Advertisment

ಸಿಎಂಗೆ ರಿಸ್ಕ್ ತೆಗೆದುಕೊಳ್ಳುತ್ತಿದ್ದೇವೆ ಎಂದ ಕನ್ಹಯ್ಯ.. ಸಿದ್ದರಾಮಯ್ಯರವರಿಂದ ಬಂದ ತುರ್ತು ಕರೆ ಬಗ್ಗೆ ಹೇಗಿತ್ತು ಅಂದ್ರೆ..

author-image
Veena Gangani
Updated On
ಸಿಎಂಗೆ ರಿಸ್ಕ್ ತೆಗೆದುಕೊಳ್ಳುತ್ತಿದ್ದೇವೆ ಎಂದ ಕನ್ಹಯ್ಯ.. ಸಿದ್ದರಾಮಯ್ಯರವರಿಂದ ಬಂದ ತುರ್ತು ಕರೆ ಬಗ್ಗೆ ಹೇಗಿತ್ತು ಅಂದ್ರೆ..
Advertisment
  • ಮತ್ತೊಂದು ದಾಖಲೆ ಬರೆಯಲು ಮುಂದಾದ ಡ್ಯಾಂ ತಜ್ಞ ಕನ್ಹಯ್ಯ
  • ಸಂಜೆ ವೇಳೆಗೆ 5 ಎಲಿಮೆಂಟ್‌ನ ತಾತ್ಕಾಲಿಕ ಗೇಟ್ ಫಿಕ್ಸ್​ಗೆ ಪ್ಲಾನ್
  • ಕನ್ಹಯ್ಯ ನೀಡಿದ 3 ದಿನದ ಪ್ಲಾನ್ ಅನ್ವಯ ಇಂದು ಅಂತಿನ ದಿನ‌

ಕೊನೆಗೂ ತುಂಗಭದ್ರಾ ತೀರದಿಂದ ಗುಡ್​ನ್ಯೂಸ್​ನ ಹೊರಹರಿವು ಸಿಕ್ಕಿದೆ. ರಭಸದಿಂದ ಹರಿವ ನೀರಿನಲ್ಲೇ ಗೇಟ್ ಎಲಿಮೆಂಟ್ ಕೂರಿಸಲು ತಜ್ಞರು ನಡೆಸಿದ ಪ್ರಯತ್ನಕ್ಕೆ ಕೊನೆಗೂ ಫಲ ನೀಡಿದೆ. 6 ದಿನಗಳ ಟೆನ್ಶನ್​ಗೆ ಕೊಂಚ ವಿರಾಮ ಸಿಕ್ಕಂತಾಗಿದೆ. ಆಂಧ್ರ, ತೆಲಂಗಾಣ, ಕರ್ನಾಟಕ ಮೂರು ರಾಜ್ಯದ ಪಾರ್ಥನೆಗೆ ಕೊನೆಗೂ ಮೊದಲ ಫಲ ಸಿಕ್ಕಿದೆ.

Advertisment

publive-image

ನಿನ್ನೆ ಸಂಜೆ ವೇಳೆ ಸಚಿವ ಶಿವರಾಜ್ ತಂಗಡಗಿ ನೇತೃತ್ವದಲ್ಲಿ ಪೂಜೆ ಮಾಡಿ ಆರಂಭವಾದ ಗೇಟ್ ನಿರ್ಮಾಣ ಕಾರ್ಯ, ಸತತ ಪರಿಶ್ರಮ, ನಿರಂತರ ಕಾರ್ಯಾಚರಣೆಯ ಬಳಿಕ ಯಶಸ್ವಿಯಾಗಿದೆ. ಟಿಬಿ ಡ್ಯಾಂ 19ನೇ ಗೇಟ್‌ಗೆ ಮೊದಲ ಸ್ಟಾಪ್ ಲಾಗ್‌ ಎಲಿಮೆಂಟ್‌ ಅಳವಡಿಸುವ ಕಾರ್ಯ ಭರ್ಜರಿ ಸಕ್ಸಸ್ ಕಂಡಿದೆ.

ಇದನ್ನೂ ಓದಿ:BSNL: 229 ರೂಪಾಯಿ ರೀಚಾರ್ಜ್​ ಪ್ಲಾನ್​ಗೆ ಭಾರೀ ಡಿಮ್ಯಾಂಡ್​​! ದಿನಕ್ಕೆ 2GB ಮಾತ್ರವಲ್ಲ, ಹಲವಿವೆ ಬೆನಿಫಿಟ್ಸ್​​

ಇನ್ನು ಇದೇ ವಿಚಾರವಾಗಿ ಹೊಸಪೇಟೆ ನಗರದ ಟಿಬಿ ಡ್ಯಾಂ ಮಂಡಳಿ ಐಬಿಯಲ್ಲಿ ಡ್ಯಾಂ ತಜ್ಞ ಕನ್ಹಯ್ಯ ನಾಯ್ಡು ತುರ್ತು ಸುದ್ದಿಗೋಷ್ಠಿ ನಡೆಸಿದ್ದಾರೆ. ಇದೇ ವಿಚಾರವಾಗಿ ಮಾತಾಡಿದ ಡ್ಯಾಂ ತಜ್ಞ ಕನ್ಹಯ್ಯ ನಾಯ್ಡು ಅವರು, ನನಗೆ ಕಣ್ಣು ಆಪರೇಶನ್ ಆಗಿ ಮಲಗಿದ್ದೆ. ಡ್ಯಾಂ ಗೇಟ್ ಒಡೆದ ದಿನ ರಾತ್ರಿ ನಾನು ಮನೆಯಲ್ಲಿ ಮಲಗಿದ್ದೆ. ಟಿಬಿ ಡ್ಯಾಂ ಕ್ರಸ್ಟ್ ಗೇಟ್ ಒಡೆದು ನೀರು ಹೋಗ್ತಾಯಿದೆ ಅಂತಾ ನ್ಯೂಸ್​ನಲ್ಲಿ ಬರೋದು ನೋಡಿ ನನ್ನ ಹೆಂಡ್ತಿ ನನ್ನ ಎಬ್ಬಿಸಿದ್ದರು. ಬೆಳಗಿನ ಡ್ಯಾಂ ಗೇಟ್  ಒಡೆದಿರೋ ಬಗ್ಗೆ ಕರೆ ಬಂತು. ಮೂರು ರಾಜ್ಯದ ಆಸರೆ ಆಗಿರೋ ತುಂಗಭದ್ರಾ ಜಲಾಶಯ. CWCನಲ್ಲಿ ಕ್ಲಿಯರ್ಸ್​ ತೆಗೆದುಕೊಂಡು ಕೆಲಸ ಆರಂಭ ಮಾಡಿದೆ. ಡ್ಯಾಂ ನ ಗೇಟ್‌ಗಳಿಗೆ 45 ವರ್ಷ ಬಾಳಿಕೆ ಇರುತ್ತೆ. ಇದನ್ನು ಸರಿಯಾಗಿ ನಿರ್ವಹಣೆ ಮಾಡಲಾಗಿತು. ಹೀಗಾಗಿ 70 ವರ್ಷ ಬಾಳಿಕೆ ಬಂತು ಅಂತ ಹೇಳಿದ್ದಾರೆ.

Advertisment

publive-image

ಸಿದ್ದರಾಮಯ್ಯ ತುರ್ತು ಕರೆ ಮಾಡಿದ್ರು. ಎಲ್ಲೆ ಹೋದ್ರೂ ನಿನ್ನ ಹೆಸರು ಇದೆ. ನೀನೆ ಕೆಲಸ ಮಾಡಿ ಗೇಟ್ ಡಿಸೈನ್ ಮಾಡು ಎಂದು ಸಿಎಂ ಸೂಚನೆ ನೀಡಿದರು. ಗೇಟ್ ಅಳವಡಿಕೆಯ ಸಾಧನ ಇರೋದು ಜಿಂದಾಲ್‌ನಲ್ಲಿ. ಅದ್ಕೆ ಅವರ ಸಹಾಯ ಪಡೆದವು. ಮೊದಲು 60 ಅಡಿ ಅಗಲದ ಸ್ಟಾಪಲಾಗ್ ಇಳಿಸಲು ಪ್ರಯತ್ನ ಮಾಡಿದೆವು. ಬಳಿಕ ಅದು ಸಾಧ್ಯ ಆಗಲಿಲ್ಲ. ಡ್ರಾಪ್ ಮಾಡಲು ಎತ್ತರ ಜಾಸ್ತಿ ಇದೆ. ಸಿಎಂ ಸಿದ್ದರಾಮಯ್ಯ ಅವರಿಗೆ ರಿಸ್ಕ್ ತೆಗೆದುಕೊಳ್ತಿದ್ದೇವೆ ಅಂತಾ ಹೇಳಿದೆ. ಎಲ್ಲರೂ ಸಹಕಾರ ನೀಡಿದ್ದಾರೆ. ನಿನ್ನೆ ಸಂಜೆ 7 ಗಂಟೆಗೆ ಸ್ಟಾಪಲಾಗ್ ಇಳಿಸಲಾಗಿದೆ. ನಿನ್ನೆ ಕೆಲಸ ಸಕ್ಸಸ್ ಆಗಿದೆ. ಇಂದು ಮಧ್ಯಾಹ್ನ ಒಳಗೆ 13 ಅಡಿ ಗೇಟ್ ಕ್ಲೋಸ್ ಮಾಡಲಾಗುವುದು. ಸೋಮವಾರ ಒಳಗೆ ಎಲ್ಲವೂ ಸರಿಯಾಗುತ್ತೆ ಎಂದರು.

105 TMC ನೀರು ಉಳಿಸಲು ಸಹಾಯಕವಾಗಿದೆ. ನಾನು ಯಾವುದೇ ಪಕ್ಷದ ಪರವಲ್ಲ. ಆಂಧ್ರ, ತೆಲಂಗಾಣ ಸಚಿವರು ಕೂಡ ಬಂದರು. ಇಂದು ಮೂರು ಸ್ಟಾಪಲಾಗ್ ಇಳಿಸಿ ನಾನು ಹೈದರಾಬಾದ್ ತೆರಳುವೆ. 90 TMC ನೀರು ಉಳಿಯಲು ಸಹಾಯವಾಗುತ್ತೆ. ಬಳಿಕ ಸೋಮವಾರ ಉಳಿದ 2 ಸ್ಟಾಪ್‌ಲಾಗ್ ಅಳವಡಿಕೆ ಮಾಡಲಾಗುವುದು. 5 ಸ್ಟಾಪ್‌ಲಾಗ್ ಅಳವಡಿಕೆ ಆದ್ರೆ 105 TMC ನೀರು ಪೂರ್ಣ ಡ್ಯಾಂ ಭರ್ತಿಯಾಗಲಿದೆ. ಐದು ಸ್ಟಾಪ್ ಲಾಗ್ ಪೈಕಿ ಇಂದು 3 ಸ್ಟಾಪ್‌ಲಾಗ್ ಅಳವಡಿಕೆ ಮಾಡಲಾಗುವುದು. 90 TMC ನೀರು ಉಳಿಸಿ ರೈತರಿಗೆ ನೀರು ನೀಡಲಾಗುವುದು. ಈಗ ನನ್ನ ಶಕ್ತಿ ಕಡಿಮೆ‌ ಆಯ್ತು. ಜನರಿಗೆ ಒಳ್ಳೆದಾಗಬೇಕು ಅಂತ ಡ್ಯಾಂ ತಜ್ಞ ಕನ್ಹಯ್ಯ ನಾಯ್ಡು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment