Advertisment

ರೇಣುಕಾಸ್ವಾಮಿ ಮತ್ತೊಂದು ಫೋಟೋ ವೈರಲ್​.. ಆಟೋದಲ್ಲಿ ಕುಳಿತು ಹೊಂಚು ಹಾಕುತ್ತಿದ್ದ ಕಿಡ್ನಾಪರ್ಸ್​

author-image
AS Harshith
Updated On
ರೇಣುಕಾಸ್ವಾಮಿ ಕಿಡ್ನಾಪ್ ವೇಳೆಯೂ ಫೋಟೋ ಕ್ಲಿಕ್ಕಿಸಿದ್ದ ಕಿಡ್ನಾಪರ್ಸ್​; ಕೊನೆ ಕ್ಷಣದ ಫೋಟೋ
Advertisment
  • ರೇಣುಕಾಸ್ವಾಮಿ ಚಲನವಲನದ ಮೇಲೆ ಗಮನ
  • ಕಿಡ್ನಾಪ್​ಗೂ ಮುನ್ನ ಆಟೋದಲ್ಲಿ ಹಿಂಬಾಳಿಸಿದ ಕಿಡ್ನಾಪರ್ಸ್​​
  • ಫೋಟೋ ನೋಡಿ ಪಂಕ್ಷರ್ ಶಾಪ್​​ನ ಮಾಲೀಕ ಏನಂದ್ರು?

ಚಿತ್ರದುರ್ಗ: ಎಫ್​ಎಸ್​​ಎಲ್​ ತಂಡವು ಆರೋಪಿಗಳಿಂದ ಡಿಲೀಟ್​​ ಆದ ರೇಣುಕಾಸ್ವಾಮಿ ಫೋಟೋಗಳನ್ನು ರಿಟ್ರೀವ್​ ಮಾಡಿದ್ದಾರೆ. ಅದರಲ್ಲಿ ಎರಡು ಫೋಟೋಗಳು ಎಲ್ಲೆಡೆ ವೈರಲ್​ ಆಗಿವೆ. ಪಟ್ಟಣಗೆರೆ ಶೆಡ್​ನಲ್ಲಿ ರೇಣುಸ್ವಾಮಿಯನ್ನು ಥಳಿಸಿದ ಮತ್ತು ಕೊಲೆಗೈದ ಫೋಟೋಗಳು ಸಿಕ್ಕಿವೆ. ಆದರೀಗ ರೇಣುಕಾಸ್ವಾಮಿಯ ಮತ್ತೊಂದು ಫೋಟೋ ಸಿಕ್ಕಿದ್ದು, ವೈರಲ್​ ಆಗುತ್ತಿದೆ.

Advertisment

ಕಿಡ್ನಾಪ್​ಗೂ ಮುನ್ನ ರೇಣುಕಾಸ್ವಾಮಿಯ ಫೋಟೋ ಸಿಕ್ಕಿದೆ. ರೇಣುಕಾಸ್ವಾಮಿ ಚಲನವಲನಗಳನ್ನು ಹಿಂಬಾಲಿಸಿ ಆರೋಪಿಗಳು ತೆಗೆದಿದ್ದ ಫೋಟೋ ಇದಾಗಿದೆ.

ರೇಣುಕಾಸ್ವಾಮಿ ಕಿಡ್ನಾಪ್ ಆಗುವ ದಿನ ತನ್ನ ಸ್ಕೂಟಿಗೆ ಗಾಳಿ ಹಿಡಿಸಿದ್ದನು. KEB ಕಲ್ಯಾಣ ಮಂಟಪ ರಸ್ತೆಯಲ್ಲಿನ ಪಂಕ್ಷರ್ ಶಾಪ್​ನಲ್ಲಿ ಗಾಳಿ ಹಿಡಿಸಿದ್ದನು. ಗಾಳಿ ಹಿಡಿಸಿದ್ದನ್ನ ಕಿಡ್ನಾಪರ್ಸ್ ಆಟೋದಲ್ಲಿ ಕುಳಿತು ಫೋಟೋ ತೆಗೆದಿದ್ದರು. ಇದೀಗ ಆ ಫೋಟೋ ವೈರಲ್ ಆಗಿದೆ.​

publive-image

ಇದನ್ನೂ ಓದಿ: ಗೌರಿ ಹಬ್ಬದ ದಿನ ಭೀಕರ ದುರಂತ.. ರಾಜ್ಯದಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ 13 ಮಂದಿ ಸಾವು

Advertisment

ರೇಣುಕಾಸ್ವಾಮಿ ತನ್ನ ಯಮಹಾ ಸ್ಕೂಟಿಗೆ ಗಾಳಿ ತುಂಬಿಸಿ ಪರ್ಸ್​ ತೆಗೆಯುತ್ತಿರುವ ಫೋಟೋ ಸಿಕ್ಕಿದೆ. ಈ ವೇಳೆ ರೇಣುಕಾಸ್ವಾಮಿ ಆಟೋದಲ್ಲಿರುವವರನ್ನು ನೋಡಿದ್ದಾನೆ. ಅದಕ್ಕೆ ಸರಿಯಾಗಿ ಆರೋಪಿಗಳು ಫೋಟೋವನ್ನು ಕ್ಲಿಕ್ಕಿಸಿದ್ದಾರೆ.

ಪಂಕ್ಷರ್ ಶಾಪ್​​ನ ಮಾಲೀಕ ಏನಂದ್ರು?

ಇತ್ತ ಫೋಟೋ ವೈರಲ್​ ಆದಂತೆ ಪಂಕ್ಷರ್ ಶಾಪ್​​ನ ಮಾಲೀಕ ವಜೀರ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಪ್ರತಿ ನಿತ್ಯದಂತೆ ಕೆಲಸ ಮಾಡುತ್ತಿದ್ದೆ, ಫೋಟೋ ತೆಗೆದಿದ್ದು ಗೊತ್ತಿಲ್ಲ. ನಾನು ಕೂಡಾ ಅವರು ಫೋಟೋ ತೆಗೆದಿದ್ದು ಗಮನಸಿಲ್ಲ. ನನಗೆ ರೇಣುಕಾಸ್ವಾಮಿ ಪರಿಚಯ ಇಲ್ಲ, ಬಂದು ಕೆಲಸ ಮಾಡಿಸಿಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಸವೇಶ್ವರ ಜಾತ್ರೆ ವೇಳೆ ಯುವಕನ ಬೈಕ್​ ವೀಲ್ಹಿಂಗ್​ ಶೋಕಿ​.. ಸವಾರ ಸೇರಿ 4 ಸಾವು.. ಮೂವರ ಸ್ಥಿತಿ ಗಂಭೀರ

Advertisment

ಬಳಿಕ ಮಾತನಾಡಿದ ವಜೀರ್ ಖಾನ್, ಈ ಮೊದಲು ನಾನು ನೋಡಿದ್ರೆ ಅವರನ್ನ ಗುರುತು ಹಿಡಿಯುತ್ತಿದ್ದೆ‌. ಆ ಸ್ಕೂಟಿಗೆ ಗಾಳಿ ಹಿಡಿದಿದ್ದು ನಾನೇ. ಅವರು ಬಂದು ಗಾಳಿ ಹಿಡಿಸಿದ್ದಾರೆ. ಈ ಫೋಟೋ ನೋಡಿದಾಗ ನನಗೆ ಗೊತ್ತಾಯ್ತು, ಮುಂಚೆ ನಾನು ನೋಡಿಲ್ಲ. ಘಟನೆ ನಡೆದ ಬಳಿಕವೇ ನನಗೆ ಈ ಮಾಹಿತಿ ತಿಳಿದು ಬಂದಿದ್ದು. ಈ ಹಿಂದೆ ಯಾವತ್ತೂ ಕೂಡಾ ನಾನು ನೋಡಿಲ್ಲ, ಘಟನೆ ಬಳಿಕ ಗೊತ್ತಾಯ್ತು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment