ಕೇವಲ 36 ಗಂಟೆಯಲ್ಲಿ ಕಾರ್ಯಾಚರಣೆ ಯಶಸ್ವಿ; ಸಕ್ಸಸ್​ನಲ್ಲೂ ಮಾತೃ ಹೃದಯ ಮಿಡಿದ ಡ್ಯಾಂ ತಜ್ಞ ಕನ್ನಯ್ಯ

author-image
Ganesh
Updated On
ಕೇವಲ 36 ಗಂಟೆಯಲ್ಲಿ ಕಾರ್ಯಾಚರಣೆ ಯಶಸ್ವಿ; ಸಕ್ಸಸ್​ನಲ್ಲೂ ಮಾತೃ ಹೃದಯ ಮಿಡಿದ ಡ್ಯಾಂ ತಜ್ಞ ಕನ್ನಯ್ಯ
Advertisment
  • ಡ್ಯಾಂ ವೀಕ್ಷಿಸಿ ಕೇವಲ 2 ಗಂಟೆಯಲ್ಲಿ ಗೇಟ್​ನ ವಿನ್ಯಾಸ ರೆಡಿ ಮಾಡಿದ್ದರು
  • 72 ಟಿಎಂಸಿ ನೀರು ಉಳಿಸಿದ ಕಲ್ಯಾಣ ಕರ್ನಾಟಕದ‌ ಭಗೀರಥ
  • 3 ರಾಜ್ಯಗಳ 8 ಜಿಲ್ಲೆಗಳ ಜನರಿಂದ ಅಭಿನಂದನೆಯ ಮಹಾಪುರ

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್​ ಗೇಟ್​​ನ ದುರಸ್ತಿ ಕಾರ್ಯ ಯಶಸ್ವಿಯಾಗಿದೆ. 5 ಸ್ಟಾಪ್ ಲಾಗ್ ಅಳವಡಿಕೆಯ ಕಾರ್ಯ ಯಶಸ್ವಿಯಾಗಿರುವುದು ಇಡೀ ಕಲ್ಯಾಣ ಕರ್ನಾಟಕಕ್ಕೆ ಖುಷಿಯಾದ ಸಂಗತಿ. ಸತತ ಮೂರು ದಿನಗಳ ಭಗೀರಥ ಪ್ರಯತ್ನಕ್ಕೆ ಕೊನೆಗೂ ಫಲಸಿಕ್ಕಿದೆ. ಪೋಲಾಗಿ ಹರಿದು ಹೋಗ್ತಿದ್ದ ತುಂಗಭದ್ರೆಯನ್ನ ಕೊನೆಗೂ ತಡೆಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದು, ತುಂಗಭದ್ರೆಯನ್ನ ಅವಲಂಭಿಸಿರೋ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಕನ್ನಯ್ಯ ನಾಯ್ಡು ಅವರ ಈ ಕಾರ್ಯಕ್ಕೆ ಕೋಟ್ಯಂತರ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡ್ಯಾಂ ತಜ್ಞ ಕನ್ನಯ್ಯ ಅವರು ಕಲ್ಯಾಣ ಕರ್ನಾಟಕಕ್ಕೆ ಭಗೀರಥ ಎಂದು ಕರೆದಿದ್ದಾರೆ.

ಇದನ್ನೂ ಓದಿ: ತುಂಗಾಭದ್ರ ಡ್ಯಾಂ ಭರ್ತಿಗೆ ಕೆಲವೇ ಅಡಿಗಳು ಬಾಕಿ.. 3 ವಾರದಲ್ಲಿ ಹರಿದು ಬಂದಿರೋ ನೀರು ಎಷ್ಟು? 

publive-image

ಮೊದಲ ಪ್ಲಾನ್ ಹಂತದಲ್ಲೇ ಯಶಸ್ವಿಯಾಗಿರೋದಕ್ಕೆ ಟಿಬಿ‌ ಡ್ಯಾಂ ಅಧಿಕಾರಿಗಳು ಸೆಲ್ಯೂಟ್ ಹೊಡೆಯುತ್ತಿದ್ದಾರೆ. ಯಾರೂ ಊಹಿಸದ ರೀತಿಯಲ್ಲಿ 36 ಗಂಟೆಗಳ ಕಾರ್ಯಾಚರಣೆ ಸಕ್ಸಸ್ ಆಗಿದೆ. ಕನ್ನಯ್ಯ ಕಾರ್ಯಕ್ಕೆ ಟಿಬಿ ಬೋರ್ಡ್ ಅಧಿಕಾರಿಗಳು ನಿಬ್ಬೆರಗಾಗಿದ್ದು, ತಿಂಗಳ ಕಾಲ ನಡೆಯುವ ಕಾರ್ಯಾಚರಣೆಯನ್ನ 36 ಗಂಟೆಯಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಕೀರ್ತಿ ಕನ್ನಯ್ಯಗೆ ಸಲ್ಲುತ್ತದೆ ಎಂದಿದ್ದಾರೆ.

2 ಗಂಟೆಯಲ್ಲಿ ಗೇಟ್​ನ ವಿನ್ಯಾಸ ರೆಡಿ..
ವಿಶೇಷ ಅಂದರೆ ಡ್ಯಾಂ ನೋಡಿದ ಎರಡೇ ಗಂಟೆಯಲ್ಲಿ ಗೇಟ್​ನ ವಿನ್ಯಾಸವನ್ನು ರೆಡಿ ಮಾಡಿದ್ದಾರೆ. ವಿನ್ಯಾಸ ರೆಡಿ ಆಗ್ತಿದ್ದಂತೆ ತನ್ನ ಹಳೆಯ ನೆಟ್​ವರ್ಕ್ ಆಕ್ಟೀವ್ ಮಾಡಿದ ಕನ್ನಯ್ಯ ಕೇವಲ 48 ಗಂಟೆಯಲ್ಲಿ ಸ್ಟಾಪ್ ಲಾಗ್ ರೆಡಿ ಮಾಡಿದರು. ಕೇವಲ 36 ಗಂಟೆಯಲ್ಲಿ 72 ಟಿಎಂಸಿ ನೀರು ಉಳಿಸಿ ಕಲ್ಯಾಣ ಕರ್ನಾಟಕದ‌ ಜನರ ಭಗೀರಥನಾಗಿರುವ ಕನ್ನಯ್ಯಗೆ ಅಭಿನಂದನೆಯ ಸುರಿಮಳೆ ಸಿಗುತ್ತಿದೆ.

publive-image

ಸ್ವತಃ ವಿಜಯನಗರ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರೇ ನಿಬ್ಬೆರಗಾಗಿದ್ದಾರೆ. ಗೇಟ್​ನ ತೋಬುಗೆ 5 ಸ್ಟಾಪ್ ಲಾಗ್ ಇಳಿಸುತ್ತಿದ್ದಂತೆ 3 ರಾಜ್ಯಗಳ 8 ಜಿಲ್ಲೆಗಳ ಜನರು ಅಭಿನಂದನೆ ಮಹಾಪುರ ತಿಳಿಸಿದ್ದಾರೆ. ಕಾರ್ಯಾಚರಣೆ ಸಂಪೂರ್ಣ ಯಶಸ್ವಿಯಾಗುತ್ತಿದ್ದಂತೆ ಕನ್ನಯ್ಯ ಅಂಡ್ ಟೀಂಗೆ ಸನ್ಮಾನ ಮಾಡಲಾಯಿತು. ಸಕ್ಸಸ್​ನಲ್ಲೂ ಮಾತೃ ಹೃದಯ ಮಿಡಿದ ಡ್ಯಾಂ ತಜ್ಞ ಕನ್ನಯ್ಯ, ತಮ್ಮ ಯಶಸ್ವಿ ಕಾರ್ಯಾಚರಣೆಯನ್ನ ಜೊತೆಗಿದ್ದ ಟೀಂಗೆ ಸಮರ್ಪಿಸಿದ್ದಾರೆ. ಕ್ಷಣ ಕ್ಷಣಕ್ಕೂ 80ಕ್ಕೂ ಹೆಚ್ಚು ತಂತ್ರಜ್ಞರಿಗೆ ಉತ್ಸಾಹಿಸಿದ್ದ ಕನ್ನಯ್ಯ, ಕಾರ್ಯಾಚರಣೆ ಯಶಸ್ವಿಯಾಗ್ತಿದ್ದಂತೆ ತನ್ನ ಪರಿಶ್ರಮವನ್ನ ತಂತ್ರಜ್ಞರಿಗೆ ಅರ್ಪಿಸಿದ್ದಾರೆ. ಇನ್ನು ಕನ್ನಯ್ಯ ಪ್ಲ್ಯಾನ್‌ಗೆ ನಾರಾಯಣ ಸ್ಟೀಲ್ಸ್, ಹಿಂದೂಸ್ತಾನ ಕಂಪನಿ ಹಾಗೂ ಜಿಂದಾಲ್‌ ಕಂಪನಿಯ ಇಂಜಿನೀಯರ್ಸ್ ಸಾಥ್ ನೀಡಿದ್ದಾರೆ.

ಇದನ್ನೂ ಓದಿ:ಮತ್ತೆ ಭರ್ತಿಯಾಗುತ್ತಾ ತುಂಗಭದ್ರಾ ಡ್ಯಾಂ? 19ನೇ ಗೇಟ್‌ ಬಂದ್ ಕಾರ್ಯಾಚರಣೆ ಹೇಗಿತ್ತು? ಕಂಪ್ಲೀಟ್ ಮಾಹಿತಿ ಇಲ್ಲಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment