಪ್ರೇಯಸಿಯೊಂದಿಗೆ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಪವಿತ್ರ ಸ್ನಾನವನ್ನು ಮಾಡಿದ್ದಾರೆ. ಇಬ್ಬರು ಗಂಗೆಯಲ್ಲಿ ಮಿಂದೆದ್ದ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗ ಭಾರೀ ವೈರಲ್ ಆಗಿವೆ. ಅವರು ಸ್ನಾನ ಮಾಡಿದ್ದು, ಸ್ನಾನ ಮಾಡಿದ ಮೇಲೆ ಎರಡು ಕೈ ಜೋಡಿಸಿ ನಮಸ್ಕಾರ ಮಾಡಿದ್ದು ಇವು ಎಲ್ಲರ ಹೃದಯಗಳನ್ನು ಗೆದ್ದಿವೆ. ನೀವು ಕೋಲ್ಡ್​ ಪ್ಲೇ ಬದಲು ಕುಂಭಮೇಳವನ್ನು ಆಯ್ಕೆ ಮಾಡಿದ್ದರೆ ಮಹಾದೇವನ ಯೋಜನೆ ಬೇರೆ ಇರುತ್ತದೆ ಅವನು ಕೋಲ್ಡ್​ ಪ್ಲೇಯನ್ನೇ ಮಹಾಕುಂಭಕ್ಕೆ ಕರೆಸಿಕೊಳ್ಳುತ್ತಾನೆ ಎನ್ನುತ್ತಿದ್ದಾರೆ ಜನರು

ಈ ಒಂದು ವಿಡಿಯೋ ಜನವರಿ 31 ರಂದು ಪೋಸ್ಟ್ ಆಗಿದೆ. ಕೋಲ್ಡ್​ ಪ್ಲೇ ಸಂಗೀತ ಕಚೇರಿ ಗಣರಾಜ್ಯೋತ್ಸವದ ದಿನದಂದು ಅಹ್ಮದಾಬಾದ್​ನಲ್ಲಿ ನಡೆದಿತ್ತು. ವಿಶ್ವದಾದ್ಯಂತ ತಮ್ಮ ಸಂಗೀತ ಕಚೇರಿ ನಡೆಸಬೇಕು ಎಂದು ತೀರ್ಮಾನಿಸಿದ್ದ ಕೋಲ್ಡ್ ಪ್ಲೇ ಟೀಮ್ ಭಾರತಕ್ಕೂ ಕೂಡ ಬಂದಿತ್ತು. ಈಗ ಕ್ರಿಸ್​ ಮಾರ್ಟಿನ್​ ತೆಗೆದುಕೊಂಡು ಪವಿತ್ರ ಸ್ನಾನದ ವಿಡಿಯೋ ಕೋಲ್ಡ್​ ಪ್ಲೇ ಸಂಗೀತ ಕಚೇರಿಯಷ್ಟೇ ಜನಪ್ರಿಯತೆ ಪಡೆದಿದ್ದು ಸುಮಾರು 2.52 ಲಕ್ಷ ಜನರು ಆ ವಿಡಿಯೋ ವೀಕ್ಷಣೆ ಮಾಡಿದ್ದಾರೆ.ಸಂಗೀತ ಕಚೇರಿ ಒಂದು ನೆಪವಾಗಿತ್ತು. ಕೋಲ್ಡ್​ ಪ್ಲೇಗೆ ಕುಂಭಮೇಳಕ್ಕೆ ಬರುವುದಿತ್ತು ಎಂದೆಲ್ಲಾ ಜನರು ಪ್ರತಿಕ್ರಿಯಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment