/newsfirstlive-kannada/media/post_attachments/wp-content/uploads/2025/06/eshitha1.jpg)
ಅಗ್ನಿಸಾಕ್ಷಿ ಮಾಯಾ ಪಾತ್ರದ ಮೂಲಕ ಜನಪ್ರಿಯತೆ ಪಡೆದ ನಟಿ ಇಶಿತಾ ವರ್ಷಾ ವೀಕ್ಷಕರಿಗೆ ಫೇವರೀಟ್. ಸದ್ಯ ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಾರಂಭದಲ್ಲಿ ನೆಗೆಟಿವ್ ಪಾತ್ರ ಆಗಿದ್ದ ಮಹಿಮಾ ಈಗ ಬದಲಾಗಿದ್ದಾಳೆ. ದಾರಿ ತಪ್ಪಿರೋ ಗಂಡ ಜೀವನ ಸರಿದಾರಿಗೆ ತರೋ ಪ್ರಯತ್ನದಲ್ಲಿದ್ದಾಳೆ ಮಹಿಮಾ.
ಇದನ್ನೂ ಓದಿ:ಕನ್ನಡ ಕೋಗಿಲೆ ಸಿಂಗರ್ ಅಖಿಲಾ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು.. ಡಿವೋರ್ಸ್ಗೆ ಅರ್ಜಿ
ಕೆಲವು ತಿಂಗಳುಗಳಿಂದ ನಟಿ ಇಶಿತಾ ವರ್ಷಾ ಅವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪತಿ ಮುರುಗ ಅವರ ಜೊತೆಗೆ ಇರೋ ಫೋಟೋಗಳನ್ನು ಪೋಸ್ಟ್ ಮಾಡ್ತಾ ಇರಲಿಲ್ಲ. ಅಲ್ಲದೇ ಕೇವಲ ತಮ್ಮ ಫೋಟೋಗಳನ್ನೇ ಪೋಸ್ಟ್ ಮಾಡುತ್ತಿದ್ದರು. ಹೀಗಾಗಿ ಇದನ್ನು ಗಮನಿಸಿದ ಅಭಿಮಾನಿಗಳು ನೀವು ಮುರುಗ ದೂರ ದೂರ ಆಗಿದ್ದೀರಾ? ನೀವು ಏಕೆ ಫೋಟೋಗಳನ್ನು ಹಾಕುತ್ತಿಲ್ಲ, ಏನಾದ್ರೂ ಸಮಸ್ಯೆ ಆಗಿದ್ಯಾ? ಯಾಕೆ ನೀವಿಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲಾ? ದೂರ ಆಗಿದ್ದೀರಾ? ಹೀಗೆ ಹತ್ತು ಹಲವು ಪ್ರಶ್ನೆಗಳು ಓಡಾಡ್ತಿದ್ದೀವು. ಯಾವ್ದೇ ಫೋಟೋ, ವಿಡಿಯೋ ಶೇರ್ ಮಾಡಿದ್ರು ಎಲ್ಲಿ ಮುರಗ? ಎಲ್ಲಿ ಇಶಿತಾ ಅಂತ ವೀಕ್ಷಕರು ಕೇಳುತ್ತಿದ್ದರು. ಹೀಗಾಗಿ ನಟಿ ವಿಡಿಯೋ ಮಾಡುವ ಮೂಲಕ ಅದಕ್ಕೆಲ್ಲಾ ಉತ್ತರ ಕೊಟ್ಟಿದ್ದರು.
ಇದನ್ನೂ ಓದಿ: ‘ಮುರುಗ ಮಾಸ್ಟರ್ರಿಂದ ದೂರ ಆದ್ರಾ’ ಎಂದವರಿಗೆ ಖಡಕ್ ಉತ್ತರ ಕೊಟ್ಟ ನಟಿ ಇಶಿತಾ
ನಟಿ ದಾಂಪತ್ಯದ ಬಗ್ಗೆ ಹೇಳಿದ್ದೇನು?
ಸಾಕಷ್ಟು ಜನ ಯಾಕೆ ಕಪಲ್ಸ್ ವಿಡಿಯೋ ಹಾಗೂ ಫೋಟೋಸ್ ಹಾಕುತ್ತೀಲ್ಲ ಅಂತ ಕೇಳಿದ್ರಿ. ಏಕೆಂದರೆ ನಮ್ಮ ವೈಯಕ್ತಿಕ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ತೋರಿಸೋ ಅಗತ್ಯ ಇಲ್ಲ. ನಮ್ಮ ಪ್ರೈವೆಸಿಯನ್ನು ನೀವು ಗೌರವಿಸ್ತೀರ ಅಂತ ಅನ್ಕೊಂಡಿದ್ದೀವಿ. ಅವರ ಡ್ಯಾನ್ಸ್, ಮುರಗನ ಕೆಲಸದ ಬಗ್ಗೆ ಅಪ್ಡೇಟ್ ಬೇಕು ಅಂದ್ರೇ ಅವರ ಸೋಷಿಯಲ್ ಮೀಡಿಯಾದಲ್ಲಿ ಫಾಲೋ ಮಾಡಿ ಅಂತ ಹೇಳಿದ್ದರು.
ಇಶಿತಾ ವರ್ಷಾ ಕೆಮಿಸ್ಟ್ರಿ ಬಗ್ಗೆ ಮುರುಗ ಮಾಸ್ಟರ್ ಹೇಳಿದ್ದೇನು?
ಈ ಹಿಂದೆ ನ್ಯೂಸ್ಫಸ್ಟ್ನೊಂದಿಗೆ ಮಾತಾಡಿದ ಮುರುಗ ಮಾಸ್ಟರ್, ರಾಜಾ ರಾಣಿ ಶೋ ಮಾಡಿದ ಮೇಲೆ ಮಸ್ತ್ ಪ್ಲಾಟ್ ಫಾರಂ ಸಿಕ್ಕಿದೆ. ನಾನು ಶೂಟಿಂಗ್ ಅಂತ ಬ್ಯುಸಿ ಇರುತ್ತಿದ್ದೆ. ಹೀಗಾಗಿ ಇಶಿತಾಗೆ ಅಷ್ಟಾಗಿ ಟೈಮ್ ಕೋಡೋಕೆ ಆಗ್ತಾ ಇರಲಿಲ್ಲ. ಇಬ್ಬರು ಅಷ್ಟಾಗಿ ಸೇರುತ್ತಾ ಇರಲಿಲ್ಲ. ಆದ್ರೆ ರಾಜಾರಾಣಿ ಶೋ ಮೂಲಕ ನಾವಿಬ್ಬರ ಕೆಮಿಸ್ಟ್ರಿ ತುಂಬಾ ಚೆನ್ನಾಗಿತ್ತು. ಇಬ್ಬರು ಜಾಸ್ತಿ ಟೈಮ್ ಕೊಡೋದಕ್ಕೆ ಆಯ್ತು ಎಂದಿದ್ದರು.
ಇನ್ನೂ, ಅಗ್ನಿಸಾಕ್ಷಿ ಮುಕ್ತಾಯದ ನಂತರ ಡ್ಯಾನ್ಸರ್ ಮುರಗ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ನಟಿ ಇಶಿತಾ. ಇಬ್ಬರೂ 8 ವರ್ಷ ಪ್ರೀತಿಸಿ ಅದ್ಧೂರಿಯಾಗಿ ಮದುವೆ ಆಗಿದ್ರು. ರಾಜಾರಾಣಿ ಶೋ ಮೂಲಕ ಈ ಜೋಡಿ ಸಖತ್ ಫೇಮಸ್ ಆಯ್ತು. ಮುರುಗನಿಗೆ ಮನೆ ಮನೆ ಮುರು ಅಂತ ತಮಾಷೆ ಮಾಡುತ್ತಾ ಎಲ್ಲರೂ ಕಾಲ್ ಎಳಿತಿದ್ರು. ಇನ್ನೂ ಶೋನಿಂದ ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುತ್ತಿತ್ತು ಈ ಜೋಡಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ