/newsfirstlive-kannada/media/post_attachments/wp-content/uploads/2024/11/Darshan-hospital-doctor.jpg)
ಬೆಂಗಳೂರು: ವಿಪರೀತ ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ಅವರು ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಂಧನದಲ್ಲಿದ್ದ ದರ್ಶನ್‌ಗೆ ಹೈಕೋರ್ಟ್ ಚಿಕಿತ್ಸೆ ಪಡೆಯಲು 6 ವಾರಗಳ ಮಧ್ಯಂತರ ಜಾಮೀನು ನೀಡಿದೆ. ದರ್ಶನ್‌ಗೆ ಚಿಕಿತ್ಸೆ ನೀಡುತ್ತಿರುವ ನುರಿತ ವೈದ್ಯರ ತಂಡ ಮುಂದಿನ 48 ಗಂಟೆಗಳಲ್ಲಿ ಎಲ್ಲಾ ರೀತಿಯ ವರದಿ ಬರುತ್ತೆ. ಆಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.
ಬಿಜಿಎಸ್ ಆಸ್ಪತ್ರೆಗೆ ದಾಖಲಾದ ದರ್ಶನ್ ಅವರಿಗೆ ಮೊದಲು ಅಬ್ಸರ್ವೇಷನ್‌ನಲ್ಲಿ ಇರಲು ವೈದ್ಯರು ಸೂಚಿಸಿದ್ದಾರೆ. ಈ ಬಗ್ಗೆ ದರ್ಶನ್‌ಗೆ ಚಿಕಿತ್ಸೆ ನೀಡುತ್ತಿರುವ ನ್ಯೂರೋಸರ್ಜನ್ ಡಾ. ನವೀನ್ ಅಪ್ಪಾಜಿ ಗೌಡ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ನಟ ದರ್ಶನ್.. BGS ಗೋಡೆ, ಅಂಗಡಿಗಳ ಮೇಲೆ D ಬಾಸ್, D ಬಾಸ್ ಜೈಕಾರ!
ದರ್ಶನ್ ಅವರಿಗೆ ಬೆನ್ನು ನೋವಿನ ಜೊತೆ ಕಾಲು ನೋವು ಇದೆ. ಕಾಲು ನೋವಿನ ಜೊತೆಗೆ ಎಡಗಾಲಿನ ಸೆಳೆತ ಇದ್ದು, ಸದ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂದಿನ ಎರಡು ದಿನಗಳ ಕಾಲ ದರ್ಶನ್ ಆಸ್ಪತ್ರೆಯಲ್ಲೇ ಇರುತ್ತಾರೆ. ರಕ್ತಪರೀಕ್ಷೆ MRI ಸ್ಕ್ಯಾನಿಂಗ್ ಸೇರಿ ಕೆಲ ಪರೀಕ್ಷೆ ನಡೆಸಲಾಗುತ್ತೆ ಎಂದಿದ್ದಾರೆ.
48 ಗಂಟೆಗಳಲ್ಲಿ ಚಿಕಿತ್ಸೆಯ ಭವಿಷ್ಯ ನಿರ್ಧಾರ
ಮುಂದಿನ 48 ಗಂಟೆಗಳಲ್ಲಿ ದರ್ಶನ್ ಬೆನ್ನು ನೋವಿಗೆ ನಡೆಸಿರುವ ವೈದ್ಯಕೀಯ ಪರೀಕ್ಷೆಯ ಎಲ್ಲಾ ರೀತಿಯ ವರದಿ ಬರುತ್ತೆ. ಸದ್ಯ ಬೆನ್ನುನೋವಿನಿಂದ ದರ್ಶನ್ ಅವರಿಗೆ ಕಾಲು ನೋವು ಕೂಡ ಹೆಚ್ಚಾಗಿದೆ. ಬೆನ್ನು ನೋವಿನಿಂದ ಎಡಗಾಲಿನ ಸ್ಪರ್ಶವೂ ಕಡಿಮೆಯಾಗಿದೆ. ಮುಂದಿನ 48 ಗಂಟೆಗಳಲ್ಲಿ ದರ್ಶನ್ ವೈದ್ಯಕೀಯ ಚಿಕಿತ್ಸೆ ಹೇಗೆ ಮಾಡಬೇಕು ಎಂದು ನಿರ್ಧಾರ ಮಾಡುವುದಾಗಿ ವೈದ್ಯರು ಹೇಳಿದ್ದಾರೆ.
ದರ್ಶನ್‌ಗೆ ಇರೋ ಸಮಸ್ಯೆಗಳ ಮಾಹಿತಿ ಪಡೆದಿರೋ ವೈದ್ಯರು ಆ ಸಮಸ್ಯೆಗೆ ತಕ್ಕ ಪರೀಕ್ಷೆಗಳನ್ನು ಮಾಡಲಿದ್ದಾರೆ. MRI, ಸಿಟಿ ಸ್ಕ್ಯಾನ್, ಬ್ಲಡ್ ಟೆಸ್ಟ್ ಸೇರಿದಂತೆ ಅನೇಕ ಪರೀಕ್ಷೆ ಮಾಡಲಾಗುತ್ತಿದೆ. ಬಳ್ಳಾರಿ ಬಿಮ್ಸ್ ವೈದ್ಯರ ಸ್ಕ್ಯಾನಿಂಗ್ ರಿಪೋರ್ಟ್ ವೈದ್ಯರ ಕೈಗೆ ಸಿಕ್ಕಿಲ್ಲ. ಆದ್ದರಿಂದ ದರ್ಶನ್ ಅವರಿಗೆ ಬೆಂಗಳೂರಲ್ಲೇ ಎಲ್ಲಾ ರೀತಿಯ ಪರೀಕ್ಷೆಗೆ ವೈದ್ಯರು ಮುಂದಾಗಿದ್ದಾರೆ.
ದರ್ಶನ್ ಆರೋಗ್ಯಕ್ಕೆ ಸಂಬಂಧಪಟ್ಟ ಎಲ್ಲಾ ಪರೀಕ್ಷೆಯ ವರದಿಗಳು 48 ಗಂಟೆಯೊಳಗೆ ವೈದ್ಯರಿಗೆ ಸಿಗಲಿದೆ. ಆ ವರದಿಗಳ ಆಧಾರದ ಮೇಲೆ ವೈದ್ಯರು ಆಪರೇಷನ್ ಅವಶ್ಯಕತೆ ಇಲ್ಲದಿದ್ರೆ ಫಿಸಿಯೋಥೆರಪಿ ನಡೆಸಲಿದ್ದಾರೆ. ಸದ್ಯ ದರ್ಶನ್ ಬೆನ್ನುನೋವು, ಕಾಲುನೋವಿಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ