SSLC ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಪ್ರಥಮ, ಉಡುಪಿ 2ನೇ ಸ್ಥಾನ; ನಿಮ್ಮ ಜಿಲ್ಲೆಗೆ ಯಾವ ಸ್ಥಾನ?

author-image
Veena Gangani
Updated On
SSLC ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ ಪ್ರಥಮ, ಉಡುಪಿ 2ನೇ ಸ್ಥಾನ; ನಿಮ್ಮ ಜಿಲ್ಲೆಗೆ ಯಾವ ಸ್ಥಾನ?
Advertisment
  • ಇಂದು ಪ್ರಕಟವಾಯ್ತು ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ
  • ಪ್ರತಿ ವರ್ಷದಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ
  • ರಾಜ್ಯಾದ್ಯಂತ ಮಾ. 21 ರಿಂದ ಏ. 4ರವರೆಗೆ ನಡೆದಿದ್ದ ಪರೀಕ್ಷೆ

ಬೆಂಗಳೂರು: ಇಂದು ಕರ್ನಾಟಕ ಪರೀಕ್ಷಾ ಮಂಡಳಿ SSLC ಫಲಿತಾಂಶ ಪ್ರಕಟ ಮಾಡಲಾಗಿದೆ. ಕಳೆದ ಮಾರ್ಚ್-ಏಪ್ರಿಲ್ ತಿಂಗಳಲ್ಲಿ ರಾಜ್ಯಾದ್ಯಂತ SSLC ಪರೀಕ್ಷೆ ನಡೆದಿತ್ತು. ಇದೀಗ ಪ್ರತಿ ವರ್ಷದಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಇದನ್ನೂ ಓದಿ: ಇವತ್ತೇ SSLC ಫಲಿತಾಂಶ ಪ್ರಕಟ; ಮಕ್ಕಳೇ ನಿಮ್ಮ ರಿಸಲ್ಟ್ ನೋಡೋದು ಹೇಗೆ..?

publive-image

ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ಕರ್ನಾಟಕದಾದ್ಯಂತ 2,818 ಪರೀಕ್ಷಾ ಕೇಂದ್ರಗಳಲ್ಲಿ SSLC ಪರೀಕ್ಷೆ ನಡೆಸಲಾಗಿತ್ತು. ಒಟ್ಟು ಸುಮಾರು 8.96 ಲಕ್ಷ ವಿದ್ಯಾರ್ಥಿಗಳು, 4,61,563 ಬಾಲಕರು ಮತ್ತು 4,34,884 ಬಾಲಕಿಯರು ಪರೀಕ್ಷೆ ಬರೆದಿದ್ದರು.

publive-image

ಸುಮಾರು 75 ಸಾವಿರಕ್ಕೂ ಹೆಚ್ಚು ಮೌಲ್ಯ ಮಾಪಕರು 6 ವಿಷಯಗಳಿಗೆ ಸೇರಿದ 60 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದ್ದಾರೆ. ಈಗಾಗಲೇ ಮೌಲ್ಯಮಾಪನ ಕಾರ್ಯ ಮುಗಿಸಿರುವ ಕರ್ನಾಟಕ ಪರೀಕ್ಷಾ ಮಂಡಳಿ ಇಂದು ಫಲಿತಾಂಶ ಪ್ರಕಟ ಮಾಡಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇಕಡಾ 66.14ರಷ್ಟು ಮಕ್ಕಳು ಉತ್ತೀರ್ಣರಾಗಿದ್ದಾರೆ.

ಈ ಬಾರಿಯೂ ಹೆಣ್ಣುಮಕ್ಕಳದ್ದೇ ಮೇಲುಗೈ!

ಗಂಡು ಮಕ್ಕಳು – 58.07%
ಹೆಣ್ಣು ಮಕ್ಕಳು – 74.00%

ಈ ಬಾರಿ ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳು 7 ಲಕ್ಷ 90 ಸಾವಿರದ 890. ಅದರಲ್ಲಿ 5 ಲಕ್ಷ 23 ಸಾವಿರದ 075 ಮಕ್ಕಳು ಈ ಬಾರಿ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ.

publive-image

ಯಾವ ಜಿಲ್ಲೆಗೆ ಎಷ್ಟು ಫಲಿತಾಂಶ?

  1. ದಕ್ಷಿಣ ಕನ್ನಡ- 91.12
  2. ಉಡುಪಿ-89.96
  3. ಉತ್ತರ ಕನ್ನಡ- 83.19
  4. ಶಿವಮೊಗ್ಗ- 82.29
  5. ಕೊಡಗು - 82.21
  6. ಹಾಸನ- 82.12
  7. ಶಿರಸಿ- 80.47
  8. ಚಿಕ್ಕಮಗಳೂರು- 77.9
  9. ಬೆಂಗಳೂರು ಗ್ರಾಮಾಂತರ- 74.02
  10. ಬೆಂಗಳೂರು ದಕ್ಷಿಣ- 72.3
  11. ಬೆಂಗಳೂರು ಉತ್ತರ - 72.27
  12. ಮಂಡ್ಯ- 13476
  13. ಹಾವೇರಿ- 69.03
  14. ಕೋಲಾರ- 68.47
  15. ಮೈಸೂರು- 68.39
  16. ಬಾಗಲಕೋಟೆ- 68.29
  17. ಗದಗ- 67.72
  18. ಧಾರವಾಡ- 67.62
  19. ವಿಜಯನಗರ- 67.62
  20. ತುಮಕೂರು- 67.03
  21. ದಾವಣಗೆರೆ- 66.09
  22. ಚಿಕ್ಕಬಳ್ಳಾಪುರ- 63.64
  23. ಚಿತ್ರದುರ್ಗ- 63.21
  24. ರಾಮನಗರ- 63.12
  25. ಬೆಳಗಾವಿ- 62.16
  26. ಚಿಕ್ಕೋಡಿ- 62.12
  27. ಚಾಮರಾಜನಗರ- 61.45
  28. ಮಧುಗಿರಿ- 60.65
  29. ಬಳ್ಳಾರಿ- 60.26
  30. ಕೊಪ್ಪಳ - 57.32
  31. ಬೀದರ್ - 53.25
  32. ರಾಯಚೂರು - 52.05
  33. ಯಾದಗಿರಿ - 51.6
  34. ವಿಜಯಪುರ - 49.58
  35. ಕಲಬುರಗಿ - 42.43

ವಿದ್ಯಾರ್ಥಿಗಳು ರಿಸಲ್ಟ್ ನೋಡೋದು ಹೇಗೆ..?

  • ಸ್ಟೆಪ್ 1: https://karresults.nic.in ವೆಬ್​ಸೈಟ್​ಗೆ ಭೇಟಿ ನೀಡಿ
  • ಸ್ಟೆಪ್ 2: ಹೋಮ್ ಪೇಜ್​ನಲ್ಲಿ ಕಾಣುವ Karnataka SSLC result 2025 ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: Submit the login credentials
  • ಸ್ಟೆಪ್ 4: ಅಲ್ಲಿ ತೆರೆದುಕೊಳ್ಳವ ಸ್ಕ್ರೀನ್​ ಮೇಲೆ ಹಾಲ್​ ಟಿಕೆಟ್ ನಂಬರ್ ಹಾಕಿ ಸಬ್​ಮಿಟ್ ಮಾಡಿ
  • ಸ್ಟೆಪ್ 5: ಪರದೆ ಮೇಲೆ ನೀವು ಗಳಿಸಿದ ಮಾರ್ಕ್ಸ್​​ ತೋರಿಸುತ್ತದೆ
  • ಸ್ಟೆಪ್ 6: ಅದನ್ನು ನೋಡಿ, ಮಾರ್ಕ್ಸ್​​ ಶೀಟ್​ ಡೌನ್​ಲೋಡ್​ ಮಾಡಿಕೊಳ್ಳಿ
  • ಸ್ಟೆಪ್ 7: ಪಿಡಿಎಫ್​ನಲ್ಲಿ ಡೌನ್​ಲೋಡ್ ಆಗಲಿದೆ
  • ಸ್ಟೆಪ್ 8: ಮುಂದಿನ ದಾಖಲೆಗಳಿಗಾಗಿ ಅದನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment