newsfirstkannada.com

ತುಂಗಭದ್ರಾ ಜಲಾಶಯ ಕಾಪಾಡಿದ ಕನ್ನಯ್ಯ ನಾಯ್ಡು ಯಾರು? ಡ್ಯಾಂ ತಜ್ಞನ ಹಿನ್ನೆಲೆ ಏನು? ಸಾಧನೆಗಳೇನು?

Share :

Published August 17, 2024 at 4:58pm

    ಡ್ಯಾಂ ತಜ್ಞ ಕನ್ಹಯ್ಯ ನಾಯ್ಡು ಮೂಲತಃ ಯಾವ ರಾಜ್ಯದವರು..?

    ಸಿ.ರಂಗಚಾರಿ ಬಳಿ 5 ವರ್ಷ ತರಬೇತಿ ಪಡೆದಿದ್ದೇ ಭದ್ರ ಬುನಾದಿ

    ಎಷ್ಟು ಜಲಾಶಯಗಳಿಗೆ ತಜ್ಞ ಕನ್ಹಯ್ಯ ನಾಯ್ಡು ಕೆಲಸ ಮಾಡಿದ್ದಾರೆ?

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್​ ಗೇಟ್​​ನ ಚೈನ್​ ತುಂಡಾಗಿ ಸಾಕಷ್ಟು ನೀರು ಪೋಲಾಗುತ್ತಿದ್ದರಿಂದ ರೈತರನ್ನ ಆತಂಕಕ್ಕೆ ಗುರಿ ಮಾಡಿತ್ತು. ಸದ್ಯ ಡ್ಯಾಂನ 19ನೇ ಗೇಟ್‌ಗೆ ಸ್ಟಾಪ್ ಲಾಗ್ ಅಳವಡಿಕೆಯ ಕಾರ್ಯ ಯಶಸ್ವಿಯಾಗಿದೆ. ಜಲಾಶಯಗಳ ತಜ್ಞ ಕನ್ಹಯ್ಯ ನಾಯ್ಡು ಅವರ ತಂಡ ಕ್ರಸ್ಟ್ ಗೇಟ್ ಜಾಗಕ್ಕೆ ಸ್ಟಾಪ್ ಲಾಗ್ ಗೇಟ್ ಅಳವಡಿಸಿದ್ದು ಇನ್ನೊಂದು ಎಲಿಮೆಂಟ್​ ಅನ್ನು ಅಳವಡಿಸಬೇಕಿದೆ. ಸದ್ಯ ಇದರ ಮಧ್ಯೆಯೇ ಈ ಗೇಟ್​ ಅಳವಡಿಸುವ ಹಿಂದೆ ಇರುವ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಯಾರು?

ಇದನ್ನೂ ಓದಿ: 30 ಗಂಟೆ ಕಾರ್ಯಾಚರಣೆ.. ತುಂಗಭದ್ರಾ ಜಲಾಶಯದಲ್ಲಿ ಡ್ಯಾಂ ತಜ್ಞ ಕನ್ಹಯ್ಯ ನಾಯ್ಡು ಪ್ಲಾನ್ ಸಕ್ಸಸ್‌!

ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಅವರ ಪೂರ್ಣ ಹೆಸರು ನಾಗಿಂಡಯ್ಯ ಕನ್ನಯ್ಯ ನಾಯ್ಡು. ಇವರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗುಡಿಪಾಲ ಮಂಡಲ್​ನ ದಾಸನಪಲ್ಲಿ ಗ್ರಾಮದಲ್ಲಿ 1947 ಆಗಸ್ಟ್​ 27 ರಂದು ಜನಿಸಿದರು. ಇವರು ಕುಟುಂಬ ಮೂಲತಃ ಕೃಷಿ ಕುಟುಂಬವಾಗಿತ್ತು. ಬಡತನದಲ್ಲೇ ಓದು ಮುಂದುವರೆಸಿದ ಇವರು ಪ್ರಾಥಮಿಕ, ಪ್ರೌಢ ಶಾಲಾ ವಿದ್ಯಾಭ್ಯಾಸ ಮುಗಿಸಿದರು. ಬಳಿಕ ಕಾಲೇಜಿಗೆ ಸೇರಿಕೊಂಡರು. ತಿರುಪತಿಯಲ್ಲಿನ ವೆಂಕಟೇಶ್ವರ ಇಂಜಿನಿಯರಿಂಗ್​ ಕಾಲೇಜಿನಲ್ಲಿ ತಮ್ಮ ಮೆಕ್ಯಾನಿಕಲ್​ ಇಂಜಿನಿಯರಿಂಗ್​ ಅನ್ನು ಕಂಪ್ಲೀಟ್ ಮಾಡಿದರು. ಆಗಿನ ಕಾಲದಲ್ಲೇ ಇಂಜಿನಿಯರಿಂಗ್ ಮುಗಿಸಿದರು. ಇವರಿಗೆ ಉದ್ಯೋಗ ಸಿಗಲಿಲ್ಲ. ಕಾರಣ ಇವರು ಬೆಲೆಟೇರಿಯಲ್​ ಪ್ರದೇಶದಲ್ಲಿ ಇದ್ದಿದ್ದರಿಂದ ಇವರಿಗೆ ಆಗಿನ ಸರ್ಕಾರಗಳು ಕೆಲಸ ಕೊಡಲಿಲ್ಲ.

ಸಂದರ್ಶನದಲ್ಲಿ ಕನ್ಹಯ್ಯ ನಾಯ್ಡು ಅವರು ಆಯ್ಕೆ

ದಿವಾನ್ ಸಿ. ರಂಗಚಾರಿ ಅವರು ತಿರುವಂಗಳರ್ ಜೊತೆ ಕೆಲಸ ಮಾಡಿದ್ದಾರೆ. ಈಗಿರುವ ವಿಶ್ವೇಶ್ವರಯ್ಯ ಮ್ಯೂಸಿಯಂನಲ್ಲಿ ಸಿ. ರಂಗಚಾರಿ ಹೆಸರು ಕೂಡ ಇದೆ. ಇವರ ಬಳಿ 5 ವರ್ಷ ತರಬೇತಿ ಪಡೆದಿದ್ದರು. ಈ ತರಬೇತಿ ಪಡೆಯುವ ವೇಳೆಯೇ ನೀವು ರೈತರಿಗೆ ಸಹಾಯ ಮಾಡಬೇಕೆಂದರೆ ತುಂಗಭದ್ರಾ ಸ್ಟೇಟ್ ಫಾರೆಸ್ಟ್​ನಲ್ಲಿ ಕೆಲಸ ಪಡೆಯಬೇಕು. ರಾಷ್ಟ್ರಾದ್ಯಾಂತ ನೀವು ಕೆಲಸ ಮಾಡಬಹುದು ಎಂದು ಸಿ. ರಂಗಚಾರಿ ಹೇಳಿದ್ದರು. ಅದರಂತೆ ಡ್ಯಾಂ ತಜ್ಞ ಕನ್ನಯ್ಯ ನಾಯ್ಡುಗೆ ತುಂಗಭದ್ರಾ ಸ್ಟೇಟ್ ಫಾರೆಸ್ಟ್​ನಿಂದ ಇಂಟರ್​​ವ್ಯೂವ್​ಗೆ ಕರೆ ಬಂತು. ಆ ಸಂದರ್ಶನದಲ್ಲಿ ಕನ್ನಯ್ಯ ನಾಯ್ಡು ಅವರು ಆಯ್ಕೆಯಾದರು.

ಇದನ್ನೂ ಓದಿ: ಭಗೀರಥ ಪ್ರಯತ್ನಕ್ಕೆ ಯಶಸ್ಸು.. ತುಂಗಭದ್ರಾ ಡ್ಯಾಂಗೆ ಮೊದಲ ಸ್ಟಾಪ್ ಲಾಗ್‌ ಫಿಕ್ಸ್‌! ಎಷ್ಟು TMC ನೀರು ಸೇಫ್‌?

ಮುಂದೆ 1976 ಜನವರಿ 16ರಂದು ತುಂಗಭದ್ರಾ ಪ್ರಾಜೆಕ್ಟ್​ಗೆ ಕೆಲಸ ಮಾಡಲು ಬಂದರು. ಅಂದಿನಿಂದ ಇಂಜಿನಿಯರಿಂಗ್ ಕೆಲಸ ಮಾಡಿ 2002 ಮಾರ್ಚ್​ವರೆಗೆ ವಿಆರ್​ಎಸ್​ (ಸ್ವಯಂ ನಿವೃತ್ತಿ) ತೆಗೆದುಕೊಂಡರು. 2005ರಲ್ಲಿ ಹೊಸಪೇಟೆಯಲ್ಲಿ ಇದ್ದರು. ಡ್ಯಾಂಗೆ ಬೇಕಾಗಿದ್ದ ಕ್ರಸ್ಟ್​ ಗೇಟ್​, ಪವರ್​ ಜನರೇಷನ್ ಗೇಟ್​, ರೈತರಿಗೆ ಬೇಕಾಗಿದ್ದ ರೆಗುಲೇಟರ್ಸ್​ ಎಲ್ಲವನ್ನು ಕನ್ನಯ್ಯ ಅವರೇ ಮಾಡಿದರು. ಡ್ಯಾಂ ತಜ್ಞ ಕನ್ನಯ್ಯ ಅವರು ಆಂಧ್ರಪ್ರದೇಶದಲ್ಲಿ ಹುಟ್ಟಿದರೂ ತಮಿಳುನಾಡಿನಲ್ಲಿ ಕೆಲ ವರ್ಷ ಕಾರ್ಯನಿರ್ವಹಿಸಿದರು. ಆದರೆ ಅವರ ಜೀವನದ ಅತಿ ಹೆಚ್ಚು ಕಾಲ ಕರ್ನಾಟಕದಲ್ಲಿ ಕೆಲಸ ಮಾಡಿದ್ದು ಅವರಿಗೆ ಈಗಲೂ ಹೆಮ್ಮೆ ಇದೆ ಎಂದು ಹೇಳಿಕೊಳ್ಳುತ್ತಾರೆ.

ಇದನ್ನೂ ಓದಿ: ನಿಲ್ಲೆ, ನಿಲ್ಲೆ ತುಂಗಭದ್ರೆ.. ಪೋಲಾಗ್ತಿರುವ ಜೀವಜಲ ತಡೆಯಲು ಹರಸಾಹಸ; ತಾತ್ಕಾಲಿಕ ಗೇಟ್‌ ಅಳವಡಿಕೆ ಏನಾಯ್ತು? 

ಸುಳ್ಳು ಅನ್ನೋದು ಜೀವನದಲ್ಲಿ ಇಲ್ಲ

ನಾನು ತುಂಬಾ ಪ್ರಾಮಾಣಿಕ. ಸುಳ್ಳು ಅನ್ನೋದು ಜೀವನದಲ್ಲಿ ಇಲ್ಲ. ಟಿಎಸ್​​ಪಿ ಬಂದ್ ಮಾಡಿದ ಮೇಲೆ ಒಂದೇ ದಿನ ವಿಶ್ರಾಂತಿ ತೆಗೆದುಕೊಂಡು ಮರುದಿನ ಕೆಲಸ ಆರಂಭಿಸಿದೆ. ಅಂದಿನಿಂದ 2002ರವರೆಗೆ ಕೆಲಸ ಮಾಡಿದೆ. 2002ರಿಂದ ಇವತ್ತಿನವರೆಗೆ 170 ಡ್ಯಾಂಗಳ ದುರಸ್ತಿ ಮಾಡಿಸಿದ್ದೇನೆ. 500 ಡ್ಯಾಂಗಳಿಗೆ ಟೆಕ್ನಿಕಲ್ ಆಗಿ ಕೆಲಸ ಮಾಡಿದ್ದೇನೆ. ಭಾರತದ ಅತ್ಯಂತ ದೊಡ್ಡ ದೊಡ್ಡ ಪ್ರಾಜೆಕ್ಟ್​​ಗಳಲ್ಲಿ ಕೆಲಸ ನಾನೇ ಮಾಡಿದ್ದೇನೆ. ನಾನು ಯಾವ ಕಾಂಗ್ರೆಸ್, ಬಿಜೆಪಿಗೆ ಸೇರಿದವನಲ್ಲ. ನಮ್ಮ ಬಂಧವರೆಲ್ಲ ರೈತರು. ತಪ್ಪು ಆಗಿದ್ದರೇ ಅಲ್ಲೇ ಹೇಳಿ ಕೆಲಸ ಮಾಡಿಸುತ್ತೇನೆ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಭಗವಂತ ನಮಗೆ ಸಹಾಯ ಮಾಡುತ್ತಾನೆ ಎಂದು ಕನ್ನಯ್ಯ ನಾಯ್ಡು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಭಗವಂತನ ಮೇಲೆ ಭಾರ ಹಾಕಿ ಕೆಲಸ ಶುರು ಮಾಡ್ತೇವೆ’.. ಅಪಾಯದಲ್ಲಿರೋ ತುಂಗಭದ್ರಾ ಡ್ಯಾಂ ರಿಪೇರಿಗೆ ಮುಂದಾದ ತಜ್ಞ

ಇದನ್ನೂ ಓದಿ: ದರ್ಶನ್​ ಗ್ಯಾಂಗ್​ ಪ್ರಕರಣದ ಮತ್ತೊಂದು ಮಹತ್ವದ ವರದಿ ಬಯಲು.. ಕಾರಿನಲ್ಲಿ ನಡೆದಿದ್ದು ಏನು?

ಕೇಂದ್ರ ಸರ್ಕಾರ ಉತ್ತರ ಭಾರತಕ್ಕೆ ಕೊಟ್ಟ ಪ್ರಾಮುಖ್ಯತೆ ನಮ್ಮ ದಕ್ಷಿಣ ಭಾರತಕ್ಕೆ ಕೊಟ್ಟಿಲ್ಲ. ಹೀಗಾಗಿಯೇ ಇದನ್ನು ಮನಸಲ್ಲಿ ಇಟ್ಟುಕೊಂಡು ಎಲ್ಲ ದಕ್ಷಿಣದ ರಾಜ್ಯಗಳಲ್ಲಿನ ಡ್ಯಾಂಗಳನ್ನು ಅಭಿವೃದ್ಧಿ ಮಾಡಲಾಯಿತು. ನಾನು ಯಾವುದೇ ಕೆಲಸ ಆರಂಭ ಮಾಡುವುದಕ್ಕೂ ಮೊದಲು ಬಾಲಾಜಿಯ ಫೋಟೋ ಇಟ್ಟು ಒಂದು ತೆಂಗಿನ ಕಾಯಿ ಒಡೆದು ಕೆಲಸ ಪ್ರಾರಂಭ ಮಾಡುತ್ತೇನೆ. ಇತ್ತೀಚೆಗೆ ಮಾಡಿದ ಡ್ಯಾಂ ಎಂದರೆ ತೇರಿ ಡ್ಯಾಂ. ಇದು 130 ಮೀಟರ್ ಉದ್ದ ಇದೆ. ಇದೇ ನನ್ನ ಜೀವನದ ಅತ್ಯಂತ ದೊಡ್ಡ ಜಲಾಶಯವಾಗಿದೆ. ಕೊಯ್ನಾ ಡ್ಯಾಂನಲ್ಲೂ ಇದೇ ರೀತಿ ದುರಸ್ತಿ ಕಾರ್ಯ ಮಾಡಿದ್ದೇನೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತುಂಗಭದ್ರಾ ಜಲಾಶಯ ಕಾಪಾಡಿದ ಕನ್ನಯ್ಯ ನಾಯ್ಡು ಯಾರು? ಡ್ಯಾಂ ತಜ್ಞನ ಹಿನ್ನೆಲೆ ಏನು? ಸಾಧನೆಗಳೇನು?

https://newsfirstlive.com/wp-content/uploads/2024/08/KANNHAIAH.jpg

Load More