/newsfirstlive-kannada/media/post_attachments/wp-content/uploads/2024/10/Bellary-Jail-Darshan-Signal.jpg)
ಬರೋಬ್ಬರಿ 120 ದಿನಗಳು.. ದರ್ಶನ್ ಜೈಲು ಸೇರಿ 120ಕ್ಕೂ ಹೆಚ್ಚು ದಿನಗಳೇ ಉರುಳಿವೆ. ಆಚೆ ಬಂದ್ಬಿಡಿ ಬಾಸ್ ಅಂತಾ ದರ್ಶನ್ ಫ್ಯಾನ್ಸ್ ಕಾಯ್ತಾನೆ ಇದ್ರು. ಬೆಳಗ್ಗೆಯಿಂದಲೇ ಬಳ್ಳಾರಿ ಜೈಲಿನ ಮುಂಭಾಗವೇ ಬೀಡು ಬಿಟ್ಟಿದ್ರು. ದರ್ಶನ್ ಸಹ ಭಾನುವಾರದಿಂದಲೇ ಬೆನ್ನು ನೋವಿನ ಮಧ್ಯೆಯೂ ಟೆನ್ಶನ್ನಲ್ಲೇ ಇದ್ರು. ಬೇಲ್ ಸಿಗುತ್ತೋ? ಇಲ್ಲವೋ? ಅನ್ನೋ ಒತ್ತಡದಲ್ಲೇ ಒದ್ದಾಡುತ್ತಿದ್ದರು. ಇತ್ತ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯ ಕೊನೆಗೂ ದರ್ಶನ್, ಪವಿತ್ರಾ ಗೌಡ ಸೇರಿ 6 ಮಂದಿಯ ಜಾಮೀನು ಅರ್ಜಿ ವಿಚಾರವಾಗಿ ಮಹತ್ವದ ಆದೇಶ ಹೊರಡಿಸಿದೆ.
ಕೊನೆಗೂ ದರ್ಶನ್‌ಗೆ ಜಾಮೀನು ಇಲ್ಲ, ಜೈಲೇ ಗತಿ ಆಯ್ತು!
6 ಮಂದಿಯ ಬೇಲ್ ಅರ್ಜಿ ಪೈಕಿ ಇಬ್ಬರಿಗಷ್ಟೇ ಜಾಮೀನು!
ಸೋಮವಾರ.. ಸಂಜೆ ಸುಮಾರು 5.45ರ ಹೊತ್ತಿನ ತನಕ 57ನೇ ಸಿಸಿಹೆಚ್ ಕೋರ್ಟ್ ಕರ್ನಾಟಕವನ್ನೇ ಕುರ್ಚಿಯ ಕೊನೆಯ ತುದಿಯ ಮೇಲೆ ಕೂರುವಂತೆ ಮಾಡಿತ್ತು. ಕಾರಣ, ರೇಣುಕಾಸ್ವಾಮಿ ಕೊ*ಲೆ ಕೇಸ್ನ ಆರು ಮಂದಿ ಬೇಲ್ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, ಸೋಮವಾರ ತೀರ್ಪು ನೀಡುವುದಿತ್ತು. ಹಾಗಾಗಿಯೇ ನ್ಯಾಯಾಧೀಶರಾದ ಜೈ ಶಂಕರ್ ತೀರ್ಪು ಓದುವ ತನಕ ಎಲ್ಲರ ಚಿತ್ತ ಕೋರ್ಟ್ನತ್ತಲೇ ಇತ್ತು. ಎ1 ಪವಿತ್ರಾ ಗೌಡ, ಎ2 ದರ್ಶನ್, ಎ8 ರವಿಶಂಕರ್, ಎ11 ನಾಗರಾಜ್, ಎ12 ಲಕ್ಷ್ಮಣ್ ಹಾಗೂ ಎ13 ದೀಪಕ್ ಬೇಲ್ ಪೈಕಿ ಇಬ್ಬರಿಗಷ್ಟೇ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಎ8 ರವಿ ಶಂಕರ್ ಹಾಗೂ ಎ13 ದೀಪಕ್ಗೆ ಕೋರ್ಟ್ ಜಾಮೀನು ನೀಡಿದೆ. ಇನ್ನುಳಿದಂತೆ, ಪವಿತ್ರಾ ಗೌಡ, ದರ್ಶನ್, ನಾಗರಾಜ್, ಲಕ್ಷ್ಮಣ್ ಈ ನಾಲ್ವರಿಗೂ ಬೇಲ್ ನಿರಾಕರಿಸಿದೆ.
ಒಂದು ಸಾಲಿನ ತೀರ್ಪಿಗಿಂತ ಆದೇಶದಲ್ಲೇ ಅಸಲಿ ಮ್ಯಾಟರ್!
ಸದ್ಯ ಸಿಂಗಲ್ ಲೈನ್ ಆರ್ಡರ್ ಪಾಸ್ ಮಾಡಿದ್ದಾರೆ ಜಡ್ಜ್ ಜೈ ಶಂಕರ್. ದರ್ಶನ್‌ಗೆ ಬೇಲ್ ಏಕೆ ನೀಡಿಲ್ಲ ಅನ್ನೋ ಅಸಲಿ ಪ್ರಶ್ನೆಗೆ ಪಿನ್ ಟು ಪಿನ್ ಆನ್ಸರ್ ಸಿಗೋದು ಅಸಲಿ ಆದೇಶ ಪ್ರತಿಯಲ್ಲಿ. ಯಾವ ಗ್ರೌಂಡ್ಸ್ ಮೇಲೆ ಕೋರ್ಟ್ ದರ್ಶನ್ ಸೇರಿ ಮೂವರಿಗೆ ಸೋಮವಾರ ಜಾಮೀನು ನೀಡಿಲ್ಲ ಅನ್ನೋ ಕಂಪ್ಲೀಟ್ ಮಾಹಿತಿ ಆದೇಶ ಪ್ರತಿಯಲ್ಲಿ ಇರುತ್ತದೆ. ಸಿಂಗಲ್ ಲೈನ್ ಆರ್ಡರ್ ಬಂದ ನಾಲ್ಕೈದು ಗಂಟೆಗಳಲ್ಲಿ ತೀರ್ಪಿನ ಆದೇಶ ಪ್ರತಿ ಸಿಗಲಿದೆ. ಇನ್ನು, ತನಗೆ ಬೇಲ್ ಸಿಕ್ಕಿಲ್ಲ ಅನ್ನೋದು ಗೊತ್ತಾದ ಕೂಡಲೇ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಬಿಕ್ಕಳಿಸಿ ಬಿಕ್ಕಳಿಸಿ ಅತ್ತಿದ್ದಾಳೆ ಅನ್ನೋ ಮಾಹಿತಿ ಲಭ್ಯವಾಗಿದೆ. ಅಸಲಿಗೆ ದರ್ಶನ್‌ಗೆ ಬೇಲ್ ಸಿಗದೇ ಇರೋದಕ್ಕೆ ಕಾರಣ ಏನು ಗೊತ್ತಾ?
ಇದನ್ನೂ ಓದಿ: ಮುಂದಿನ ತಿಂಗಳು ರೇಣುಕಾಸ್ವಾಮಿ ಮಗು ಜನನ.. ದರ್ಶನ್ ಗ್ಯಾಂಗ್‌ಗೆ ಶಿಕ್ಷೆ ವಿಧಿಸಲು ಕುಟುಂಬಸ್ಥರ ಒತ್ತಾಯ
ಬೇಲ್ ಏಕಿಲ್ಲ? ಕಾರಣ 1
ತಡವಾಗಿ ಸಾಕ್ಷಿ ದಾಖಲು ಮಾಡಿದ್ದಕ್ಕೆ SPP ಕೊಟ್ಟಿದ್ದ ಸ್ಪಷ್ಟನೆ!
ದರ್ಶನ್ ಪರ ವಕೀಲ ಸಿ.ವಿ ನಾಗೇಶ್ ನನ್ನ ಕಕ್ಷಿದಾರರನ್ನು ಕೇಸ್ನಲ್ಲಿ ಸಿಲುಕಿಸುವ ಕಾರಣಕ್ಕೆ ಪೊಲೀಸರು ತಡವಾಗಿ ಹೇಳಿಕೆ ದಾಖಲಿಸಿದ್ದಾರೆ. ಸಾಕ್ಷಿಗಳನ್ನ ಸೃಷ್ಟಿಸುವ ಮೂಲಕ ದರ್ಶನ್ನ ಸಿಲುಕಿಸುವುದೇ ಉದ್ಧೇಶದಂತೆ ಕಾಣುತ್ತಿದೆ ಅಂತ ವಾದಿಸಿದ್ರು. ಇದಕ್ಕೆ ಎಸ್ಪಿಪಿ ಪ್ರಸನ್ನ ಕುಮಾರ್ ಯಾವ ಕಾರಣಕ್ಕೇ 164 ಹೇಳಿಕೆಯನ್ನು ದಾಖಲಿಸಲು ತಡವಾಯ್ತು, ಆರೋಪಿಯನ್ನು ಪೊಲೀಸರು ಹಲವು ಸ್ಥಳಗಳ ಪರಿಶೀಲನೆಗಾಗಿ ಕರೆದುಕೊಂಡು ಹೋಗಿದ್ದದ್ದು, ಎಲ್ಲವನ್ನೂ ಜಡ್ಜ್ ಮುಂದಿಟ್ಟಿದ್ರು. ಆದಾಗ್ಯೂ ಕಾನೂನಿನ ಪ್ರಕಾರವೇ ಕೇಸ್ ಡೈರಿಯಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಅನ್ನೋ ವಿಚಾರವನ್ನು ತಿಳಿಸುವ ಮೂಲಕ ತಡವಾಗಿದ್ದಕ್ಕೆ ಕಾರಣ ಏನು ಅನ್ನೋ ವಿಚಾರವನ್ನು ಕೋರ್ಟ್ ಗಮನಕ್ಕೆ ತಂದಿದ್ದರು.
ಬೇಲ್ ಏಕಿಲ್ಲ? ಕಾರಣ 2
ತಡವಾಗಿ ಮರಣೋತ್ತರ ಪರೀಕ್ಷೆಗೆ ಕೊಟ್ಟ ಕಾರಣ!
ನಾಗೇಶ್ ತಮ್ಮ ವಾದ ಮಂಡಿಸುವ ಸಂದರ್ಭ ತಡವಾಗಿ ಮರಣೋತ್ತರ ಪರೀಕ್ಷೆ ಮಾಡಿದ್ದು ಏಕೆ ಅಂತ ಪ್ರಶ್ನಿಸಿದ್ದರು. ಎಸ್ಪಿಪಿ ಮಹತ್ವದ ಲಾ ಪಾಯಿಂಟ್ ಮುಂದಿಟ್ಟು ವಾದಿಸಿದ್ರು. ಮೃತ ವ್ಯಕ್ತಿಯ ಗುರುತು ಪತ್ತೆ ಆಗದ ಕಾರಣಕ್ಕೇ ತಡವಾಗಿ ಮರಣೋತ್ತರ ಪರೀಕ್ಷೆ ನಡೆದಿದೆ. ಅಷ್ಟರ ಮಟ್ಟಿಗಿನ ಕ್ರೌರ್ಯ ಕೊಲೆಯಲ್ಲಿದ್ದ ಕಾರಣವೇ ರೇಣುಕಾಸ್ವಾಮಿಯ ಮೃತ ದೇಹವನ್ನೂ ಪತ್ತೆ ಮಾಡೋದಕ್ಕೆ ಆಗಿರ್ಲಿಲ್ಲ ಅನ್ನೋ ಅಂಶವನ್ನು ಉಲ್ಲೇಖಿಸಿದ್ರು. ಹಾಗಾಗಿಯೇ ಕೋರ್ಟ್ ಪ್ರಸನ್ನ ಕುಮಾರ್ ವಾದಕ್ಕೆ ಮನ್ನಣೆ ನೀಡಿದೆ. ದರ್ಶನ್‌ಗೆ ಬೇಲ್ ನೀಡಿಲ್ಲ.
ಬೇಲ್ ಏಕಿಲ್ಲ? ಕಾರಣ 3
ತನಿಖೆಯ ಹಂತದಲ್ಲಿ ಹಲವು ಲೋಪಗಳು ಕಂಡು ಬಂದಿವೆ!
ದರ್ಶನ್ ಪರ ವಕೀಲ ನಾಗೇಶ್ ತನಿಖೆ ಕಳಪೆ ಮಟ್ಟದಲ್ಲಿ ಆಗಿದೆ. ತನಿಖಾಧಿಕಾರಿ ಸಾಕಷ್ಟು ಲೋಪಗಳನ್ನು ಎಸಗಿದ್ದಾರೆ ಅಂತ ವಾದ ಮಂಡಿಸಿದ್ರು. ಇದಕ್ಕೆ ಪ್ರತಿಯಾಗಿ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಲೀಗಲ್ ಪಾಯಿಂಟ್ ಮೆನ್ಷನ್ ಮಾಡುವ ಮೂಲಕವೇ ಸ್ಪಷ್ಟನೆ ನೀಡಿದ್ರು. ತನಿಖೆಯಲ್ಲಿ ಲೋಪಗಳಿದ್ದರೇ ತನಿಖಾಧಿಕಾರಿಯನ್ನು ಕ್ರಾಸ್ ಎಗ್ಸಾಮಿನೇಷನ್ ವೇ ಳೆ ಪತ್ತೆ ಮಾಡಬಹುದು. ಪ್ರಶ್ನಿಸಬಹುದು. ಆದು ಬಿಟ್ಟು ಜಾಮೀನು ಅರ್ಜಿ ವಿಚಾರಣೆ ವೇಳೆ ಇದರ ಅಗತ್ಯವಿದ್ಯಾ ಅಂತ ಪ್ರಶ್ನಿಸಿದ್ರು. ಇದೇ ಕಾರಣಕ್ಕೇ ದರ್ಶನ್‌ಗೆ ಜಾಮೀನು ಸಿಕ್ಕಿಲ್ಲ ಎಂಬ ಚರ್ಚೆ ನಡೀತಿದೆ.
ಬೇಲ್ ಏಕಿಲ್ಲ? ಕಾರಣ 4
ನೈಟ್ಸ್ ಕಥೆ ಅಲ್ಲ. ಇದು ರಕ್ತ ಚರಿತ್ರೆ ಅಂತ ಒಪ್ಪಿದ್ರಾ?
ರೇಣುಕಾಸ್ವಾಮಿಯದ್ದು ಕೊಲೆಯೋ? ಆತ್ಮಹತ್ಯೆಯೋ? ಅನ್ನೋ ಮೂಲಕ ಭಿನ್ನ ರೂಪದ ಅಭಿಪ್ರಾಯ ಮೂಡಿಸೋ ವಾದವನ್ನು ದರ್ಶನ್ ಪರ ವಕೀಲರಾದ ಸಿ.ವಿ ನಾಗೇಶ್ ಮಂಡಿಸಿದ್ರು. ಅಷ್ಟೇ ಅಲ್ಲ, ರೇಣುಕಾಸ್ವಾಮಿ ಕೊಲೆ ಕೇಸ್ ಹಾಗೂ ಪೊಲೀಸರ ಜಾರ್ಜ್ಶೀಟ್ ನೋಡಿದರೇ ಅರೇಬಿಯನ್ ನೈಟ್ಸ್ ಕಥೆಗಳು ನೆನಪಾಗುತ್ತವೆ ಅಂತ ಚಟಾಕಿ ಹಾರಿಸಿದ್ರು. ಇದಕ್ಕೆ ಪ್ರತಿಯಾಗಿ ಎಸ್ಪಿಪಿ ಪ್ರಸನ್ನ ಕುಮಾರ್ ರೇಣುಕಾಸ್ವಾಮಿ ದೇಹದ ಮೇಲಿದ್ದ ಗಾಯಗಳ ಲೆಕ್ಕ, ಹಲ್ಲೆಯ ಪಟ್ಟಿನ ಪಟ್ಟಿನ್ನು ಮರಣೋತ್ತರ ಪರೀಕ್ಷಾ ವರದಿಯ ಸಮೇತ ಕೋರ್ಟ್ ಮುಂದಿರಿಸಿದ್ರು. ಹಾಗಾಗಿಯೇ ಕೋರ್ಟ್ ಇದು ರಕ್ತ ಚರಿತ್ರೆ ಅನ್ನೋ ಪ್ರಸನ್ನ ಕುಮಾರ್ ವಾದವನ್ನು ಎತ್ತಿ ಹಿಡಿದು ಬೇಲ್ ನೀಡಿಲ್ಲ.
ಇದನ್ನೂ ಓದಿ: Big Breaking: ಆರೋಪಿ ದರ್ಶನ್‌ಗೆ ಜೈಲೇ ಗತಿ.. ಜಾಮೀನು ಅರ್ಜಿ ವಜಾ!
ಬೇಲ್ ಏಕಿಲ್ಲ? ಕಾರಣ 5
ರೇಣುಕಾ ಅಮಾನುಷ ಕೊಲೆ ಸಾಮಾಜಿಕ ಹೊಣೆಗಾರಿಕೆ!
ಇಲ್ಲಿ ದರ್ಶನ್‌ಗೆ ಬೇಲ್ ಸಿಗದೇ ಇರೋದಕ್ಕೆ ಬಹುಮುಖ್ಯ ಕಾರಣ ಸಾಮಾಜಿಕ ಹೊಣೆಗಾರಿಕೆ. ಕೋರ್ಟ್ ಎಲ್ಲವನ್ನೂ ಸೂಕ್ಷ್ಮವಾಗಿ ನೋಡಿದೆ. ರೇಣುಕಾಸ್ವಾಮಿಯನ್ನು ಅತ್ಯಂತ ನಿರ್ದಯವಾಗಿ ಕೊಂದ ಆರೋಪ ಹೊತ್ತಿರೋ ಮಂದಿಗೆ ಜಾಮೀನು ನೀಡಿದರೇ ಸಮಾಜ ಯಾವ ರೀತಿ ಪ್ರತಿಕ್ರಿಯಿಸಬಹುದು. ಮುಂದಿನ ದಿನಮಾನಗಳಲ್ಲಿ ಇಂಥಾ ಪ್ರಕರಣಗಳು ಎದುರಾದರೇ ದರ್ಶನ್ ಕೇಸ್ ಎಗ್ಸಾಂಪಲ್ ಪಡೆಯೋ ಸಾಧ್ಯತೆ ಇರುತ್ತದೆ. ಹಾಗಾಗಿಯೇ ಕೋರ್ಟ್ ಒಂದು ಕಡೆ ರೇಣುಕಾಸ್ವಾಮಿಯ ಬರ್ಬರ ಹತ್ಯೆಯನ್ನು ಮತ್ತೊಂದು ಕಡೆ ಎಲ್ಲವನ್ನೂ ನೋಡುತ್ತಿರೋ ಸಮಾಜವನ್ನು ಗಂಭೀರವಾಗಿ ತೂಗಿ ಬೇಲ್ ನೀಡಿಲ್ಲ ಎನ್ನಲಾಗುತ್ತಿದೆ.
ಬೇಲ್ ಏಕಿಲ್ಲ? ಕಾರಣ 6
ಐ ವಿಟ್ನೆಸ್ ಹೇಳಿಕೆಯಲ್ಲೂ ಲೋಪವಿಲ್ಲ ಎಸ್ಪಿಪಿ ವಾದ!
ರೇಣುಕಾಸ್ವಾಮಿ ಕೊಲೆ ಕೇಸ್ನ ಏಕೈಕ ಐ ವಿಟ್ನೆಸ್ ಪಟ್ಟಣಗೆರೆ ಶೆಡ್ ಸೆಕ್ಯೂರಿಟಿ ಗಾರ್ಡ್. ಈತನಿಗೆ ಕನ್ನಡವೇ ಬರೋದಿಲ್ಲ. ಅದ್ಹೇಗೆ ಕನ್ನಡದಲ್ಲೇ 164 ಹೇಳಿಕೆ ದಾಖಲಿಸಿದ್ದೀರಿ ಅಂತ ಸಿವಿ ನಾಗೇಶ್ ವಾದ ಮಂಡಿಸಿದ್ರು. ಅಷ್ಟೇ ಅಲ್ಲ, ಈ ಹೇಳಿಕೆ ಪಡೆಯುವ ವೇಳೆ ಲೋಪ ಆಗಿದೆ ಅಂತಲೂ ಉಲ್ಲೇಖಿಸಿದ್ರು. ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಕೇವಲ ಐ ವಿಟ್ನೆಸ್ ಹೇಳಿಕೆಯಲ್ಲಿ ಲೋಪ ಆಗಿಲ್ಲ. ದರ್ಶನ್ ವಿರುದ್ಧ ಸಿಕ್ಕ ಸಿಡಿಆರ್ ಟೆಕ್ನಿಕಲ್ ಎವಿಡೆನ್ಸ್ ಕೂಡ ದರ್ಶನ್ ಅಲ್ಲಿದ್ದ ಅನ್ನೋದನ್ನ ಹೇಳುತ್ತಿದೆ ಅಂತ ದಾಖಲೆ ಸಮೇತ ವಾದಿಸಿದ್ದರು. ಹೇಳಿಕೆಯಲ್ಲಿ ಲೋಪ ಇದೆ ಅಂತಾ ಅದನ್ನೇ ಪರಿಗಣಿಸಲು ಸಾಧ್ಯವಿಲ್ಲ.. ಹೇಳಿಕೆ ತಡವಾಗಿದ್ರೂ, ಅದರ ಅಂಶಗಳ ಅಲ್ಲಗಳೆಯಲು ಸಾಧ್ಯವಿಲ್ಲ ಅನ್ನೋದನ್ನ ಕೋರ್ಟ್ ಗಮನಕ್ಕೆ ತಂದಿದ್ರು. ಹಾಗಾಗಿಯೇ ಪ್ರಸನ್ನ ಕುಮಾರ್ ವಾದಕ್ಕೆ ಮನ್ನಣೆ ಸಿಕ್ಕಿ ದರ್ಶನ್‌ಗೆ ಬೇಲ್ ನಿರಾಕರಣೆ ಆಗಿದೆ.
ಬೇಲ್ ಏಕಿಲ್ಲ? ಕಾರಣ 7
ಕುಕ್ಕಿ ಒಗೆದ ಬಟ್ಟೆಯಲ್ಲಿ SPP ತೆಗೆದ DNA ಪಾಯಿಂಟ್!
ದರ್ಶನ್ ಪರ ವಕೀಲರ ಸಿ.ವಿ ನಾಗೇಶ್ ಪೊಲೀಸರು ಪಡೆದ ಸಾಕ್ಷಿಯನ್ನೇ ಉಲ್ಲೇಖಿಸಿ ಮಹತ್ವದ ಸಂಗತಿ ಹೇಳಿದ್ರು. ಕೊಲೆಯ ಸಂದರ್ಭ ದರ್ಶನ್ ಧರಿಸಿದ್ದರು ಎನ್ನಲಾದ ಬಟ್ಟೆಯನ್ನು ಮನೆಗೆಲಸದಾಕೆ ಕುಕ್ಕಿ ಕುಕ್ಕಿ ಒಗೆದ ಮೇಲೆ ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ರಕ್ತದ ಕಲೆ ಇರಲು ಸಾಧ್ಯವೇ ಅಂತ ಕೋರ್ಟ್ ಮುಂದೆ ಪ್ರಶ್ನಿಸಿದ್ದರು. ಆದರೇ, ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಟೆಕ್ನಿಕಲ್ ಎವಿಡನ್ಸ್ ನೀಡುವ ಮೂಲಕ ಮೃತ ವ್ಯಕ್ತಿಯ DNA ಅಂಶ ಆರೋಪಿಗಳ ಬಟ್ಟೆಯಲ್ಲಿ ಪತ್ತೆ ಆಗಿದೆ. ಮೃತ ರೇಣುಕಾಸ್ವಾಮಿ ಡಿಎನ್ಎ ಜೊತೆ ಮ್ಯಾಚ್ ಆಗಿದೆ ಅನ್ನೋದನ್ನ ಕೋರ್ಟ್ ಗಮನಕ್ಕೆ ತಂದಿದ್ದರು. ಹಾಗಾಗಿಯೇ ನಾಗೇಶ್ ವಾದಕ್ಕಿಂತ್ಲೂ ಹೆಚ್ಚು ಪ್ರಸನ್ನ ಕುಮಾರ್ ವಾದವನ್ನು ನ್ಯಾಯಾಧೀಶರು ಎತ್ತಿ ಹಿಡಿದಿದ್ದಾರೆ. ಇದೇ ಕಾರಣಕ್ಕೇ ದರ್ಶನ್‌ಗೆ ಬೇಲ್ ಸಿಕ್ಕಿಲ್ಲ.
ಬೇಲ್ ಏಕಿಲ್ಲ? ಕಾರಣ 8
ಭೀಕರ ಕೊಲೆ ವೃತ್ತಾಂತವೇ ಬೆಚ್ಚಿಬೀಳಿಸಿದೆ
ಮೇಲ್ನೋಟಕ್ಕೆ ಇಲ್ಲಿ ಜಡ್ಜ್ ದರ್ಶನ್‌ಗೆ ಬೇಲ್ ನೀಡದೇ ಇರೋದಕ್ಕೆ ಕಾರಣ ಕೊಲೆಯ ಕ್ರೌರ್ಯ. ಅತ್ಯಂತ ಅಮಾನುಷವಾಗಿ ರೇಣುಕಾಸ್ವಾಮಿಯನ್ನು ಕೊಂದ ವಿಚಾರವನ್ನು ಎಸ್ಪಿಪಿ ಪ್ರಸನ್ನಕುಮಾರ್ ಕೋರ್ಟ್ ಮುಂದೆ ದಾಖಲೆಗಳ ಸಮೇತ ವಿವರಿಸಿದ್ರು. ಅಷ್ಟೇ ಅಲ್ಲ, ಸಾಕಷ್ಟು 164 ಸಾಕ್ಷಿ ಹಾಗೂ ಟೆಕ್ನಿಕಲ್ ಎವಿಡೆನ್ಸ್ ಮೂಲಕ ಕೊಲೆಯ ಭೀಕರತೆಯನ್ನು ನ್ಯಾಯಾಧೀಶರ ಗಮನಕ್ಕೆ ತಂದಿದ್ರು. ರೇಣುಕಾಸ್ವಾಮಿ ದೇಹದ ಮೇಲಿದ್ದ ರಕ್ತ ಸಿಕ್ತ 39ಕ್ಕೂ ಹೆಚ್ಚು ಗಾಯಗಳು. ಇನ್ನು, ಎದೆಯ ಗೂಡು 17 ಕಡೆ ಮುರಿದಿದ್ದ ಕ್ರೌರ್ಯದ ಅಟ್ಟಹಾಸ ಸಹ ಇಲ್ಲಿ ಜಡ್ಜ್ ಸೂಕ್ಷ್ಮವಾಗಿ ಪರಿಗಣಿಸಿದ್ದಾರೆ ಎನ್ನಲಾಗುತ್ತಿದೆ.
ಬೇಲ್ ಏಕಿಲ್ಲ? ಕಾರಣ 9
ಬೇಲ್ ಕೊಡಬಾರದು ಅಂತ ಸುಪ್ರೀಂ ಆದೇಶವಿದೆ!
ಸದ್ಯ, ಸಿಸಿಹೆಚ್ ಕೋರ್ಟ್ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿ ನಾಲ್ವರಿಗೆ ಬೇಲ್ ನೀಡಿಲ್ಲ. ಒಂದು ವೇಳೆ ಈ ಡಿ ಗ್ಯಾಂಗ್ ಸುಪ್ರೀಂ ಕೋರ್ಟ್ಗೆ ಹೋದ್ರೂ ಹಿನ್ನಡೆ ಆಗುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಅತ್ಯಂತ ಪ್ರಭಾವಿ ಆಗಿದ್ದು ಬೇಲ್ ನೀಡಿದರೇ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು ಅನ್ನೋ ಕಾರಣಕ್ಕೂ ಬೇಲ್ ಸಿಗೋದಿಲ್ಲ. ಇದಿಷ್ಟೇ ಅಲ್ಲ, ಗ್ರಾವಿಟಿ ಆಫ್ ಕೇಸ್ ನೋಡಿಕೊಂಡೇ ಜಡ್ಜ್ ಬೇಲ್ ನೀಡುತ್ತಾರೆ. ಅತ್ಯಾಚಾರ, ಕೊಲೆಯಂತಹ ಸೂಕ್ಷ್ಮ, ಗಂಭೀರ ಪ್ರಕರಣಗಳಲ್ಲಿ ಯಾವುದೇ ಕಾರಣಕ್ಕೂ ಬೇಲ್ ನೀಡಬಾರದು ಅಂತ ಸುಪ್ರೀಂ ಕೋರ್ಟ್ ಆದೇಶವೇ ಇದೆ. ಹಾಗಾಗಿಯೇ ದರ್ಶನ್‌ಗೆ ಬೇಲ್ ಸಿಗೋದು ಅನುಮಾನ ಅಂತ ಹಿರಿಯ ವಕೀಲ ಸುನೀಲ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನಟಿ ಪವಿತ್ರಾಗೌಡಗೆ ಬಿಗ್ ಶಾಕ್; ಕೊಲೆ ಕೇಸಲ್ಲಿ ಕೋರ್ಟ್ನಿಂದ ಮಹತ್ವದ ತೀರ್ಪು
ಬೇಲ್ ಏಕಿಲ್ಲ? ಕಾರಣ 10
ಎಸ್ಪಿಪಿ ನೀಡಿದ ಮಹತ್ವದ ಡಿಜಿಟಲ್ ಎವಿಡೆನ್ಸ್!
ದರ್ಶನ್ ಪರ ವಕೀಲ ಸಿ.ವಿ ನಾಗೇಶ್ ತಮ್ಮ ವಾದ ಮಂಡಿಸುವ ಸಂದರ್ಭ ಮಹತ್ವದ ಅನುಮಾನಗಳನ್ನು ಎತ್ತಿದ್ದರು. ದರ್ಶನ್ ಅಲ್ಲಿ ಇದ್ದರು ಅನ್ನೋದಕ್ಕೆ ಸಾಕ್ಷಿ ಏನು? ತನಿಖಾಧಿಕಾರಿಗಳು ಇಲ್ಲಿ ಸರಿಯಾಗಿ ನಿಯಮಗಳನ್ನೇ ಪಾಲಿಸಿಲ್ಲ ಅಂತ ಕಟುವಾಗಿಯೇ ಲಾ ಪಾಯಿಂಟ್ಸ್ ಮೂಲಕ ಕೋರ್ಟ್ ಗಮನಕ್ಕೆ ಮಹತ್ವದ ಸಂಗತಿಗಳನ್ನು ತಂದಿದ್ದರು. ಇದೇ ವಿಚಾರಕ್ಕೆ ಎಸ್ಪಿಪಿ ಪ್ರಸನ್ನ ಕುಮಾರ್ ಟವರ್ ಡಂಪಿಂಗ್ ಸೇರಿದಂತೆ ಅನೇಕ ಡಿಜಿಟಲ್ ಎವಿಡೆನ್ಸ್ ಮೂಲಕ ರೇಣುಕಾಸ್ವಾಮಿ ಕೊಲೆಗೂ ದರ್ಶನ್ಗೂ ಸಂಬಂಧ ಏನು? ಯಾವಾಗೆಲ್ಲಾ ದರ್ಶನ್ ರೇಣುಕಾಸ್ವಾಮಿ ಸನಿಹದಲ್ಲಿ ಇದ್ದರು ಅನ್ನೋದನ್ನ ವೈಜ್ಞಾನಿಕವಾಗಿ ನಿರೂಪಿಸುವ ದಾಖಲೆಗಳನ್ನು ಒದಗಿಸಿದ್ದರು. ಹಾಗಾಗಿಯೇ ಕೋರ್ಟ್ ಎಸ್ಪಿಪಿ ವಾದವನ್ನು ಎತ್ತಿ ಹಿಡಿದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ