/newsfirstlive-kannada/media/post_attachments/wp-content/uploads/2024/10/Darshan-7.jpg)
ರೇಣುಕಾಸ್ವಾಮಿ ಕೊಲೆಯಿಂದ ಕತ್ತಲೆಗೆ ಜಾರಿದ್ದ ದರ್ಶನ್ ಬಾಳಲ್ಲಿ ದೀಪಾವಳಿ ಬೆಳಕನ್ನ ಮೂಡಿಸಿದೆ. ಅನಾರೋಗ್ಯದ ಹಿನ್ನೆಲೆ ದರ್ಶನ್ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು, ಬಳ್ಳಾರಿ ಜೈಲಿನಿಂದ ಬೆಂಗಳೂರು ಆಗಮಿಸಿದ್ದು, ದರ್ಶನ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.
ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರಿಗೆ ಬಂದ ದಾಸ
ಮಧ್ಯಂತರ ಜಾಮೀನು ಸಿಕ್ಕ ಬಳಿಕ ಸಂಜೆ 6 ಗಂಟೆ ಸುಮಾರಿಗೆ ಜೈಲಿಂದ ನಟ ದರ್ಶನ್ ಬೆಂಗಳೂರಿನತ್ತ ಪ್ರಯಾಣ ಬೆಳಸಿದ್ರು. ಬಾಗೇಪಲ್ಲಿ, ಚಿಕ್ಕಬಳ್ಳಾಪುರ ದೇವನಹಳ್ಳಿ ಮಾರ್ಗವಾಗಿ ಕಾರಿನಲ್ಲಿ ದರ್ಶನ್ ತಡರಾತ್ರಿ 11.30ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಿದ್ರು. ನಟ ಧನ್ವೀರ್, ದರ್ಶನ್ ಇದ್ದ ಕಾರನ್ನು ಡ್ರೈವ್ ಮಾಡಿಕೊಂಡು ಬಂದ್ರು.
ಇದನ್ನೂ ಓದಿ: ಹುಟ್ಟು ಹಬ್ಬದ ಸಂಭ್ರಮದಲ್ಲಿ ಯಶ್ ಮುದ್ದಿನ ಮಗ; ಕ್ಯೂಟ್ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ಹೊಸಕೆರೆ ಹಳ್ಳಿಯಲ್ಲಿರುವ ಪತ್ನಿ ನಿವಾಸಕ್ಕೆ ತೆರಳಿದ ದರ್ಶನ್
ಬಳ್ಳಾರಿ ಜೈಲಿನಿಂದ ನೇರವಾಗಿ ಬೆಂಗಳೂರಿಗೆ ಬಂದ ದರ್ಶನ್ ತಮ್ಮ ಆರ್ಆರ್ ನಗರದ ನಿವಾಸಕ್ಕೆ ತೆರಳುವ ಮಾಹಿತಿ ಇತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ, ದರ್ಶನ್ ನಿವಾಸದ ಬಳಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು. ಆದ್ರೆ ದರ್ಶನ್ ಆರ್ಆರ್ ನಗರದ ನಿವಾಸದ ಬದಲು, ಹೊಸಕೆರೆ ಹಳ್ಳಿಯಲ್ಲಿ ಪತ್ನಿ ವಿಜಯಲಕ್ಷ್ಮಿ ವಾಸವಿರುವ ಅಪಾರ್ಟ್ಮೆಂಟ್ಗೆ ತೆರಳಿದ್ರು. ನಟ ದರ್ಶನ್ಗೆ ಒಂದೆಡೆ ಬೇಲ್ ಸಿಕ್ಕಿ ಮನೆಗೆ ಬಂದ ಖುಷಿ ಇದ್ರೆ, ಮತ್ತೊಂದೆಡೆ ಮಗನ ಬರ್ತ್ ಡೇ ಕೂಡ. ತಂದೆಯ ಆಗಮನದ ಸುದ್ದಿ ತಿಳಿಯುತ್ತಿದ್ದಂತೆ ಪುತ್ರ ವಿನೀಶ್ ಅಪ್ಪನನ್ನು ನೋಡಲು ಓಡೋಡಿ ಬಂದ.
ಇದನ್ನೂ ಓದಿ: ಜೈಲಿನಿಂದ ದರ್ಶನ್ ಬಿಡುಗಡೆಗೆ ಸಂತಸ.. ರಚಿತಾ ರಾಮ್, ತನಿಷ್ ಕುಪ್ಪಂಡ ಫುಲ್ ಖುಷ್; ಹೇಳಿದ್ದೇನು?
ಇಂದು ಆಸ್ಪತ್ರೆಗೆ ತೆರಳಲಿರುವ ನಟ ದರ್ಶನ್
ಅನಾರೋಗ್ಯದ ಕಾರಣಕ್ಕಾಗಿ ಹೈಕೋರ್ಟ್ ಷರತ್ತು ಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಕೋರ್ಟ್ನ ಷರತ್ತಿನಂತೆ, ಇವತ್ತು ದರ್ಶನ್ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಭೇಟಿ ನೀಡಬೇಕಿದೆ. ಆದ್ರೆ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ. ಮೂಲಗಳ ಪ್ರಕಾರ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಟ್ಟಾರೆ ಬೆನ್ನು ನೋವಿನಿಂದ ಬಳ್ಳಾರಿ ಜೈಲಿನಲ್ಲಿ ನರಕಯಾತನೆ ಅನುಭವಿಸಿದ್ದ ದರ್ಶನ್ 5 ತಿಂಗಳ ಬಳಿಕ ಮೊದಲ ಬಾರಿಗೆ ಸುಖದ ನಿದ್ದೆ ಮಾಡಿದ್ದಾರೆ. ಇನ್ನು ದರ್ಶನ್ ಕುಟುಂಬವೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ