/newsfirstlive-kannada/media/post_attachments/wp-content/uploads/2025/02/Darshan-Vijayalakshmi-News-1-2-1.jpg)
ಇಂದು ಫೆಬ್ರವರಿ 14, ಪ್ರೇಮಿಗಳ ದಿನ. ಇದು ನಟ ದರ್ಶನ್ ಅವರಿಗೆ ಮರೆಯಲಾಗದ ದಿನ. ಅದೇ ರೀತಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೂ ಮರೆಯಲಾಗದ ದಿನ. ಕಾರಣ ಇವರಿಬ್ಬರ ಪ್ರೀತಿಗೆ ಬರೋಬ್ಬರಿ 24 ವರ್ಷ ತುಂಬಿದೆ.
ಪ್ರೀತಿಸಿ ಮದುವೆ ಆಗಿದ್ದ ಜೋಡಿ
ನಟ ದರ್ಶನ್​​, ವಿಜಯಲಕ್ಷ್ಮಿ ಸ್ಯಾಂಡಲ್​ವುಡ್​ನ ಮುದ್ದಾದ ಜೋಡಿ. ಇಬ್ಬರು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. ಸಾಕಷ್ಟು ಏಳು-ಬೀಳುಗಳ ಮಧ್ಯೆಯೂ ಇಬ್ಬರ ಪ್ರೀತಿ ಜೀವಂತವಾಗಿದೆ. ಇತ್ತೀಚೆಗಂತೂ ತಮ್ಮ ಬದುಕಿನ ಪ್ರತಿ ಗಳಿಗೆಯನ್ನು ದರ್ಶನ್ ಮತ್ತು ವಿಜಯಲಕ್ಷ್ಮಿ ಅವರು ವಿಶೇಷವಾಗಿ ಆಚರಿಸುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/02/Darshan-Vijayalakshmi-News-1-1.jpg)
ಜೋಡಿ ಲವ್ ಸ್ಟೋರಿ ಶುರುವಾದದ್ದು ಹೇಗೆ?
ಸ್ಟಾರ್​ ಜೋಡಿ ಮದುವೆಯಾಗಿ 24 ವರ್ಷಗಳು ಕಳೆದು ಹೋದವು. ಮೇ 19, 2000ರಲ್ಲಿ ಇವರಿಬ್ಬರ ವಿವಾಹ ನಡೆದಿತ್ತು. ದರ್ಶನ್ ಮತ್ತು ವಿಜಯಲಕ್ಷ್ಮಿ ಅವರದ್ದು ಲವ್ ಮ್ಯಾರೇಜ್ ಅನ್ನೋದು ವಿಶೇಷ.
ಧರ್ಮಸ್ಥಳದಲ್ಲಿ ನಡೆದಿತ್ತು ಮದುವೆ
ಇವರದ್ದು ಪ್ರೇಮ ವಿವಾಹ. ಪರಸ್ಪರ ಪ್ರೀತಿಸಿದ ಈ ಜೋಡಿ ಮನೆಯವರ ಒಪ್ಪಿಗೆ ಮೇರೆಗೆ ಮದುವೆ ಆದರು. ಈ ಜೋಡಿ ಮದುವೆಗೆ ಸಾಕ್ಷಿ ಆಗಿದ್ದು ಧರ್ಮಸ್ಥಳ ಮಂಜುನಾಥ ಸ್ವಾಮಿ. ಇಲ್ಲೇ ಇಬ್ಬರ ಮದುವೆ ನೆರವೇರಿದ್ದು. ಮದುವೆಯಲ್ಲಿ ದರ್ಶನ್​ ಕುಟುಂಬಸ್ಥರು, ಸಿನಿಮಾ ತಾರೆಯರು ಹಾಗೂ ಸ್ನೇಹಿತರು ಭಾಗಿಯಾಗಿದ್ದರು.
/newsfirstlive-kannada/media/post_attachments/wp-content/uploads/2025/02/Darshan-Vijayalakshmi-News-2.jpg)
ವಿಜಯಲಕ್ಷ್ಮಿಗೆ ಪ್ರಪೋಸ್​ ಮಾಡಿದ್ದ ದರ್ಶನ್​​
ನಟ ದರ್ಶನ್ ತಮ್ಮ ಸ್ನೇಹಿತೆ ರೀನಾ ಎಂಬುವವರ ಬರ್ತಡೇ ಪಾರ್ಟಿಗೆ ಹೋಗಿದ್ದರು. ಇಬ್ಬರು ಮೊದಲು ಭೇಟಿ ಆದದ್ದು ಅಲ್ಲೇ. ರೀನಾ ಮೂಲಕ ಪರಿಚಯ ಆದ ಇಬ್ಬರು ನಡುವೆ ಸ್ನೇಹ ಬೆಳೆಯಿತು. ಮೊದಲು ಸ್ನೇಹಿತರಾಗಿದ್ದ ಇವರು ನಂತರ ಪ್ರೇಮಿಗಳಾದರು. ಲವ್ ಮ್ಯಾರೇಜ್‌ಗೆ ತಾಯಿ ಒಪ್ಪಿಗೆ ಪಡೆದಿದ್ದ ದರ್ಶನ್ ಒಂದು ದಿನ ವಿಜಯಲಕ್ಷ್ಮೀ ಅವರಿಗೆ ಲವ್ ಪ್ರಪೋಸ್ ಮಾಡುತ್ತಾರೆ. ಕೂಡಲೇ ವಿಜಯಲಕ್ಷ್ಮೀ ಒಪ್ಪಿಕೊಳ್ಳುತ್ತಾರೆ. ನಟ ದರ್ಶನ್​ ಅವರು ಏನು ಅಲ್ಲದ ಸಂದರ್ಭದಲ್ಲಿ ಕೈ ಹಿಡಿದವರು ವಿಜಯಲಕ್ಷ್ಮಿ. ಯಾವುದೇ ಕಷ್ಟ ಬಂದ್ರೂ ದರ್ಶನ್​ ಬೆನ್ನಿಗೆ ನಿಂತವರು ಮಡದಿ. ಇಬ್ಬರು ಮನೆಯವರನ್ನು ಒಪ್ಪಿಸಿ ಕೊನೆಗೆ ಮದುವೆ ಆದದ್ದು ವಿಶೇಷ.
/newsfirstlive-kannada/media/post_attachments/wp-content/uploads/2025/02/Darshan-Vijayalakshmi-1.jpg)
ದರ್ಶನ್ ದಂಪತಿಗೆ ವಿನೀಶ್ ಎಂದ ಒಬ್ಬ ಮಗ ಇದ್ದಾರೆ. ವಿನೀಶ್ ದರ್ಶನ್ 'ಐರಾವತ' ಚಿತ್ರದಲ್ಲಿ ಅಭಿನಯಿಸಿದ್ದಾರೆ. ದರ್ಶನ್​​, ವಿನೀಶ್ ಮತ್ತು ವಿಜಯಲಕ್ಷ್ಮಿಯವರು ಈಗ ಖುಷಿ ಖುಷಿಯಾಗಿ ಜೀವನ ಕಳೆಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us