Advertisment

ಸಂಜಯ್​ ದತ್ ವಿಸ್ಕಿಯಂತೆ ಈ ಖಳನಟನ ಬಿಯರ್​ ಕೂಡ ಫೇಮಸ್​; ಯಾರು ಆ ವಿಲನ್​?

author-image
Gopal Kulkarni
Updated On
ಸಂಜಯ್​ ದತ್ ವಿಸ್ಕಿಯಂತೆ ಈ ಖಳನಟನ ಬಿಯರ್​ ಕೂಡ ಫೇಮಸ್​; ಯಾರು ಆ ವಿಲನ್​?
Advertisment
  • ಸಂಜಯ್ ದತ್ , ಶಾರುಖ್​ ಹಾದಿಯಲ್ಲಿಯೇ ನಡೆದ ಬಾಲಿವುಡ್ ಖಳನಟ
  • ಲಿಕ್ಕರ್ ಬ್ಯುಸಿನೆಸ್​ನಲ್ಲಿ ಸಕ್ಸಸ್​ ಕಂಡಿದ್ದು ಹೇಗೆ 90ರ ದಶಕದ ಈ ವಿಲನ್​?
  • 11 ಬಗೆಯ ಬಿಯರ್​ಗಳನ್ನು ತಯಾರು ಮಾಡುತ್ತೆ ಈ ನಟನ ಲಿಕ್ಕರ್ ಸಂಸ್ಥೆ

80,90ರ ದಶಕದಲ್ಲಿ ವಿಲನ್ ಪಾತ್ರದಲ್ಲಿ ಸದಾ ಮಿಂಚುತ್ತಿದ್ದ, ತಮ್ಮ ಖಡಕ್ ನಟನೆಯಿಂದಲೇ ಖ್ಯಾತಿ ಪಡೆದಿದ್ದ ಖಳನಟ ಅಂದ್ರೆ ಅದು ಡ್ಯಾನಿ ಡೆನ್ಜಾಂಗ್ಪಾ. ಇತರ ಬಾಲಿವುಡ್ ನಟರಂತೆ ಈ ಖಳನಟನು ಕೂಡ ಆಲ್ಕೋಹಾಲ್ ಬ್ಯುಸಿನೆಸ್​ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಡ್ಯಾನಿ ಡೆನ್ಜಾಂಗ್ಪಾ ಕೂಡ ತಮ್ಮದೇ ಆದ ಒಂದು ಲಿಕ್ಕರ್ ಕಂಪನಿಯನ್ನು ಹೊಂದಿದ್ದು, ಇಲ್ಲಿ 11 ಬಗೆಯ ಲಿಕ್ಕರ್​ಗಳು ರೆಡಿಯಾಗುತ್ತವೆ. ಇವರ ಕಂಪನಿಯಲ್ಲಿ ರೆಡಿಯಾದ ಎಲ್ಲಾ ಬಗೆಯ ಲಿಕ್ಕರ್​ಗಳು ಉತ್ತರ ಭಾರತದಲ್ಲಿ ಜನಪ್ರಿಯಗೊಂಡಿವೆ.

Advertisment

ಯುಕ್ಸೊಮ್​ ಬ್ರೇವರೀಸ್ ಹೆಸರಿನ ಕಂಪನಿಯಲ್ಲಿ ಡ್ಯಾನಿ ಡೆನ್ಜಾಂಗ್ಪಾ ಅವರ ಲಿಕ್ಕರ್ ಪ್ರೊಡಕ್ಟ್​ಗಳು ಸಿದ್ಧಗೊಳ್ಳುತ್ತವೆ. ಇದು ಸಿಕ್ಕಿಂ ಮೂಲದ ಕಂಪನಿಯಾಗಿದ್ದು ಭಾರತದ ಬಿಯರ್ ಮಾರುಕಟ್ಟೆಯಲ್ಲಿ ತನ್ನದೇ ಆದ ಹೆಸರು ಮಾಡಿದೆ. ವರ್ಷಕ್ಕೆ 30 ಲಕ್ಷ ಕೇಸ್ ಬಿಯರ್​ನ್ನು ಈ ಕಂಪನಿ ಮಾರುತ್ತದೆ. ಇದು ಭಾರತದ ಮೂರನೇ ಅತಿಹೆಚ್ಚು ಮಾರಾಟ ಹೊಂದುವ ಬಿಯರ್ ಬ್ರ್ಯಾಂಡ್ ಎಂದು ಗುರುತಿಸಲಾಗಿದೆ. ಈ ಸಂಸ್ಥೆಯ ವ್ಯಾಪಾರ ವ್ಯವಹಾರಗಳನ್ನೆಲ್ಲಾ ಖುದ್ದು ಡ್ಯಾನಿ ಕುಟುಂಬವೇ ನೋಡಿಕೊಳ್ಳುತ್ತದೆ.

ಇದನ್ನೂ ಓದಿ:ಉತ್ತರ ಭಾರತದಲ್ಲಿ ಮಳೆಯ ಜೊತೆ ಕೊರೆಯುವ ಚಳಿ! ಶಾಲೆಗಳಿಗೆ ರಜೆ ಘೋಷಿಸಿದ ಸರ್ಕಾರಗಳು

publive-image

ಇನ್ನು ಯುಕ್ಸೊಮಿ ಬ್ರೇವರೀಸ್​ನಲ್ಲಿ ಅನೇಕ ಬಗೆಯ ಬಿಯರ್​ಗಳು ಸಿದ್ಧಗೊಳ್ಳುತ್ತವೆ. ಡನ್ಸ್​ಬರ್ಗ್​ ಡಯಟ್​ ಡೆಂಜಾಂಗ್ 9000, ಹಿಮಾಲಯನ್ ಬ್ಲ್ಯೂ, ಇಂಡಿಯನ್ ಸ್ಪೇಷಲ್, ಡನ್ಸ್​ಬರ್ಗ್​16000, ಹೆಮನ್​9000, ಯೆತಿ, ಡನ್ಸ್​ಬರ್ಗ್ ರೆಡ್, ಇಂಡಿಯನ್ ಸ್ಪೇಷಲ್ ಬಿಯರ್ ಹೀಗೆ 11 ಬಗೆಯ ಮದಿರಾಗಳು ಈ ಕಂಪನಿಯಿಂದ ಸಿದ್ಧಗೊಳ್ಳುತ್ತವೆ. ಇನ್ನು ಇವುಗಳ ಬೆಲೆಯೂ ಕೂಡ ಸ್ಪರ್ಧಾತ್ಮಕ ಜಗತ್ತಿಗೆ ತಕ್ಕ ಹಾಗೆಯೇ ಇದೆ. ಈ ಕಂಪನಿಯ ಕೆಲವು ಬಿಯರ್​ಗಳ ಆರಂಭಿಕ ಬೆಲೆ 105 ರೂಪಾಯಿಯಿದ್ದು, ಇನ್ನು ಕೆಲವು ಬಿಯರ್​​ಗಳ ಬೆಲೆ 15 ರೂಪಾಯಿ ಇದೆ.

Advertisment

ಇದನ್ನೂ ಓದಿ:ಹೊಸ ವರ್ಷ ಸಂಭ್ರಮಾಚರಣೆಗೆ ಕ್ಷಣಗಣನೆ ಆರಂಭ; ನ್ಯೂ ಇಯರ್ ಬರಮಾಡಿಕೊಳ್ಳಲು ಸಜ್ಜಾಗಿದೆ ಸಿಲಿಕಾನ್ ಸಿಟಿ

publive-image

ಈಗಾಗಲೇ ಲಿಕ್ಕರ್ ಬ್ಯುಸಿನೆಸ್​ನಲ್ಲಿ ಬಾಲಿವುಡ್​​ನ ಅನೇಕ ನಟರು ಗುರುತಿಸಿಕೊಂಡಿದ್ದಾರೆ. ಸಂಜಯ್ ದತ್, ಶಾರುಖ್ ಪುತ್ರ ಆರ್ಯನ್ ಖಾನ್​ ಇದೇ ಬ್ಯುಸಿನೆಸ್​ನಿಂದ ನೂರಾರು ಕೋಟಿ ರೂಪಾಯಿ ಗಳಿಸುತ್ತಿದ್ದಾರೆ. ಅವರ ಸಾಲಿನಲ್ಲಿ ಡ್ಯಾನಿ ಡೆನ್ಜಾಂಗ್ಪಾ ಕೂಡ ಸೇರಿಕೊಂಡಿದ್ದಾರೆ. ಲಿಕ್ಕರ್ ಬ್ಯುಸಿನೆಸ್​ನಲ್ಲಿ ಭಾರೀ ಪ್ರಮಾಣದ ಆದಾಯವಿದೆ. ಈ ಆದಾಯದಿಂದಲೇ ಈ ನಟರು ನೂರಾರು ಕೋಟಿ ರೂಪಾಯಿ ಗಳಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment