39 ವರ್ಷದ ಅಮ್ಮನ ಆಸೆ ಈಡೇರಿಸಿದ ನಟ ಪ್ರಭುದೇವ! ಹುಟ್ಟೂರಲ್ಲಿ ಮಾಡಿದ್ದೇನು? ಏನಿದರ ವಿಶೇಷ?

author-image
admin
Updated On
39 ವರ್ಷದ ಅಮ್ಮನ ಆಸೆ ಈಡೇರಿಸಿದ ನಟ ಪ್ರಭುದೇವ! ಹುಟ್ಟೂರಲ್ಲಿ ಮಾಡಿದ್ದೇನು? ಏನಿದರ ವಿಶೇಷ?
Advertisment
  • 39 ವರ್ಷಗಳ ಹಿಂದಿನ ಅಮ್ಮನ ಹರಕೆ ತೀರಿಸಿದ ನಟ ಪ್ರಭುದೇವ
  • ನಂಜನಗೂಡು ತಾ. ಕೆಂಬಾಲು ಗ್ರಾಮದಲ್ಲಿ 2 ದಿನ ವಿಶೇಷ ಪೂಜೆ
  • ಇಡೀ ಊರಿಗೆ ಊಟ ಹಾಕಿಸಿ ಮಾದಪ್ಪನ ಕೃಪೆ ಪಾತ್ರರಾದ ಕುಟುಂಬ

ಅಮ್ಮ ಅಂದ್ರೆ ಪ್ರತಿಯೊಂದು ಮಗುವಿಗೆ ಅವಳೇ ಪ್ರಪಂಚ. ಸಾಮಾನ್ಯರೇ ಆಗ್ಲಿ, ಅದೆಷ್ಟೇ ದೊಡ್ಡ ಸೆಲೆಬ್ರಿಟಿನೇ ಆಗ್ಲಿ. ಊರಿಗೆ ದೊರೆ ಆದ್ರೂ ಅವನು ತನ್ನ ತಾಯಿಗೆ ಯಾವತ್ತಿದ್ರೂ ಮಗನೇ.

ನಮ್ಮ ದೇಶ ಕಂಡ ಅಮೋಘ ಡ್ಯಾನ್ಸರ್, ಕರುನಾಡಲ್ಲಿ ಹುಟ್ಟಿ ಇಂಡಿಯಾದಲ್ಲೇ ಹೆಸರು ಮಾಡಿರೋ ನಟ ಪ್ರಭುದೇವನಿಗೆ ಅಮ್ಮ ಅಂದ್ರೆ ಅದೆಷ್ಟು ಪ್ರಾಣ ಅನ್ನೋದಕ್ಕೆ ಈ ಸ್ಟೋರಿಯೇ ಸಾಕ್ಷಿ. ತಾಯಿಗಾಗಿ ಪ್ರಭುದೇವ ಒಂದು ದೇವಸ್ಥಾನವನ್ನೇ ಕಟ್ಟಿದ್ದಾರೆ. ಬರೋಬ್ಬರಿ 39 ವರ್ಷಗಳ ಹಿಂದಿನ ಅಮ್ಮನ ಹರಕೆ ತೀರಿಸಿದ್ದಾರೆ. ಆವತ್ತು ಪ್ರಭುದೇವ ತಾಯಿಗೆ ದೇಗುಲದ ಸಂಕಲ್ಪ ಕೊಟ್ಟಿದ್ದು ಯಾರು ಗೊತ್ತಾ? ಅಷ್ಟಕ್ಕೂ ಪ್ರಭುದೇವ ತಾಯಿಗಾಗಿ ಕಟ್ಟಿಸಿರೋ ಆ ದೇಗುಲದ ಕಥೆಯೇ ರೋಚಕವಾಗಿದೆ.

publive-image

ಅಮ್ಮನಿಗಾಗಿ ಮಾದಪ್ಪನ ದೇಗುಲ ಕಟ್ಟಿಸಿದ ನಟ ಪ್ರಭುದೇವ
ಪ್ರಭುದೇವ.. ಭಾರತದ ಮೈಕೆಲ್​ ಜಾಕ್​ಸನ್​ ಅಂತಾ ಕರೆಸಿಕೊಳ್ಳೋ ಡ್ಯಾನ್ಸರ್, ಡೈರೆಕ್ಟರ್​ ಹಾಗೂ ಌಕ್ಟರ್. ಪ್ರಭುದೇವ ಅಭೂತಪೂರ್ವ ಹೆಸರು ಮಾಡಿದ್ದು ತಮಿಳು, ಹಿಂದಿ ಚಿತ್ರರಂಗದಲ್ಲಾದ್ರೂ ನಟನೆಯ ಮೂಲ ಕರ್ನಾಟಕ. ಅದ್ರಲ್ಲೂ ಮೈಸೂರು-ಚಾಮರಾಜನಗರ ಜನರ ನೆಚ್ಚಿನ ಮನೆ ಮಗ. ಪ್ರಭುದೇವ ಪೋಷಕರು ಅದ್ರಲ್ಲೂ ಅವರ ತಾಯಿ ಮಹಾದೇವಮ್ಮ ಅಪ್ಪಟ ಕನ್ನಡತಿ. ಎಲ್ಲದಕ್ಕಿಂತ ಹೆಚ್ಚಾಗಿ ನಂಜನಗೂಡು ತಾಲೂಕಿನ ಕೆಂಬಾಲು ಗ್ರಾಮದವರು. ಈಗ ಇದೇ ಕೆಂಬಾಲು ಗ್ರಾಮದಲ್ಲೇ ಪ್ರಭು ತಾಯಿಯ ಕನಸಿನಂತೆ ದೇಗುಲ ಜೀರ್ಣೋದ್ಧಾರ ಮಾಡಿದ್ದಾರೆ.

ಅದೂ ಯಾರ ದೇಗುಲ ಗೊತ್ತಾ? ಮೈಸೂರು-ಚಾಮರಾಜನಗರ ಗಡಿಭಾಗದ ಜನರ ಆರಾಧ್ಯ ದೈವವಾಗಿರೋ ಮಲೈ ಮಹದೇಶ್ವರ ಸ್ವಾಮಿಯ ದೇಗುಲ. ದೇಗುಲ ಕಟ್ಟಿಸಿರೋದು ಮಾತ್ರವಲ್ಲ, ತಾವೇ ಖುದ್ದಾಗಿ ಬಂದು ದೇಗುಲ ಪೂಜಾ ಪುನಸ್ಕಾರಗಳಲ್ಲಿ ಭಾಗಿಯಾಗಿದ್ದಾರೆ.

publive-image

ಎರಡು ದಿನದ ಪೂಜೆ! ಊರಿಗೆಲ್ಲಾ ಊಟ ಹಾಕಿಸಿದ್ರು!
ಅಮ್ಮನ ಆಸೆ ಈಡೇರಿಸಿರೋ ನಟ ಪ್ರಭುದೇವ ಮೈಸೂರಿನ ಕೆಂಬಾಲು ಗ್ರಾಮಕ್ಕೆ ಪತ್ನಿ, ಪುತ್ರನ ಸಮೇತ ಬಂದಿದ್ರು. ದಂಪತಿ ಖುದ್ದಾಗಿ 2 ದಿನಗಳು ನಡೆದ ವಿಶೇಷ ಪೂಜೆಗಳಲ್ಲಿ ಭಾಗಿಯಾಗಿದ್ರು. ಪ್ರಭುದೇವ ಮತ್ತು ಪತ್ನಿ ಹಿಮಾನಿ ಕಳಶ ಪೂಜೆ, ಹೋಮ, ಹವನ ನವಗ್ರಹ ಪೂಜೆಗಳನ್ನ ನೇರವೇರಿಸಿದ್ರು.

ಇದನ್ನೂ ಓದಿ: ಬಿಗ್ ಬಾಸ್ ಖ್ಯಾತಿಯ ವಿನಯ್‌ಗೆ ರಿಲೀಫ್‌; ರಜತ್‌ ಕಿಶನ್ ಮತ್ತೊಮ್ಮೆ ಜೈಲು ಪಾಲು! 

ವಿಶೇಷ ಏನಂದ್ರೆ, ಇದೇ ಏಪ್ರಿಲ್ 14ರಂದು ಪ್ರಭುದೇವ ಪುತ್ರನ ಹುಟ್ಟುಹಬ್ಬ ಕೂಡ ಇತ್ತು. ಇದೇ ಕಾರಣಕ್ಕೆ ಮೂರು ಜನ ಒಟ್ಟಿಗೆ ಹೋಮ ಹವನದಲ್ಲಿ ಇಡೀ ಪೂಜೆ ಮುಗಿಯೋವರೆಗೂ ಗ್ರಾಮದಲ್ಲೇ ವಾಸ್ತವ್ಯ ಹೂಡಿದ್ರು. ಎಲ್ಲವನ್ನೂ ಅತ್ಯಂತ ಕಟ್ಟುನಿಟ್ಟಾಗಿ ನಡೆಯುವಂತೆ ನೋಡ್ಕೊಂಡಿದ್ರು. ಪೂಜೆ ಮುಗಿದ್ಮೆಲೆ ಇಡೀ ಊರಿಗೆ ಪ್ರಭುದೇವ ಊಟ ಹಾಕಿಸಿದ್ದಾರೆ. ತಾವೊಬ್ಬ ಇಂಟರ್​ನ್ಯಾಷನಲ್​ ನಟ ಅನ್ನೋದನ್ನ ಬದಿಗೊತ್ತಿ ತಮ್ಮ ಹಳ್ಳಿ ಜನರ ಜೊತೆಗೆ, ಮಕ್ಕಳ ಜೊತೆಗೆ ಮಗುವಾಗಿದ್ದಾರೆ.

publive-image

ಪ್ರಭು ತಾಯಿಗೆ ದೇಗುಲ ನಿರ್ಮಾಣ ಬಯಕೆ ಹುಟ್ಟಿದ್ದೇ ರೋಚಕ!
39 ವರ್ಷಗಳ ಹಿಂದೆ ಕಣ್ಣಿಗೆ ಬಿದ್ದ ಸರ್ಪ ಕೊಟ್ಟಿತ್ತಾ ಸೂಚನೆ?
ನಟ ಪ್ರಭುದೇವ ತಾಯಿ ಮೂಲತಃ ಮೈಸೂರಿನ ಕೆಂಬಾಲು ಗ್ರಾಮದವರು. ಇದೇ ಗ್ರಾಮದಲ್ಲಿ ಹುಟ್ಟಿ ಬೆಳೆದಿದ್ದ ಡ್ಯಾನ್ಸ್​ ಕಿಂಗ್ ತಾಯಿ ಮಹದೇವಮ್ಮ ಹುಟ್ಟೂರಲ್ಲಿ ಮಾದಪ್ಪನ ದೇವಸ್ಥಾನ ಕಟ್ಟಿಸಬೇಕು ಅನ್ನೋ ಆಸೆ ಇಟ್ಕೊಂಡಿದ್ರಂತೆ. ಅದಕ್ಕಾಗಿ ಜಾಗವನ್ನೂ ಖರೀದಿ ಮಾಡಿದ್ದರಂತೆ.

1986ರಲ್ಲಿ ಮಹದೇವಮ್ಮ ಈ ಕೆಂಬಾಲಕ್ಕೆ ಬಂದಾಗ ಆಗ ಇದ್ದ ಮಾದಪ್ಪನ ದೇಗುಲ ಕಂಡು ಮಮ್ಮಲ ಮರುಗಿಬಿಟ್ಟಿದ್ರು. ದೇಗುಲ ಅಕ್ಷರಶಃ ಶಿಥಿಲಗೊಂಡು ಕುಸಿತಗೊಂಡಿತ್ತು.

publive-image

ಪ್ರಭುದೇವ ಅವರ ತಾಯಿ ಮಹದೇವಮ್ಮ ಅಪ್ಪಟ ಶಿವಭಕ್ತೆ. ಅವರಿಗೆ ಶಿವಲಿಂಗಗಳು ಅಂದ್ರೆ ಎಲ್ಲಿಲ್ಲದ ಭಕ್ತಿ. ಹೀಗಾಗಿಯೇ, ತಮ್ಮದೇ ಊರಿನ ಮಾದಪ್ಪನ ದೇವಸ್ಥಾನ ಪಾಳು ಬಿದ್ದಿದ್ದು ಕಂಡು ಸಂಕಟ ಪಟ್ಟಿದ್ರು. ಹೇಗಾದ್ರೂ ಮಾಡಿ ಮಾದಪ್ಪನಿಗಾಗಿ ಒಂದು ಮಂದಿರ ಕಟ್ಟಿಸಬೇಕು ಅನ್ನೋ ಸಂಕಲ್ಪ ಮಾಡ್ಕೊಂಡಿದ್ರು. ಆ ಸಂದರ್ಭದಲ್ಲಿ ತಮ್ಮ ಕೈಲಿ ಎಷ್ಟಾಗುತ್ತೋ ಅಷ್ಟರ ಮಟ್ಟಿಗೆ ದೇವಸ್ಥಾನ ನಿರ್ಮಿಸಿದ್ರೂ, ಮಾದಪ್ಪನ ದೇಗುಲ ಪೂರ್ತಿಯಾಗಿರಲಿಲ್ಲ. ಆದ್ರೀಗ, 39 ವರ್ಷಗಳ ಬಳಿಕ ತಾಯಿ ಮಹಾದೇವಮ್ಮನವರ ಆಸೆಯನ್ನ ಮಗ ಪ್ರಭುದೇವ ಈಡೇರಿಸಿದ್ದಾರೆ. ಅಮ್ಮನಿಗಾಗಿ ಮಾದಪ್ಪನ ದೇಗುಲ ಕಟ್ಟಿಸಿ ಸರ್ವ ಪೂಜೆಗಳನ್ನ ನೇರವೇರಿಸಿ ತಾಯಿಯ ಬಯಕೆಯನ್ನ ಪೂರೈಸಿದ್ದಾರೆ.

publive-image

ಪ್ರಭು ತಾಯಿ ಮಹದೇವಮ್ಮ ದೇಗುಲ ಕಟ್ಟಿಸಿದ ಈ ಕಥೆಯಲ್ಲೂ ಮತ್ತೊಂದು ಇಂಟರೆಸ್ಟಿಂಗ್​ ಸ್ಟೋರಿ ಇದೆ. ಇವತ್ತು ಪ್ರಭುದೇವ ಜೀರ್ಣೋದ್ಧಾರ ಮಾಡಿರುವ ಈ ಮಾದಪ್ಪನ ದೇಗುಲ ಸಾಮಾನ್ಯವಾದ ಮಂದಿರ ಅಲ್ವೇ ಅಲ್ಲ. ಈ ದೇವಸ್ಥಾನ ನೂರಾರು ವರ್ಷಗಳ ಹಳೆಯದ್ದು, ಚೋಳರ ಕಾಲದ್ದು. ಆವತ್ತು 1986ರಲ್ಲಿ ಮಹಾದೇವಮ್ಮ ಈ ದೇಗುಲವಿದ್ದ ಜಾಗಕ್ಕೆ ಬಂದಾಗ ಅವರ ಕಣ್ಣಿಗೆ ಒಂದು ಸರ್ಪ ಬಿದ್ದಿದೆ. ಆ ಸರ್ಪವನ್ನ ನೋಡಿದ ಬಳಿಕ ಮಹಾದೇವಮ್ಮನವರಿಗೆ ದೇಗುಲ ಕಟ್ಟಿಸುವ ಬಯಕೆ ಹೆಬ್ಬಯಕೆಯಾಗಿದೆ.

publive-image

ಅವತ್ತು ಚಿಕ್ಕದಾಗಿ ನಿರ್ಮಿಸಿದ್ದ ದೇವಸ್ಥಾನವನ್ನ ಪ್ರಭುದೇವ ಅವರು ಇವತ್ತು ಪುನರ್ ನಿರ್ಮಾಣ ಮಾಡಿ ಅಮ್ಮನ ಆಸೆ ಪೂರೆಸಿದ್ದಾರೆ. ಈಗ ಮಗ ಮಾಡಿದ ಕೆಲಸ ಕಂಡು ತಾಯಿ ಮಹದೇವಮ್ಮ ಕೂಡ ಫುಲ್ ಖುಷ್ ಆಗಿದ್ದಾರೆ. ಅಂದುಕೊಂಡಂತೆ ಎಲ್ಲಾ ಕಾರ್ಯವನ್ನ ಮಗ ನೇರವೇರಿಸಿದ್ದಾನೆ ಅಂತ ಪ್ರಭುದೇವರನ್ನ ಹಾಡಿ ಹೊಗಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment