/newsfirstlive-kannada/media/post_attachments/wp-content/uploads/2024/11/NECK.jpg)
ಎಷ್ಟೇ ಬೆಳ್ಳಗಿದ್ದರೂ ಕೆಲವರ ಕತ್ತು ಮಾತ್ರ ಕಪ್ಪು! ಈ ಸಮಸ್ಯೆ ಎಲ್ಲ ಬಣ್ಣದವರಿಗೂ ಇರುತ್ತದೆ. ಇದು ನಮ್ಮ ಆತ್ಮವಿಶ್ವಾಸವನ್ನು ನಾಶಪಡಿಸಬಹುದು. ಕೆಲವರು ಅದನ್ನು ಜನರಿಗೆ ಕಾಣದಂತೆ ಮರೆಮಾಚಲು ತಮ್ಮ ಕೂದಲನ್ನು ಸಡಿಲಗೊಳಿಸುತ್ತಾರೆ. ಇನ್ನೂ ಕೆಲವರು ಶಾಲಿನಿಂದ, ದುಪ್ಪಟ್ಟದಿಂದ ಮುಚ್ಚಿಕೊಳ್ತಾರೆ. ಕೆಲವರು ವಿವಿಧ ರೀತಿಯ ಕ್ರೀಮ್ಗಳನ್ನು ಬಳಸುತ್ತಾರೆ.
ಆದರೂ ಕತ್ತಿನ ಕಪ್ಪು ಬಣ್ಣದಲ್ಲಿ ಬದಲಾವಣೆ ಕಾಣುವುದಿಲ್ಲ. ಪಿಸಿಓಡಿ (Polycystic Ovarian Disease), ನಿಯಮಿತ ಔಷಧಿ, ಇನ್ಸುಲಿನ್ ಬಳಕೆಯಿಂದ ಬೊಜ್ಜು ಮತ್ತು ಹಾರ್ಮೋನ್ ಬದಲಾವಣೆಯಿಂದ ಬಳಲುತ್ತಿರೋರರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ನೀವು ಕೂಡ ಇದೇ ಸಮಸ್ಯೆಯಿಂದ ಬಳಲುತ್ತಿದ್ದರೆ ಪರಿಹಾರ ಮನೆಮದ್ದಿನಲ್ಲಿದೆ.
ಇದನ್ನೂ ಓದಿ:Clove water; ಲವಂಗ ನೀರಿನಿಂದ ಆರೋಗ್ಯಕ್ಕೆ ಏನೆಲ್ಲ ಉಪಯೋಗ.. ಚಳಿಗಾಲದಲ್ಲಿ ಹೀಗೆ ಮಾಡಿ!
ಸೀಬೆ ಮತ್ತು ಅರಿಶಿಣ ಪುಡಿ
ಸೀಬೆ ಮತ್ತು ಅರಿಶಿಣ ಪುಡಿ ಹೆಚ್ಚು ಸಹಾಯಕವಾಗಿದೆ. ಇದಕ್ಕೆ ಅರಿಶಿಣ ಪುಡಿ, ಕಡಲೆಹಿಟ್ಟು, ರೋಸ್ ವಾಟರ್ ಮತ್ತು ನಿಂಬೆ ರಸ ಬೇಕಾಗುತ್ತದೆ. ಎರಡು ಚಮಚ ಕಡಲೆ ಹಿಟ್ಟು, ಚಿಟಿಕೆ ಅರಿಶಿಣ ಪುಡಿ ಅರ್ಧ ಚಮಚ ನಿಂಬೆ ರಸ ಮತ್ತು ಸ್ವಲ್ಪ ರೋಸ್ ವಾಟರ್ ಮಿಶ್ರಣ ಮಾಡಿಕೊಳ್ಳಬೇಕು. ಈ ಮಿಶ್ರಣವನ್ನು ಕಪ್ಪಾಗಿರುವ ಕುತ್ತಿಗೆಯ ಭಾಗಗಕ್ಕೆ ಲೇಪಿಸಬೇಕು. 15 ನಿಮಿಷಗಳ ಕಾಲ ಉಗುರು ಬೆಚ್ಚಗಿನ ನೀರಿನಿಂದ ಸಂಪೂರ್ಣವಾಗಿ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡುವುದರಿಂದ ದೊಡ್ಡ ವ್ಯತ್ಯಾಸ ಕಾಣಲಿದೆ.
ಹಾಲು ಮತ್ತು ಟೊಮ್ಯಾಟೋ
ಹಾಲು ಚರ್ಮಕ್ಕೆ ಬ್ಲೀಚಿಂಗ್ ಪರಿಣಾಮವನ್ನು ನೀಡುವ ವಸ್ತುಗಳಲ್ಲಿ ಒಂದಾಗಿದೆ. ಚರ್ಮಕ್ಕೆ ನೈಸರ್ಗಿಕ ತೇವಾಂಶ, ಮೃದುತ್ವ ಮತ್ತು ಹೊಳಪು ನೀಡುತ್ತದೆ. ಟೊಮ್ಯಾಟೋ ಕೂಡ ಬ್ಲಿಚಿಂಗ್ ಪರಿಣಾಮ ಹೊಂದಿರುತ್ತದೆ. ಚರ್ಮಕ್ಕೆ ಬಣ್ಣ ಮತ್ತು ಹೊಳಪು, ಮೃದುತ್ವವನ್ನು ನೀಡುತ್ತದೆ. ಸುಕ್ಕುಗಳನ್ನು ಹೋಗಲಾಡಿಸಲು ಚರ್ಮದಿಂದ ಕುಂದು ಬಣ್ಣವನ್ನು ತೆಗೆದುಹಾಕಲು ಟೊಮ್ಯಾಟೋ ಅತ್ಯಂತ ಪರಿಣಾಮಕಾರಿಯಾಗಿದೆ. ಇದನ್ನು ಮಾಡಲು ಟೊಮ್ಯಾಟೋ ರಸ, ಹಾಲು ಮಿಶ್ರಣ ಮಾಡಿಕೊಳ್ಳಬೇಕು. ಅಗತ್ಯ ಅನಿಸಿದರೆ ಅಡುಗೆ ಸೋಡ ಕೂಡ ಬಳಸಬಹುದು. ನೀವು ಸ್ಕ್ರಬ್ ಮಾಡಲು ಬಯಸಿದರೆ ಸಕ್ಕರೆಯನ್ನೂ ಸೇರಿಸಿಕೊಳ್ಳಬಹುದು. ಇವುಗಳ ಮಿಶ್ರಣವನ್ನು ಕುತ್ತಿಗೆಯ ಭಾಗಕ್ಕೆ 20 ನಿಮಿಷಗಳ ಕಾಲ ಹಚ್ಚಿಕೊಳ್ಳಬೇಕು. ವಾರದಲ್ಲಿ ಮೂರು ಬಾರಿ ಮಾಡಿದರೆ ಒಳ್ಳೆಯದು.
ಇದನ್ನೂ ಓದಿ:5 ವರ್ಷದೊಳಗಿನ ಮಕ್ಕಳಿಗೆ ಈ 10 ಆಹಾರಗಳನ್ನು ಕೊಟ್ರೆ ಅಪಾಯ ಕಟ್ಟಿಟ್ಟ ಬುತ್ತಿ; ಪೋಷಕರು ಓದಲೇಬೇಕಾದ ಸ್ಟೋರಿ!
ಆಲೂಗಡ್ಡೆ ರಸ
ಆಲೂಗಡ್ಡೆ ರಸ ಕೂಡ ಚರ್ಮಕ್ಕೆ ಹೊಳಪು ನೀಡುತ್ತದೆ. ಆಲೂಗಡ್ಡೆಯ ಸಿಪ್ಪೆಯನ್ನು ಸುಲಿದ ಬಳಿಕ ಅದರ ರಸ ಮಾಡಿಕೊಳ್ಳಬೇಕು. ಇದಕ್ಕೆ ಟೊಮ್ಯಾಟೋ ರಸವನ್ನು ಸೇರಿಕೊಳ್ಳಬಹುದು. ಈ ರೀತಿಯ ರಸವನ್ನು ಹಚ್ಚಿಕೊಳ್ಳಬೇಕು. ಅದು ಆರಿದ ನಂತರ ನೀವು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು.
ಇದಲ್ಲದೇ ಕದಳಿ ಹಣ್ಣಿನ ರಸಕ್ಕೆ ಜೇನುತಪ್ಪ ಬೆರಸಿ ಹಚ್ಚಿಕೊಳ್ಳುವುದರಿಂದಲೂ ಸಮಸ್ಯೆಗೆ ಪರಿಹಾರ ಇದೆ. ಅಲ್ಲದೇ ಮೊಸರಿನಲ್ಲಿ ರವೆ, ಅಕ್ಕಿಪುಡಿಯ ಮಿಶ್ರಣವನ್ನು ಸ್ಕ್ರಬ್ ಆಗಿ ತಯಾರಿಸಿ ಬಳಸುವುದರಿಂದಲೂ ಸಮಸ್ಯೆಗೆ ಪರಿಹಾರ ಇದೆ. ಮಾಗಿದ ಪಪ್ಪಾಯಿಗೆ ಮೊಸರು ಸೇರಿಸಿ ಕುತ್ತಿಗೆಗೆ ಹಚ್ಚುವುದರಿಂದಲೂ ಕಪ್ಪು ಕಲೆ ನಿವಾರಣೆಯಾಗುತ್ತದೆ.
ಇದನ್ನೂ ಓದಿ:5 ವರ್ಷದೊಳಗಿನ ಮಕ್ಕಳಿಗೆ ಈ 10 ಆಹಾರಗಳನ್ನು ಕೊಟ್ರೆ ಅಪಾಯ ಕಟ್ಟಿಟ್ಟ ಬುತ್ತಿ; ಪೋಷಕರು ಓದಲೇಬೇಕಾದ ಸ್ಟೋರಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ