/newsfirstlive-kannada/media/post_attachments/wp-content/uploads/2024/06/DARSHAN-JAIL-2.jpg)
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್​ಗೆ ಜೈಲೂಟ ಸೇರುತ್ತಿಲ್ಲವಂತೆ. ಹೀಗಾಗಿ ಜೈಲೂಟ ಬೇಡ, ಮನೆ ಊಟ ಬೇಕು ಎಂದು ದರ್ಶನ್​ ತಲೆಕೆಡಿಸಿಕೊಂಡಿದ್ದಾರೆ. ಮಾತ್ರವಲ್ಲದೆ, ಹಾಸಿಗೆ ಕೂಡ ಬದಲಾಯಿಸಲು ನಟ ದರ್ಶನ್ ಪಟ್ಟುಹಿಡಿದಿದ್ದಾರಂತೆ.​ ಅದಕ್ಕೆಂದೇ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ದರ್ಶನ್​​ ಜೈಲೂಟ ಹೊಂದಾಣಿಕೆ ಆಗದೆ ಫುಡ್ ಫಾಯಿಸನಿಂಗ್ ಎಂದು ಅರ್ಜಿ ಸಲ್ಲಿಸಿದ್ದಾರೆ. ಆದರೆ ಜೈಲಾಧಿಕಾರಿಗಳು ಜೈಲಿನ ಗುಣಮಟ್ಟದ ಊಟದ ರಿಪೋರ್ಟ್ ಕಳುಹಿಸಿಕೊಟ್ಟಿದ್ದಾರೆ. ಜೊತೆಗೆ ಜೈಲೂಟ ಯಾವುದೇ ಕಾರಣಕ್ಕೂ ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲವೆಂದು ರಿಪೋರ್ಟ್ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2024/06/DARSHAN-JAIL-4-1.jpg)
ಜೈಲೂಟ ಸಿದ್ಧತೆ ಹೇಗೆ ಆಗುತ್ತೆ ಗೊತ್ತಾ..?
ಜೈಲೂಟಕ್ಕೆ ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (Central Food Technological Research Institute)ಯಿಂದ ಉತ್ತಮ ಗುಣಮಟ್ಟ ಎಂಬ ಬಿರುದು ಸಿಕ್ಕಿದೆ. ಇದಲ್ಲದೆ ಇಲಾಖೆಯು ಜೈಲೂಟಕ್ಕೆ 4 ಸ್ಟಾರ್​ ಕೊಟ್ಟಿದ್ದಾರೆ.
ಇದನ್ನೂ ಓದಿ: ಆನೆಗಳು ತಮ್ಮೊಳಗೆ ಹೆಸರು ಇಟ್ಟುಕೊಂಡಿರುತ್ತವೆ! ಮನುಷ್ಯರಂತೆ ಸಂವಹನ ಭಾಷೆಯನ್ನು ಹೊಂದಿವೆಯಂತೆ
2014 ರಲ್ಲಿ ಫುಡ್ ಡಿಪಾರ್ಟ್ಮೆಂಟ್ ನಿಂದ ಪರಿಶೀಲಿಸಿ ಗುಣಮಟ್ಟದ ಊಟ ಕೊಡುವ ಪ್ರಕ್ರಿಯೆ ಪ್ರಾರಂಭವಾಯ್ತು. ಸೆಂಟ್ರಲ್ ಜೈಲಲ್ಲಿ ಐದು ಸಾವಿರಕ್ಕೂ ಹೆಚ್ಚು ಮಂದಿಗೆ ಐವತ್ತು ಮಂದಿ ಸಜಾಬಂಧಿ ಕೈದಿಗಳಿಂದ ಊಟ ತಯಾರಿಸಲಾಗುತ್ತದೆ. ಸಜಾಬಂಧಿ ಕೈದಿಗಳು ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆ (Central Food Research Institute) ಯಿಂದಲೇ ತರಬೇತಿ ಪಡೆದು ಆಹಾರ ತಯಾರಿಸುತ್ತಾರೆ. ಪ್ರತಿದಿನದ ಮೆನು ಪ್ರಕಾರದ ಮೂರು ಹೊತ್ತಿನ ಊಟದ ತಯಾರಿ ಮಾಡುತ್ತಾರೆ.
/newsfirstlive-kannada/media/post_attachments/wp-content/uploads/2024/06/DARSHAN-JAIL-1.jpg)
ಜೈಲಿನಲ್ಲಿ ಖೈದಿಗಳಿಗೆ ಆಹಾರ ತಯಾರಿಸುವ ಐವತ್ತು ಮಂದಿಗೆ ವಾರಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿದ್ದರೆ ಮಾತ್ರ ಅಡುಗೆ ಮಾಡಲು ಅವಕಾಶ ನೀಡಲಾಗುತ್ತದೆ. ಈಗಿರುವ ತಂಡ ಕಳೆದ ಆರು ವರ್ಷಗಳಿಂದ ಅಡುಗೆ ತಯಾರಿಕೆ ಮಾಡುತ್ತಿದೆ. ಉಳಿದ ಸಿಬ್ಬಂದಿಗಳು ಪ್ರತಿ ಬ್ಯಾರಕ್ ಗೆ ಹೋಗಿ ಅಡುಗೆ ಸರಬರಾಜು ಮಾಡುತ್ತಾರೆ. ಇದುವರೆಗೂ ಊಟದಿಂದ ಆರೋಗ್ಯದ ಸಮಸ್ಯೆಯ ವರದಿಯಾಗಿಲ್ಲ.
ಪದಾರ್ಥಗಳ ಸರಬರಾಜು ಹೇಗಾಗುತ್ತೆ?
ಪ್ರತಿ ವರ್ಷ ರಾಜ್ಯದ ಪ್ರಮುಖ ವರ್ತಕರನ್ನ ಕರೆಸಿ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತದೆ. ಟೆಂಡರ್​ನಲ್ಲಿ ಸುಧಾರಿತ ಅತ್ಯಂತ ಗುಣಮಟ್ಟದ ಪದಾರ್ಥಗಳನ್ನ ಕೊಡುವರಿಗೆ ಟೆಂಡರ್ ನೀಡಲಾಗುತ್ತದೆ. ಕೇವಲ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಅಲ್ಲದೆ ರಾಜ್ಯದ ಎಲ್ಲಾ ಕಾರಾಗೃಹಗಳಿಗೂ ಒಬ್ಬರಿಂದಲೇ ಸರಬರಾಜು ಪ್ರಕ್ರಿಯೆ ನಡೆಯುತ್ತದೆ.
/newsfirstlive-kannada/media/post_attachments/wp-content/uploads/2024/06/darshan-18-1.jpg)
ರಾಗಿ, ಜೋಳ ವರ್ಷಕ್ಕೊಮ್ಮೆ ಸರಬರಾಜು ಮಾಡುತ್ತಾರೆ. ತರಕಾರಿ ಎರಡು ದಿನಕ್ಕೊಮ್ಮೆ, ದಿನಸಿ ಪದಾರ್ಥಗಳನ್ನ ವಾರಕ್ಕೊಮ್ಮೆ ಹಾಗೂ ಮೊಟ್ಟೆ, ಮಾಂಸ ಶುಕ್ರವಾರ ಸರಬರಾಜು ಮಾಡಲಾಗುತ್ತದೆ. ಪ್ರತಿ ಅಡುಗೆ ತಯಾರಿ ಹಾಗೂ ಜೈಲಿಗೆ ಬರುವ ಪದಾರ್ಥಗಳನ್ನ ಬಳಸುವ ಪ್ರಕ್ರಿಯೆ ವಿಡಿಯೋ ರೆಕಾರ್ಡ್ ಮಾಡಲಾಗುತ್ತದೆ. ಸಿಸಿ ಕ್ಯಾಮೆರಾಗಳ ಮೂಲಕವೂ ಆಹಾರ ತಯಾರಿಕೆಯ ಬಗ್ಗೆ ನಿಗಾವಹಿಸಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us