Advertisment

ಇಂದೂ ಮುಂದುವರೆಯಲಿದೆ ದರ್ಶನ್​ ವಿಚಾರಣೆ.. ದಸರಾ ಒಳಗಾಗಿ ರಿಲೀಸ್ ಆಗ್ತಾರಾ? ಇಲ್ಲಿದೆ ಮಾಹಿತಿ

author-image
AS Harshith
Updated On
ಅಮ್ಮ ಬಂದ ಖುಷಿ.. ಜೈಲಿನಲ್ಲಿ ದರ್ಶನ್ ಮೊಗದಲ್ಲಿ ನಗುವಿನ ಜೊತೆಗೆ ಹೊಸದೊಂದು ಕಳೆ
Advertisment
  • ಜಾಮೀನು ಮೂಲಕ ಹೊರ ಬರಲು ಯತ್ನಿಸುತ್ತಿರೋ ದರ್ಶನ್​​
  • ದರ್ಶನ್​​ ವಿರುದ್ಧ ಪ್ರಬಲವಾದ ಪ್ರತಿವಾದ ಮಂಡಿಸಿದ ಪ್ರಸನ್ನ ಕುಮಾರ್
  • ದಸರಾದಂದು ದರ್ಶನ್​ಗೆ ಬಿಡುಗಡೆ ಭಾಗ್ಯ ಸಿಗುತ್ತಾ? ಇಲ್ಲಿದೆ ಮಾಹಿತಿ

ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಲಾಕ್​ ಆಗಿರುವ ಆರೋಪಿಗಳು ಪಂಜರದಿಂದ ಹಾರೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಆದ್ರೆ ಜಾಮೀನೆಂಬ ರೆಕ್ಕೆ ಮಾತ್ರ ಸಿಗ್ತಿಲ್ಲ. ನಿನ್ನೆ ಕೂಡ ಆರೋಪಿಗಳಿಗೆ ನಿರಾಸೆಯಾಗಿದೆ. ಇಂದು ಕೂಡ ವಿಚಾರಣೆ ಮುಂದುವರೆಯಲಿದೆ.

Advertisment

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್​ ಮ್ಯಾರಥಾನ್ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಆರೋಪಿಗಳ ಪರ ವಕೀಲರು ವಾದ ಮಂಡಿಸಿದ್ದು, ನಿನ್ನೆ ಪ್ರತಿವಾದ ಆರಂಭಿಸಿದ ಎಸ್​ಪಿಪಿ ಪ್ರಸನ್ನ ಕುಮಾರ್​, ಆರೋಪಿಗಳ ಪರ ವಕೀಲ ನಾಗೇಶ ವಾದಕ್ಕೆ ಸಖತ್ತಾಗಿ ಕೌಂಟರ್​ ನೀಡಿದ್ರು. ಮೊನ್ನೆ ನಾಗೇಶ್ ವಾದಕ್ಕೆ ಪ್ರತಿಯಾಗಿ ಅಬ್ಬರಿಸಿದ ಪ್ರಸನ್ನ ಕುಮಾರ್, ರೇಣುಕಾಸ್ವಾಮಿ ಮರ್ಮಾಂಗಕ್ಕೆ ದರ್ಶನ್ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ಆರೋಪಿಗಳ ಪಾತ್ರವಿದೆ ಅಂತ ನಾಗೇಶ್​ರ ಎಲ್ಲಾ ಪಾಯಿಂಟ್​ಗಳಿಗೂ ಪ್ರಬಲವಾದ ಪ್ರತಿವಾದ ಮಂಡಿಸಿದ್ದಾರೆ. ಸದ್ಯ ಈ ವಾದ-ಪ್ರತಿವಾದ ಅಂತಿಮ ಘಟ್ಟ ತಲುಪಿದೆ.

publive-image

ಇಂದು ದರ್ಶನ್ ಜಾಮೀನು ಅರ್ಜಿ ವಿಚಾರಣೆಯ ಡಿ-ಡೇ

ಮೊನ್ನೆ ವಕೀಲ ನಾಗೇಶ್ ವಾದದಿಂದ ಇನ್ನೇನು ಜಾಮೀನು ಸಿಕ್ಕೇ ಬಿಡ್ತು ಅಂತ ಖುಷಿ ಪಟ್ಟಿದ್ದ ದರ್ಶನ್​ಗೆ ನಿನ್ನೆ ತೀವ್ರ ಆಘಾತ ಎದುರಾಗಿದೆ. ದರ್ಶನ್ ಇನ್ನೇನು ಜೈಲಿನಿಂದ ರಿಲೀಸ್ ಆಗಿ ಬರುತ್ತಾರೆ ಅಂತ ಕಾಯುತ್ತಿದ್ದ ಅಭಿಮಾನಿಗಳಿಗೆ ಆಘಾತ ಎದುರಾಗಿದೆ. ಎಸ್​ಪಿಪಿ ಪ್ರಸನ್ನ ಕುಮಾರ್​ ಪ್ರಬಲ ಪ್ರತಿವಾದದಿಂದ ಬೇಲ್ ಸಿಗುತ್ತಾ ಅನ್ನುವಂತಾಗಿದೆ. ನಿನ್ನೆಯಿಂದ ಇಂದಿಗೆ ವಿಚಾರಣೆ ಮತ್ತೆ ಮುಂದೂಡಿಕೆಯಾಗಿದ್ದು ಅಂತಿಮ ಘಟ್ಟ ತಲುಪಿದೆ. ಇವತ್ತು ಕೂಡ ಪ್ರಸನ್ನ ಕುಮಾರ್ ವಾದ ಮುಂದುವರೆಸಲಿದ್ದಾರೆ.

ಇದನ್ನೂ ಓದಿ: ಹಣಬಲ ಕೆಲಸ ಮಾಡುವುದಿಲ್ಲ; ಅಪಘಾತ ಸಂಭವಿಸಲಿದೆ ಎಚ್ಚರ! ಇಲ್ಲಿದೆ ಇಂದಿನ ಭವಿಷ್ಯ

Advertisment

publive-image

ದಾಸನ ಜಾಮೀನು ಅರ್ಜಿ ವಿರುದ್ಧ ಎಸ್‌ಪಿಪಿ ವಾದ

ಈಗಾಗಲೇ ದರ್ಶನ್ ಪರ ವಕೀಲ ನಾಗೇಶ ವಾದ ಮಂಡಿಸಿದ್ದರು. ನಂತರ ದರ್ಶನ್​ಗೆ ಯಾಕೆ ಜಾಮೀನು ಕೊಡಬಾರದು? ಎಂದು ಕೂಡ ವಾದ ನಡೆದಿದೆ. ನಿನ್ನೆ ಈ ಕುರಿತು ದಾಸನ ಜಾಮೀನು ಅರ್ಜಿ ವಿರುದ್ಧ ಎಸ್‌ಪಿಪಿ ವಾದ ಮಂಡನೆ ಮಾಡಿದ್ದಾರೆ. ಎರಡೂ ಕಡೆಯ ವಾದ ಆಲಿಸಿದ್ದ ನ್ಯಾಯಾಲಯ ಇಂದಿಗೆ ವಿಚಾರಣೆ ಮುಂದೂಡಿತ್ತು. ಹೀಗಾಗಿ ಇಂದು ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದ್ದು ಬಿಡುಗಡೆ ಭಾಗ್ಯ ಸಿಗುತ್ತಾ ಎಂಬ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ: ಗಿಚ್ಚಿ ಗಿಲಿಗಿಲಿ ವಿನ್ನರ್ ಹುಲಿ ಕಾರ್ತಿಕ್‌ ವಿರುದ್ಧ FIR.. ‘ಅನುಬಂಧ ಅವಾರ್ಡ್’ ಇಡೀ ತಂಡಕ್ಕೂ ಸಂಕಷ್ಟ!

publive-image

ದಸರಾ ವೇಳೆಗೆ ನಮ್ ಬಾಸ್ ರೀಲಿಸ್ ಆಗ್ತಾರೆ ಅಂತ ಕಾಯ್ತಿದ್ದ ಅಭಿಮಾನಿಗಳಿಗೆ ಮೇಲಿಂದ ಮೇಲೆ ವಿಚಾರಣೆ ನಡೆಯುತ್ತಿರುವುದರಿಂದ ನಿರಾಸೆಯಾಗಿದೆ. ದಸರಾ ಒಳಗಾಗಿ ದರ್ಶನ್ ರಿಲೀಸ್ ಆಗಲ್ವಾ ಎಂಬ ಚಿಂತೆಯಲ್ಲಿದ್ದಾರೆ. ಸದ್ಯ ದರ್ಶನ್ ಪರ ನಾಗೇಶ ಹಾಗೂ ಸರ್ಕಾರ ಪರ ಎಸ್​ಪಿಪಿ ಪ್ರಸನ್ನ ಕುಮಾರ್ ವಾದ ಮಂಡಿಸುತ್ತಿದ್ದು ಇಂದು ಮತ್ಯಾವ ಅಂಶಗಳು ಪ್ರಸ್ತಾಪ ಆಗುತ್ತೆ ಅನ್ನೋದೇ ಕೌತುಕ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment