ದರ್ಶನ್ ಕೇಸ್‌ಗೆ ಹೊಸ ಟ್ವಿಸ್ಟ್.. ಪಟ್ಟಣಗೆರೆ ಶೆಡ್‌ ರಕ್ತಚರಿತ್ರೆಯ ಒಂದೊಂದು ಅಕ್ಷರವನ್ನೂ ಓದಿದ SPP ಪ್ರಸನ್ನ ಕುಮಾರ್

author-image
Gopal Kulkarni
Updated On
ರೇಣುಕಾ ಮರ್ಮಾಂಗದ ಫೋಟೋ, ದರ್ಶನ್ ಪ್ಯಾಂಟ್ ಬಿಚ್ಚು ಅಂತ ಹೇಳಿದ್ದಕ್ಕೆ ಸಾಕ್ಷಿ ಇದೆ; SPP ಪ್ರಸನ್ನ ಕುಮಾರ್
Advertisment
  • ರೇಣುಕಾಸ್ವಾಮಿ ಹತ್ಯೆ ಕೇಸ್​ನ ಜಾಮೀನು ಅರ್ಜಿ ವಿಚಾರಣೆ ಆರಂಭ
  • ದರ್ಶನ್ ಪಡೆಯ ಒಂದೊಂದು ಕ್ರೌರ್ಯ ಬಿಚ್ಚಿಟ್ಟ ವಕೀಲ ಪ್ರಸನ್ನ ಕುಮಾರ್
  • ಸಾವಿಗೆ ಕಾರಣವಾದ ಗಾಯ, ಗಾಯಗಳ ಆಗಿದ್ದು ಎಲ್ಲವನ್ನು ಬಿಚ್ಚಿಟ್ಟ ಎಸ್​ಪಿಪಿ

ಪಟ್ಟಣಗೆರೆಶೆಡ್​, ಸದ್ಯ ಕರ್ನಾಟಕದಲ್ಲಿ ತಾಜ್​ಮಹಲ್​ಗಿಂತಲೂ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಆದ್ರೆ ದುರಂತ ಏನು ಅಂದ್ರೆ ಒಂದು ಭೀಕರ ಹತ್ಯೆಯಿಂದಾಗಿ, ನೆತ್ತರು ಹರಿದ ಕಥೆಯಾಗಿ, ಕ್ರೌರ್ಯಕ್ಕೆ ಮುಖಗಳೆಷ್ಟು ಎಂದು ಮೂಕಪ್ರೇಕ್ಷನಂತೆ ಕಂಡ ಜಾಗವಾಗಿ ಪ್ರಸಿದ್ಧಿ ಪಡೆದಿದ್ದು ಒಂದು ದೌರ್ಭಾಗ್ಯ. ರೇಣುಕಾಸ್ವಾಮಿ ಹತ್ಯೆಯಾಗಿ ಹೆಚ್ಚು ಕಡಿಮೆ ಮೂರು ತಿಂಗಳುಗಳೇ ಕಳೆದಿವೆ. ಈಗ ಸದ್ಯ ದರ್ಶನ್​ ಜಾಮೀನಿಗೂ ಕೂಡ ಅರ್ಜಿಯನ್ನು ಹಾಕಿಯಾಗಿದ್ದು. ಸಿಸಿಹೆಚ್​ 57 ನ್ಯಾಯಾಲಯದಲ್ಲೀಗ ವಾದ ವಿವಾದಗಳು ಜೋರಾಗಿ ನಡೆದಿವೆ. ದರ್ಶನ್ ಪರ ವಾದ ಮಂಡಿಸಲು ಸಿ.ವಿ.ನಾಗೇಶ್​ ಸನ್ನದ್ಧರಾಗಿದ್ದರೆ. ಸರ್ಕಾರದ ಪರವಾಗಿ ಸ್ಪೇಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್​ ವಾದ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮದುವೆ ಆಗೋಕೆ ಸರ್ಕಾರಿ ಕೆಲಸದ ಡಿಮ್ಯಾಂಡ್.. 3 ಕೋಟಿ ದುಡ್ಡು ಇಲ್ಲ, ಹೆಂಡ್ತಿನೂ ಸಿಗ್ತಿಲ್ಲ! ಅಸಲಿಗೆ ಆಗಿದ್ದೇನು?

ಸಿಸಿಹೆಚ್​ 57ನೇ ನ್ಯಾಯಾಯಲ್ಲಿ ಪ್ರಸನ್ನ ಕುಮಾರ್ ಮಾಡಿದ ವಾದ ದರ್ಶನ್ ಮತ್ತು ಗ್ಯಾಂಗ್​ನ ರಕ್ತಚರಿತ್ರೆ ಅಧ್ಯಾದ ಒಂದೊಂದು ಅಕ್ಷರವನ್ನು ಬಿಡದೆ ಓದಿದ್ದರು. ಕ್ರೌರ್ಯದ ಒಂದೊಂದು ಮುಖವನ್ನು ಕೂಡ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. ಇಡೀ ಡಿ ಗ್ಯಾಂಗ್ ಒಬ್ಬ ನರಪೇತಲ ಮನುಷ್ಯನನ್ನು ಅದೆಷ್ಟು ಹಿಂಸಿಸಿ ಅಯ್ಯೋ ಅನಿಸಿ ಹತ್ಯೆ ಮಾಡಿದೆ ಎಂಬುದರ ಪಾಪದ ಪಟ್ಟಿಯ ಒಂದೊಂದು ಪದವನ್ನೂ ಬಿಡದೇ ಓದಿದ್ದಾರೆ. ನ್ಯಾಯಾಲಯದಲ್ಲಿ ನ್ಯಾಯಾಧೀಶರ ಎದುರು ಪ್ರಸನ್ನಕುಮಾರ್ ಅವರು ಉಲ್ಲೇಖ ಮಾಡಿದ ಪ್ರಮುಖ ಅಂಶಗಳು ಐ ವಿಟ್​ನೆಸ್ ಸುಳ್ಳು ಹೇಳಿದರು ಟೆಕ್ನಿಕಲ್ ಎವಿಡೆನ್ಸ್​ ಮತ್ತು ಡಿಜಿಟಲ್ ಎವಿಡೆನ್ಸ್ ಸುಳ್ಳು ಹೇಳಲ್ಲ ಎಂದಿದ್ದಾರೆ. ಆ ಎವಿಡೆನ್ಸ್​ಗಳ ಪಟ್ಟಿಯನ್ನು ನ್ಯಾಯಾಲಯದ ಎದುರು ತೆರೆದಿಟ್ಟಿದ್ದಾರೆ.

ಇದನ್ನೂ ಓದಿ: ಭೀಕರ ಅಪಘಾತ.. KSRTC, ಬೈಕ್ ಮುಖಾಮುಖಿ ಡಿಕ್ಕಿ; ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು
ಪ್ರಸನ್ನಕುಮಾರ್ ವಾದಮಂಡನೆಯಲ್ಲಿ ಉಲ್ಲೇಖಿಸಿರುವ ಅಂಶಗಳು ಅದರಲ್ಲೂ ಆರೋಪಿ ಪುನೀತ್ ಹೇಳಿಕೆಯನ್ನುಉಲ್ಲೇಖಿಸಿದ್ದು ಹೇಗಿತ್ತು ಅನ್ನೋದರ ವಿವರ ಹೀಗಿದೆ.

*ವಿನಯ್ ಕಾಲ್ ಮಾಡಿ ಇಟಿಯೋಸ್ ಕಾರು ಒಳಗೆ ಬಿಡಲು ಹೇಳಿದ್ರು

*ರೇಣುಕಾಸ್ವಾಮಿಯನ್ನು ಧನರಾಜ್, ನಂದೀಶ್, ಪವನ್ ದೊಣ್ಣೆ, ರಿಪೀಸಸ್ ಕಟ್ಟಿಗೆಯಿಂದ ಹೊಡೆದರು

*ಧನರಾಜ್ ಇವನು ಪವಿತ್ರ ಅತ್ತಿಗೆಗೆ ಮೆಸೇಜ್ ಮಾಡಿದ್ದಾಗಿ ಹೇಳಿದ

*ಆಗ ನಂದಿಶ್ ಅವನ‌ 4-5 ಅಡಿ ಎತ್ತಿ ಎತ್ತಿ ರೇಣುಕಾಸ್ವಾಮಿಯನ್ನು ನೆಲಕ್ಕೆ ಎಸೆಯುತ್ತಿದ್ದ

*ಆಗ ನೆಲದ ಮೇಲೆ ಬಿದ್ದವನ ಜೊತೆ ನಂದೀಶ್ ಕುಳಿತು ಊಟ ಮಾಡ್ತಿದ್ದ

*ಧನರಾಜ್ ಚಿಕ್ಕ ಸೈಜ್​ ಮೊಬೈಲ್ ಥರಹದ ವಸ್ತುವಿನಲ್ಲಿ ಶಾಕ್ ನೀಡುತ್ತಿದ್ದ

*ವಿನಯ್ ಕರೆ ಮಾಡಿ ಪೋಟೊ ಕಳಿಸಲು ನನಗೆ ಹೇಳಿದ ಆಗ ಫೋಟೋ ವಿಡಿಯೋ ಕಳಿಸಿದೆ

*ಆಮೇಲೆ ದರ್ಶನ್, ಪವಿತ್ರಗೌಡ ಜೊತೆ ಬಂದರು, ಆಗ ದರ್ಶನ್ ಎದೆಗೆ ರೇಣುಕಾಸ್ವಾಮಿ ಒದ್ದರು

*ಹೇಳೊ ಇವಳೆ ನನ್ನ ಹೆಂಡತಿ ಗೋವಾದಲ್ಲಿ ರೂಂ ಮಾಡ್ತಿಯಾ ಅಂತಾ ಹೇಳಿದ್ದರು

*ಆತನಿಗೆ ನೈಲಾನ್ ಹಗ್ಗದಿಂದ ಹಲ್ಲೆ ಮಾಡಿದ್ದರು ರೇಣುಕಾಸ್ವಾಮಿಯ ಪೋನ್ ತಗೊಂಡು

*ಪ್ರದೋಷ್ ಯಾರ್ ಯಾರಿಗೆ ಮೆಸೇಜ್ ಮಾಡಿದ್ದ ಎಂದು ಹೇಳುತ್ತಾ ಇದ್ದರು

*ದರ್ಶನ್ ರೇಣುಕಾಸ್ವಾಮಿ ಎದೆಯ ಭಾಗಕ್ಕೆ ತುಳಿಯುತ್ತಿದ್ದರು. ಪ್ಯಾಂಟ್​ ಬಿಚ್ಚಿಸಿ ಮರ್ಮಾಂಗಕ್ಕೆ ಒದ್ದರು

*ಹೊಡೆತ ತಾಳಲಾರದೆ ಕತ್ತು ಕೆಳಕ್ಕೆ ಬಿದ್ದಾಗ ದರ್ಶನ್ ಅವನ ಎಡಭಾಗಕ್ಕೆ ತುಳಿದರು

*ನಂತರ ಕಾರಿನಲ್ಲಿ ಕುಳಿತ ದರ್ಶನ್ ಪವಿತ್ರಾರರನ್ನು ಮನೆಗೆ ಬಿಟ್ಟು ಬರಲು ಹೇಳಿದರು

*ವಿನಯ್ & ದರ್ಶನ್ ಕಾರಿನಲ್ಲಿ ಇಳಿದಾಗ, ಚಿತ್ರದುರ್ಗದಿಂದ ಬಂದ ವ್ಯಕ್ತಿಗಳು ಪೋಟೊ ತಗೊಳ್ತಾರೆ

*ದರ್ಶನ್ ಬಂದಾಗ ಬಾಸ್ ಬಾಸ್ ಅಂತಾರೆ ದರ್ಶನ್ ಪೋಟೊ ತೆಗೆಯಲು ಹೇಳಿದರು

*ಇದೆಲ್ಲಾ ಆದಮೇಲೆ ರೇಣುಕಾ ಕುಮಾರಸ್ವಾಮಿ ನೀರು ಕುಡಿಯುತ್ತಿಲ್ಲಾ ಅಂತ ಹೇಳಿದರು

*ನನಗೆ ವಿನಯ್ ಕರೆ ಮಾಡಿ ನಾನು ಎಲ್ಲಿದ್ದೀಯಾ ಅಂತಾ ಕೇಳಿದ್ರು

*ದರ್ಶನ್ ರೇಣುಕಾಸ್ವಾಮಿ ಕೊಲೆ ಮಾಡಿದ ವಿಚಾರ ಯಾರಿಗೂ ಹೇಳಬೇಡ ಅಂದಿದ್ದರು

*ನಾನು ಮಂಗಳವಾರ ಮಲೈಮಹದೇಶ್ವರದಿಂದ ಬಂದಾಗ ಟಿವಿ ನೋಡಿದೆ ದರ್ಶನ್ & ಪವಿತ್ರ ಅರೇಸ್ಟ್ ಆಗಿದ್ದರು

ಈ ಮೇಲಿನ ಎಲ್ಲಾ ಅಂಶಗಳನ್ನು ನ್ಯಾಯಾಲಯದ ಮುಂದೆ ಹೇಳಿದ ವಕೀಲ ಪ್ರಸನ್ನ ಕುಮಾರ್ ಸಾವಿಗೆ ಕಾರಣ ತಿಳಿಸಿಲ್ಲ ಎಂಬ ವಾದಕ್ಕೂ ಕೂಡ ಕೌಂಟರ್ ಕೊಟ್ಟರು

*ರೇಣುಕಾಸ್ವಾಮಿಯ ಬಲಬದಿಯ ರಿಬ್ 6-7 ಕಟ್ ಆಗಿದೆ

*ಕೊಲೆಯಾದ ವ್ಯಕ್ತಿಯ ದೇಹದ ಒಳಗೆ ಗಂಭೀರವಾಗಿ ಬ್ಲೀಡ್ ಆಗಿದೆ

*17 ಮುರಿತಗಳ ಪೋಸ್ಟ್ ಮಾಟರ್ನ್ ರಿಪೋರ್ಟ್ ಹೇಳಿದೆ

*ಎಲ್ಲಾ ಗಾಯಗಳು ಸಾವಿನ ಮೊದಲೇ ಆಗಿರುವ ಗಾಯಗಳು ಅಂತಾ ರಿಪೋರ್ಟ್ ಇದೆ

*ಈ ರೀತಿ ಸಾವಿಗೆ ಮುಂಚೆ ಆಗಿರುವ ಗಾಯಗಳು ಹೇಳ್ತಿವೆ

*ದೇಹದ ಹೊರ ಭಾಗದಲ್ಲಿ 39 ಗಾಯಗಳಿವೆ ಹೀಗಾಗಿ ಆತ ಹೇಗೆ ಸಾವನ್ನಪ್ಪಿದ್ದ ಅನ್ನೋದಕ್ಕೆ ಸಾಕ್ಷಿ ಇದೆ

*ಆದರೆ ಆತನ ದೇಹದ 13 ಹೊರ ಭಾಗದ ಗಾಯಗಳು ಸಾವಿಗೆ ಮುಂಚೆ ಆಗಿದೆ

*ಅಷ್ಟು ಗಾಯಗಳಿಂದಲೇ ದೇಹದಿದ ರಕ್ತ ಸುರಿದಿದೆ. ಹೀಗಾಗಿ ರಕ್ತದ ಕಲೆಗಳು ಸ್ಟೇನ್ ಪತ್ತೆಯಾಗಿವೆ

*ಹೊರಗಿನ ಮೊದಲ ಗಾಯ ಗಾಡಿಯ ಬಂಪರ್ ಗೆ ಗುದ್ದಿದ್ದರಿಂದ ಆಗಿದೆ

*ಮೂರನೇ ಗಾಯದಲ್ಲಿ ರೇಣುಕಾಸ್ವಾಮಿಯ ರಿಬ್ ಮುರಿತಗೊಂಡಿದೆ

*ಅದು ಒರ್ವ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ಮೇಲೆ ನಿಂತಾಗ ಆಗತ್ತೆ ಅಂತಾ ವರದಿ ಇದೆ

*ಅದು ಈಗಾಗಲೇ ನಾನು ಹೇಳಿದ್ದೆ ದರ್ಶನ್ ತುಳಿದ ಬಗ್ಗೆ ಹೇಳಿಕೆ ಇದೆ

*ಮರ್ಮಾಂಗ ಕ್ಜೆ ಹೊಡೆದಿರುವುದು ಸಹ ಪ್ರಮುಖ ಗಾಯ ಎಂಬುದು ಉಲ್ಲೇಖವಿದೆ.

*ಪೋಸ್ಟ್​ ಮಾರ್ಟಮ್​ ಮಾಡಿದ ವೈದ್ಯರೇ ಈ ವರದಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ

*ಮೃತನ ಹೊಟ್ಟೆಯಲ್ಲಿ ಆತ ಸಾವಿಗೆ ಮುನ್ನ ಎರಡು ಗಂಟೆ ಮುಂಚೆ ಊಟ ಆಗಿದ್ದು ಉಲ್ಲೇಖವಿದೆ

*ಹೊಟ್ಟೆಯಲ್ಲಿ ಸಿಕ್ಕ ಹಸಿರು ದ್ರವದ ಪ್ರಕಾರ ಇದಕ್ಕೆ ದೊಡ್ಡ ಸಾಕ್ಷಿ

*ಯಾವ ಸಮಯ ಆತ ಸಾವನ್ನಪ್ಪಿರಬಹುದು ಅಂತಾ ಅಂದಾಜಿಸಿದೆ

*ಇದನ್ನ ಸ್ವತಃ ಪೋಸ್ಟ್ ಮಾಟರ್ಮ್ ಮಾಡಿದ ವೈದ್ಯರು ನೀಡಿದ್ದಾರೆ

*ದೇಹ್ಮದ ರಿಬ್ ನಲ್ಲಿ 17 ಗಾಯ, ಲಂಗ್ ಪ್ರಾಕ್ಚರ್ ಆಗಿದೆ, ದೇಹದ ಹೊರಗೆ 39 ಗಾಯ ಇದೆ

*ಇದೊಂದು ರಕ್ತ ಚರಿತೆಯ ರೀತಿಯಲ್ಲಿ ಆಗಿರುವ ಘಟನೆ

*ಆತನ ಮಾರ್ಮಾಂಗದ ಬಲ ಬದಿಯ ಟೆಸ್ಟಿಕಲ್ ಹೊರಗೆ ಬಂದಿದೆ

ಎಂದು ವಾದ ಮಂಡಿಸಿದ ಪ್ರಸನ್ನ ಕುಮಾರ ಇದು ನಿಜವಾಗಿಯೂ ಸಿ ನಾಗೇಶ್ ಹೇಳಿದಂತೆ ಅರೆಬಿಯನ್ ನೈಟ್ಸ್ ಸ್ಟೋರಿಯೇ ಎಂದು ಕೌಂಟರ್ ಕೊಟ್ಟರು. ಇನ್ನು ಟೆಕ್ನಿಕಲ್, ಐವಿಟ್​ನೆಸ್​ ಬಗ್ಗೆ ವಾದಕ್ಕೆ ಟೈಮ್​ ಬೇಡಿದ ಪ್ರಸನ್ನ ಕುಮಾರ್​ ಅವರ ಮನವಿಯನ್ನು ಆಲಿಸಿದ ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment