ಲಾರಿ-ಬೈಕ್ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಇಬ್ಬರು ಡ್ಯಾನ್ಸರ್

author-image
Ganesh
Updated On
ಲಾರಿ-ಬೈಕ್ ಮಧ್ಯೆ ಭೀಕರ ಅಪಘಾತ.. ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ಇಬ್ಬರು ಡ್ಯಾನ್ಸರ್
Advertisment
  • ಪ್ರಜ್ವಲ್ 22, ಸಹನಾ 21 ಮೃತ ದುರ್ದೈವಿಗಳು
  • ಇಬ್ಬರೂ ಕುಣಿಗಲ್​ನಿಂದ ಬೆಂಗಳೂರಿಗೆ ಬರ್ತಿದ್ದರು
  • ನೆಲಮಂಗಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ನೆಲಮಂಗಲ: ಲಾರಿ ಮತ್ತು ಬೈಕ್ ಅಪಘಾತಕ್ಕೆ ಇಬ್ಬರು ಡ್ಯಾನ್ಸರ್​ ಪ್ರಾಣ ಕಳೆದುಕೊಂಡ ಘಟನೆ ಕುಣಿಗಲ್ ಬೈಪಾಸ್​ನಲ್ಲಿ ನಡೆದಿದೆ. ಪ್ರಜ್ವಲ್ 22, ಸಹನ 21 ಮೃತ ದುರ್ದೈವಿಗಳು.

ವೇಗವಾಗಿ ಬಂದ ಲಾರಿ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ. ಬೈಕ್ ಸವಾರರು ಕುಣಿಗಲ್​ನಿಂದ ಬೆಂಗಳೂರಿಗೆ ಬರುತ್ತಿದ್ದರು. ಅಪಘಾತ ಬೆನ್ನಲ್ಲೇ ಲಾರಿ ಸಮೇತ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಳೆಯ ಎಚ್ಚರಿಕೆ.. ರಾಜ್ಯದ 6 ಜಿಲ್ಲೆಗಳಲ್ಲಿ ಭರ್ಜರಿ ಮಳೆ ಎಂದ ಹವಾಮಾನ ಇಲಾಖೆ..

ಪ್ರಜ್ವಲ್ ಶ್ರೀರಾಂಪುರದ ನಿವಾಸಿಯಾಗಿದ್ದರೆ, ಸಹನಾ ಕುರುಬರಹಳ್ಳಿ ನಿವಾಸಿ. ಇಬ್ಬರೂ ಡ್ಯಾನ್ಸರ್ಸ್ ಗಳಾಗಿದ್ದರಿಂದ ಕೆಲ ವರ್ಷಗಳ ಹಿಂದೆ ಪರಿಚಯವಾಗಿತ್ತು. ಇವೆಂಟ್ ಒಂದರಲ್ಲಿ ಇಬ್ಬರು ಪರಿಚಯವಾಗಿದ್ದರು. ಇಂದು ಇವೆಂಟ್ ಅಮೌಂಟ್ ತೆಗೆದುಕೊಂಡು ಬರಲು ಕುಣಿಗಲ್​​ಗೆ ಬಂದಿದ್ದರು. ಹಣ ಪಡೆದು ವಾಪಸ್ ಹೋಗ್ತಿದ್ದಾಗ ದುರ್ಘಟನೆ ನಡೆದಿದೆ..

ಇದನ್ನೂ ಓದಿ: ಭಾರೀ ಮಳೆಗೆ ಗೋಡೆ ಕುಸಿದು 98 ವರ್ಷದ ವೃದ್ಧೆ ನಿಧನ.. ಎಲ್ಲೆಲ್ಲಿ ಏನೆಲ್ಲ ಅನಾಹುತ ಆಗ್ತಿದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment