1ನೇ ತರಗತಿ ಮಗುವಿನ ಮೇಲೆ ಡ್ಯಾನ್ಸ್​ ಮಾಸ್ಟರ್ ಲೈಂಗಿಕ ದೌರ್ಜನ್ಯ.. ಕೀಚಕನಿಗೆ ಹಿಗ್ಗಾಮುಗ್ಗಾ ಥಳಿತ

author-image
Bheemappa
Updated On
1ನೇ ತರಗತಿ ಮಗುವಿನ ಮೇಲೆ ಡ್ಯಾನ್ಸ್​ ಮಾಸ್ಟರ್ ಲೈಂಗಿಕ ದೌರ್ಜನ್ಯ.. ಕೀಚಕನಿಗೆ ಹಿಗ್ಗಾಮುಗ್ಗಾ ಥಳಿತ
Advertisment
  • ಡ್ಯಾನ್ಸ್​ ಹೇಳಿ ಕೊಡುವ ನೆಪದಲ್ಲಿ ಮಗುವನ್ನ ಮುಟ್ಟುತ್ತಿದ್ನಾ?
  • ವಿಷಯ ತಿಳಿಯುತ್ತಿದ್ದಂತೆ ಶಾಲೆಗೆ ದೌಡಾಯಿಸಿದ ಪೋಷಕರು
  • 1ನೇ ಕ್ಲಾಸ್ ಓದುವ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ

ಹೈದರಾಬಾದ್: ಒಂದನೇ ತರಗತಿ ಓದುತ್ತಿರುವ ಮಗುವಿನ ಮೇಲೆ ಡ್ಯಾನ್ಸ್​ ಮಾಸ್ಟರ್​ ಲೌಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ತೆಲಂಗಾಣದ ಮೇಡ್ಚಲ್ ಮಲ್ಕಾಜ್‌ಗಿರಿ ಜಿಲ್ಲೆಯ ಮೆಡಿಪಲ್ಲಿಯ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ:ನಂಬಿದ್ರೆ ನಂಬಿ ಬಿಟ್ಟರೇ ಬಿಡಿ..! ಒಂದು ಜೊತೆ ಮಾಮೂಲಿ ಚಪ್ಪಲಿ ಬೆಲೆ 1 ಲಕ್ಷ ರೂಪಾಯಿ

ಮೆಡಿಪಲ್ಲಿಯ ಖಾಸಗಿ ಶಾಲೆಗೆ ಬರುತ್ತಿದ್ದ 1ನೇ ತರಗತಿ ಮಗುವಿನ ಮೇಲೆ ಡ್ಯಾನ್ಸ್ ಮಾಸ್ಟರ್ ರವಿ ಅನುಚಿತವಾಗಿ ವರ್ತಿಸುತ್ತಿದ್ದನು ಎಂಬುದು ಬೆಳಕಿಗೆ ಬಂದಿದೆ. ಡ್ಯಾನ್ಸ್​ ಹೇಳಿ ಕೊಡುವ ನೆಪದಲ್ಲಿ ಮಗುವನ್ನ ಮುಟ್ಟುತ್ತಿದ್ದನು ಎನ್ನಲಾಗಿದೆ. ಈ ವಿಷಯ ಮಗುವಿನ ಮನೆಯಲ್ಲಿ ಗೊತ್ತಾಗುತ್ತಿದ್ದಂತೆ ಪೋಷಕರು ಶಾಲೆಗೆ ಬಂದು ಡ್ಯಾನ್ಸ್ ಮಾಸ್ಟರ್​ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನೆಲಕ್ಕೆ ಬಿದ್ದರು ಮಹಿಳೆಯೊಬ್ಬರು ಕೆನ್ನೆ, ಕೆನ್ನೆಗೆ ಬಾರಿಸಿ ಬೈದಿದ್ದಾರೆ. ಬಳಿಕ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಪ್ರೇಯಸಿಗಾಗಿ ತನ್ನ ಇಡೀ ಕುಟುಂಬನ್ನೇ ಕೊಲೆಗೈದ ಪಾಪಿ.. ಹೆಂಡತಿ, 2 ಕಂದಮ್ಮಗಳ ಜೀವ ತೆಗೆದಿದ್ದೇಗೆ?


">July 15, 2024

ವಿಷಯ ತಿಳಿದು ಶಾಲೆಗೆ ಆಗಮಿಸಿದ ಪೊಲೀಸರು ಶಾಲೆಯ ಪ್ರಾಂಶುಪಾಲರನ್ನು ಹಾಗೂ ಆರೋಪಿ ರವಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಾಂಶುಪಾಲರಿಗೂ ಇದೇ ವೇಳೆ ಕ್ಲಾಸ್ ತೆಗೆದುಕೊಳ್ಳಲಾಗಿದೆ. ವಶಕ್ಕೆ ಪಡೆಯುವಾಗಲೂ ಮಗುವಿನ ಪೋಷಕರು ಆರೋಪಿಯ ಮೇಲೆ ದಾಳಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment