ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ದರ್ಶನ್ ಅರ್ಜಿ ವಿಚಾರಣೆ
ನ್ಯಾಯಾಲಯದ ಅಂಗಳದಲ್ಲಿ ಭರ್ಜರಿ ವಾದ ಮತ್ತು ಪ್ರತಿವಾದ ಮಂಡನೆ
ವಕೀಲ ನಾಗೇಶ್ ವಾದಕ್ಕೆ ಪ್ರತಿಯಾಗಿ ಕೌಂಟರ್ ಕೊಟ್ಟ SPP ಪ್ರಸನ್ನ ಕುಮಾರ್
ಹೈಪ್ರೋಫೈಲ್ ಕೇಸ್, ಇಡೀ ರಾಜ್ಯವನ್ನೇ ಸೆಳೆಯುತ್ತಿರೋ ಪ್ರಕರಣ. ಎರಡೂ ಕಡೆ ಚಾಣಾಕ್ಷ ವಕೀಲರು. ಇಷ್ಟು ಹೇಳಿದ್ಮೇಲೆ ಕೇಳಬೇಕಾ? ಖಂಡಿತವಾಗಿಯೂ ಕೋರ್ಟ್‌ನಲ್ಲಿ ಬೆಂಕಿ ಬಿರುಗಾಳಿಯಂತ ವಾದ ಪ್ರತಿವಾದ ಇದ್ದೇ ಇರುತ್ತೆ. ಅಷ್ಟಕ್ಕೂ ನಾವು ಹೇಳ್ತಾ ಇರೋದು ರೇಣುಕಾಸ್ವಾಮಿ ಹತ್ಯೆ ಕೇಸ್ ಬಗ್ಗೆ. ಅಲ್ಲಿ ದರ್ಶನ್‌ಗೆ ಜಾಮೀನು ಬೇಕು ಅಂತಾ ಸಿವಿ ನಾಗೇಶ್ ವಾದ ಮಾಡಿದ್ರೆ, ಜಾಮೀನು ಕೊಡಬಾರದು ಅಂತಾ ಪ್ರಸನ್ನ ಕುಮಾರ್ ಪ್ರತಿವಾದ ಮಾಡಿದ್ದಾರೆ. ಕೌಂಟರ್ ಕೊಟ್ಟಿದ್ದಾರೆ. ಹಾಗಾದ್ರೆ, ಎಸ್‌ಪಿಪಿ ವಾದ ಹೇಗಿತ್ತು? ದರ್ಶನ್‌ಗೆ ಜಾಮೀನು ಸಿಗುತ್ತೋ ಇಲ್ವೋ? ಈ ಲೇಖನದಲ್ಲಿದೆ ಸಂಪೂರ್ಣ ವಿವರ.
ಇದನ್ನೂ ಓದಿ: ರೇಣುಕಾ ಮರ್ಮಾಂಗದ ಫೋಟೋ, ದರ್ಶನ್ ಪ್ಯಾಂಟ್ ಬಿಚ್ಚು ಅಂತ ಹೇಳಿದ್ದಕ್ಕೆ ಸಾಕ್ಷಿ ಇದೆ; SPP ಪ್ರಸನ್ನ ಕುಮಾರ್
ದರ್ಶನ್‌ಗೆ ಜಾಮೀನು ಸಿಗುತ್ತೋ ಇಲ್ವೋ? ಈ ಪ್ರಶ್ನೆಗೆ ಉತ್ತರ ಬೇಕು ಅಂತಾದ್ರೆ ಎಸ್‌ಪಿಪಿ ಪ್ರಸನ್ನ ಕುಮಾರ್ ಅವ್ರ ಪ್ರತಿವಾದ ಹೇಗಿತ್ತು? ಅದೆಷ್ಟು ಪ್ರಬಲವಾಗಿತ್ತು? ವಕೀಲರಾಗಿರೋ ಸಿವಿ ನಾಗೇಶ್ ಅವ್ರ ವಾದಕ್ಕೆ ಯಾವ್ ರೀತಿಯಲ್ಲಿ ಕೌಂಟರ್ ಕೊಟ್ಟಿದ್ದಾರೆ ಅನ್ನೋದ್ ನೋಡಲೇಬೇಕು. ದರ್ಶನ್‌ಗೆ ಯಾಕೆ ಜಾಮೀನು ಕೊಡ್ಬಾರದು ಅಂತಾ ಪ್ರಸನ್ನ ಕುಮಾರ್ ಮಂಗಳವಾರ ವಾದ ಶುರು ಮಾಡಿದ್ರು. ಅವಾಗ್ಲೇ ರಕ್ತಚರಿತ್ರೆಯ ಕಥೆಯನ್ನು ನ್ಯಾಯಾಧೀಶರ ಮುಂದೆ ತೆರೆದಿಟ್ಟಿದ್ರು. ಹಾಗೇ ಇನ್ನಷ್ಟು ವಿಷ್ಯಗಳನ್ನು ನಿಮ್ಮ ಮುಂದೆ ಇಡೋದ್ ಇದೆ ಅಂತಾ ಹೇಳಿ ಬುಧವಾರಕ್ಕೂ ಸಮಯ ಕೇಳಿದ್ರು. ಹಾಗೇ ಬುಧವಾರ ಪ್ರತಿವಾದ ಶುರುವಾಗ್ತಾ ಇದ್ದಂತೆ ವಕೀಲರಾಗಿರೋ ಸಿವಿ ನಾಗೇಶ್ ಅವರ ವಾದಕ್ಕೆ ಕೌಂಟರ್ ಶುರು ಮಾಡಿದ್ರು. ದರ್ಶನ್‌ಗೆ ಜಾಮೀನು ಯಾಕೆ ಕೊಡ್ಬೇಕು ಅನ್ನೋದನ್ನು ಸಿವಿ ನಾಗೇಶ್ ಅವ್ರು ಯಾವ ಪಾಯಿಂಟ್ ಮುಂದೆ ಇಟ್ಟಿದ್ರೋ? ಅದೇ ಪಾಯಿಂಟ್‌ಗೆ ಎಸ್‌ಪಿಪಿ ಪ್ರಸನ್ನ ಕುಮಾರ್ ಕೌಂಟರ್ ಕೊಟ್ಟಿದ್ದಾರೆ.
ಕೌಂಟರ್-01
ಶೂನೋ? ಚಪ್ಪಲಿನೋ? ಅನ್ನೋದಕ್ಕೆ ಸ್ಪಷ್ಟತೆ!
ರೇಣುಕಾಸ್ವಾಮಿ ಹತ್ಯೆಯ ದಿನ ದರ್ಶನ್ ತಪ್ಪಲಿ ಧರಿಸಿದ್ರೋ? ಶೂ ಧರಿಸಿದ್ರೋ? ಅನ್ನೋದ್ ಪೊಲೀಸ್ರು ಸಲ್ಲಿಕೆ ಮಾಡಿರೋ ಚಾರ್ಜ್‌ಶೀಟ್‌ನಲ್ಲಿಯೇ ಭಿನ್ನತೆ ಇತ್ತು. ಯಾಕಂದ್ರೆ, ದರ್ಶನ್ ಸ್ವಇಚ್ಛಾ ಹೇಳಿಕೆಯಲ್ಲಿ ಚಪ್ಪಲಿ ಧರಿಸಿದ್ದೆ ಅನ್ನೋ ಉಲ್ಲೇಖವಿತ್ತು. ಹಾಗೇ ಪೊಲೀಸ್ರು ತಾವು ದರ್ಶನ್ ಮನೆಯಿಂದ ಶೂ ರಿಕವರಿ ಪಡ್ಕೊಂಡಿದ್ದೇವೆ, ಪಟ್ಟಣಗೆರೆಯ ಮಣ್ಣಿಗೂ ಆ ಶೂದಲ್ಲಿರೋ ಮಣ್ಣಿಗೂ ಮ್ಯಾಚ್ ಆಗಿತ್ತು ಅನ್ನೋದನ್ನು ಚಾರ್ಜ್‌ಶೀಟ್‌ನಲ್ಲಿಯೇ ಉಲ್ಲೇಖಿಸಿದ್ರು. ಇದನ್ನೇ ದರ್ಶನ್ ಪರ ವಕ್ಕಿಲರಾಗಿರೋ ಸಿವಿ ನಾಗೇಶ್ ಅವ್ರು ತಮ್ಮ ವಾದದಲ್ಲಿ ಪ್ರಮುಖವಾಗಿ ಉಲ್ಲೇಖಿಸಿದ್ರು. ಇದಕ್ಕೆ ಪ್ರಸನ್ನ ಕುಮಾರ್ ಪ್ರತಿಯಾಗಿ ಕೌಂಟರ್ ಕೊಟ್ಟಿದ್ದಾರೆ.
ಇದನ್ನೂ ಓದಿ: ದರ್ಶನ್ ಕೇಸ್‌ಗೆ ಹೊಸ ಟ್ವಿಸ್ಟ್.. ಪಟ್ಟಣಗೆರೆ ಶೆಡ್ ರಕ್ತಚರಿತ್ರೆಯ ಒಂದೊಂದು ಅಕ್ಷರವನ್ನೂ ಓದಿದ SPP ಪ್ರಸನ್ನ ಕುಮಾರ್
‘ಆರೋಪಿ ಹೇಳಿದ್ದು ರೆಕಾರ್ಡ್ ಆಗಿದೆ’
ಪಂಚನಾಮೆ ಮಾಡುವ ವೇಳೆ ಐಒಗೆ ಏನು ಬೇಕೋ ಅದನ್ನ ಆರೋಪಿಯಿಂದ ಪಡೆಯಲು ಸಾಧ್ಯವಿಲ್ಲ. ಆರೋಪಿ ಏನು ಬೇಕೋ ಅದನ್ನೇ ಹೇಳ್ತಾನೆ. ಆತ ಚಪ್ಪಲಿ ಅಂದ್ರೆ ಚಪ್ಪಲಿ, ಶೂ ಅಂದ್ರೆ ಶೂ ಅಂತಾ ರೆಕಾರ್ಡ್ ಆಗತ್ತೆ. ಆದರೆ ಮಹಜರು ವೇಳೆ ಶೂ ರಿಕವರಿ ಆಗಿದೆ. ಆರೋಪಿ ಒಮ್ಮೆ ಚಪ್ಪಲಿ ಅಂತಾನೆ, ಆಮೇಲೆ ಶೂ ಅಂತಾನೆ. ಆದರೆ, ಅಗತ್ಯ ಅಂಶ ಮಾತ್ರ ಪರಿಗಣಿಸಬೇಕು.
ಕೌಂಟರ್-02
ಕುಕ್ಕಿ ಕುಕ್ಕಿ ಬಟ್ಟೆ ತೊಳೆದಿದ್ದು ಏಕೆ?
ಪೊಲೀಸರು ಮಹಜರು ವೇಳೆ ದರ್ಶನ್‌ಗೆ ಸಂಬಂಧಿಸಿದ ಬಟ್ಟೆಯನ್ನು ವಶಕ್ಕೆ ಪಡೆಯಲಾಗಿತ್ತು. ಆ ಬಟ್ಟೆಯಲ್ಲಿ ರಕ್ತ ಇದ್ದಿರೋದು ಪತ್ತೆಯಾಗಿತ್ತು. ಅದು ರೇಣುಕಾಸ್ವಾಮಿಯದ್ದೇ ರಕ್ತ ಅನ್ನೋದ್ ಎಫ್‌ಎಸ್‌ಎಲ್ ಲ್ಯಾಬ್ ಟೆಸ್ಟ್‌ನಲ್ಲಿ ಸಾಬೀತಾಗಿದೆ ಅಂತಾ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿತ್ತು. ಅದ್ಕೆ ಸಿವಿ ನಾಗೇಶ್ ಅವ್ರು ಬಟ್ಟೆಯನ್ನು ಸರ್ಫ್ ಹಾಕಿ ಕುಕ್ಕಿ ಕುಕ್ಕಿ ತೊಳೆದ್ರೂ ರಕ್ತ ಇರುತ್ತಾ? ಅಂತಾ ಪ್ರಶ್ನಿಸಿದ್ರು. ಅಷ್ಟೇ ಅಲ್ಲ, ಇದೆಲ್ಲ ದರ್ಶನ್ ವಿರುದ್ಧ ಉದ್ದೇಶಪೂರಕವಾಗಿ ಸಾಕ್ಷ್ಯಗಳನ್ನು ಹುಟ್ಟು ಹಾಕಲಾಗಿದೆ ಅಂತಾನೂ ನ್ಯಾಯಾಧೀಶರ ಗಮಕ್ಕೆ ತಂದಿದ್ರು. ಆದರೆ ಅದಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ಕೌಂಟರ್ ಕೊಟ್ಟಿದ್ದಾರೆ.
ಕುಕ್ಕಿ ಕುಕ್ಕಿ ತೊಳೆದರೂ ಕೂಡ ರಕ್ತ ಇರುತ್ತೆ!
ಬಟ್ಟೆಯನ್ನು ಕುಕ್ಕಿ ಕುಕ್ಕಿ ತೊಳೆದರೆ ಆದರಲ್ಲಿ ಹೇಗೆ ಬ್ಲಡ್ ಸ್ಟೈನ್ ಪತ್ತೆ ಆಗತ್ತೆ ಅಂದಿದ್ದಾರೆ. ಕೆಲ ರಿಸರ್ಚ್ ಹೇಳ್ತಾವೆ. ತೊಳೆದ ಬಟ್ಟೆಯಲ್ಲಿ ಡಿಎನ್ಎ ಸ್ಪಷ್ಟವಾಗಿ ಪ್ರೊಫೈಲ್ ಬರಲ್ಲ. ಅದು ಯಾವಾಗ ಬಿಸಿ ನೀರಿನಲ್ಲಿ ವಾಷ್ ಮಾಡಿದಾಗ ಮಾತ್ರ. ಲಾಂಡ್ರಿ ಡಿಟರ್ಜೆಂಟ್ ನಲ್ಲಿ ಇಷ್ಟು ಡಿಗ್ರಿ ಬಿಸಿ ಆಗಲ್ಲ. ಇಲ್ಲಿ ವಾಷ್ ಮಾಡಿರೋದು ತಂಪಾದ ನೀರಿನಲ್ಲಿ. ಅಂದು ಅವರ ವಾಷಿಂಗ್ ಮಷಿನ್ ಕೆಟ್ಟು ಹೋಗಿತ್ತು. ಹಾಗಾಗಿ, ಆಕೆ ಕೈಯಲ್ಲಿ ವಾಷ್ ಮಾಡಿದ್ದಾರೆ. ಅಷ್ಟಕ್ಕೂ ಬಟ್ಟೆಯನ್ನ ಕುಕ್ಕಿ-ಕುಕ್ಕಿ ಒಗೆಸಿದ್ದು ಏಕೆ? ಬಟ್ಟೆಯ ಮೇಲೆ ಇರೋ ರಕ್ತದ ಕಲೆಗಳನ್ನು ಅಳಿಸೋ ಯತ್ನ ನಡೆದಿದೆ ಎಂದು ಪ್ರಸನ್ನ
ಕೌಂಟರ್-03
ಪೊಸ್ಟ್ ಮಾರ್ಟಂ ತಡವಾಗಿದ್ದೇಕೆ? ಎಸ್‌ಪಿಪಿ ಸ್ಪಷ್ಟನೆ!
ರೇಣುಕಾಸ್ವಾಮಿಯ ಭೀಕರ ಹತ್ಯೆಯಾಗಿದ್ದು ಜೂನ್ 8ನೇ ತಾರೀಕು. ಜೂನ್ 9ನೇ ತಾರೀಕು ರೇಣುಕಾಸ್ವಾಮಿ ಮೃಹದೇಹ ಚರಂಡಿಯಲ್ಲಿ ಪತ್ತೆಯಾಗುತ್ತೆ. ದೇಹದ ತುಂಬಾ ಗಾಯಗಳು ಆಗಿರ್ತಾವೆ. ಅದನ್ನು ನೋಡಿಯೇ ಅಮಾನುಷ ಕ್ರೌರ್ಯ ಮೆರೆಯಲಾಗಿದೆ ಅನ್ನೋದ್ ಸಾಬೀತಾಗಿರುತ್ತೆ. ಆದ್ರೆ, ಮೃತ ವ್ಯಕ್ತಿ ಯಾರು ಅನ್ನೋದು ಗೊತ್ತಾಗಿರಿವು0ದಿಲ್ಲ. ಆ ವ್ಯಕ್ತಿಯನ್ನು ಯಾರೂ ಪತ್ತೆ ಮಾಡಿರೋದಿಲ್ಲ. ಹೀಗಾಗಿ ಮೂರು ದಿನ ತಡವಾಗಿ ಪೋಸ್ಟ್ ಮಾರ್ಟಂ ಮಾಡಿಸಲಾಗಿದೆ ಅಂತಾ ಹೇಳಲಾಗ್ತಿದೆ. ಬಟ್, ದರ್ಶನ್ ಪರ ವಕೀಲರಾಗಿರೋ ಸಿವಿ ನಾಗೇಶ್ ಅವ್ರು ಮೃಹದೇಹ ಜೂನ್ 9ಕ್ಕೆ ಪತ್ತೆಯಾದ್ರೂ ಮೂರು ದಿನ ತಡ ಮಾಡಿ ಪೋಸ್ಟ್ ಮಾರ್ಟಂ ಮಾಡಿಸಿದ್ದು ಏಕೆ? ಅಂತಾ ಪ್ರಶ್ನಿಸಿದ್ರು. ಆದ್ಕೆ ಪ್ರಸನ್ನ ಕುಮಾರ್ ಪ್ರತಿವಾದ ಮಾಡಿದ್ದಾರೆ.
ಮೃತ ದೇಹವನ್ನ ಸಂಬಂಧಿ ಗುರುತಿಸಿದ್ರೆ ಅದರ ಮರಣೋತ್ತರ ಪರೀಕ್ಷೆ ಮಾಡಬಹುದು. ಆದರೆ ಎರಡು ದಿನಗಳಾದ್ರೂ ಇಲ್ಲಿ ಗುರುತು ಪತ್ತೆಯಿಲ್ಲ. ಹೀಗಾಗಿ ತಡವಾಗಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಇಲ್ಲಿ ಇನ್ನೊಂದು ಪ್ರಮುಖ ಅಂಶ ಪೋಸ್ಟ್ ಮಾರ್ಟಂ ರಿಪೋರ್ಟ್ ಹೇಳತ್ತೆ, ದೇಹದ ಎಲ್ಲಾ ಗಾಯಗಳು ಸಾವಿಗೆ ಮುನ್ನ ಆಗಿವೆ. ಮುಖಕ್ಕೆ ನಾಯಿ ಕಚ್ಚಿರುವುದನ್ನ ಬಿಟ್ಟು, ಇನ್ನೆಲ್ಲಾ ಸಾವಿಗೆ ಮುನ್ನ ಆಗಿವೆ. ಹೀಗಾಗಿ ತಡವಾದ ಪೋಸ್ಟ್ ಮಾರ್ಟಂಯಿಂದ ತನಿಖೆಗೆ ಯಾವುದೇ ತೊಂದರೆ ಇಲ್ಲ. ಎಂದು ಪ್ರಸನ್ನ ಕುಮಾರ್ ಕೌಂಟರ್ ಕೊಟ್ಟರು
ಕೌಂಟರ್-04
ಬಟ್ಟೆಯಲ್ಲಿನ ರಕ್ತಕ್ಕೂ ಸ್ವಾಮಿ ಡಿಎನ್‌ಎಗೂ ಮ್ಯಾಚ್!
ರೇಣುಕಾಸ್ವಾಮಿ ಬರ್ಬರ ಹತ್ಯೆ ಕೇಸ್‌ನಲ್ಲಿ ಪೊಲೀಸ್ರು ಸೂಕ್ಷ್ಮವಾಗಿ ತನಿಖೆ ಮಾಡಿದ್ದಾರೆ. ಅಂದು ಪಟ್ಟಣಗೆರೆ ಶೆಡ್‌ನಲ್ಲಿ ಯಾವ್ ಯಾವ್ ಆರೋಪಿಗಳು ಇದ್ರೋ ಅವರೆಲ್ಲರ ಬಟ್ಟೆ, ಶೂ, ಚಪ್ಪಲಿಯನ್ನು ವಶಕ್ಕೆ ಪಡೆದಿದ್ರು. ಅದೆಲ್ಲವನ್ನು ಲ್ಯಾಬ್‌ಗೆ ಕಳುಹಿಸಿದ್ದರು. ಆ ಲ್ಯಾಬ್ ವರದಿ ಪ್ರಕಾರ ಆರೋಪಿಗಳ ಬಟ್ಟೆ, ಶೂ ಚಪ್ಪಲಿಯಲ್ಲಿ ಪತ್ತೆಯಾಗಿರೋ ರಕ್ತಕ್ಕೂ? ರೇಣುಕಾಸ್ವಾಮಿ ಡಿಎನ್‌ಎಗೂ ಮ್ಯಾಚ್ ಆಗಿದೆ ಅನ್ನೋ ವಿಷಯವನ್ನು ಚಾರ್ಜ್‌ಶೀಟ್‌ನಲ್ಲಿ ಸಲ್ಲಿಕೆ ಮಾಡಿದ್ರು. ಆದರೆ, ದರ್ಶನ್ ಶೂ ರಿಕವರಿಯಾಗಿದೆ. ಅದ್ರಲ್ಲಿ ರಕ್ತ ಪತ್ತೆಯಾದ ಉಲ್ಲೇಖವಿಲ್ಲ ಅನ್ನೋದನ್ನು ದರ್ಶನ್ ಪರ ವಕೀಲರು ವಾದಿಸಿದ್ರು. ಅದ್ರೆ, ಪ್ರಸನ್ನ ಕುಮಾರ್ ಅವ್ರು ಪ್ರತಿವಾದ ಮಾಡಿದ್ದಾರೆ.
ಇದನ್ನೂ ಓದಿ: ಮದುವೆ ಆಗೋಕೆ ಸರ್ಕಾರಿ ಕೆಲಸದ ಡಿಮ್ಯಾಂಡ್.. 3 ಕೋಟಿ ದುಡ್ಡು ಇಲ್ಲ, ಹೆಂಡ್ತಿನೂ ಸಿಗ್ತಿಲ್ಲ! ಅಸಲಿಗೆ ಆಗಿದ್ದೇನು?
ಶೂ ರಿಕವರಿ ಆಗಿದೆ. ಅದರಲ್ಲಿ ರಕ್ತದ ಕಲೆ ಕಾಣ್ತಾ ಇದೆ ಅಂತಾ ಬರೆದಿಲ್ಲ ಅಂತ ವಾದಿಸಿದ್ರು. ಆದ್ರೆ ಲೂಮಿನಾರ್ ಟೆಸ್ಟ್ ನಲ್ಲಿ ಇದಕ್ಕೆ ಸ್ಪಷ್ಟತೆ ಸಿಕ್ಕಿದೆ. ದರ್ಶನ್ ಜೀನ್ಸ್ ಪ್ಯಾಂಟ್, ಟಿ ಶರ್ಟ್, ಒಂದು ಜೊತೆ ಶೂ ರಿಕವರಿ ಆಗಿದೆ. ಆರೋಪಿ 1 ಪವಿತ್ರಗೌಡ ಫ್ಯಾಂಟ್, ಎ 11 ನಾಗರಾಜ್ ಟೀ ಶರ್ಟ್, ಎ12, ಎ8 ರವರ ರಿಕವರಿಯಲ್ಲಿ ಬ್ಲಡ್ ಸ್ಯಾಂಪಲ್ ಪತ್ತೆಯಾಗಿದೆ. ಅದೆಲ್ಲಾವೂ ರೇಣುಕಾಸ್ವಾಮಿ ಸ್ವಾಮಿಯ ಡಿಎನ್ಎ ಜೊತೆ ಮ್ಯಾಚ್ ಆಗಿದೆ ಎಂದು ಪ್ರಸನ್ನ ಕುಮಾರ್ ಪ್ರತಿವಾದ ಮಂಡಿಸಿದರು
ಕೌಂಟರ್-05
ಎಲ್ಲಾ ಟೆಕ್ನಿಕಲ್ ಸಾಕ್ಷ್ಯವೂ ಮ್ಯಾಚ್ ಆಗಿದೆ!
ಒಂದು ಕೊಲೆ ಕೇಸ್ ಅನ್ನು ಕೋರ್ಟ್‌ನಲ್ಲಿ ಪ್ರೂ ಮಾಡೋದು ಪೊಲೀಸರಿಗೆ ಸುಲಭದ ಕೆಲಸ ಅಲ್ಲವೇ ಅಲ್ಲ. ಕೊಲೆಗೆ ಸಂಬಂಧ ಪಟ್ಟಂತೆ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹ ಮಾಡಿದ್ರೆ ಮಾತ್ರ ಆರೋಪಿಗಳಿಗೆ ಶಿಕ್ಷೆ ಆಗುವಂತೆ ಮಾಡಬಹುದು. ಇಲ್ಲದಿದ್ರೆ ಕೇಸ್ ನ್ಯಾಯಾಲಯದಲ್ಲಿ ಬಿದ್ದು ಹೋಗುತ್ತೆ. ಇದು ರೇಣುಕಾಸ್ವಾಮಿ ಹತ್ಯೆ ಕೇಸ್ ತನಿಖೆ ಮಾಡ್ತಿದ್ದ ಪೊಲೀಸರಿ ಗೂ ಗೊತ್ತು. ಹೀಗಾಗಿಯೇ ಅವ್ರು ಪ್ರತ್ಯಕ್ಷ ಸಾಕ್ಷ್ಯಗಳ ಜೊತೆಗೆ ಸಣ್ಣ ಟೆಕ್ನಿಕಲ್ ಸಾಕ್ಷ್ಯವನ್ನು ನಿರ್ಲಕ್ಷ್ಯ ಮಾಡಿರಲಿಲ್ಲ. ಇದೇ ವಿಚಾರವನ್ನು ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ನ್ಯಾಯಾಧೀಶ ಮುಂದೆ ಇಟ್ಟು ದರ್ಶನ್‌ಗೆ ಬೇಲ್ ಕೊಡ್ಬಾರದು ಅಂತಾ ವಾದ ಮಂಡಿಸಿದ್ರು.
‘ಸಾಕ್ಷ್ಯಗಳು ಮ್ಯಾಚ್ ಆಗಿವೆ’
ಸಾಕ್ಷಿಗಳಾದ 76, 77 ಮತ್ತು 78 ಶೆಡ್ ಕೆಲಸಗಾರರಾಗಿದ್ದಾರೆ. ಪ್ರಕರಣದಲ್ಲಿ ಟೆಕ್ನಿಕಲ್ ಟವರ್ ಲೊಕೇಷನ್ & ಸಾಕ್ಷಿಗಳ ಲೊಕೇಷನ್ ಪತ್ತೆಯಾಗಿದೆ. ಕೃತ್ಯದ ಸಂದರ್ಭದಲ್ಲಿ ಆ ಜಾಗದಲ್ಲಿ ಪತ್ತೆಯಾಗಿದೆ. ಟವರ್ ಲೋಕೇಷನ್, ಕಾಲ್ ಡಿಟೇಲ್ಸ್ ರೆಕಾರ್ಡ್ ಎಲ್ಲಾ ಟೆಕ್ನಿಲ್ ಮ್ಯಾಚ್ ಆಗಿದೆ. ಜೊತೆಗೆ FSL & ಡಿಎನ್ಎ ವರದಿ ಆರೋಪಿಗಳಿಗೆ ಮ್ಯಾಚ್ ಆಗಿದೆ. ಕಿರಣ್, ಪುನೀತ್ ಹೇಳಿಕೆಗೂ ಟೆಕ್ನಿಕಲ್ ಸಾಕ್ಷಿಗಳಿಗೂ ಮ್ಯಾಚ್ ಆಗಿದೆ ಅಂತ ಎಸ್‌ಪಿಪಿ ಪ್ರಸನ್ನ ಕುಮಾರ್ ಬಲವಾಗಿ ವಾದವನ್ನು ಮಂಡಿಸಿದರು.
ದರ್ಶನ್ ಪರ ವಕೀಲರಾಗಿರೋ ಸಿವಿ ನಾಗೇಶ್ ಅವ್ರು ಪ್ರಬಲವಾಗಿ ವಾದ ಮಂಡಿಸಿದ್ರು. ಹಾಗೇ ಪೊಲೀಸ್ರ ಚಾರ್ಜ್‌ಶೀಟ್‌ನಲ್ಲಿರೋ ಲೋಪದೋಷವನ್ನೇ ಉಲ್ಲೇಖ ಮಾಡಿ ನ್ಯಾಯಾಧೀಶ ಮುಂದೆ ಇಟ್ಟಿದ್ರು. ಆದ್ರೆ, ಎಸ್‌ಪಿಪಿ ಪ್ರಸನ್ನ ಕುಮಾರ್ ಕೌಂಟರ್ ಕೊಟ್ಟಿದ್ದಾರೆ. ಇಷ್ಟೇ ಅಲ್ಲ, ಇನ್ನಷ್ಟು ಪ್ರಬಲ ಕೌಂಟರ್‌ಗಳು ನ್ಯಾಯಾಧೀಶರ ಮುಂದೆ ಉಲ್ಲೇಖವಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ