ಬಳ್ಳಾರಿ ಜೈಲಿನಲ್ಲಿರುವ ರೇಣುಕಾಸ್ವಾಮಿ ಕೊಲೆ ಆರೋಪಿ
ದುಬೈಯಿಂದ ಸಿಹಿ ಸುದ್ದಿ ಹೊತ್ತು ತಂದ ಕಾಟೇರ!
ಕೋರ್ಟ್ ಮೊರೆ ಹೊಗಲು ನಿರ್ಧರಿಸಿರುವ ದರ್ಶನ್
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಸದ್ಯ ಬಳ್ಳಾರಿ ಜೈಲಿನಲ್ಲಿದ್ದಾರೆ. ಜೈಲಿನಲ್ಲಿರುವ ದರ್ಶನ್ಗೆ ಕಾಟೇರ ಸಿನಿಮಾದಿಂದ ಇದೀಗ ಸಿಹಿ ಸುದ್ದಿ ಸಿಕ್ಕಿದೆ. ಅಭಿಮಾನಿಗಳ ಮನಗೆದ್ದ ಕಾಟೇರ ಸಿನಿಮಾ ನಾಲ್ಕು ಅವಾರ್ಡ್ಗಳನ್ನ ಗೆದ್ದಿದೆ.
ದರ್ಶನ್ ನಟನೆಯ ಕಾಟೇರ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ದೊರಕಿದೆ. ಕಾಟೇರ ಸಿನಿಮಾಗೆ ಅತ್ಯುತ್ತಮ ಕನ್ನಡ ಸಿನಿಮಾ ಸೈಮಾ ಪ್ರಶಸ್ತಿ ಲಭಿಸಿದೆ. ಆ ಕಡೆ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಜೈಲಿನಲ್ಲಿದ್ದರೆ, ಇತ್ತ ದಾಸ ನಟನೆಯ ಸಿನಿಮಾಗೆ ಪ್ರಶಸ್ತಿ ಬಂದಿದೆ.
ಇದನ್ನೂ ಓದಿ: ನಿವೇದಿತಾ ಗೌಡ ಹೊಸ ಚಮತ್ಕಾರ.. ಅದು ಜಾಸ್ತಿ ಆಯ್ತು ಕಣಮ್ಮ ಅಂದಿದ್ದೇಕೆ ಫ್ಯಾನ್ಸ್!
ದುಬೈನಲ್ಲಿ ನಡೆದ ಸೈಮಾ ಅವಾರ್ಡ್ ಕಾರ್ಯಕ್ರಮ ಕಾಟೇರ ಸಿನಿಮಾ ಪ್ರಶಸ್ತಿ ಬಾಚಿಕೊಂಡಿದೆ. ಈ ಬಾರಿಯ ಸೈಮಾದಲ್ಲಿ ದರ್ಶನ್ ಸಿನಿಮಾ ಅಬ್ಬರಿಸಿದೆ. ಅತ್ಯುತ್ತಮ ಸಿನಿಮಾ ಸೇರಿ ನಾಲ್ಕು ಪ್ರಶಸ್ತಿಯನ್ನು ಕಾಟೇರ ಬಾಚಿಕೊಂಡಿದೆ.
ಚೊಚ್ಚಲ ನಟನೆಗೆ ಆರಾಧನಾ ಅತ್ಯುತ್ತಮ ಹೊಸ ನಟಿ ಪ್ರಶಸ್ತಿ ಪಡೆದಿದ್ದಾರೆ. ವಿ.ಹರಿಕೃಷ್ಣ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಜೊತೆಗೆ ಸಿಂಗರ್ ಮಂಗ್ಲಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಲಭಿಸಿದೆ.
ಇದನ್ನೂ ಓದಿ: ದರ್ಶನ್ಗಾಗಿ ಬಳ್ಳಾರಿ ಜೈಲಿಗೆ ಬಂತು ಲೆಟರ್.. ಕಳುಹಿಸಿದ್ಯಾರು? ಅದರಲ್ಲೇನಿತ್ತು?
ದರ್ಶನ್ಗೂ ಕಾಟೇರ ಸಿನಿಮಾದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಮೇಲೆ ಸಿಗಬಹುದು ಎಂದು ಅಭಿಮಾನಿಗಳು ಊಹಿಸಿದ್ದರು. ಆದರೆ ನಟನೆ ವಿಭಾಗದಲ್ಲಿ ಅವಾರ್ಡ್ ಸಿಕ್ಕಿಲ್ಲ. ಆದರೂ ಕಾಟೇರ 4 ಪ್ರಶಸ್ತಿಯನ್ನು ಪಡೆದುಕೊಳ್ಳುವ ಮೂಲಕ ಗುರುತಿಸಿಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ