/newsfirstlive-kannada/media/post_attachments/wp-content/uploads/2025/05/shree.jpg)
ಮೂಡುಬಿದಿರೆ: ಜೈನ, ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದ ಸರ್ವ ಧರ್ಮ ಸಮನ್ವಯ ಭೂಮಿ ನಮ್ಮ ಕರಾವಳಿ ಜಿಲ್ಲೆ. ಇಲ್ಲಿ ಯಾವುದೇ ಧರ್ಮದ ಅಮಾಯಕರ ಮೇಲಿನ ದಾಳಿ ನಿಲ್ಲಬೇಕು ಅಂತ ಮೂಡುಬಿದಿರೆಯ ಜೈನಮಠದ ಶ್ರೀಗಳು ಕರೆ ಕೊಟ್ಟಿದ್ದಾರೆ.
ಇದನ್ನೂ ಓದಿ:ಅಬ್ದುಲ್ ರಹೀಮಾನ್ ಪ್ರಕರಣಕ್ಕೆ ಟ್ವಿಸ್ಟ್ -ಗಾಯಾಳು ಶಫಿಯಿಂದ ಮಹತ್ವದ ಮಾಹಿತಿ..
ಇಂತಹ ಘಟನೆಗಳು ಮರು ಕಳಿಸಬಾರದು. ಧರ್ಮ ಧರ್ಮಗಳ ಮಧ್ಯೆ ಯಾವುದೇ ದ್ವೇಷವನ್ನು ಉಂಟು ಮಾಡುವ ಹೇಳಿಕೆಗಳನ್ನು ಯಾರೇ ಆದರೂ ಕೊಡಬಾರದು. ಡಿಜಿಟಲ್ ಮಾಧ್ಯಮ ಮೂಲಕ ಮನ ನೋಯಿಸಿ ದ್ವೇಷ ಪೂರಿತ ಅಸವಿಂಧಾನಿಕ ಹೇಳಿಕೆಗಳನ್ನು ನೀಡಬಾರದು. ಶಾಂತಿ ಸೌಹಾರ್ದತೆಗೆ ಸ್ಥಳೀಯ ಪರಮ ಪೂಜ್ಯರುಗಳ ಆಶೀರ್ವಾದ ಇರಲಿ. ವಿವಿಧ ಧಾರ್ಮಿಕ ಮುಖಂಡರು, ರಾಜಕೀಯ ಮುಖಂಡರು ಐಕ್ಯತೆಯಿಂದ ಸಾಮರಸ್ಯಕ್ಕೆ ಸಹಕಾರ ನೀಡಲಿ.
ನಾವೆಲ್ಲರೂ ಭಾರತೀಯರು ಸೌಹಾರ್ದತೆಗೆ ಭಂಗ ತರುವ ಕಿಡಿಗೇಡಿಗಳ ಕೃತ್ಯವನ್ನು ಬಲವಾಗಿ ಖಂಡಿಸೋಣ, ಸಂವಿಧಾನ, ಸರ್ಕಾರ, ನ್ಯಾಯಾಂಗದಲ್ಲಿ ನಂಬಿಕೆ ಇರಿಸಿ ಸುರಕ್ಷತೆ, ಪರಸ್ಪರ, ನಂಬಿಕೆ, ಐಕ್ಯತೆಗಾಗಿ ನಾವು ನಂಬಿದ ದೇವರಲ್ಲಿ ಪ್ರಾರ್ಥಿಸೋಣವೆಂದು ದಕ್ಷಿಣಕನ್ನಡ ಜಿಲ್ಲೆಯ ಮೂಡುಬಿದರೆಯ ಜಗದ್ಗುರು ಡಾ.ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯ ವರ್ಯ ಮಹಾಸ್ವಾಮೀಜಿ ಶ್ರೀ ದಿಗಂಬರ ಜೈನ ಮಠ ಸ್ವಸ್ತಿಶ್ರೀ ಭಟ್ಟಾರಕ ಪಂಡಿತಚಾರ್ಯ ಪಟ್ಟಾಚಾರ್ಯ ಕರೆ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ