/newsfirstlive-kannada/media/post_attachments/wp-content/uploads/2024/08/Darshan-in-Bellary-Jail.jpg)
ರೇಣುಕಾಸ್ವಾಮಿ ಕೊಲೆ ಸಂಬಂಧ ಇಂದು ಚಾರ್ಜ್ಶೀಟ್ ಸಲ್ಲಿಕೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ದರ್ಶನ್ ಮತ್ತು ಸಹಚರರನ್ನು ತನಿಖೆ ನಡೆಸಿ ಹಲವು ಸಾಕ್ಷಿ ಸಂಗ್ರಹಿಸಿದ್ದಾರೆ. ಸುಮಾರು 3991 ಪುಟಗಳ ಚಾರ್ಜ್ಶೀಟನ್ನು ಪೊಲೀಸರು ಸಲ್ಲಿಸಲಿದ್ದಾರೆ. ಆದರೆ ಚಾರ್ಜ್ಶೀಟ್ನಲ್ಲಿ ಕೆಲವೊಂದು ಅಚ್ಚರಿಯ ಸಂಗತಿಗಳು ಬಯಲಾಗಿದ್ದು, ಈ ಕುರಿತಾಗಿ ಮಹಿತಿ ಇಲ್ಲಿದೆ.
ಚಾರ್ಜ್ಶೀಟ್ನಲ್ಲಿನ ಇಂಟೆಸ್ಟಿಂಗ್ ಸಂಗತಿಗಳು:-
- ಜೂನ್ 8 ರಂದು ಆರ್ ಆರ್ ನಗರದ ಪಟ್ಟಣಗೆರೆಯಲ್ಲಿ ಹತ್ಯೆಯಾಗಿದ್ದ ರೇಣುಕಾಸ್ವಾಮಿ
- ಹತ್ಯೆಯಾದ ಬಳಿಕ ಮೃತದೇಹವನ್ನ ಅದೇ ದಿನ ರಾತ್ರಿ ವಿಲೇವಾರಿ ಮಾಡಿದ್ದ ಆರೋಪಿಗಳು
- ಕೇಶವ್, ಕಾರ್ತಿಕ್ ಜೊತೆ ಸೇರಿ ನಿಖಿಲ್ ನಾಯಕ್ ಶವ ಬೀಸಾಕಿದ್ರು
- ಸುಮ್ಮನಹಳ್ಳಿಯ ಮೋರಿ ಬಳಿ ಶವ ಎಸೆದಿದ್ರು
- ಶವ ಎಸೆದ ಬಳಿಕ ಜೂನ್ 9 ರಂದು RR ನಗರದಲ್ಲಿ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿ ಎಣ್ಣೆ ಪಾರ್ಟಿ ಮಾಡಿದ್ರು
- ಜೂನ್ 10 ರಂದು ಹಣಕಾಸಿನ ವಿಚಾರಕ್ಕೆ ರೇಣುಕಾಸ್ವಾಮಿಯನ್ನ ಹತ್ಯೆ ಮಾಡಿರೋದಾಗಿ ಹೇಳಿಕೊಂಡು ಸರೆಂಡರ್ ಆಗಿದ್ದ ಆರೋಪಿಗಳು
- ಕೇಶವ್ ಕಾರ್ತಿಕ್ ಜೊತೆಗೆ ನಿಖಿಲ್ ನಾಯಕ್ ಕಾಮಾಕ್ಷಿಪಾಳ್ಯ ಠಾಣೆಗೆ ಸೆರಂಡರ್
- ರೇಣುಕಾಸ್ವಾಮಿ ಹತ್ಯೆ ನಂತರ ಒಂದೇ ಬಟ್ಟೆಯಲ್ಲಿ ಮೂರು ದಿನ ಕಳೆದಿದ್ದ ಆರೋಪಿ
- ಬಟ್ಟೆ ಬದಲಾಯಿದೇ ಓಡಾಟ. ಬಟ್ಟೆ ಬದಲಾಯಿಸದೇ ಎಣ್ಣೆ ಪಾರ್ಟಿ
- ಶವ ಬೀಸಾಕಿದ್ದಗಿನಿಂದ ಒಂದೇ ಬಟ್ಟೆ ಧರಿಸಿದ್ದ ಆರೋಪಿ ನಿಖಿಲ್‌ನಾಯಕ್
- ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ್ ವಿಚಾರಣೆ ವೇಳೆ ಕೇಶವ್, ಕಾರ್ತಿಕ್ ಕೃತ್ಯದ ವೇಳೆ ಧರಿಸಿದ್ದ ಬಟ್ಟೆಯನ್ನ RR ನಗರದ ಹೋಟಲ್ನಲ್ಲಿ ಬದಲಾಯಿಸಿದ್ದಾಗಿ ಹೇಳಿಕೆ
- ನಿಖಿಲ್ ನಾಯಕ್ ಕಳೆದ ಮೂರು ದಿನದಿಂದ ಕೃತ್ಯದ ವೇಳೆಯೂ ಇದೇ ಬಟ್ಟೆಯಲ್ಲೇ ಇದ್ದೇನೆ ಎಂದು ಹೇಳಿಕೆ.
- ಆರೋಪಿಗೆ ಬೇರೆ ಬಟ್ಟೆ ಕೊಟ್ಟು ನಿಖಿಲ್ ನಾಯಕ್ ಧರಿಸಿದ್ದ ಬಟ್ಟೆಯನ್ನ ವಶಕ್ಕೆ ಪಡೆದಿದ್ದ ಇನ್ಸ್'ಪೆಕ್ಟರ್ ಗಿರೀಶ್ ನಾಯ್ಕ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ