/newsfirstlive-kannada/media/post_attachments/wp-content/uploads/2024/06/Raghu.jpg)
- ಆರೋಪಿ ರಘು ದರ್ಶನ್ ಸಂಘದ ಜಿಲ್ಲಾಧ್ಯಕ್ಷ
- ರಘು ಪತ್ನಿ ಮೇಲಿದೆ ಕಳ್ಳತನ, ವಂಚನೆ ಆರೋಪ
- ಚಿನ್ನಾಭರಣ ಹಾಗೂ ಹಣ ಪಡೆದು ಪರಾರಿಯಾಗಿದ್ದ ರಘು ಪತ್ನಿ
ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಹಿನ್ನೆಲೆ ಪೊಲೀಸರು ರಘು ಹಾಗೂ ಪತ್ನಿಯ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಪೊಲೀಸರಿಗೆ ಹಲವು ಸಂಗತಿಗಳು ಬೆಳಕಿಗೆ ಬಂದಿವೆ.
ರಘು ಪತ್ನಿ ಸಹನಾ ಹೆಸರಲ್ಲಿ ಬರೋಬರಿ 10 ಸಿಮ್ ಕಾರ್ಡ್ ಇದೆ ಎನ್ನಲಾಗುತ್ತಿದೆ. ಆಕೆಯ ಸಿಮ್​ ಹಿಸ್ಟರಿ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ ಎನ್ನಲಾಗುತ್ತಿದೆ. ಇದಲ್ಲದೆ, ರಘು ಹಾಗೂ ಸಹನಾ ಮೇಲೆ ಸ್ಥಳೀಯ ಮಹಿಳೆಯಿಂದ ಕಳ್ಳತನ ಆರೋಪವು ಕೇಳಿಬಂದಿದೆ.
ಇದನ್ನೂ ಓದಿ: 25 ವರ್ಷದ ಯುವಕನ ಜೊತೆ ಓಡಿ ಹೋದ 40 ವರ್ಷದ ತಾಯಿ! ಬೀದಿಗೆ ಬಂದ 3 ಮಕ್ಕಳು
ರಘು ಪತ್ನಿ ಸಹನಾ ಹೆಸರಲ್ಲಿ 2015 ರಲ್ಲಿ ಎದುರು ಮನೆಯಲ್ಲಿ ಕಳ್ಳತನಮಾಡಿದ್ದ ಆರೋಪ ಕೇಲಿಬಂದಿತ್ತು. 2016 ರಲ್ಲಿ ಈ ಕುರಿತು ಚಿತ್ರದುರ್ಗ ನಗರ ಠಾಣೆಯಲ್ಲಿ FIR ದಾಖಲಾಗಿತ್ತು. 2015ರಲ್ಲಿ ಖಾಸಗಿ ಬ್ಯಾಂಕಲ್ಲಿ ನಕಲಿ ಗೋಲ್ಡ್ ಇಟ್ಟು ಸಾಲಪಡೆದಿದ್ದರು.
ಇನ್ನು ರೇಣುಕಾ ಸ್ವಾಮಿ ಕೊಲೆ ಬಳಿಕ ಚಿನ್ನಾಭರಣ ಹಾಗೂ ಹಣ ಪಡೆದು ಸಹನಾ ಪರಾರಿಯಾಗಿದ್ದಳು. ಪತಿ ರಾಘವೇಂದ್ರ ಸೂಚನೆಯಂತೆ ಎಸ್ಕೇಪ್ ಆಗಿದ್ದಳು. ಇದೀಗ ಪೊಲೀಸರ ವಿಚಾರಣೆ ವೇಳೆ ಹಲವು ಸಂಗತಿಗಳು ಬಯಲಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ