newsfirstkannada.com

10 ದಿನಗಳ ತನಿಖೆಯಲ್ಲಿ ಬಯಲಾಯ್ತು ‘ಡಿ’ ಗ್ಯಾಂಗ್​ ಕಳ್ಳಾಟ.. ಒಬ್ಬೊಬ್ಬರ ಪಾತ್ರ ವಿಚಿತ್ರ

Share :

Published June 21, 2024 at 7:24am

    ರೇಣುಕಾಸ್ವಾಮಿ ಹತ್ಯೆ ಕೇಸ್ ತನಿಖೆಯಲ್ಲಿ ಬಯಲಾಗಿದ್ದೇನು?

    ಮೇಕಪ್‌ ಮ್ಯಾನ್‌ ಮೂಲಕ ಪತ್ನಿಗೆ ಹಣ ರವಾನೆ ಮಾಡಿದ ದರ್ಶನ್

    ರೇಣುಕಾಸ್ವಾಮಿ ಶವದ ಮೇಲಿದ್ದ ಒಡವೆ ಸೇರಿ ಒಟ್ಟು 139 ವಸ್ತುಗಳು ಸೀಜ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ಗೆ ಪೊಲೀಸ್ ಕಸ್ಟಡಿ ಮುಂದುವರಿದರೆ, ಇತರೆ 10 ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಕಳೆದ 10 ದಿನಗಳಿಂದ ನಡೆದಿದ್ದ ತನಿಖೆ ವೇಳೆ ಪೊಲೀಸರಿಗೆ ಗೊತ್ತಾಗಿದ್ದೇನು? ಪ್ರಕರಣದಲ್ಲಿ ಎ1 ಹಾಗೂ ಎ2ಯಿಂದ ಹಿಡಿದು ಎ17ವರೆಗಿನ ಆರೋಪಿಗಳ ಪಾತ್ರವೇನು ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.

ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಕೈಗೆ ಕೋಳ ಬಿದ್ದಿರೋದು ಸಂಚಲನಕ್ಕೆ ಕಾರಣ ಆಗಿದೆ. ಜನಪ್ರಿಯ ನಾಯಕ ನಟ ದರ್ಶನ್ ಕಾನೂನಿನ ಎಲ್ಲೆ ಮೀರಿದ್ದಾರೆ. ರೇಣುಕಾಸ್ವಾಮಿ ಕಿಡ್ನಾಪ್​ನಿಂದ ಹಿಡಿದು ಹಲ್ಲೆ ಮಾಡಿ ಹತ್ಯೆ ಮಾಡುವವರೆಗಿನ ಆರೋಪ ಸಾಬೀತಾಗಿದೆ.

ಪವಿತ್ರಗೌಡ, ಇತರೆ ಆರೋಪಿಗಳಿಗೆ ನ್ಯಾಯಾಂಗ ಬಂಧನವೇಕೆ?

ರೇಣುಕಾಸ್ವಾಮಿ ಹತ್ಯೆ ಆರೋಪದಲ್ಲಿ ಕಳೆದ 10 ದಿನಗಳಿಂದ ಆರೋಪಿಗಳ ವಿಚಾರಣೆ ಜೊತೆಗೆ ಸ್ಥಳ ಮಹಜರು ಸೇರಿ ಮಹತ್ವದ ಸಾಕ್ಷ್ಯಗಳನ್ನ ಕಲೆ ಹಾಕಲಾಗಿದೆ. ಎ1, ಎ3ಯಿಂದ ಎ7, ಎ11, ಎ12, ಎ13, ಹಾಗೂ ಎ16 ಆರೋಪಿಗಳು ಕೊಲೆಯಂತಹ ಗಂಭೀರ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಇವರಿಗೆ ಕಾನೂನಿನ ಮೇಲೆ ಕಿಂಚಿತ್ ಗೌರವ ಇಲ್ಲದಿರುವುದು ಇದುವರೆಗಿನ ಸಾಕ್ಷ್ಯಾಧಾರಗಳಿಂದ ಸಾಬೀತಾಗಿದೆ. ಹೀಗಾಗಿ ನ್ಯಾಯಾಲಯ ಈ 10 ಆರೋಪಿಗಳನ್ನು ಜೈಲಿಗಟ್ಟಿದೆ.

ಪತ್ನಿಗೆ ದರ್ಶನ್ ನೀಡಿದ್ದ ಹಣ ಸೀಜ್

ಇನ್ನು ಕೊಲೆ ಕೇಸ್​ನಿಂದ ಬಚಾವ್ ಆಗಲು ಹಾಗೂ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಎದುರಿಸಲು ಎ2 ದರ್ಶನ್‌ ಮನೆಯಲ್ಲಿಟ್ಟಿದ್ದ 40 ಲಕ್ಷ ನಗದನ್ನು ಪೊಲೀಸರು ಜಪ್ತಿ ಮಾಡಿದ್ದರು.

ಸಾಕ್ಷ್ಯನಾಶಕ್ಕೆ ‘ಹಣ’!

ಸ್ನೇಹಿತ ಮೋಹನ್‌ರಾಜ್​ನಿಂದ ಹಣ ಪಡೆದಿದ್ದ ನಟ ದರ್ಶನ್ ಈ ಹಣವನ್ನ ಐಡಿಯಲ್‌ ಹೋಮ್ಸ್‌ನ ತಮ್ಮ ಮನೆಯಲ್ಲಿ ಇರಿಸಿದ್ದರು. ತನಿಖೆ ವೇಳೆ ದಾಳಿ ನಡೆಸಿದ್ದ ಪೊಲೀಸರು 37.40. ಲಕ್ಷ ಹಣ ಜಪ್ತಿ ಮಾಡಿದ್ದರು. ಮೈಸೂರಿನ ಱಡಿಸನ್ ಹೋಟೆಲ್​​​ನಿಂದ ತಮ್ಮ ಮೇಕಪ್‌ ಮ್ಯಾನ್‌ ಮೂಲಕ ತಮ್ಮ ಪತ್ನಿ ವಿಜಯಲಕ್ಷ್ಮಿಗೆ ದರ್ಶನ್ 3 ಲಕ್ಷ ಹಣ ಕಳುಹಿಸಿದ್ದರು, ಸದ್ಯ ವಿಜಯಲಕ್ಷ್ಮಿ ಬಳಿಯಿದ್ದ 3 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಪ್ರದೂಶ್​​ಗೆ ನೀಡಿದ್ದ 30 ಲಕ್ಷ ಹಣ ಕೂಡ ಜಪ್ತಿ ಮಾಡಲಾಗಿತ್ತು, ಈ ಹಣದ ಮೂಲದ ಬಗ್ಗೆಯೂ ಪೊಲೀಸರು ತನಿಖೆ ನಡೆಸ್ತಿದ್ದಾರೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲು ಸೇರಿದ ಪವಿತ್ರಾ ಗೌಡ.. ಆಕೆಗೆ ನೀಡಿರೋ ಫೆಸಿಲಿಟಿ ಮಾತ್ರ..

ಅಭಿಮಾನಿಗಳ ದುರುಪಯೋಗ.. ನೆಲದ ಕಾನೂನಿಗೆ ದ್ರೋಹ!

ಇನ್ನು ಎ2 ಆರೋಪಿ ದರ್ಶನ್ ಹಣ ಹಾಗೂ ಇತರೆ ಆರೋಪಿಗಳನ್ನು ಒಳಗೊಂಡ ತನ್ನ ಅಭಿಮಾನಿ ಬಳಗ ಕೃತ್ಯದಲ್ಲಿ ಭಾಗಿಯಾಗಿದೆ. ಈ ಮೂಲಕ ನೆಲದ ಕಾನೂನನ್ನು ದುರುಪಯೊಗ ಪಡಿಸಿಕೊಂಡಿರುವುದು ಸಾಕ್ಷ್ಯಾಧಾರಗಳಿಂದ ರುಜುವಾತಾಗಿದೆ. ಎ2 ದರ್ಶನ್ ಹಣ ಬಲ, ಹಾಗೂ ಪ್ರಭಾವ ಬಳಸಿಕೊಂಡು ರೇಣುಕಾಸ್ವಾಮಿಯನ್ನು ಎ4, ಎ6, ಹಾಗೂ ಎ8ನಿಂದ ಅಪಹರಿಸಿ ಆತನ ಬಳಿಯಿದ್ದ ಚಿನ್ನಾಭರಣಗಳನ್ನು ದೋಚಿದ್ದಾರೆ. ಪಟ್ಟಣಗೆರೆಯ ಎ10 ವಿನಯ್ ಶೆಡ್​ಗೆ ಕರೆತಂದು ಅಮಾನುಷ ಕೃತ್ಯ ಎಸಗಿರೋದು ತನಿಖೆಯಲ್ಲಿ ಬಯಲಾಗಿದೆ.

ಇದನ್ನೂ ಓದಿ: ರೇಣುಕಾಸ್ವಾಮಿಗೆ ಎಲೆಕ್ಟ್ರಿಕ್​ ಟಾರ್ಚ್​ನಿಂದ ಶಾಕ್​.. ದೇಹ ಶೇಕಡಾ 30 ರಷ್ಟು ಸುಟ್ಟು ಹೋಗಿತ್ತು ಮಾಂಸಖಂಡ; ಹೇಗಿತ್ತು ಆ ಕರಾಳ?

14ನೇ ಆರೋಪಿ ಪ್ರದೂಶ್​​ನಿಂದ ಸಾಕ್ಷ್ಯನಾಶ!

ಪ್ರಕರಣದಲ್ಲಿ ಎ14 ಪ್ರದೂಶ್​ ಸಾಕ್ಷ್ಯನಾಶ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಈತನೂ ಸಹ ತನಿಖೆಗೆ ಸರಿಯಾಗಿ ಸ್ಪಂದಿಸದೇ ಪ್ರಮುಖ ವಿಚಾರಗಳನ್ನು ಮರೆ ಮಾಚುತ್ತಿದ್ದು, ಈತ ಮತ್ತೊಬ್ಬ ಆಸಾಮಿಯನ್ನು ಕೃತ್ಯದ ಸ್ಥಳಕ್ಕೆ ಕರೆದುಕೊಂಡು ಹೋಗಿರೋದು ತನಿಖೆಯಲ್ಲಿ ತಿಳಿದು ಬಂದಿದೆ. ಆರೋಪಿ ಪ್ರದೂಶ್ ಜೊತೆಯಲ್ಲಿ ಬಂದಿದ್ದ ವ್ಯಕ್ತಿಯ ಬಗ್ಗೆ ಆತನಿಗೆ ಮಾತ್ರವೇ ತಿಳಿದಿದ್ದು ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಇದನ್ನೂ ಓದಿ: ಮಲಗುವ ಮುನ್ನ ಗಂಡಾಗಿದ್ದ.. ಏಳುವಷ್ಟರಲ್ಲಿ ಹೆಣ್ಣಾದ; ಅಸಲಿಗೆ ಆಗಿದ್ದೇನು?

ಎ2 ದರ್ಶನ್ ಸೇರಿ ನಾಲ್ವರಿಗೆ 2 ದಿನ ಪೊಲೀಸ್ ಕಸ್ಟಡಿ

ಇನ್ನು ಎ2, ಎ9, ಎ10 ಹಾಗೂ ಎ14 ಆರೋಪಿಗಳು ಪ್ರಕರಣದಲ್ಲಿ ತನಿಖೆಗೆ ಸರಿಯಾಗಿ ಸ್ಪಂದಿಸದೇ ಕೃತ್ಯಕ್ಕೆ ಸಂಬಂಧಿಸಿದಂತೆ ವಿಚಾರಗಳ ಬಗ್ಗೆ ಬಾಯಿ ಬಿಡುತ್ತಿಲ್ಲ. ಆರೋಪಿಗಳು ಕೃತ್ಯ ನಡೆಸಿದ ಬಳಿಕ ಸಾಕ್ಷ್ಯನಾಶಪಡಿಸುವ ಯತ್ನ ನಡೆಸಿದ್ದಾರೆ. ಹಣ ಹಾಗೂ ಪ್ರಭಾವ ಬಳಸಿ ಶವವನ್ನು ಬೇರೆಡೆ ಸಾಗಿಸಿ ದಿಕ್ಕು ತಪ್ಪಿಸುವ ಯತ್ನ ನಡೆಸಿದ್ದಾರೆ. ಅಲ್ಲದೆ ದರ್ಶನ್ ತನ್ನ ಹಣ ಹಾಗೂ ಇತರೆ ಆರೋಪಿಗಳನ್ನು ಒಳಗೊಂಡ ತನ್ನ ಅಭಿಮಾನಿ ಬಳಗವನ್ನು ಬಳಸಿಕೊಂಡು ಕೃತ್ಯದಲ್ಲಿ ಭಾಗಿಯಾಗಿ ನೆಲದ ಕಾನೂನನ್ನು ದುರುಪಯೊಗಪಡಿಸಿಕೊಂಡಿರುವುದು ಸಾಕ್ಷ್ಯಾಧಾರಗಳಿಂದ ಕಂಡು ಬಂದಿದೆ. ಹೀಗಾಗಿ ಈ ನಾಲ್ವರು ಆರೋಪಿಗಳನ್ನು ಪೊಲೀಸರು 2 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಪೊಲೀಸರು ಇದುವರೆಗೂ 139 ವಸ್ತುಗಳನ್ನು ಸಾಕ್ಷ್ಯಗಳಾಗಿ ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ರಾಮ್​ ಚರಣ್​ ದಂಪತಿಗೆ ವಿಶೇಷ ದಿನ; ಮಗಳ ಬಗ್ಗೆ ಉಪಾಸನ ಭಾವುಕ ಪೋಸ್ಟ್.. ಏನದು?

139 ಸಾಕ್ಷ್ಯಗಳ ಸಂಗ್ರಹ!

ಕೃತ್ಯದ ವೇಳೆ ಆರೋಪಿಗಳು ಧರಿಸಿದ್ದ ಬಟ್ಟೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ, ಇನ್ನು ಕೃತ್ಯಕ್ಕೆ ಬಳಸಿದ್ದ ಲಾಠಿ, ಮರದ ಪೀಸ್, ರಾಡ್ ವಶಕ್ಕೆ ಪಡೆದಿದ್ದಾರೆ. ಕೃತ್ಯದ ಬಳಿಕ ಆರೋಪಿಗಳು ತಂಗಿದ್ದ ಹೋಟೆಲ್ ಲೆಡ್ಜರ್ ಬುಕ್ ಹಾಗೂ ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಕೃತ್ಯದ ವೇಳೆ ಹಾಗೂ ಮೃತದೇಹ ಬಿಸಾಡಲು ಬಳಸಿದ್ದ ಕಾರುಗಳು ಹಾಗೂ ಆರೋಪಿಗಳು ಪಡೆದುಕೊಂಡಿದ್ದ ಹಣ, ಮೊಬೈಲ್ ಫೋನ್, ಶವದ ಮೇಲಿದ್ದ ಒಡವೆ ಸೇರಿ ಒಟ್ಟು 139 ವಸ್ತುಗಳನ್ನು ಸೀಜ್ ಮಾಡಿದ್ದಾರೆ.

ಇದನ್ನೂ ಓದಿ: ದೀಪಿಕಾಗೆ ಹೆಲ್ಪ್ ಮಾಡಲು ಮುಂದಾದ ಪ್ರಭಾಸ್, ಬಿಗ್​ಬಿ​; ಫ್ಯಾನ್ಸ್​ಗಳಿಂದ ಭಾರೀ ಮೆಚ್ಚುಗೆ; ವಿಡಿಯೋ ವೈರಲ್!

ಇದುವರೆಗೆ 28 ಕಡೆಗಳಲ್ಲಿ ಸ್ಥಳ ಮಹಜರು ಮಾಡಿದ್ದು ಎಲ್ಲಾ 17 ಆರೋಪಿಗಳ ನಿವಾಸ ಹಾಗೂ ಬೇರೆ 11 ಸ್ಥಳಗಳಲ್ಲಿ ಮಹಜರು ನಡೆಸಿದ್ದಾರೆ. ಒಟ್ಟಾರೆ ಕಳೆದ 10 ದಿನಗಳ ವಿಚಾರಣೆ ಹಾಗೂ ತನಿಖೆಯಲ್ಲಿ ಮಹತ್ವದ ಸಂಗತಿಗಳು ಬಯಲಾಗಿದ್ದು ಆರೋಪಿಗಳಿಗೆ ಕಾನೂನು ಕುಣಿಕೆಯಲ್ಲಿ ಸಿಲುಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

10 ದಿನಗಳ ತನಿಖೆಯಲ್ಲಿ ಬಯಲಾಯ್ತು ‘ಡಿ’ ಗ್ಯಾಂಗ್​ ಕಳ್ಳಾಟ.. ಒಬ್ಬೊಬ್ಬರ ಪಾತ್ರ ವಿಚಿತ್ರ

https://newsfirstlive.com/wp-content/uploads/2024/06/darshan-Custody.jpg

Load More