/newsfirstlive-kannada/media/post_attachments/wp-content/uploads/2024/06/DARSHAN_PAVITRA-1.jpg)
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಸಾಕ್ಷಿ ಮತ್ತು ತನಿಖೆಯನ್ನು ನಡೆಸುತ್ತಲೇ ಇದ್ದಾರೆ. ಆದರೆ ಇದೀಗ ತನಿಖೆ ವೇಳೆ ನಟ ದರ್ಶನ್ ಹೆಸರಿನಲ್ಲಿ ಒರಿಜಿನಲ್ ಸಿಮ್ ಇಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಮೂರನೇ ವ್ಯಕ್ತಿಯ ಹೆಸರಿನಲ್ಲಿ ದರ್ಶನ್ ಸಿಮ್ ಬಳಸುತ್ತಿದ್ದಾರೆ ಎನ್ನಲಾಗುತ್ತಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ಗೆ ಸಂಬಂಧಿಸಿ ದರ್ಶನ್‌ಗೆ ಮತ್ತೆ ನ್ಯಾಯಾಂಗ ಬಂಧನವಾಗಿದೆ. ಜುಲೈ 18ರವರೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲ ಕಳೆಯಬೇಕಾಗಿದೆ. ಆದರೆ ಅತ್ತ ಪೊಲೀಸರು ಈ ಕೇಸ್ಗೆ ಸಂಬಂಧಿಸಿ ಸರಿಯಾದ ತನಿಖೆ ಮಾಡುತ್ತಲೇ ಇದ್ದಾರೆ. ಅದರಂತೆಯೇ ದರ್ಶನ್ ಬಳಸುತ್ತಿರುವ ಸಿಮ್ ಯಾರದ್ದು ಎಂದು ಪರಿಶೀಲಿಸಿದ್ದಾರೆ.
ಇದನ್ನೂ ಓದಿ: ದರ್ಶನ್ ಪರವಾಗಿ ಬ್ಯಾಟ್ ಬೀಸಿದ ಸ್ಯಾಂಡಲ್ವುಡ್ ನಟಿಯರು.. ಒಬ್ಬೊಬ್ಬರು ನೀಡಿದ ಹೇಳಿಕೆ ಹೀಗಿದೆ
ದರ್ಶನ್ ಫೇಕ್ ಸಿಮ್ ಬಳಸುತ್ತಿದ್ರಾ?
ದರ್ಶನ್ ಪ್ರಕಾಶ್ ನಗರದ ಮೂಲದ ವ್ಯಕ್ತಿಯೊಬ್ಬರ ಹೆಸರಿನಲ್ಲಿರುವ ಸಿಮ್ ಬಳಸುತ್ತಿದ್ದಾರೆ ಎನ್ನಲಾಗುತ್ತಿದೆ. ಹೇಮಂತ್ ಎಂಬ ವ್ಯಕ್ತಿಯ ಹೆಸರಲ್ಲಿ ಈ ಸಿಮ್ ಇದೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಇದನ್ನೂ ಓದಿ: ಮದುವೆಯಾದ ಕೇವಲ 2 ಗಂಟೆಯಲ್ಲಿ ವರ ಸಾವು.. ತಲೆ ಸುತ್ತು ಬಂದು ನೆಲಕ್ಕೆ ಬಿದ್ದ ವಧು
ಪವಿತ್ರ ಬಳಿಯೂ ಒರಿಜಿನಲ್ ಸಿಮ್ ಇಲ್ವಾ?
ಇವಿಷ್ಟು ಮಾತ್ರವಲ್ಲ, ನಟಿ ಪವಿತ್ರ ಗೌಡ ಬಳಿಯು ಒರಿಜಿನಲ್ ಸಿಮ್ ಇಲ್ಲ ಎಂಬುದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆಕೆ ಕೂಡ ಫೇಕ್ ಸಿಮ್ ಬಳಸುತ್ತಿದ್ದಾಳೆ ಎನ್ನಲಾಗುತ್ತಿದೆ. ಬಸವೇಶ್ವನಗರದ ನರಸಿಂಹಲು ಹೆಸರಲ್ಲಿ ಪವಿತ್ರ ಗೌಡ ಬಳಸುತ್ತಿರುವ ಸಿಮ್ ಇದೆ ಎಂದು ಪೊಲಿಸರು ಕಂಡುಹಿಡಿದಿದ್ದಾರೆ.
ಇದನ್ನೂ ಓದಿ: ನದಿಯಾಗಿ ಬದಲಾದ ರಸ್ತೆ, ಮನೆ ಮೇಲೆ ಮಣ್ಣು ಕುಸಿದು ಮಹಿಳೆ ಸಾವು.. ರಾಜ್ಯದಲ್ಲಿ ಮಳೆಯಿಂದ ಭಾರೀ ಅವಾಂತರ
ನಕಲಿ ಸಿಮ್ ಬಳಸುತ್ತಿದ್ದ ಡಿ ಗ್ಯಾಂಗ್?
ಇನ್ನೂ ನಂದೀಶ್ ಇಬ್ಬರು ಸಹ ಒಬ್ಬನ ಹೆಸರಿನಲ್ಲಿ ಸಿಮ್ ಬಳಸುತ್ತಿದ್ದಾರೆ ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಜೊತೆಗೆ ಪ್ರದೂಶ್, ಕಾರ್ತಿಕ್, ನಂದೀಶ್, ನಿಖಿಲ್ದು ಫೇಕ್ ಸಿಮ್ ಎಂಬುದು ಬೆಳಕಿಗೆ ಬಂದಿದೆ. ಬೇರೆ ಬೇರೆ ವ್ಯಕ್ತಿಗಳ ಆಡ್ರೇಸ್ ಪ್ರೂಪ್ ಕೊಟ್ಟು ನಕಲಿ ಸಿಮ್ ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಏನೇ ಆಗಲಿ ಹೆದರಲ್ಲ.. ಯುವ ಡಿವೋರ್ಸ್ ಅರ್ಜಿಗೆ ಶ್ರೀದೇವಿ ಕೊಟ್ರು ಹೊಸ ಟ್ವಿಸ್ಟ್; ಹೇಳಿದ್ದೇನು?
ಸದ್ಯ ಪೊಲೀಸರು ಸಿಮ್ ಮಾಲೀಕರಿಗೆ ನೊಟೀಸ್ ನೀಡಿದ್ದಾರೆ. ಸದ್ಯದಲ್ಲೇ ಈ ನಕಲಿ ಸಿಮ್ ಸತ್ಯಾಂಶ ಹೊರ ಬರ ಬೀಳಲಿದೆ. ಮತ್ತೊಮ್ಮೆ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಳಕೆಯಾದ ನಕಲಿ ಸಿಮ್ ಪ್ರಕರಣವನ್ನು ಪೊಲೀಸರು ಬಯಲಿಗೆಳೆಯಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ