‘ನನ್ನಿಂದಾಗಿ ಅಪ್ಪ ಹೋಗ್ಬಿಟ್ಟ..’ ಅಮ್ಮನ ತಬ್ಬಿ ಗಳಗಳನೇ ಕಣ್ಣೀರಿಟ್ಟ ದರ್ಶನ್ ಕೇಸ್​ನ ಆರೋಪಿ ಅನು

author-image
Ganesh
Updated On
‘ನನ್ನಿಂದಾಗಿ ಅಪ್ಪ ಹೋಗ್ಬಿಟ್ಟ..’ ಅಮ್ಮನ ತಬ್ಬಿ ಗಳಗಳನೇ ಕಣ್ಣೀರಿಟ್ಟ ದರ್ಶನ್ ಕೇಸ್​ನ ಆರೋಪಿ ಅನು
Advertisment
  • ರೇಣುಕಾಸ್ವಾಮಿ ಹತ್ಯೆಯಿಂದ ಅನೇಕ ಕುಟುಂಬಗಳು ಕಣ್ಣೀರಲ್ಲಿ ಮುಳುಗಿವೆ
  • ಅನು ತಂದೆ ಚಂದ್ರಪ್ಪ ಸಾವನ್ನಪ್ಪಿ 24 ಗಂಟೆ ಕಳೆದರೂ ಅಂತ್ಯಕ್ರಿಯೆ ನೆರವೇರಿಸಿರಲ್ಲಿಲ್ಲ
  • ಆರೋಪಿ ಅನು ಬಂದ ಮೇಲೆ ಮಧ್ಯರಾತ್ರಿ ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬ

ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆಯಿಂದಾಗಿ ಅನೇಕ ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುವಂತೆ ಆಗಿದೆ. ರೇಣುಕಾ ಸ್ವಾಮಿ ಹತ್ಯೆಯ ಆರೋಪಿ ಎ-7 ಅನಿಲ್​ ಅಲಿಯಾಸ್​ ಅನು ತಂದೆ ಚಂದ್ರಣ್ಣ ಸಾವನ್ನಪ್ಪಿದ್ದು, ತಡ ರಾತ್ರಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

publive-image

ನಟ ದರ್ಶನ್​ ಗ್ಯಾಂಗ್ ಎ-7 ಆರೋಪಿ ಅನು ತಂದೆ ಚಂದ್ರಪ್ಪ ಸಾವನ್ನಪ್ಪಿ 24 ಗಂಟೆ ಕಳೆದರೂ ಅಂತ್ಯಕ್ರಿಯೆ ನೆರವೇರಿಸಿರಲ್ಲಿಲ್ಲ. ಶವದ ಮುಂದೆ ಅನು ಬರುವಿಕೆಗಾಗಿ ಸಂಬಂಧಿಕರು ಕಾದು ಕುಳಿತಿದ್ದರು. ಅನುಕುಮಾರ್ ಬಂದ ಬಳಿಕವೇ ತಂದೆ ಚಂದ್ರಪ್ಪನ ಅಂತ್ಯಕ್ರಿಯೆ ನಡೆಯಬೇಕು ಅನ್ನೋ ತೀರ್ಮಾನದಲ್ಲಿದ್ದರು. ಮಗ ಬರುವ ನೀರಿಕ್ಷೆಯಲ್ಲಿ ಅಂತ್ಯಕ್ರಿಯೆಗೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಪೊಲೀಸರು ಅನುಗೆ ತಂದೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಟ್ಟಿದ್ದರು. ಅದರಂತೆಯೇ ಚಿತ್ರದುರ್ಗಕ್ಕೆ ಕರೆದುತಂದಿದ್ದರು.

ಇದನ್ನೂ ಓದಿ:ಲಾರಿ ಮತ್ತು ಕಾರ್​ ನಡುವೆ ಭೀಕರ ಅಪಘಾತ.. ಇಬ್ಬರು ಸಾವು, ಓರ್ವ ಗಂಭೀರ

publive-image

ಮಗ ಬರುತ್ತಿದ್ದಂತೆಯೇ ಅನು ತನ್ನ ತಾಯಿ, ಅಕ್ಕನನ್ನು ತಬ್ಬಿ ಕಣ್ಣೀರು ಇಟ್ಟಿದ್ದಾನೆ. ತಂದೆಯ ಶವದ ಮುಂದೆ ಕೂತು ನನ್ನಿಂದ ಹೀಗೆ ಆಗೊಯ್ತಲ್ಲ ಎಂದು ಗಳಗಳನೇ ಕಣ್ಣೀರು ಇಟ್ಟಿದ್ದಾನೆ. ರೇಣುಕಾಸ್ವಾಮಿಯ ಹತ್ಯೆ ಪ್ರಕರಣದ ಇತರ ಆರೋಪಿಗಳಿಗೆ ನೆರವಾಗಿರುವ ಆರೋಪ ಅನು ಶುಕ್ರವಾರ ಚಿತ್ರದುರ್ಗ ಪೊಲೀಸರಿಗೆ ಶರಣಾಗಿದ್ದ. ಕೊಲೆ ಪ್ರಕರಣದಲ್ಲಿ ತಮ್ಮ ಪುತ್ರ ಪೊಲೀಸರಿಗೆ ಶರಣಾಗಿರುವ ಸುದ್ದಿ ತಿಳಿದು ನೊಂದಿದ್ದ ಆರೋಪಿ ಅನು ತಂದೆ ಚಂದ್ರಪ್ಪ ಅದೇ ದಿನ ಮನೆಯಲ್ಲಿ ಕುಸಿದು ಬಿದ್ದಿದ್ದರು.

ಇದನ್ನೂ ಓದಿ:‘ಅವರಣ್ಣ ಉಂಟು, ಅವನುಂಟು.. ನಾವು ತಲೆನೇ ಕೆಡಿಸಿಕೊಳ್ಳಲ್ಲ’ ಆರೋಪಿ ಪವನ್ ತಂದೆ ಅಚ್ಚರಿ ಹೇಳಿಕೆ

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment