/newsfirstlive-kannada/media/post_attachments/wp-content/uploads/2025/02/Online-Game.jpg)
ಮನುಷ್ಯ ಇವತ್ತು ಬಿಟ್ಟು ಬೇಕಾದ್ರೂ ಇದ್ದು ಬಿಡುತ್ತಾನೆ. ಆದರೆ, ಯಾವುದೇ ಕಾರಣಕ್ಕೂ ಮೊಬೈಲ್ನಲ್ಲಿ ಗೇಮ್ ಆಡದೆ ಮಾತ್ರ ಇರೋದಿಲ್ಲ. ಅದರಲ್ಲೂ ಎಷ್ಟೋ ಗೇಮ್ಗಳಿಂದ ಅಮಾಯಕರ ಜೀವವೇ ಹೋಗಿದೆ. ಮಕ್ಕಳು ಈ ಗೇಮ್ಸ್ ಆಡಿದ್ರೆ ಖಂಡಿತಾ ಅವರ ಭವಿಷ್ಯ ಹಾಳಾಗಿ ಹೋಗುತ್ತಿದೆ. ಜನಸಾಮಾನ್ಯರನ್ನು ಬಲಿ ಪಡೆಯುತ್ತಿರೋ ಗೇಮ್ಗಳು ವಿವರ ಹೀಗಿದೆ!
FAU-G
ಪಬ್ಜಿ ಬ್ಯಾನ್ ಆದ ಬಳಿಕ ಜನ್ಮ ತಾಳಿಯ ಭಾರತೀಯ ಆ್ಯಪ್ ಇದಾಗಿದೆ. ಸದ್ಯ ಅನೇಕ ಭಾರತೀಯರ ಸ್ಮಾರ್ಟ್ಫೊನ್ನಲ್ಲಿ ಈ ಆ್ಯಪ್ ಕಾಣಸಿಗುತ್ತದೆ. ಅಂದಹಾಗೆಯೇ ಬಹುತೇಕರಿಗೆ ಈ ಆ್ಯಪ್ ಭಾರತ ಮೂಲದ್ದು ಎಂಬದು ತಿಳಿದಿಲ್ಲ. ಇದು ಎಷ್ಟೋ ಜನರ ಜೀವಗಳಿಗೆ ಕೊಳ್ಳಿ ಇಟ್ಟಿದೆ.
ಲೂಡೊ ಕಿಂಗ್
ಬಹುತೇಕ ಭಾರತೀಯ ಸ್ಮಾರ್ಟ್ಫೊನ್ನಲ್ಲಿ ಇದೊಂದು ಆ್ಯಪ್ ಇದ್ದೇ ಇರುತ್ತದೆ. ಲೂಡೊ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಫೇವರೇಟ್ ಎಂದೆನಿಸಿಕೊಂಡಿದೆ. ಹಾಗಾಗಿ ಲೂಡೋ ಅತ್ಯಂತ ಜನಪ್ರಿಯ ಆಟವಾಗಿ ಅನೇಕರ ಮನಗೆದ್ದಿದೆ. ಈ ಗೇಮ್ನಿಂದ ಮಕ್ಕಳು ಓದಿನ ಮೇಲೆ ಫೋಕಸ್ ಮಾಡಲು ಆಗುತ್ತಲೇ ಇಲ್ಲ.
ರಿಯಲ್ ಕ್ರಿಕೆಟ್ 2.0
ಭಾರತೀಯರು ಕ್ರಿಕೆಟ್ ಪ್ರಿಯರು ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಆನ್ಲೈನಲ್ಲಿ ಸಿಕ್ಕ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಆಡುತ್ತಿರುತ್ತಾರೆ. ಇನ್ನು ರಿಯಲ್ ಕ್ರಿಕೆಟ್ 2.0 ಭಾರತೀಯ ಮೂಲದ್ದಾಗಿದೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ 4.1 ರೇಟಿಂಗ್ ಪಡೆದುಕೊಂಡಿದೆ. 10 ಮಿಲಿಯನ್ಗೂ ಹೆಚ್ಚು ಜನರು ಡೌನ್ಲೋಡ್ ಮಾಡಿದ್ದಾರೆ. ಇದರಿಂದ ಯುವಕರು ಬೆಟ್ಟಿಂಗ್ಗೆ ಇಳಿಯುವಂತಾಗಿದೆ.
ದಿ ಬೋನ್ ಫೈರ್
ಸದ್ಯ ಜನಪ್ರಿಯಗೊಂಡ ಆನ್ಲೈನ್ ಗೇಮ್ಗಳಲ್ಲಿ ದಿ ಬೋನ್ ಫೈರ್ ಕೂಡ ಒಂದು. ಆದರೆ, ಇದನ್ನು ಪಾವತಿಸುವ ಮೂಲಕ ಆಟವಾಡಬೇಕಿದೆ. ಆದರೆ ಬಹುತೇಕ ಜನರು ಪಾವತಿಸುವ ಆಟಕ್ಕೆ ಹಿಂದೇಟು ಹಾಕುತ್ತಾರೆ. ಕಾರಣ ಇದರಲ್ಲಿ ದುಡ್ಡು ಕಳೆದುಕೊಂಡವರೇ ಹೆಚ್ಚು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ