Advertisment

ಬೆಂಗಳೂರಲ್ಲಿ ಘೋರ ದುರಂತ.. ಡ್ಯಾನ್ಸ್‌ ಕ್ಲಾಸ್ ಮುಗಿಸಿ ಮನೆಗೆ ಬರುತ್ತಿದ್ದ ಮಗಳು ಇನ್ನಿಲ್ಲ; ಆಗಿದ್ದೇನು?

author-image
admin
Updated On
ಬೆಂಗಳೂರಲ್ಲಿ ಘೋರ ದುರಂತ.. ಡ್ಯಾನ್ಸ್‌ ಕ್ಲಾಸ್ ಮುಗಿಸಿ ಮನೆಗೆ ಬರುತ್ತಿದ್ದ ಮಗಳು ಇನ್ನಿಲ್ಲ; ಆಗಿದ್ದೇನು?
Advertisment
  • ಒಳ್ಳೆ ಡ್ಯಾನ್ಸರ್ ಆಗುವ ಕನಸು ಕಂಡಿದ್ದ ಬಾಲಕಿ ಇನ್ನಿಲ್ಲ
  • ಅಪ್ಪು ಡ್ಯಾನ್ಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಳು
  • ಶನಿವಾರದ ಸ್ಕೂಲ್ ಮುಗಿಸಿ ಡ್ಯಾನ್ಸ್ ಕ್ಲಾಸ್‌ಗೆ ಹೋಗಿದ್ದಳು

ಬೆಂಗಳೂರು: ನಿಜಕ್ಕೂ ಇದು ಕರುಣಾಜನಕ ಸ್ಟೋರಿ.. ತೇಜಸ್ವಿನಿ ಅನ್ನೋ ಈ ನತದೃಷ್ಟ ಹುಡುಗಿ ಒಳ್ಳೆ ಡ್ಯಾನ್ಸರ್ ಆಗುವ ಕನಸು ಕಂಡಿದ್ದಳು. ಶಾಲೆಯ ಜೊತೆಗೆ ಅಪ್ಪು ಡ್ಯಾನ್ಸ್ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಳು. ಆದರೆ ಘೋರ ವಿಧಿ ಈ ಮಗುವನ್ನ ಪರಲೋಕಕ್ಕೆ ಇಷ್ಟು ಬೇಗ ಕರೆದುಕೊಂಡು ಬಿಟ್ಟಿದೆ.

Advertisment

ಬೆಂಗಳೂರಿನ ವಿ.ವಿ ಪುರಂ ಪೊಲೀಸ್ ಠಾಣೆಯಲ್ಲಿ ಘನ ಘೋರ ದುರಂತವೊಂದು ನಡೆದಿದೆ. 15 ವರ್ಷದ ಈ ತೇಜಸ್ವಿನಿ ಇಂದು ಮಧ್ಯಾಹ್ನ 12 ಗಂಟೆಗೆ ಸ್ಕೂಲ್ ಮುಗಿಸಿಕೊಂಡು ಮನೆಗೆ ಬರುತ್ತಾ ಇದ್ದಳು. ಈ ಹುಡುಗಿ ಮೇಲೆ ಕಟ್ಟಡ ನಿರ್ಮಾಣದ ಸೆಂಟ್ರಿಂಗ್‌ಗೆ ಬಳಸುವ ಸಾರವೆ ಮರ ಬಿದ್ದಿದೆ.

publive-image

ಕಟ್ಟಡ ಕಾಮಗಾರಿ ನಡೆಯುತ್ತಿದ್ದ 4ನೇ ಮಹಡಿಯಿಂದ ಸಾರವೆ ಮರ ತೇಜಸ್ವಿನಿಯ ಮೇಲೆ ಬಿದ್ದಿದೆ. ಮೇಲಿಂದ ಮರ ಬಿದ್ದ ರಭಸಕ್ಕೆ ತೇಜಸ್ವಿನಿ ಸ್ಥಳದಲ್ಲಿ ಜೀವ ಬಿಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಬಿಗ್​ ಶಾಕ್​ ಕೊಟ್ಟ ಸರ್ಕಾರ; ಬಿಎಂಟಿಸಿ ಟಿಕೆಟ್​ ರೇಟ್​ನಲ್ಲಿ ದಿಢೀರ್​​ ಏರಿಕೆ 

Advertisment

ಸುಧಾಕರ್, ಧನಲಕ್ಷ್ಮಿ ದಂಪತಿಯ ಮಗಳು ತೇಜಸ್ವಿನಿ. ಇವತ್ತು ಶನಿವಾರ ಆದ ಕಾರಣ ಸ್ಕೂಲ್ ಮುಗಿಸಿ ಡ್ಯಾನ್ಸ್ ಕ್ಲಾಸ್‌ಗೆ ಹೋಗಿದ್ದಳು. ಡ್ಯಾನ್ಸ್‌ ಕ್ಲಾಸ್‌ ಮುಗಿಸಿ ಮನೆಗೆ ಬರುತ್ತಿರೋವಾಗ ಈ ದುರ್ಘಟನೆ ನಡೆದಿದೆ.

publive-image

ತೇಜಸ್ವಿನಿ ಅಪ್ಪು ಡ್ಯಾನ್ಸ್ ಅಕಾಡೆಮಿಯಲ್ಲಿ ಡ್ಯಾನ್ಸ್ ತರಬೇತಿ ಪಡೆಯುತ್ತಿದ್ದಳು. ಸ್ಕೂಲ್ ಡೇ ಸೇರಿದಂತೆ ಕೆಲವು ವೇದಿಕೆಯಲ್ಲಿ ತೇಜಸ್ವಿನಿ ಅದ್ಭುತ ಡ್ಯಾನ್ಸ್ ಪ್ರದರ್ಶನ ಮಾಡಿ ಗಮನ ಸೆಳೆದಿದ್ದಳು. ಕಟ್ಟಡ ಕಾಮಗಾರಿ ನಡೆಯುತ್ತಿದ್ದ 4ನೇ ಮಹಡಿಯಿಂದ ಸಾರವೆ ಮರ ಬಿದ್ದು ಈ ಬಾಲಕಿ ಇಹಲೋಕವನ್ನು ತ್ಯಜಿಸುವಂತೆ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment