newsfirstkannada.com

ಇಡೀ ಕರ್ನಾಟಕವೇ ಹೆಮ್ಮೆ ಪಡೋ ಸುದ್ದಿ! ಹಿಂದಿ ಶೋ ‘ಡ್ಯಾನ್ಸ್​​ ದಿವಾನಿ’ ಗೆದ್ದ ಕನ್ನಡಿಗ ನಿತಿನ್​​

Share :

Published May 29, 2024 at 6:08am

  ಹಾಡು, ನೃತ್ಯ, ನಟನೆ ಎಲ್ಲಾ ವಿಭಾಗದಲ್ಲೂ ಕನ್ನಡಿಗರದ್ದೇ ಹವಾ

  ಪರ ಭಾಷೆಯಲ್ಲಿ ಮಿಂಚುತ್ತಿದ್ದಾರೆ ನಮ್ಮ ಕನ್ನಡ ಮಣ್ಣಿನ ಪ್ರತಿಭೆಗಳು

  ಕರ್ನಾಟಕಕ್ಕೆ ಮತ್ತೊಂದು ಗರಿ ತಂದುಕೊಟ್ಟ ಡಿಕೆಡಿ ವಿನ್ನರ್ ​ನಿತಿನ್​

ನಮ್ಮ ಕನ್ನಡ ಮಣ್ಣಿನ ಪ್ರತಿಭೆಗಳು ಪರ ಭಾಷೆಯಲ್ಲಿ ಮಿಂಚುತ್ತಿದ್ದಾರೆ. ಹಾಡು, ನೃತ್ಯ, ಅಭಿನಯ ಪ್ರತಿಯೊಂದು ವಿಭಾಗದಲ್ಲೂ ​ದಕ್ಷಿಣ ಭಾರತದಲ್ಲಿ ಅಷ್ಟೇ ಅಲ್ಲದೇ, ಬಾಲಿವುಡ್​ ಅಂಗಳದಲ್ಲೂ ಕನ್ನಡಿಗರ ಕಲರವ ಜೋರಾಗಿದೆ. ಕನ್ನಡಿಗರು ಗರ್ವ ಪಡುವಂತಹ ಮತ್ತೊಂದು ಗರಿ ನಮ್ಮ ಮಣ್ಣಿನ ಪ್ರತಿಭೆಗೆ ಸಂದಿದೆ.

ಇದನ್ನೂ ಓದಿ: ಬೆಂಗಳೂರು ಫ್ಯಾನ್ಸ್​ಗೆ ಗುಡ್​ನ್ಯೂಸ್​​.. ದಿನೇಶ್​ ಕಾರ್ತಿಕ್​ಗೆ ಆರ್​​ಸಿಬಿ ತಂಡದಲ್ಲಿ ಹೊಸ ಜವಾಬ್ದಾರಿ!

ಸರಿಗಮಪ ಸೀಸನ್​ 19ರ ಪೋರಿ ದಿಯಾ ಹೆಗ್ಡೆ ಜನಪ್ರಿಯ ಹಿಂದಿಯ ‘ಸೂಪರ್ ಸ್ಟಾರ್ ಸಿಂಗರ್ 3’ ರಿಯಾಲಿಟಿ ಶೋನಲ್ಲಿಯೂ ಕಂಟೆಸ್ಟೆಂಟ್​ ಆಗಿ ಮಿಂಚುತ್ತಿದ್ದಾರೆ. ಇತ್ತ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮೂಲಕ ಕನ್ನಡಿಗರನ್ನ ಕುಣಿಸಿದ್ದ ಪ್ರತಿಭೆ ನಿತಿನ್ ಹಿಂದಿ ಶೋನಲ್ಲಿ ಕಮಾಲ್​ ಮಾಡಿದ್ದಾರೆ. ನಿತಿನ್​ ಡ್ಯಾನ್ಸ್ ದಿವಾನಿ ಶೋನಲ್ಲಿ ಭಾಗವಹಿಸಿದ್ದರು. ಸದ್ಯ ಟ್ರೋಫಿ ಗೆದ್ದು ಕರ್ನಾಟಕದ ಜನತೆ ಹೆಮ್ಮೆ ಪಡುವಂತೆ ಮಾಡಿದ್ದಾರೆ. ವೀಕೆಂಡ್​ನಲ್ಲಿ ಜಬರ್ದಸ್ತ್​ ಮನರಂಜನೆ ನೀಡುತ್ತಿದ್ದ ಡಿಕೆಡಿ ಸೀಸನ್​ 7ರ ವಿನ್ನರ್​ ಆಗಿ ಛಾಪು ಮೂಡಿಸಿದ್ರು ನಿತಿನ್.​

View this post on Instagram

A post shared by Nithin N.J🌠 (@nithin.nj__)

ಸದ್ಯ ಡ್ಯಾನ್ಸ್​ ದಿವಾನಿಯಲ್ಲಿಯೂ ಕೂಡ ಟ್ರೋಫಿಯನ್ನು ಬಾಚಿಕೊಂಡಿದ್ದಾರೆ. ಡ್ಯಾನ್ಸ್​ ಪಾರ್ಟನರ್​ ಗೌರವ್ ಜೊತೆಗೆ ಹಗಲು ರಾತ್ರಿ ಹಾರ್ಡ್​ ವರ್ಕ್​ ಮಾಡಿ ಕನಸನ್ನ ನನಸು ಮಾಡಿಕೊಂಡಿದ್ದಾರೆ. ಜಡ್ಜ್​ ಸೀಟ್​ನಲ್ಲಿದ್ದ ಮಾಧುರಿ ದೀಕ್ಷಿತ್​, ಬಾಲಿವುಡ್​ ಖ್ಯಾತ ನಟ ಸುನಿಲ್​ ಶೆಟ್ಟಿ ಮುಂದೆ ಜಬರ್ದಸ್ತ್​ ಪರ್ಫಾಮನ್ಸ್​ ನೀಡಿ ಗೆದ್ದು ಬೀಗಿದ್ದಾರೆ. ಡ್ಯಾನ್ಸ್​ ದಿವಾನಿ ಟ್ರೋಫಿ ಜೊತೆಗೆ 20 ಲಕ್ಷ ಕ್ಯಾಶ್​ ಪ್ರೈಸ್​ಗೆ ಭಾಜನರಾಗಿದ್ದಾರೆ ಗೌರವ್​-ನಿತಿನ್​ ಜೋಡಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಡೀ ಕರ್ನಾಟಕವೇ ಹೆಮ್ಮೆ ಪಡೋ ಸುದ್ದಿ! ಹಿಂದಿ ಶೋ ‘ಡ್ಯಾನ್ಸ್​​ ದಿವಾನಿ’ ಗೆದ್ದ ಕನ್ನಡಿಗ ನಿತಿನ್​​

https://newsfirstlive.com/wp-content/uploads/2024/05/Nitin1.jpg

Load More