Advertisment

‘ಬಾಸ್​ ಹೆಂಡ್ತಿಗೆ ಮೆಸೇಜ್ ಮಾಡ್ತಿಯಾ ಎಂದು ಹೊಡೆದ್ವಿ..’ ಇಂಚಿಂಚು ಮಾಹಿತಿ ಬಿಚ್ಚಿಟ್ನಂತೆ ರಾಘವೇಂದ್ರ

author-image
Ganesh
Updated On
ದರ್ಶನ್​​ ರಕ್ಷಣೆಗೆ ಬಂದ್ರಾ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು..?
Advertisment
  • ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅರೆಸ್ಟ್
  • ಆರೋಪಿಗಳಿಂದ ಹೇಳಿಕೆ ದಾಖಲಿಸಿಕೊಂಡ ಪೊಲೀಸ್ರು
  • ಪ್ರಕರಣದಲ್ಲಿ ಒಟ್ಟು 13 ಆರೋಪಿಗಳನ್ನ ಬಂಧಿಸಲಾಗಿದೆ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಗೌಡ ಸೇರಿದಂತೆ ಒಟ್ಟು 13 ಆರೋಪಿಗಳ ಬಂಧನವಾಗಿದೆ. ಬಂಧಿತರನ್ನು ತೀವ್ರ ತನಿಖೆಗೆ ಒಳಪಡಿಸಿರುವ ಪೊಲೀಸರು ಒಂದೊಂದೇ ವಿಚಾರವನ್ನು ಬಯಲಿಗೆ ಎಳೆಯುತ್ತಿದ್ದಾರೆ.

Advertisment

ಸ್ಥಳ ಮಹಜರು ಪ್ರಕ್ರಿಯೆ ಮುಗಿದ ಬಳಿಕ ಆರೋಪಿಗಳಿಂದ ಪೊಲೀಸರು ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಅಂತೆಯೇ ಪ್ರಕರಣದ ನಾಲ್ಕನೇ ಆರೋಪಿ ರಾಘವೇಂದ್ರ ನೀಡಿರುವ ಹೇಳಿಕೆ ಪ್ರಕಾರ.. ನಾನು ಚಿತ್ರದುರ್ಗದ ತೂಗದೀಪ ಅಭಿಮಾನಿಗಳ ಸಂಘದ ಅಧ್ಯಕ್ಷನಾಗಿದ್ದೇನೆ. ದರ್ಶನ್ ಸಾರ್ ಒಂದು ನಂಬರ್ ಕೊಟ್ಟು ಈ ವ್ಯಕ್ತಿಯನ್ನ ಪತ್ತೆ ಮಾಡುವಂತೆ ಹೇಳಿದರು. ನಂಬರ್ ಸಿಕ್ಕಿದ್ರಿಂದ ರೇಣುಕಾಸ್ವಾಮಿಯನ್ನ ಆರಾಮಾಗಿ ಪತ್ತೆ ಮಾಡಿದ್ದೆ.

ಇದನ್ನೂ ಓದಿ:‘ಮೂರ್ಛೆ ಹೋದ ಅನ್ಕೊಂಡ್ವಿ, ಆದರೆ..’ ಅಸಲಿ ಸತ್ಯ ಕಕ್ಕಿದ್ನಾ ಆರೋಪಿ ಪವನ್..!

ರೇಣುಕಾಸ್ವಾಮಿಯನ್ನು 2 ದಿನ ವಾಚ್ ಮಾಡಿ ಫಾರ್ಮಸಿಗೆ ಬರುವ ವೇಳೆ ಮಾತನಾಡಬೇಕು ಅಂತಾ ಕರೆದುಕೊಂಡು ಬಂದೆ. ಶನಿವಾರ ಮೂರು ಗಂಟೆ ವೇಳೆಗೆ ಪಟ್ಟಣಗೆರೆಯ ವಿನಯ್ ಶೆಡ್​ ಒಳಗೆ ಕರೆದುಕೊಂಡು ಹೋದೆ. ಅಷ್ಟರಲ್ಲಿ ಅಲ್ಲಿ ಆಗಾಗಲೇ ಸಾಕಷ್ಟು ಜನ ಇದ್ದು ರೇಣುಕಾಸ್ವಾಮಿಯನ್ನು ನೋಡಿದ ಕೂಡಲೆ ಹಲ್ಲೆ ಮಾಡಿದ್ರು. ನಮ್ಮ ಬಾಸ್ ಹೆಂಡ್ತಿಗೆ ಮೆಸೇಜ್ ಮಾಡ್ತಿಯೇನೋ ಅಂತಾ ಎಲ್ರೂ ಸೇರಿ ಹೊಡೆದ್ವಿ. ಸತ್ತು ಹೋಗ್ತಾನೆ ಅಂತಾ ಅಂದುಕೊಂಡಿರಲಿಲ್ಲ ಎಂದು ಸ್ಟೇಟ್​ಮೆಂಟ್ ನೀಡಿದ್ದಾನೆ ಎನ್ನಲಾಗುತ್ತಿದೆ.

Advertisment

ಇದನ್ನೂ ಓದಿ:‘ಊಟ ಮಾಡಿ ಊರು ಸೇರು ಅಂದಿದ್ದೆ..’ ಸ್ಟೇಟ್​ಮೆಂಟ್​ನಲ್ಲಿ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ದರ್ಶನ್

ಇದನ್ನೂ ಓದಿ:ಕೊಲೆ ಮಾಡ್ತಾರೆ ಅನ್ನೋ ಸಣ್ಣ ಕಲ್ಪನೆಯೂ ಇರಲಿಲ್ಲ.. ಇನ್ನೂ ಏನೇನು ಹೇಳಿಕೆ ಕೊಟ್ರು ಪವಿತ್ರ ಗೌಡ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment