/newsfirstlive-kannada/media/post_attachments/wp-content/uploads/2024/07/Darshan-Highcourt.jpg)
ಯಾವುದೇ ಒಂದ್ ಕೇಸ್‌ನಲ್ಲಿ ಆರೋಪಿಯ ಜಾಮೀನು ರಿಜೆಕ್ಟ್ ಆಗ್ತಾ ಇದ್ದಂತೆ ಕಾನೂನು ಹಾದಿ ಮುಚ್ಚಿ ಹೋಯ್ತು, ಮುಂದೆ ಮಾರ್ಗಗಳೇ ಇಲ್ಲ ಅನ್ನೋ ಹಾಗಿಲ್ಲ. ಖಂಡಿತವಾಗಿಯೂ ಕಾನೂನು ಹೋರಾಟಕ್ಕೆ ಮಾರ್ಗಗಳು ಇದ್ದೇ ಇರ್ತಾವೆ. ಹಾಗಾದ್ರೆ, ದರ್ಶನ್‌ಗೆ ಇರೋ ಮುಂದಿನ ದಾರಿ ಏನು? ಆ ಬಗ್ಗೆ ಕಾನೂನು ತಜ್ಞರು ಏನು ಹೇಳ್ತಾರೆ? ಆ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ದರ್ಶನ್ ಬೇಲ್ ಅರ್ಜಿ ರಿಜೆಕ್ಟ್... ಇದು ಬಳ್ಳಾರಿ ಜೈಲಲ್ಲಿರೋ ದರ್ಶನ್‌ಗೆ ಅದೆಷ್ಟು ಆಘಾತ ಮೂಡಿಸಿದ್ಯೋ? ಹಾಗೇ ದರ್ಶನ್ ಅಭಿಮಾನಿಗಳನ್ನೂ ನೋವಿನಲ್ಲಿ ಮುಳುಗಿಸಿದೆ. ರೇಣುಕಾಸ್ವಾಮಿ ಕೊಲೆ ಕೇಸ್ನ ತನಿಖೆ ಆಲ್ ಮೋಸ್ಟ್ ಕಂಪ್ಲೀಟ್ ಆಗಿದೆ. ಸಿ.ವಿ ನಾಗೇಶ್ ಮಂಡಿಸಿದ್ದ ವಾದ ಕೇಳಿದ್ರೆ ದರ್ಶನ್‌ಗೆ ಜಾಮೀನು ಸಿಕ್ಕೇ ಸಿಗುತ್ತೆ ಅನ್ನೋ ನಿರೀಕ್ಷೆಯಿತ್ತು. ಆದ್ರೆ, ಕೋರ್ಟ್‌ನಲ್ಲಿ ದರ್ಶನ್ ಪರ ವಕೀಲರಾಗಿರೋ ಸಿವಿ ನಾಗೇಶ್, ಎಸ್‌ಪಿಪಿ ಪ್ರಸನ್ನ ಕುಮಾರ್ ಇಬ್ಬರ ವಾದ ಪ್ರತಿವಾದ, ಕೌಂಟರ್, ರೀ ಕೌಂಟರ್. ಎಲ್ಲವನ್ನು ಪರಿಶೀಲಿಸಿ ಜಡ್ಜ್ ಬೇಲ್ ಅರ್ಜಿಯನ್ನು ರೆಜೆಕ್ಟ್ ಮಾಡಿದ್ದಾರೆ. ಇಂತಾವೊಂದ್ ಸುದ್ದಿ ಸ್ಫೋಟವಾಗ್ತಾ ಇದ್ದಂತೆ ಬಳ್ಳಾರಿ ಜೈಲಿನ ಮುಂಭಾದ ನೆರೆದಿದ್ದ ಅಭಿಮಾನಿಗಳು ಅಕ್ಷರಶಃ ಕಣ್ಣೀರು ಹಾಕಿದ್ದಾರೆ.
ಬೇಲ್ ರಿಜೆಕ್ಟ್ ಆಗಲು ಕಾರಣ ಏನು? ನ್ಯಾಯಾಧೀಶರು ಯಾವುದನ್ನ ಪುರಸ್ಕಾರ ಮಾಡಿದ್ದಾರೆ? ಯಾವುದನ್ನು ತಿರಸ್ಕಾರ ಮಾಡಿದ್ದಾರೆ ಅನ್ನೋದನ್ನು ನಾವು ಈಗಾಗಲೇ ಡಿಟೇಲ್ ಆಗಿ ಹೇಳಿದ್ದೇವೆ. ಆದ್ರೆ, ದರ್ಶನ್ ಮುಂದೆ ಇರೋ ಮಾರ್ಗ ಏನು? ಅನ್ನೋ ಪ್ರಶ್ನೆಯೂ ಹುಟ್ಟುತ್ತಲ್ವಾ? ಅದಕ್ಕುತ್ತರವೇ ಉಚ್ಛ ನ್ಯಾಯಾಲಯ.. ಅಂದ್ರೆ, ಹೈಕೋರ್ಟ್.
ಇದನ್ನೂ ಓದಿ: ದರ್ಶನ್‌ಗೆ ಕೋರ್ಟ್ ಬಿಗ್ ಶಾಕ್.. ಜೈಲಲ್ಲೇ ಲಾಕ್; ಜಾಮೀನು ಯಾಕೆ ಸಿಗಲಿಲ್ಲ? 10 ಕಾರಣಗಳು ಇಲ್ಲಿವೆ!
ಶೀಘ್ರವೇ ಹೈಕೋರ್ಟ್ ಮೊರೆ ಹೋಗ್ತಾರೆ ನಟ ದರ್ಶನ್!
ಹೈಕೋರ್ಟ್‌ನಲ್ಲಿ ಬೇಲ್ ಸಿಗುತ್ತಾ? ಕಾನೂನು ತಜ್ಞರು ಏನಂತಾರೆ?
ಕೆಲ ನ್ಯಾಯಾಲಯದಲ್ಲಿ ಬೇಲ್ ರಿಜೆಕ್ಟ್ ಆಯ್ತು ಅಂತಾದ್ರೆ ಹೈಕೋರ್ಟ್ ಮೊರೆ ಹೋಗಲು ಅವಕಾಶ ಇದ್ದೇ ಇರುತ್ತೆ. ಒಂದೊಮ್ಮೆ ಹೈಕೋರ್ಟ್‌ನಲ್ಲಿಯೂ ರಿಜೆಕ್ಟ್ ಆಯ್ತು ಅಂತಾದ್ರೆ ಸುಪ್ರೀಂ ಕೋರ್ಟ್ ಕದ ತಟ್ಟಬಹುದು.ಹಾಗ್ ನೋಡಿದ್ರೆ, ದರ್ಶನ್‌ಗೆ ಇಷ್ಟೂ ಮಾರ್ಗಗಳು ಕಾನೂನಾತ್ಮಕವಾಗಿಯೇ ತೆರೆದುಕೊಂಡಿವೆ.
ನಮಗೆ ಸಿಕ್ಕಿರೋ ಮಾಹಿತಿ ಪ್ರಕಾರ ದರ್ಶನ್ ಪರ ವಕೀಲರು ಶೀಘ್ರವೇ ಹೈಕೋರ್ಟ್ ಮೊರೆ ಹೋಗಲಿದ್ದಾರೆ. ಅಲ್ಲಿ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕಾರವಾಗಿದೆ. ಆದ್ರೆ, ತಾನು ಆರೋಪಿ ಸ್ಥಾನದಲ್ಲಿ ಇದ್ದೀನಿ ಅಷ್ಟೇ, ಪೊಲೀಸ್ರ ತನಿಖೆಗೆ ಸಹಕಾರ ನೀಡ್ತಾ ಇದ್ದೀನಿ, ಜಾಮೀನು ಮೇಲೆ ಯಾವುದೇ ಪ್ರಭಾವ ಬೀರೋ ಕೆಲ್ಸ ಮಾಡಲ್ಲ ಅಂತಾ ಹೈಕೋರ್ಟ್‌ನಲ್ಲಿ ಬೇಲ್‌ಗೆ ಮನವಿ ಸಲ್ಲಿಸಲಿದ್ದಾರೆ. ಆವಾಗ ಹೈಕೋರ್ಟ್ ಏನು ಮಾಡುತ್ತೆ ಅಂದ್ರೆ 57ನೇ ಸಿಸಿಹೆಚ್ ಕೋರ್ಟ್ ನೀಡಿರೋ ತೀರ್ಪನ್ನು ಪರಿಶೀಲನೆ ನಡೆಸುತ್ತೆ. ಅಲ್ಲಿಯೂ ವಕೀಲರ ವಾದ ಪ್ರತಿವಾದವನ್ನು ಆಲಿಸುತ್ತೆ. ಎಲ್ಲವನ್ನು ಪರಿಶೀಲಿಸಿ ಜಾಮೀನು ಕೊಡ್ಬೇಕೋ? ಬೇಡವೋ? ಅನ್ನೋದನ್ನು ನಿರ್ಧಾರ ಮಾಡುತ್ತೆ.
ಆ ರೀಸನ್ ತಪ್ಪು. ಆ ರೀಸನ್ ಬರಬಾರದಿತ್ತು. ನಾವು ಎಂದೂ ಆ ತರಹ ಮಾಡಿಲ್ಲ. ವಿಚಾರಣೆಯಲ್ಲಿ ಎಲ್ಲೂ ಅಪರಾಧಿ ಎಂದು ಪ್ರೂ ಆಗಿಲ್ಲ. ಎಲ್ಲಾ ಸಾಕ್ಷಿಗಳ ವಿಚಾರಣೆಯಾಗಲು 2-3 ವರ್ಷ ಸಮಯ ಬೇಕು. ಆಮೇಲೆ ನಾನು ಅಪರಾಧಿ ಅಂತ ಘೋಷಣೆ ಆಗಬೇಕು. ನಾನಿನ್ನು ಆರೋಪಿ ಸ್ಥಾನದಲ್ಲಿದ್ದೇನೆ ಎಂದು ದರ್ಶನ್ ಅವರು ಹೈಕೋರ್ಟ್ ಮೆಟ್ಟಿಲೇರಬಹುದು.
- ಸುನಿಲ್ ಕುಮಾರ್, ಹಿರಿಯ ವಕೀಲರು
ತೀರ್ಪು ಹೊರಬರ್ತಾ ಇದ್ದಂತೆ ಭಾವುಕರಾದ ಸ್ವಾಮಿ ತಂದೆ!
ಜೈಲಾಧಿಕಾರಿಗಳ ಮೂಲಕ ದರ್ಶನ್‌ಗೆ ಸಿಕ್ಕು ರಿಜೆಕ್ಟ್ ಮಾಹಿತಿ!
ದರ್ಶನ್ ಪರ ಚಾಣಾಕ್ಷ ವಕೀಲರಾಗಿರೋ ಸಿವಿ ನಾಗೇಶ್ ಅವ್ರು ಅಖಾಡಕ್ಕಿಳಿದಿದ್ರು. ಅವ್ರು ವಾದ ಮಾಡುವಾಗ ರೇಣುಕಾಸ್ವಾಮಿ ಹತ್ಯೆಯಲ್ಲಿ ದರ್ಶನ್ ಅನ್ನು ಸಿಕ್ಕಿ ಹಾಕಿಸಲಾಗುತ್ತಿದೆ. ಉದ್ದೇಶ ಪೂರಕವಾಗಿಯೇ ದರ್ಶನ್ ವಿರುದ್ಧ ಸಾಕ್ಷ್ಯಗಳನ್ನು ಸೃಷ್ಟಿ ಮಾಡಲಾಗ್ತಿದೆ ಅನ್ನೋದನ್ನು ನ್ಯಾಯಾಧೀಶರ ಮುಂದೆ ಇಟ್ಟಿದ್ರು. ಇದ್ರಿಂದ ಜೈಲಲ್ಲಿರೋ ದರ್ಶನ್‌ಗೆ ಬಹುಶಃ ಖುಷಿಯಾಗಿತ್ತು. ತನ್ಗೆ ಜಾಮೀನು ಸಿಗುತ್ತೆ ಅನ್ನೋ ವಿಶ್ವಾಸದಲ್ಲಿದ್ರು. ಆದ್ರೆ, ಜಾಮೀನು ತಿರಸ್ಕಾರ ಆಗ್ತಾ ಇದ್ದಂತೆ ದರ್ಶನ್‌ಗೆ ಶಾಕ್ ಆಗಿದೆ. ಹೌದು, ಸೋಮವಾರ ಕೋರ್ಟ್ ತೀರ್ಪು ಹೊರಬೀಳ್ತಾ ಇದ್ದಂತೆ. ಒಂದು ಕಡೆ ಅಭಿಮಾನಿಗಳು, ದರ್ಶನ್ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಬಟ್, ಬಳ್ಳಾರಿ ಜೈಲಲ್ಲಿರೋ ದರ್ಶನ್‌ಗೆ ಇಂತಾವೊಂದ್ ಮಾಹಿತಿ ತಲುಪಿಸಿದ್ದು ಜೈಲಾಧಿಕಾರಿಗಳು. ಹೌದು, ಜಾಮೀನು ತಿರಸ್ಕಾರ ಆದಾಗ, ಇಲ್ಲವೇ ಪುರಸ್ಕಾರ ಆದಾಗ ಜೈಲು ಸಿಬ್ಬಂದಿಗಳು ಆರೋಪಿಗೆ ಇಂತಾವೊಂದ್ ತೀರ್ಪು ಬಂದಿದೆ ಅಂತಾ ಹೇಳುವ ಹಾಗಿಲ್ಲ. ಆದ್ರೆ, ಜೈಲಾಧಿಕಾರಿಗಳು ಮಾತ್ರ ಅಂತಾವೊಂದ್ ಮಾಹಿತಿಯನ್ನು ಕೊಡ್ಬಹುದು. ದರ್ಶನ್‌ಗೆ ಜೈಲಾಧಿಕಾರಿಗಳಿಂದಲೇ ಮಾಹಿತಿ ಹೋಗಿದೆ. ಅದನ್ನು ಕೇಳೆ ದರ್ಶನ್ ಮೌನಕ್ಕೆ ಶರಣಾಗಿದ್ದಾರೆ ಅಂತಾ ಹೇಳಲಾಗ್ತಿದೆ.
ಇದನ್ನೂ ಓದಿ: ಮುಂದಿನ ತಿಂಗಳು ರೇಣುಕಾಸ್ವಾಮಿ ಮಗು ಜನನ.. ದರ್ಶನ್ ಗ್ಯಾಂಗ್‌ಗೆ ಶಿಕ್ಷೆ ವಿಧಿಸಲು ಕುಟುಂಬಸ್ಥರ ಒತ್ತಾಯ
ಇನ್ನೊಂದ್ ಕಡೆ ಕುಟುಂಬಕ್ಕೆ ಆಧಾರವಾಗಿದ್ದ ಮಗನನ್ನು ಕಳ್ಕೊಂಡ್ ಚಿತ್ರದುರ್ಗದ ರೇಣುಕಾಸ್ವಾಮಿ ಕುಟುಂಬ ಆಘಾತದಲ್ಲಿದೆ. ನಾಲ್ಕು ತಿಂಗಳಿಂದ ಮನೆಯಲ್ಲಿದವ್ರಿಗೆ ಸರಿಯಾಗಿ ಊಟ ಸೇರ್ತಾ ಇಲ್ಲ. ನಿದ್ರೆ ಮಾಡಲು ಹೋದ್ರೆ ನಿದ್ರೆ ಬರ್ತಿಲ್ಲ. ತಮ್ಮ ಮಗನ ಸಾವಿಗೆ ಕಾರಣವಾಗಿದ್ದವ್ರಿಗೆ ಶಿಕ್ಷೆ ಆಗ್ಬೇಕು ಅನ್ನೋದಷ್ಟೇ ಅವರ ನಿಲುವು. ಹಾಗೇ ದರ್ಶನ್ ಜಾಮೀನು ಅರ್ಜಿ ತೀರ್ಪು ಏನು ಬರುತ್ತೆ ಅನ್ನೋದನ್ನು ರೇಣುಕಾಸ್ವಾಮಿ ತಂದೆ ಮತ್ತು ಕುಟುಂಬಸ್ಥರು ಭಾವನಾತ್ಮಕವಾಗಿಯೇ ನೋಡ್ತಿದ್ರು. ಹಾಗೇ ತೀರ್ಪು ಹೊರ ಬೀಳ್ತಾ ಇದ್ದಂತೆ ರೇಣುಕಾಸ್ವಾಮಿ ತಂದೆ ಕಾಶಿನಾಥ್ ಭಾವುಕರಾಗಿದ್ದಾರೆ.
ಬೇಲ್ ರಿಜೆಕ್ಟ್.. ಬೆನ್ನು ನೋವಿಗೆ ದರ್ಶನ್ ಏನ್ ಮಾಡ್ತಾರೆ?
ಕೋರ್ಟ್ ಮೊರೆ ಹೋಗಿ ಬೆಂಗಳೂರಿಗೆ ಶಿಫ್ಟ್ ಆಗ್ತಾರಾ?
ಬಳ್ಳಾರಿ ಜೈಲಲ್ಲಿ ದರ್ಶನ್ ಅಕ್ಷರಶಃ ನರಕಯಾತನೆ ಅನುಭವಿಸ್ತಿದ್ದಾರೆ. ಅದ್ಕೆ ಕಾರಣ ವಿಪರೀತ ಪ್ರಮಾಣದಲ್ಲಿ ಕಾಣಿಸ್ಕೊಳ್ತಿರೋ ಬೆನ್ನು ನೋವು. ಹೌದು, ಬಳ್ಳಾರಿ ಜೈಲಿಗೆ ಹೋದಾಗಿಂದ ದರ್ಶನ್‌ಗೆ ಬೆನ್ನು ನೋವು ಹೆಚ್ಚಾಗಿದೆ. ವೈದ್ಯರು ತಪಾಸಣೆ ನಡ್ಸಿ ಸರ್ಜರಿ ಮಾಡಿಸಿಕೊಳ್ಳುವಂತೆ ಸೂಚನೆಯನ್ನು ಕೊಟ್ಟಿದ್ದಾರೆ. ಆದ್ರೆ, ಜಾಮೀನು ನಿರೀಕ್ಷೆಯಲ್ಲಿದ್ದ ದರ್ಶನ್ ಸರ್ಜರಿಗೆ ಒಪ್ಪಿಕೊಂಡಿಲ್ಲ. ಕೇವಲ ಮಾತ್ರೆಗಳನ್ನು ಮಾತ್ರ ತೆಗೆದುಕೊಳ್ತಿದ್ದಾರೆ. ಆದ್ರೆ, ಈಗ ಬೇಲ್ ರಿಜೆಕ್ಟ್ ಆಗಿರೋದ್ರಿಂದ ದರ್ಶನ್ ಏನ್ ಮಾಡ್ತಾರೆ ಅನ್ನೋದ್ ಮುಖ್ಯವಾಗಿರುತ್ತೆ.
ದರ್ಶನ್‌ಗೆ ಬಳ್ಳಾರಿ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಸಿಕೊಳ್ಳಲು ಇಷ್ಟವಿಲ್ಲ. ಅವ್ರಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀಬೇಕು ಅನ್ನೋ ನಿಲುವು ಇದೆ ಅಂತೆ. ಹೀಗಾಗಿ ಶೀಘ್ರವೇ ಕೋರ್ಟ್ ಮೊರೆ ಹೋಗಿ, ಕೋರ್ಟ್‌ಗೆ ಅನಾರೋಗ್ಯದ ಮಾಹಿತಿ ಕೊಡಲಿದ್ದಾರೆ. ಒಂದ್ ವೇಳೆ ಕೋರ್ಟ್ ಒಪ್ಪಿಗೆ ಸಿಕ್ತು ಅಂತಾದ್ರೆ ಬೆಂಗಳೂರಿಗೆ ಬಂದು ಬೆನ್ನು ನೋವಿಗೆ ಸರ್ಜರಿ ಮಾಡಿಸಿಕೊಳ್ಳಲಿದ್ದಾರೆ.
ಅದೆಷ್ಟೇ ದೊಡ್ಡ ಸೆಲೆಬ್ರಿಟಿಯಾಗಿರ್ಲಿ, ದೊಡ್ಡ ಸ್ಟಾರೇ ಆಗಿರ್ಲಿ ಕಾನೂನಿನ ಮುಂದೆ ಎಲ್ಲರೂ ಒಂದೆ ಅನ್ನೋದನ್ನು ದರ್ಶನ್ ಕೇಸ್ ಸಾರಿ ಸಾರಿ ಹೇಳುತ್ತಿದೆ. ಸದ್ಯ ದರ್ಶನ್‌ಗೆ ಇರೋ ಮಾರ್ಗ ಅಂದ್ರೆ ಹೈಕೋರ್ಟ್ ಮೊರೆ ಹೋಗುವುದು. ಅಲ್ಲಿ ಬೇಲ್ ಸಿಗುತ್ತಾ? ಇಲ್ಲವೇ ಅಲ್ಲಿಯೂ ರಿಜೆಕ್ಟ್ ಆಗುತ್ತಾ? ಅನ್ನೋದನ್ನು ಕಾದು ನೋಡೋಣ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ