ಬಿಲ್ಗಳ ಸಮೇತ ಹಿರಿಯ ಅಧಿಕಾರಿಗಳಿಗೆ ತನಿಖಾ ತಂಡ ಪತ್ರ
ತನಿಖಾಧಿಕಾರಿಗಳ ಕೈ ಕಟ್ಟಿದ ಇಲಾಖೆಯ ಹಣಕಾಸಿನ ಸಮಸ್ಯೆ
ಕ್ಲೈಮ್ಯಾಕ್ಸ್ ಹಂತ ತಲುಪಿದ ರೇಣುಕಾಸ್ವಾಮಿ ಹತ್ಯೆ ಪ್ರಕರಣ
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಎಫ್ಎಸ್ಎಲ್, ಮರಣೋತ್ತರ ಪರೀಕ್ಷೆಗಳು ಕೃತ್ಯಕ್ಕೆ ಸಾಕ್ಷ್ಯ ಹೇಳುತ್ತಿವೆ. ಕಳೆದೆರಡು ತಿಂಗಳಿನಿಂದ ಪ್ರಕರಣದ ತನಿಖೆ ನಡೆಸ್ತಿರುವ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆಗೂ ತಯಾರಿ ನಡೆಸಿದ್ದಾರೆ. ಈ ಮಧ್ಯೆ ತನಿಖಾಧಿಕಾರಿಗಳ ಮನೋಬಲ ಕುಗ್ಗಿದೆ. ಯಾಕಂದ್ರೆ ತನಿಖೆಗಾಗಿ ಪೊಲೀಸರು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಆದ್ರೆ ಸರ್ಕಾರದಿಂದ ಸರಿಯಾದ ಸಮಯಕ್ಕೆ ಆರ್ಥಿಕ ನೆರವು ಸಿಕ್ಕಿಲ್ಲ.
ಇದೊಂಥರ ಕರ್ಮ.. ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವ ಕರ್ಮ.. ರೇಣುಕಾಸ್ವಾಮಿ ಹತ್ಯೆಗೈದು ಜೈಲುಹಕ್ಕಿಯಾಗಿರೋ ನಟ ದರ್ಶನ್ಗೆ ಮಾಡಿದ್ದ ಒಂದೊಂದು ತಪ್ಪುಗಳು ಸಂಕಷ್ಟಕ್ಕೆ ದೂಡಿವೆ. ಎರಡು ತಿಂಗಳು ಕಳೆದ್ರೂ ನಟ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಕಳೆದೆರಡು ತಿಂಗಳಿನಿಂದ ಅವಿರತ ತನಿಖೆ ನಡೆಸ್ತಿರುವ ಪೊಲೀಸರು ಎಲ್ಲ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಇನ್ನೂ ಹೆಚ್ಚಿನ ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಹಣಕಾಸಿನ ಸಮಸ್ಯೆ ಎದುರಾಗಿರುವುದು ತನಿಖಾಧಿಕಾರಿಗಳ ಕೈ ಕಟ್ಟಿ ಹಾಕಿದೆ.
ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ತನಿಖಾ ತಂಡಕ್ಕೆ ಆರ್ಥಿಕ ಸಂಕಷ್ಟ!
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾಗೌಡ ಹಾಗೂ ಸಂಗಡಿಗರ ಬಂಧನ ಆಗಿ 2 ತಿಂಗಳು ಕಳೆದೋಗಿದೆ. ಬಂಧನದ ಬಳಿಕ ಡಿ-ಗ್ಯಾಂಗ್ ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸುವಂತಾಗಿದೆ. ದರ್ಶನ್ ಅಂಡ್ ಟೀಂಗೆ ನ್ಯಾಯಾಂಗ ಬಂಧನದ ಅವಧಿ ಕೂಡ ವಿಸ್ತರಣೆ ಆಗುತ್ತಲೇ ಸಾಗುತ್ತಿದೆ. ಪೊಲೀಸರು ತನಿಖೆ ಮುಂದುವರಿಸುತ್ತಲೇ ಬಂದಿದ್ದಾರೆ. ಸಾಕಷ್ಟು ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ. ಈ ಮಧ್ಯೆ ಚಾರ್ಜ್ಶೀಟ್ ಸಲ್ಲಿಕೆಗೂ ಸಜ್ಜಾಗಿದ್ದಾರೆ. ಹತ್ಯೆ ಪ್ರಕರಣ ಬೆಳಕಿಗೆ ಬಂದ ಕೂಡಲೇ ತನಿಖೆಗಿಳಿದಿರುವ ಪೊಲೀಸರಿಗೆ ಇಲಾಖೆಯಿಂದ ಸೂಕ್ತ ನೆರವು ಸಿಕ್ತಿಲ್ಲ ಎನ್ನಲಾಗಿದೆ. ಆರಂಭದಿಂದ ಇಲ್ಲಿಯವರೆಗೆ ಖುರ್ಚ-ವೆಚ್ಚಗಳಿಗೆ ಪೊಲೀಸ್ ಅಧಿಕಾರಿಗಳೇ ತಮ್ಮ ಸ್ವಂತ ಹಣ ಭರಿಸಿದ್ದು ಕೈ ಖಾಲಿಯಾದಂತಾಗಿದೆ. ಪೊಲೀಸ್ ಇಲಾಖೆಯಿಂದ ಹಣಕಾಸಿನ ನೆರವು ಸಿಗದಿರೋದು ಮುಂದಿನ ತನಿಖೆ ಮೇಲೆ ಕಾರ್ಮೋಡ ಕವಿದಿದೆ.
ತನಿಖಾಧಿಕಾರಿಗಳಿಗೆ ‘ವಿತ್ತ’ ವಿಪ್ಲವ!
ಇದನ್ನೂ ಓದಿ: ಬ್ಯಾಂಕ್ನಲ್ಲಿ ಉದ್ಯೋಗ ಹುಡುಕುವವರಿಗೆ ಗುಡ್ ನ್ಯೂಸ್.. ಕರ್ನಾಟಕದಲ್ಲೂ ಪೋಸ್ಟ್ಗಳು ಖಾಲಿ ಖಾಲಿ, ಅಪ್ಲೇ ಮಾಡಿ
ರೇಣುಕಾಸ್ವಾಮಿ ಹತ್ಯೆ ಪ್ರಕರಣ ಬೆಳಕಿಗೆ ಬಂದು 2 ತಿಂಗಳು ಕಳೆದಿದ್ದು ತನಿಖಾಧಿಕಾರಿಗಳು ಸಾಕಷ್ಟು ಬೆವರು ಹರಿಸಿದ್ದಾರೆ. ಸಾಮಾನ್ಯವಾಗಿ ತನಿಖೆಗಾಗಿ ಪೊಲೀಸ್ ಇಲಾಖೆಯಲ್ಲಿ ಭತ್ಯೆ ನೀಡುವ ಸಿಸ್ಟಮ್ ಇದೆ. ಆದ್ರೆ ದರ್ಶನ್ ಕೇಸಿನಲ್ಲಿ ಸಾಕಷ್ಟು ಓಡಾಟ, ಸಾಕ್ಷ್ಯಕಲೆಗಾಗಿ ಸರ್ಕಸ್ಸು, ಕಂಪ್ಯೂಟರ್ ಸಾಧನಗಳು, ಹಾರ್ಡ್‌ಡಿಸ್ಕ್ ಹೀಗೆ ಹೆಚ್ಚೇ ಹಣ ಖರ್ಚಾಗಿದೆ. ತಮ್ಮ ಸ್ವಂತ ಹಣ ಖರ್ಚು ಮಾಡಿಕೊಂಡು ತನಿಖೆ ನಡೆಸಿರೋ ಪೊಲೀಸರು ಸರ್ಕಾರದಿಂದ ಸಹಾಯದ ಎದುರು ನೋಡುವಂತಾಗಿದೆ. ಸರ್ಕಾರದಿಂದ ಸಹಾಯ ಸಿಕ್ಕರಷ್ಟೇ ತನಿಖಾಧಿಕಾರಿಗಳಿಗೂ ಮನೋಬಲ ಹೆಚ್ಚಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ