Advertisment

ಇಂದು ದರ್ಶನ್ ಆ್ಯಂಡ್​ ಗ್ಯಾಂಗ್ ಕಸ್ಟಡಿ ಅಂತ್ಯ.. ಕೋರ್ಟ್​ ಈ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ?

author-image
AS Harshith
Updated On
ಸ್ನಾನ ಇಲ್ಲ, ಜಿಮ್​ ಇಲ್ಲ.. ನೆಲದ ಮೇಲೆ ಕೂರ್ಬೇಕು, ಅನ್ನ ಸಾಂಬರ್​ ತಿನ್ಬೇಕು.. ದರ್ಶನ್​ ಈಗಿನ ಪರಿಸ್ಥಿತಿ ಹೇಗಿದೆ?
Advertisment
  • ಕೋರ್ಟ್​ ಕಟಕಟೆಯಲ್ಲಿ ದರ್ಶನ್ ತೂಗುದೀಪನ ಭವಿಷ್ಯ
  • ನಾಲ್ವರು ಆರೋಪಿಗಳ ಎರಡು ದಿನಗಳ ಪೊಲೀಸ್ ಕಸ್ಟಡಿ ಅಂತ್ಯ
  • ಬೇಲ್‌ ಸಿಗದಂತೆ ಕಾನೂನಿನ ಕುಣಿಕೆ ಹೆಣೆದಿರುವ ಪೊಲೀಸರು

ಕೊಲೆ ಕೇಸ್​​ನಲ್ಲಿ ನಟ ದರ್ಶನ್​​ ಅಂಡ್ ಗ್ಯಾಂಗ್​​ ವಿಚಾರಣೆ ಬಹುತೇಕ ಮುಗಿದಿದೆ. 3 ಬಾರಿ ಕಸ್ಟಡಿಗೆ ಪಡೆದು ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕಲಾಗಿದೆ. ಇವತ್ತು ನಟ ದರ್ಶನ್ ಸೇರಿ ನಾಲ್ವರು ಆರೋಪಿಗಳ ಕಸ್ಟಡಿ ಅಂತ್ಯ ಆಗಲಿದ್ದು ಪರಪ್ಪನ ಅಗ್ರಹಾರ ಜೈಲು ಸೇರ್ತಾರಾ ಅಥವಾ ಮತ್ತೆ ಪೊಲೀಸ್ ಕಸ್ಟಡಿಗೆ ಹೋಗ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.

Advertisment

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾಗೌಡ ಸೇರಿ 13 ಆರೋಪಿಗಳನ್ನು ಕೋರ್ಟ್​ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದೆ. ಆದ್ರೆ ಕೆಲವೊಂದು ವಿಚಾರಣೆ ಬಾಕಿ ಇದ್ದ ಕಾರಣ​​​​​ ನಟ ದರ್ಶನ್​ ಸೇರಿ ನಾಲ್ವರು ಆರೋಪಿಗಳನ್ನು ಮತ್ತೆರಡು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿತ್ತು. ಇಂದಿಗೆ ದರ್ಶನ್ ಗ್ಯಾಂಗ್​​ಗೆ ಕಸ್ಟಡಿ ಅಂತ್ಯ ಆಗಿದ್ದು ನಟ ದರ್ಶನ್ ತೂಗುದೀಪನ ಭವಿಷ್ಯ ಕೋರ್ಟ್​ನ ಕಟಕಟೆಯ ತೂಗುಯ್ಯಾಲೆಯಲ್ಲಿ ತೂಗುತ್ತಿದೆ.

publive-image

ಇದನ್ನೂ ಓದಿ: VIDEO: ‘ಆ ಗರ್ಭಿಣಿ ತಾಯಿಗೆ ಹೇಗೆ ಸಮಾಧಾನ ಮಾಡ್ಬೇಕು’- ದರ್ಶನ್ ಅರೆಸ್ಟ್ ಬಗ್ಗೆ ಲಹರಿ ವೇಲು ಹೇಳಿದ್ದೇನು?

ನಟ ದರ್ಶನ್​ಗೆ ಜೈಲಾ? ಮತ್ತೆ ಪೊಲೀಸ್ ಕಸ್ಟಡಿನಾ?

ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಪೊಲೀಸರ ತನಿಖೆ ಪೂರ್ಣಗೊಂಡಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮುಕ್ಕಾಲುಭಾಗ ಆರೋಪಿಗಳು ಈಗಾಗಲೇ ಜೈಲುಪಾಲಾಗಿದ್ದಾರೆ. ದರ್ಶನ್ ಸೇರಿ ಉಳಿದ ನಾಲ್ವರು ಆರೋಪಿಗಳನ್ನು ಕಸ್ಟಡಿಗೆ ಪಡೆದಿದ್ದ ಅನ್ನಪೂಣೇಶ್ವರಿ ನಗರ ಠಾಣೆ ಪೊಲೀಸರು ವಿಚಾರಣೆ ಮುಗಿಸಿದ್ದಾರೆ. ಮಹತ್ವದ ಸಾಕ್ಷ್ಯಾಧಾರಗಳನ್ನೂ ಕಲೆ ಹಾಕಿದ್ದಾರೆ. ಎ2 ದರ್ಶನ್, ಎ9 ಧನರಾಜ, ಎ10 ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಮಾಲೀಕ ಶೆಡ್ ವಿನಯ್ ಹಾಗೂ ಎ14 ಗಿರಿನಗರದ ಪ್ರದೂಶ್ ಕೇಸ್​​ನಲ್ಲಿ ತನಿಖೆಗೆ ಸರಿಯಾಗಿ ಸ್ಪಂದಿಸದೇ ಸಾಕ್ಷ್ಯನಾಶಕ್ಕೆ ಯತ್ನಿಸಿರೋದು ಬಯಲಾಗಿದೆ. ​​ಹೀಗಾಗಿ ಮತ್ತೆರಡು ದಿನ ಕಸ್ಟಡಿಗೆ ಪಡೆದು ಪೊಲೀಸರು ವಿಚಾರಣೆ ಮುಗಿಸಿದ್ದಾರೆ. ಈಗಾಗಲೇ ನಟ ದರ್ಶನ್​​​​​​ಗೆ 13 ದಿನಗಳ ಕಸ್ಟಡಿ ಅಂತ್ಯ ಆಗಿದ್ದು ಇವತ್ತು ಪೊಲೀಸರು 24ನೇ ಎಸಿಎಂಎಂ ಕೋರ್ಟ್​​ಗೆ ಹಾಜರುಪಡಿಸಲಿದ್ದಾರೆ. ಈಗಾಗಲೇ ಸಂಪೂರ್ಣ ವಿಚಾರಣೆ ಮುಗಿದಿರೋದ್ರಿಂದ ಪೊಲೀಸರು ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ ಬಹುತೇಕ ಕಡಿಮೆ ಇದೆ. ಹೀಗಾಗಿ ನಾಲ್ವರು ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರುವುದು ಪಕ್ಕಾ ಎನ್ನಲಾಗಿದೆ.

Advertisment

publive-image

ಇದನ್ನೂ ಓದಿ: ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್‌.. ದರ್ಶನ್ ಗ್ಯಾಂಗ್‌ನಲ್ಲಿ ಮತ್ತೊಬ್ಬ ಅನಾಮಧೇಯ; ಸ್ಫೋಟಕ ಮಾಹಿತಿ ಇಲ್ಲಿದೆ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆಯುವುದೇ ದರ್ಶನ್‌ಗೆ ದೊಡ್ಡ ಸವಾಲಾಗಿದೆ. ಎಲ್ಲಾ ಸಾಕ್ಷ್ಯಗಳು ಇವರ ಕೃತ್ಯವನ್ನು ಬೆರಳು ಮಾಡಿ ತೋರಿಸುತ್ತಿವೆ. ಮತ್ತೊಂದೆಡೆ ಹತ್ಯೆ ಪ್ರಕರಣದಲ್ಲಿ ಸುಲಭದಲ್ಲಿ ಬೇಲ್‌ ಸಿಗದಂತೆ ಪೊಲೀಸರು ಕಾನೂನಿನ ಕುಣಿಕೆ ಹೆಣೆದಿದ್ದಾರೆ. ರಿಮ್ಯಾಂಡ್‌ ಅರ್ಜಿಯಲ್ಲಿ ಜಾಮೀನು ನೀಡದಂತೆ ಕೋರ್ಟ್​ಗೆ ಮನವಿ ಸಲ್ಲಿಸಿದ್ದು ಅದಕ್ಕೆ ಕಾರಣ ಕೂಡ ನೀಡಿದ್ದಾರೆ.

publive-image

ಇದನ್ನೂ ಓದಿ: ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆದಿದ್ದ A1 ಪವಿತ್ರಾ.. ಮತ್ತೊಂದು ಮಹತ್ವದ ಸಾಕ್ಷ್ಯ ಸಂಗ್ರಹ!

Advertisment

ಒಟ್ಟಿನಲ್ಲಿ ನಸೀಬು ಕೆಟ್ಟರೆ ಹಗ್ಗ ಹಾವಾಗುತ್ತಂತೆ. ಯಾವುದೇ ಕಾರಣಕ್ಕೂ ಕಾನೂನಿನ ಕುಣಿಕೆಯಿಂದ ನರರಾಕ್ಷಸರು ತಪ್ಪಿಸಿಕೊಳ್ಳಬಾರದು. ನೊಂದವರಿಗೆ ನ್ಯಾಯ ಸಿಗಬೇಕಿದೆ. ಈಗಾಗಲೇ ಪವಿತ್ರಾಗೌಡ ಅಂಡ್ ಟೀಂ ಜೈಲುಪಾಲಾಗಿದ್ದಾರೆ. ಇವತ್ತು ನ್ಯಾಯಾಲಯ ಬಹುತೇಕ ನಟ ದರ್ಶನ್​​ ಅಂಡ್ ಗ್ಯಾಂಗ್​​​​ನ್ನು ಜೈಲಿಗೆ ಕಳುಹಿಸುವ ಸಾಧ್ಯತೆಯೇ ಹೆಚ್ಚಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment