Advertisment

ಜೈಲಿನಿಂದ ಹೊರ ಬರ್ತಿದ್ದಂತೆ ರೇಣುಕಾಸ್ವಾಮಿ ಹತ್ಯೆಯಲ್ಲಿ ಭಾಗಿ.. ಮತ್ತೆ ಕಂಬಿ ಹಿಂದೆ ಹೋದ ದರ್ಶನ್ ಆಪ್ತ..!

author-image
Ganesh
Updated On
ಎಣ್ಣೆ ಅಮಲಿನಲ್ಲಿ CCTV ಮರೆತ ಆರೋಪಿಗಳು; ಕ್ಯಾಮೆರಾದಲ್ಲಿ ದರ್ಶನ್‌ ಹಲ್ಲೆ ಮಾಡಿದ್ದ ದೃಶ್ಯ ಸೆರೆ?
Advertisment
  • ದರ್ಶನ್ ಗ್ಯಾಂಗ್​ ಕೇಸ್​ನಲ್ಲಿ ಆರೋಪಿಗಳ ಕ್ರೈಂ ಹಿಸ್ಟರಿ ರೋಚಕ
  • 15ನೇ ಆರೋಪಿ ಕಾರ್ತಿಕ್ ಅಲಿಯಾಸ್ ಕಪ್ಪೆ ವಿರುದ್ಧ ಹಲ್ಲೆ ಕೇಸ್
  • ಕೊಲೆ ಕೇಸ್​ನಲ್ಲಿ ದರ್ಶನ್, ಪವಿತ್ರ ಗ್ಯಾಂಗ್ ಅರೆಸ್ಟ್ ಆಗಿದೆ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಕೇಸ್​​ನ ಕೆಲವು ​ಆರೋಪಿಗಳ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆಯಂತೆ. 15ನೇ ಆರೋಪಿ ಕಾರ್ತಿಕ್ ಅಲಿಯಾಸ್ ಕಪ್ಪೆ ವಿರುದ್ಧ ಹಲ್ಲೆ ದಾಖಲಾಗಿರೋದು ತನಿಖೆಯಿಂದ ಗೊತ್ತಾಗಿದೆ.

Advertisment

ನಾಲ್ವರು ಸಹಚರರ ಜೊತೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪವನ್ನು ಕಪ್ಪೆ ಎದುರಿಸುತ್ತಿದ್ದಾನೆ. ತಲಘಟ್ಟಪುರ ಠಾಣಾ ವ್ಯಾಪ್ತಿಯ ಹೆಮ್ಮಿಗೆಪುರದಲ್ಲಿ ಕಳೆದ ವರ್ಷ ಯುವಕನ ಮೇಲೆ ಕಬ್ಬಿಣದ ರಾಡ್​​ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬೇಲ್ ಮೇಲೆ ಹೊರ ಬಂದು ಇದೀಗ ರೇಣುಕಾಸ್ವಾಮಿ ಕೊಲೆ‌ ಕೇಸ್​ನಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ:CM ಕನಸು ನನಸಿಗೆ ಡಿಕೆಶಿ​​ ನಡೆ ತೀವ್ರ ಕುತೂಹಲ.. ಚೆನ್ನಪಟ್ಟಣ ವಿಚಾರದಲ್ಲಿ ಕಾಂಗ್ರೆಸ್ ಗೇಮ್ ಚೇಂಜ್..!

publive-image

ಇನ್ನೊಂದು ವಿಚಾರ ಅಂದ್ರೆ ರೇಣುಕಾಸ್ವಾಮಿ ಭೀಕರ ಹತ್ಯೆ ಬಳಿಕ ಎರಡೆರಡು ಎಣ್ಣೆ ಪಾರ್ಟಿ ಮಾಡಿದ್ದರು. ಜೂನ್ 8ರ ರಾತ್ರಿ ಡಿಬಾಸ್ ಗ್ಯಾಂಗ್ ಎರಡು ತಂಡಗಳಾಗಿ ಬೇರೆಬೇರೆ ಕಡೆ ಪಾರ್ಟಿ ಮಾಡಿದೆ. ದರ್ಶನ್, ವಿನಯ್, ದೀಪಕ್, ಪ್ರದೋಶ್ ನಾಗರಾಜ್, ಟೀಮ್​ನಿಂದ ಆರ್​ಆರ್ ನಗರದ ಸ್ಟೋನಿ ಬ್ರೂಕ್​ನಲ್ಲಿ ಎಣ್ಣೆ ಪಾರ್ಟಿ ಮಾಡಲಾಗಿದೆ. ಶವ ಬೀಸಾಡಿದ ನಂತರ ಕಾರ್ತಿಕ್ ಅಲಿಯಾಸ್ ಕಪ್ಪೆ, ಕೇಶವ್, ನಿಖಿಲ್ ನಾಯಕ್​ರಿಂದಲೂ ಆರ್​ಆರ್‌ನಗರದ ಟ್ರೋಬೋ 98 ಸ್ಟ್ರೀಟ್ ರೆಸ್ಟೋರೆಂಟ್​ನಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ದೀಪಕ್ ನೀಡಿದ ಹಣದಲ್ಲಿ ಹೋಟಲ್​ನಲ್ಲಿ ರೂಮ್ ಬುಕ್ ಮಾಡಿದ್ದರು.

Advertisment

ಇದನ್ನೂ ಓದಿ:ಪಟ್ಟಣಗೆರೆ ಶೆಡ್​ನಲ್ಲಿ ರಕ್ತ ಚರಿತ್ರೆಗಳ ಕತೆ..? ಸಿಕ್ಕ ರಕ್ತದ ಕಲೆಗಳು ಹೇಳ್ತಿವೆಯಂತೆ ಪಾಪಿಗಳ ಲೋಕದ ಕತೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment