ತಕ್ಷಣವೇ ಆಪರೇಷನ್ ಆಗಬೇಕು ಇಲ್ಲದಿದ್ದರೆ ಪ್ಯಾರಾಲಿಸಿಸ್- ಸಿ.ವಿ ನಾಗೇಶ್
ದರ್ಶನ್ ಅವರ ಮೆಡಿಕಲ್ ರಿಪೋರ್ಟ್ ಓದಿದ ಹೈಕೋರ್ಟ್ ಜಡ್ಜ್ ಹೇಳಿದ್ದೇನು?
ವಿಮ್ಸ್ ಆಸ್ಪತ್ರೆ ವೈದ್ಯರು ನೀಡಿರುವ ವೈದ್ಯಕೀಯ ವರದಿ ಏನೇನಿದೆ?
ಬೆಂಗಳೂರು: ರೇಣುಕಾಸ್ವಾಮಿ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಬೆನ್ನು ನೋವು ಬೆಂಬಿಡದೆ ಕಾಡುತ್ತಿದೆ. ತುಂಬಾ ನೋವಿನಿಂದ ಬಳಲುತ್ತಿರುವ ದರ್ಶನ್ ಅವರು ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ವೇಳೆ ಕೋರ್ಟ್‌ಗೆ ವೈದ್ಯಕೀಯ ವರದಿಯನ್ನು ಸಲ್ಲಿಸಲಾಗಿದೆ.
ದರ್ಶನ್ ಜಾಮೀನು ಅರ್ಜಿ ವಿಚಾರಣೆ ಆರಂಭದಲ್ಲಿ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಹೈಕೋರ್ಟ್‌ಗೆ ವಿಮ್ಸ್ ಆಸ್ಪತ್ರೆ ವೈದ್ಯರು ನೀಡಿರುವ ವೈದ್ಯಕೀಯ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ.
ದರ್ಶನ್ ಪರ ವಕೀಲ ಸಿ.ವಿ ಅವರು ನಾಗೇಶ್ ಅವರು ಈಗಾಗಲೇ ದರ್ಶನ್‌ಗೆ ಸಿಟಿ ಸ್ಕ್ಯಾನ್ ಮಾಡಲಾಗಿದೆ. MRI ಸಹ ಮಾಡಲಾಗಿದೆ. ಅವರ ಸ್ಪೈನಲ್ ಕಾರ್ಡ್ ಗೆ ರಕ್ತ ಚಲನೆ ಆಗುತ್ತಾ ಇಲ್ಲ. ಇದರಿಂದ ಕಿಡ್ನಿಯ ಸಮಸ್ಯೆಯೂ ಆಗ್ತಾ ಇದೆ. ಡಿಸ್ಕ್ ಕೂಡ ಪ್ರಾಬ್ಲಂ ಆಗಿದೆ. ತಕ್ಷಣವೇ ಆಪರೇಷನ್ ಆಗಬೇಕಿದೆ. ಇಲ್ಲದಿದ್ದರೆ ಪ್ಯಾರಾಲಿಸಿಸ್ ಆಗುವ ಸಾಧ್ಯತೆ ಇದೆ. ಹೀಗಾಗಿ ಅವರಿಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕುತ್ತಿಗೆವರೆಗೂ ನೀರಿತ್ತು… ಇಡೀ ರಾತ್ರಿ ಮಂಡಿ ಮೇಲೆ ಕೂತಿದ್ದೆ; ಸಾವು ಗೆದ್ದು ಬಂದ ಹಂಸಾ ಹೇಳಿದ್ದೇನು?
ಮಧ್ಯಂತರ ಜಾಮೀನು ನೀಡಿ ಎನ್ನುವ ಸಿ.ವಿ ನಾಗೇಶ್ ಮನವಿಗೆ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ಮೆಡಿಕಲ್ ರಿಪೋರ್ಟ್ ಓದಿದ ಜಡ್ಜ್ ಬೆಂಗಳೂರು ಅಥವಾ ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಬಹುದು ಎಂದು ಹೇಳಲಾಗಿದೆ. ಆರೋಪಿ ಪರ ವಕೀಲರು ಹಾಗೂ SPP ಇಬ್ಬರಿಗೂ ಕಾಪಿ ನೀಡಲು ಆದೇಶಿಸುತ್ತೇನೆ. ನಾಳೆ ಮಧ್ಯಾಹ್ನ ವಿಚಾರಣೆ ಮಾಡೋಣ ಬಿಡಿ ಎಂದು ವಿಚಾರಣೆಯನ್ನು ಮುಂದೂಡಿದ್ದಾರೆ.
ಮೆಡಿಕಲ್ ರಿಪೋರ್ಟ್‌ನಲ್ಲಿ ಏನಿದೆ?
ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಶಸ್ತ್ರ ಚಿಕಿತ್ಸೆ ಮಾಡುವ ಅವಶ್ಯಕತೆ ಇದೆ. ಕಿಡ್ನಿ, ಪೂಟ್ ನಂಬ್ನೆಸ್, ಆರ್ಥೋಪೆಡಿಕ್, ನ್ಯೂರೋ ಪ್ರಾಬ್ಲಂ ಇದೆ. ಕಾಲಿನಲ್ಲಿ ನಂಬ್ನೆಸ್ (ಮರಗಟ್ಟುವಿಕೆ) ಕಾಣಿಕೊಂಡಿದೆ. ಬೆಂಗಳೂರು & ಬಳ್ಳಾರಿಯಲ್ಲಿ ಚಿಕಿತ್ಸೆ ನೀಡಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ