/newsfirstlive-kannada/media/post_attachments/wp-content/uploads/2024/09/darshan-4.jpg)
ಬಳ್ಳಾರಿ: ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಅಂಡ್​ ಗ್ಯಾಂಗ್​ ಜೈಲಿನಲ್ಲಿ ಕಾಲ ಕಳೆಯುತ್ತಿದೆ. ಯಾವಾಗ ಪೊಲೀಸ್ ಅಧಿಕಾರಿಗಳು ದರ್ಶನ್ ಅಂಡ್ ಗ್ಯಾಂಗ್​ ಕೃತ್ಯದ ರೆಕಾರ್ಡ್​ ಅನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದರೋ ಅವಾಗಿನಿಂದ ಭಯ ಶುರುವಾಗಿಬಿಟ್ಟಿದೆ. ಇದೇ ವೇಳೆ ಚಾರ್ಜ್​ಶೀಟ್​ನಲ್ಲಿರೋದೇನು ಎಂದು ಅನ್ನೋದನ್ನ ತಿಳಿಯಲು ದಾಸ ಫುಲ್ ಟೆನ್ಶನ್​ ಆಗಿದ್ದರು. ಅದೇ ದಿನ ಟಿವಿಗಾಗಿ ಬೇಡಿಕೆ ಇಟ್ಟಿದ್ದರು.
/newsfirstlive-kannada/media/post_attachments/wp-content/uploads/2024/09/Darshan-In-jail-2.jpg)
ದರ್ಶನ್ ಸೇರಿ 17 ಮಂದಿ ನಡೆಸಿದ್ದ ಮೃಗೀಯ ವರ್ತನೆಯನ್ನ ಚಿತ್ರಗುಪ್ತನಂತೆ ಪೊಲೀಸರು ಸವಿವರವಾಗಿ ಬರೆದಿದ್ದಾರೆ. ಎಲ್ಲಾ 17 ಆರೋಪಿಗಳ ವಿರುದ್ಧ ಎಸಿಪಿ ಚಂದನ್​​​ ನೇತೃತ್ವದಲ್ಲಿ 3,991 ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದೆ. ಅತ್ತ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸುತ್ತಿದ್ದಂತೆ ಫುಲ್​ ಟೆನ್ಶನ್ ಆಗಿದ್ದ​ ದರ್ಶನ್​ ಟಿವಿ ನೀಡುವಂತೆ ಜೈಲಧಿಕಾರಿಗಳಿಗೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ ದರ್ಶನ್ ಮೂರನೇ ಬೇಡಿಕೆಯನ್ನು ಜೈಲು ಅಧಿಕಾರಿಗಳು ಈಡೇರಿಸಿದ್ದಾರೆ. ಈ ಹಿಂದೆ ಪತ್ನಿ ವಿಜಯಲಕ್ಷ್ಮಿ ಮನವಿ ಮಾಡಿದಂತೆ ದರ್ಶನ್​ಗೆ ಸರ್ಜಿಕಲ್ ಚೇರ್​ ನೀಡಲಾಗಿತ್ತು. ಈ ಹಿಂದೆ ಟಿವಿ ಬೇಡ ಅಂತಿದ್ದ ದಾಸ, ತನ್ನ ಕೇಸ್​ನ ಮಾಹಿತಿ ಪಡೆಯಲು ಟಿವಿಗಾಗಿ ಬೇಡಿಕೆ ಇಟ್ಟಿದ್ದರು.
/newsfirstlive-kannada/media/post_attachments/wp-content/uploads/2024/09/Pavithra-gowda-Renukaswamy-1.jpg)
ಹೀಗಾಗಿ ಐದು ದಿನಗಳ ಬಳಿಕ 15ನೇ ಸೆಲ್​ನಲ್ಲಿ ಜೈಲಧಿಕಾರಿಗಳು ಹೈಯರ್ ಕಂಪನಿ ಟಿವಿ ಅಳವಡಿಕೆ ಮಾಡಿದ್ದಾರೆ. ಜೈಲಿನ ನಿಯಮದ ಪ್ರಕಾರ ಟಿವಿ ನೀಡಬಹುದು. ಅದರೆ ಟಿವಿ ರಿಪೇರಿಯಿದ್ದ ಹಿನ್ನೆಲೆಯಲ್ಲಿ ಈವರೆಗೂ ನೀಡಿರಲಿಲ್ಲ. ಇದೀಗ ದರ್ಶನ್​ ಸೆಲ್‌ಗೆ ಟಿವಿ ಅಳವಡಿಕೆ ಮಾಡಲಾಗಿದೆ. ಈ ಮೂಲಕ ಬಳ್ಳಾರಿ ಜೈಲಿನಿಂದಲೇ ದರ್ಶನ್​ ರಾಜ್ಯದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂದು ತಿಳಿದುಕೊಳ್ಳಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us